ಮದುವೆ (Marriage) ಅಂತ ಹೇಳಿದ್ರೆ ಅದೇನೋ ಒಂದು ರೀತಿಯ ಖುಷಿ ಹಾಗೆಯೇ ಭಯ ಕೂಡ. ಯಾಕೆಂದರೆ ವಿನೂತನ ಜೀವನಕ್ಕೆ ಪಾದಾರ್ಪಣೆ ಮಾಡುತ್ತಾ ಇರುವಾಗ ಯಾರಿಗಾದರೂ ಒಂದು ಬಾರಿ ಭಯ ಇದ್ದೇ ಇರುತ್ತದೆ. ಅಲ್ಲಿಯ ತನಕ ನಾನು ನನ್ನದು ಎಂದು ಇರುವವರು ಮದುವೆಯ ನಂತರ ನಾವು, ನಮ್ಮದು ಅಂತ ಆರಂಭವಾಗುತ್ತದೆ. ಅದೆಷ್ಟೋ ಜನರ ಜೀವನ ಶೈಲಿ (Life Style), ಬದುಕನ್ನೇ ಬದಲಾಯಿಸಿಬಿಡುತ್ತದೆ ಈ ಮದುವೆ. ಇನ್ನು ಒಂದೊಂದು ಕಡೆಯಲ್ಲಿ ಒಂದೊಂದು ರೀತಿಯಾಗಿ ಮದುವೆಯ ಸಾಂಪ್ರದಾಯವಿರುತ್ತದೆ. ಒಂದೊಂದು ಪ್ರಾಂತ್ರ್ಯದಲ್ಲಿ ಒಂದೊಂದು ರೀತಿಯ ಆಚಾರ, ವಿಚಾರ, ಶಾಸ್ತ್ರ ಸಂಪ್ರದಾಯಗಳು ಇರುತ್ತದೆ. ಎಲ್ಲವನ್ನು ಪರಿಪಾಲಿಸಿಕೊಂಡು ಹೋಗುವುದೇ ಜೀವನ ಅಲ್ವಾ?
ಹೀಗೆ ಆಚರಣೆಯಿಂದ ಆಚರಿಸುವ ಮದುವೆಗಳಲ್ಲಿ ಕೆಲವೊಂದಷ್ಟು ವಿಚಿತ್ರವಾಗಿರುವ ಪದ್ಧತಿಗಳು ಇದ್ದೇ ಇರುತ್ತವೆ. ಇದೀಗ ಹೀಗೆ ನಡೆಯಲಾಗುವ ಒಂದು ವಿಚಿತ್ರವಾದ ವಿಷಯ ವೈರಲ್ ಆಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಭಾರತದ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವಂತಹ ಈ ವಿಚಿತ್ರವಾದ ವಿವಾಹ ಪದ್ಧತಿ ಎಂಥವರಿಗಾದ್ರೂ ಕೂಡ ಒಂದು ಬಾರಿ ಶಾಕ್ ಆಗೋದು ಪಕ್ಕಾ ಬಿಡಿ. ಇದು ನಿನ್ನೆ ಮೊನ್ನೆಯ ಪದ್ಧತಿಯಲ್ಲ. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಒಂದಷ್ಟು ವಿಚಿತ್ರ ಮದುವೆಯ ಸಂಪ್ರದಾಯಗಳು ನಡೆಯುತ್ತಾ ಇರುತ್ತದೆ.
ಇದನ್ನೂ ಓದಿ: ನಾಗರಹಾವು ರಸ್ತೆ ದಾಟಲು ಹೆದ್ದಾರಿಯೇ ಅರ್ಧ ಗಂಟೆ ಬಂದ್!
ಟಿಬೆಟ್ನಲ್ಲಿ ಬಹುಕಾಲದಿಂದ ಒಂದು ರೀತಿಯಾದ ವಿವಾಹ ಪದ್ಧತಿಯೊಂದು ನಡೆದುಕೊಂಡು ಬರ್ತಾ ಇದೆ. ಪುಟ್ಟ ದೇಶವಾಗಿರುವುದರಿಂದ ಇಲ್ಲಿ ಜನರು ಮತ್ತು ಜೀವನಶೈಲಿಯು ವಿಭಿನ್ನ. ಚೀನಾ ಯಾವಾಗಲೂ ಇಲ್ಲಿನ ನಾಗರಿಕರಿಗೆ ಸಮಸ್ಯೆ ಕೊಡುತ್ತಲೇ ಇರುತ್ತದೆ.
