Lamp: ಈ ಕುರಿಮರಿಗೆ ತೋಳಲ್ಲೂ ಇದೆ ಕಾಲು, 5 ಕಾಲಿನ ಕುರಿಮರಿ ಕಂಡಿರಾ? ದಿಗ್ಭ್ರಮೆಗೊಂಡ ರೈತ

ಮ್ಯಾಜಿಕಲ್ ದಿನಾಂಕವಾದ ಫೆಬ್ರವರಿ 22, 2022 ಎಂದರೆ 2/2/22 ರಂದು ಜನಿಸಿದ ಕುರಿಮರಿಗೆ ಇರುವುದು ನಾಲ್ಕು ಕಾಲುಗಳಲ್ಲ, ಅದಕ್ಕಿರುವುದು ಐದು ಕಾಲುಗಳು. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ನಿಜವಾಗಿ ನಡೆದಂತಹ ಘಟನೆಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

ಕುರಿಮರಿ

ಕುರಿಮರಿ

  • Share this:
ನಾವು ಸಾಮಾನ್ಯವಾಗಿ ಯಾವುದೇ ಪ್ರಾಣಿ ಇದ್ದರೂ ಅದಕ್ಕೆ ಇರುವುದು ನಾಲ್ಕೇ ಕಾಲುಗಳು ಎಂದು ನಮಗೆ ಗೊತ್ತಿರುತ್ತದೆ. ಆದರೆ ಕೆಲವೊಮ್ಮೆ ಈ ಪ್ರಾಣಿಗಳಲ್ಲಿ (Animals) ಏನೋ ಒಂದು ಅಪರೂಪದ ಮತ್ತು ಸಾಮಾನ್ಯವಲ್ಲದ ಅಂಗಾಂಗಗಳನ್ನು ಹೊಂದಿರುವುದನ್ನು ನಾವು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿಯೇ ನೋಡಿರುತ್ತೇವೆ. ಅದರಲ್ಲೂ ಈ ಮ್ಯಾಜಿಕಲ್ ಸಂಖ್ಯೆಯಲ್ಲಿ ಜನಿಸಿದ ಜೀವಿಗಳು ಎಂದರೆ ಯಾರಿಗಾದರೂ ಸ್ವಲ್ಪ ವಿಶೇಷ ಅನ್ನಿಸುವುದು ಸಹಜ. ಇದೇ ರೀತಿಯ ಮ್ಯಾಜಿಕಲ್ ದಿನಾಂಕವಾದ (Magical Date) ಫೆಬ್ರವರಿ 22, 2022 ಎಂದರೆ 2/2/22 ರಂದು ಜನಿಸಿದ ಕುರಿಮರಿಗೆ (Lamp) ಇರುವುದು ನಾಲ್ಕು ಕಾಲುಗಳಲ್ಲ, ಅದಕ್ಕಿರುವುದು ಐದು ಕಾಲುಗಳು. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ನಿಜವಾಗಿ ನಡೆದಂತಹ ಘಟನೆಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

ಈ ವಿಶೇಷವಾದ ಕುರಿಮರಿ ನಾರ್ಥಂಬರ್‌ಲ್ಯಾಂಡ್‌ನಲ್ಲಿ ಜನಿಸಿದೆ ಮತ್ತು ಮೊರ್ಪೆತ್ ಬಳಿಯ ವೈಟ್‌ಹೌಸ್ ಫಾರ್ಮ್‌ನಲ್ಲಿ ಇಂತಹ ಒಂದು ಕುರಿಮರಿಯನ್ನು ನೋಡಿ ಅದರ ಮಾಲೀಕರಾದ ಹೀದರ್ ಹೊಗಾರ್ಟಿ ಅವರು ಆಶ್ಚರ್ಯಗೊಂಡಿದ್ದಾರೆ. ಐದು ಕಾಲಿನ ಕುರಿಮರಿಗಳು ತುಂಬಾ ಅಪರೂಪ ಮತ್ತು ಹೀದರ್ ವೈಟ್‌ಹೌಸ್ ಫಾರ್ಮ್‌ನಲ್ಲಿ ತನ್ನ 25 ವರ್ಷಗಳಲ್ಲಿ ಇಂತಹದನ್ನು ನೋಡುತ್ತಿರುವುದು ಬರೀ ಎರಡನೇ ಬಾರಿ ಎಂದು ಅವರೇ ಖುದ್ದು ಹೇಳಿಕೊಂಡಿದ್ದಾರೆ.