ಟಿಬೆಟಿಯನ್ ಕುಟುಂಬದಲ್ಲಿ ಕನಿಷ್ಠ ಒಬ್ಬರಾದಾರು ಸನ್ಯಾಸತ್ವ ಅಂದ್ರೆ ಬೌದ್ಧ ಧರ್ಮದ ಕೊನೆಯ ಹಂತಕ್ಕೆ ಹೋಗುತ್ತಲೇ ಇರುತ್ತಾರೆ. ಇಲ್ಲಿಯ ಮದುವೆಯನ್ನು ಪಾಲಿಯಾಂಡ್ರಿ ವಿವಾಹ ಎಂದು ಹೇಳಲಾಗುತ್ತದೆ. ಸಹೋದರರೆಲ್ಲಾ ಒಂದು ಹುಡುಗಿಯನ್ನು ಮದುವೆಯಾಗುವ ವಿಚಿತ್ರ ಸಂಪ್ರದಾಯವಿದೆ.
ಸಹೋದರರಲ್ಲಿ ದೊಡ್ಡಣ್ಣ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೋಡಿಕೊಳ್ಳುತ್ತಾನೆ. ಆ ಒಂದು ಹುಡುಗಿ ಇರುವ ಎಲ್ಲಾ ಸಹೋದರರನ್ನು ಮದುವೆ ಆಗುತ್ತಾಳೆ. ಆದರೆ ಈ ಮದುವೆಯ ನಂತ ಆಕೆ ಯಾರೊಂದಿಗೆ ಸಂಸಾರವನ್ನು ಮಾಡುತ್ತಾಳೆ ಎಂಬುದು ಬೆಳಕಿಗೆ ಬಂದಿಲ್ಲ.
ಅಬ್ಬಬ್ಬಾ! ಇಷ್ಟನ್ನು ಕೇಳ್ತಾನೇ ಒಂದು ರೀತಿಯಾಗಿ ಶಾಕ್ ಆಗುತ್ತೆ ಅಲ್ವಾ? ಅದೇ ರೀತಿಯಾಗಿ ಇಲ್ಲಿ ನಡೆಯುವ ಸಂಪ್ರದಾಯವೇ ವಿಭಿನ್ನ ಮತ್ತು ವಿಚಿತ್ರ. ಆದರೆ ಇಲ್ಲಿನ ಜನರು ಇದನ್ನೇ ಮಹತ್ತರವಾದದ್ದು ಎಂದು ಪೂಜೆ ಮಾಡುತ್ತಾರೆ.
ಮದುವೆ ಆದ ಮೇಲೆ ಮಹಿಳೆಗೆ ಶೋಷಣೆ ಮಾಡುವ ಇಲ್ಲಿಯ ತನಕ ಒಂದೇ ಒಂದು ಉದಾಹರಣೆಗಳಿಲ್ಲ. ರಾಣಿಯ ಹಾಗೆಯೇ ಪ್ರತಿಯೊಂದು ಸೌಕರ್ಯಗಳನ್ನು ನೋಡಿಕೊಳ್ಳುತ್ತಾರೆ. ಹಾಗೆಯೇ ಆಕೆಯೂ ಕೂಡ ಚೆನ್ನಾಗಿ ಹೊಂದಿಕೊಂಡು ಹೋಗುತ್ತಾಳೆ.
ತಮ್ಮ ಹೆಂಡತಿಗೆ ಮಗುವಾದರೆ ತಮ್ಮದೇ ಮಗು ಎಂದು ಪರಿಗಣಿಸುತ್ತಾರೆ. ಹಾಗೆಯೇ ಆ ಮಗುವಿನ ಬೆಳಬಣಿಗೆಗೆ ಸಹಕಾರ ಮಾಡುತ್ತಾರೆ. ಹೆಂಡತಿಯೊಂದಿಗೆ ಕೋಣೆಯಲ್ಲಿ ಯಾರು ಉಳಿಯಬೇಕು ಎಂಬುದನ್ನು ನಿರ್ಧರಿಸಲು ಕ್ಯಾಪ್ ತೆಗೆಯುವವರೆಗೂ ಇತರ ಸಹೋದರರು ಕೋಣೆಗೆ ಪ್ರವೇಶಿಸುವುದಿಲ್ಲ. ಆದರೆ ಈಗ ಟಿಬೆಟ್ನಲ್ಲಿ ಇಂತಹ ವಿವಾಹ ಬಹಳ ಅಪರೂಪವಾಗಿದೆ. ಈ ವಿಚಿತ್ರವಾದ ಮದುವೆಯು ನಡೆದರೂ ಕೂಡ ಮುಚ್ಚಿಡುತ್ತಾರೆಯೇ ಹೊರತು ಎಲ್ಲರೊಂದಿಹೆ ಹಂಚಿಕೊಳ್ಳುವುದಿಲ್ಲ.
ಈ ಸಂಪ್ರದಾಯವು ನಿಜಕ್ಕೂ ನಮಗೆ ವಿಚಿತ್ರ ಅಂತ ಅನಿಸಿದ್ರೂ, ಆ ಪ್ರಾಂತ್ಯದವರಿಗೆ ಇದು ವಿಶಿಷ್ಠ ಸಂಪ್ರದಾಯ ಎಂದೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