ಭುಜದಿಂದ ಮತ್ತೊಂದು ಕಾಲು ಹೊರ ಬಂದಿದೆ

ಹೀದರ್ ಅವರು ಮಾತಾಡುತ್ತಾ "ಈ ಕುರಿಮರಿ ಹುಟ್ಟಿದ ತಕ್ಷಣ ನಾವು ಅದನ್ನು ನೋಡಿದೆವು. ಅದಕ್ಕೆ ಮುಂಭಾಗದ ಕಾಲುಗಳ ಎಡಭಾಗದಲ್ಲಿ, ಸ್ವಲ್ಪ ಮೇಲೆ ಎಂದರೆ ಅದರ ಭುಜದಿಂದ ಮತ್ತೊಂದು ಕಾಲು ಹೊರ ಬಂದಿರುವುದನ್ನು ನಾವು ನೋಡಬಹುದಾಗಿತ್ತು” ಎಂದು ಹೇಳಿದರು.

"ಇದು ತುಂಬಾನೇ ಅಸಾಮಾನ್ಯವಾಗಿದೆ, ಆದರೆ ಇದನ್ನು ಸ್ವಲ್ಪ ವಿಭಿನ್ನವಾದದ್ದು ಎಂದು ಹೇಳಬಹುದು. ನಾವು ಅನೇಕ ಪ್ರಾಣಿಗಳನ್ನು ಅಂಗವೈಕಲ್ಯದಿಂದ ಜನಿಸುತ್ತವೆ ಎಂದು ಕೇಳಿದ್ದೇವೆ, ಆದರೆ ನೀವು ಅವುಗಳನ್ನು ದುಃಖದಿಂದ ಸಾಕಬೇಡಿ ಮತ್ತು ನೋಡಬೇಡಿ” ಎಂದು ಹೇಳುತ್ತಾರೆ.

ಕುರಿಮರಿ ಹುಟ್ಟಿದ ದಿನಾಂಕ ಸಹ ತುಂಬಾನೇ ವಿಶೇಷ

"ಎಲ್ಲಿಯವರೆಗೆ ಅದು ಸಾಮಾನ್ಯ ಜೀವನವನ್ನು ನಡೆಸುತ್ತದೆಯೋ, ಈ ಹೆಚ್ಚುವರಿ ಕಾಲಿನಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ನಾವು ಭಾವಿಸುತ್ತೇವೆಯೋ, ನಾವು ಅಲ್ಲಿಯವರೆಗೆ ಆ ಹೆಚ್ಚುವರಿ ಕಾಲನ್ನು ತೆಗೆಸುವುದರ ಬಗ್ಗೆ ಚಿಂತೆ ಮಾಡುವುದಿಲ್ಲ. ನಾವು ಈ ಕುರಿಮರಿ ಜನಿಸಿದಾಗಿನಿಂದಲೂ ಇದರ ಕಡೆಗೆ ಹೆಚ್ಚಿನ ಗಮನ ನೀಡಿದ್ದೇವೆ" ಎಂದು ಹೇಳಿದರು. ಇನ್ನೂ ಹೆಸರನ್ನು ಇಡದ ಈ ಕುರಿಮರಿ ಹುಟ್ಟಿದ ದಿನಾಂಕ ಸಹ ತುಂಬಾನೇ ವಿಶೇಷವಾಗಿದೆ” ಎಂದು ಹೇಳಿದರು.

ವೈಟ್‌ಹೌಸ್ ಫಾರ್ಮ್ ಸೆಂಟರ್

ವೈಟ್‌ಹೌಸ್ ಫಾರ್ಮ್ ಸೆಂಟರ್ 40 ಎಕರೆಯಲ್ಲಿ ವ್ಯಾಪಿಸಿದ್ದು, ಒಂದು ಕುಟುಂಬ ನಡೆಸಿಕೊಂಡು ಹೋಗುತ್ತಿರುವ ಫಾರ್ಮ್ ಇದಾಗಿದೆ. ಇದು 1997 ರಲ್ಲಿ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಈ ಫಾರ್ಮ್ ಅನ್ನು ತೋರಿಸಲು ಅವಕಾಶ ಮಾಡಿಕೊಟ್ಟರು ಎಂದು ಹೇಳಲಾಗುತ್ತಿದೆ.

ಐದು ಕಾಲುಗಳನ್ನು ಹೊಂದಿರುವ ಈ ಕುರಿಮರಿಯು ಕ್ವಿಂಟೋ ಎಂಬ ಹೆಸರಿನ ಐದು ಕಾಲುಗಳೊಂದಿಗೆ ಜನಿಸಿದ ಮತ್ತೊಂದು ವೈಟ್‌ಹೌಸ್ ಫಾರ್ಮ್ ಕುರಿಮರಿ ಜನಿಸಿದ ಒಂದು ದಶಕದ ನಂತರ ಜನಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Viral Video: ಅಯ್ಯಯ್ಯಪ್ಪೋ.. ಇದೇನ್​ ಹಿಂಗಿದೆ, ಏಲಿಯನ್​ ಏನಾದ್ರೂ ಬಂದುಬಿಡ್ತಾ? ನೀವು ಒಮ್ಮೆ ನೋಡಿ ಹೇಳಿ

ಕ್ವಿಂಟೋಳ ಹೆಚ್ಚುವರಿ ಕಾಲು ಅವಳ ದೇಹದ ಮಧ್ಯದಲ್ಲಿತ್ತು ಮತ್ತು ಅಂತಿಮವಾಗಿ ಅದನ್ನು ತೆಗೆದು ಹಾಕಬೇಕಾಯಿತು. ನಂತರ ತುಂಬಾ ವರ್ಷಗಳ ಕಾಲ ಅದು ಬದುಕಿ ತನ್ನದೇ ಆದ ಕುರಿಮರಿಗಳಿಗೂ ಸಹ ಜನ್ಮ ನೀಡಿತು. ಹೀದರ್ ಅವರು "ನಮಗೆ 9 ವರ್ಷಗಳ ಹಿಂದೆ ಜನಿಸಿದ ಕುರಿಮರಿಗೆ ಕಾಲೊಂದು ಹೊಟ್ಟೆಯ ಮಧ್ಯದಲ್ಲಿತ್ತು. ಆದರೆ ಈಗ ಜನಿಸಿದ ಕುರಿಮರಿಗೆ ಈ ಐದನೆಯ ಕಾಲು ಭುಜದಿಂದ ಹೊರ ಬಂದಿದೆ ಮತ್ತು ಇದು ನೆಲಕ್ಕೆ ತಾಗುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: New Fish: ಗಾಢ ಪಿಂಕ್ ಬಣ್ಣದ ಮೀನು ಮಾಲ್ಡೀವ್ಸ್​ನಲ್ಲಿ ಪತ್ತೆ..! ಅಬ್ಬಾ ಇದರ ಸೌಂದರ್ಯವೇ

"ಹೊಸ ಕುರಿಮರಿ ಹುಟ್ಟಿದಾಗ ಅದು ಕ್ವಿಂಟೋನ ಪುನರ್ಜನ್ಮ ಆಗಿರಬೇಕು ಎಂದು ನಾನು ಯೋಚಿಸುತ್ತಿದ್ದೆ. ಕ್ವಿಂಟೋ ಏಪ್ರಿಲ್ ಮೂರ್ಖರ ದಿನದಂದು ಜನಿಸಿದ್ದಳು” ಎಂದು ಆ ಕುರಿಮರಿಯನ್ನು ನೆನಪಿಸಿಕೊಂಡರು.
Published by:Divya D
First published: