ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra )ಟೋಕಿಯೊ ಒಲಿಂಪಿಕ್ಸ್ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಮೂಲಕ ಇತಿಹಾಸ ಸೃಷ್ಟಿಸಿದರು. ಟೋಕಿಯೊ ಒಲಿಂಪಿಕ್ಸ್ನ ಯಶಸ್ಸು ನೀರಜ್ ಚೋಪ್ರಾ ಅವರ ಬದುಕಿನಲ್ಲಿ ಅದ್ಭುತಗಳನ್ನು ಮಾಡಿದೆ. ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಒಂದೇ ದಿನದಲ್ಲಿ 1.1 ಮಿಲಿಯನ್ಗಳಷ್ಟು ಹೆಚ್ಚಾಗಿತ್ತು. ನೀರಜ್ ಜನಪ್ರಿಯತೆ ಊಹಿಸಲಾಗದ ಎತ್ತರಕ್ಕೆ ಜಿಗಿದಿರುವುದಕ್ಕೆ ಇದೇ ಸಾಕ್ಷಿ. ಐತಿಹಾಸಿಕ ಒಲಿಂಪಿಕ್ಸ್ ಚಿನ್ನದ ಪದಕದ ನಂತರ ಚೋಪ್ರಾ ಅವರ ಬ್ರಾಂಡ್ ಮೌಲ್ಯವು ಮುಗಿಲು ಮುಟ್ಟಿದೆ. ವರದಿಗಳ ಪ್ರಕಾರ ನೀರಜ್ ಚೋಪ್ರಾ ಅವರ ಬ್ರಾಂಡ್ ಮೌಲ್ಯವು ಶೇಕಡಾ 1000 ರಷ್ಟು ಹೆಚ್ಚಾಗಿದೆ.
ಹಲವು ಪ್ರಸಿದ್ಧ ಬ್ರ್ಯಾಂಡ್ಗಳ ರಾಯಭಾರಿ ನೀರಜ್
ನೀರಜ್ ಚೋಪ್ರಾ ಜಾಹೀರಾತುಗಾಗಿ (endorsement) ಪಡೆಯುತ್ತಿರುವ ಹಣ ಈಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸಮನಾಗಿದೆ. ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆಯುವ ಮುನ್ನವೇ, ನೀರಜ್ ಚೋಪ್ರಾ ನೈಕ್, ಸ್ಪೋರ್ಟ್ಸ್ ಡ್ರಿಂಕ್ ಬ್ರಾಂಡ್ ಗಟೋರೇಡ್, ಎಕ್ಸಾನ್ಮೊಬಿಲ್ ಮತ್ತು ಮಸ್ಕಲ್ ಬ್ಲೇಜ್ ಕ್ರೀಡಾ ಪೂರಕಗಳಂತಹ ಕೆಲವು ಪ್ರಸಿದ್ಧ ಬ್ರಾಂಡ್ಗಳ ರಾಯಭಾರಿಯಾಗಿದ್ದರು.
ನೀರಜ್ ಬಳಿ ಜಾಹೀರಾತಿಗೆ ಸಮಯೇ ಇಲ್ಲ
ಈ ಬಗ್ಗೆ ಮಾತನಾಡಿದ ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್ನ ಮುಖ್ಯ ಕಾರ್ಯನಿರ್ವಾಹಕ ಮುಸ್ತಫಾ ಹೌಸ್, ಈಗ ಚೋಪ್ರಾ ಅವರ ಬ್ರಾಂಡ್ ಮೌಲ್ಯವು ಹಳೆಯ ಡೀಲ್ಗಳನ್ನು ಸಹ ಪರಿಷ್ಕರಿಸಲಾಗುವುದು ಎಂದು ಹೇಳಿದರು. ನಾವು ಸುಮಾರು 80 ಬ್ರಾಂಡ್ಗಳಿಂದ ಡಿಮ್ಯಾಂಡ್ ಹೊಂದಿದ್ದರೂ, ನೀರಜ್ ಮುಂದಿನ 12-14 ತಿಂಗಳುಗಳಲ್ಲಿ ಭಾರತ ಮತ್ತು ವಿದೇಶಗಳಲ್ಲಿ ತರಬೇತಿ ಶಿಬಿರಗಳಲ್ಲಿ ಭಾಗಿಯಾಗಲಿದ್ದು, ಈ ನಡುವೆ ಸೀಮಿತ ಸಂಖ್ಯೆಯ ದಿನಗಳನ್ನು ಮಾತ್ರ ಅವರು ಫ್ರೀ ಆಗಿ ಇರುತ್ತಾರೆ. ಆದ್ದರಿಂದ ನಾವು ಬ್ರ್ಯಾಂಡ್ಗಳಿಗೆ ಸಹಿ ಮಾಡುವ ಬಗ್ಗೆ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಕೊಹ್ಲಿ-ಧೋನಿಗಿಂತ ಹೆಚ್ಚು ಸಂಪಾದನೆ
ಮೊದಲು ನೀರಜ್ ಚೋಪ್ರಾ ಅವರ ಗಳಿಕೆಯು 15-25 ಲಕ್ಷಗಳಷ್ಟಿತ್ತು ಆದರೆ ಈಗ ಸಂಖ್ಯೆ ಬದಲಾಗಿದೆ. ಕೊಹ್ಲಿ ಮತ್ತು ಧೋನಿ 1 ರಿಂದ 5 ಕೋಟಿ ರೂ.ಗಳ ನಡುವೆ ಹಣ ಪಡೆದರೆ, ನೀರಜ್ ಚೋಪ್ರಾ ಈ ಇಬ್ಬರು ಸ್ಟಾರ್ ಕ್ರಿಕೆಟಿಗರಿಗಿಂತ ಹೆಚ್ಚಿನದನ್ನು ಪಡೆಯುವ ನಿರೀಕ್ಷೆಯಿದೆ. ಬಿಸಿನೆಸ್ ಲೈನ್ ಪ್ರಕಾರ, ನೀರಜ್ ಚೋಪ್ರಾ ಈಗಾಗಲೇ ಟಾಟಾ ಎಐಎ ಲೈಫ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: RCB vs RR- ಕುಗ್ಗಿಹೋಗಿರುವ ರಾಯಲ್ಸ್ ವಿರುದ್ಧ ಗೆದ್ದುಬೀಗುತ್ತಾರಾ ರಾಯಲ್ ಚಾಲೆಂಜರ್ಸ್? ಇಲ್ಲಿದೆ ಲೆಕ್ಕಾಚಾರ
ಟಾಟಾ ಎಐಎ ಕುಟುಂಬಕ್ಕೆ ಸೇರುವುದು ನನಗೆ ತಾರ್ಕಿಕ ಹೆಜ್ಜೆಯಾಗಿದೆ. ಭಾರತೀಯರಿಗೆ, ವಿಶೇಷವಾಗಿ ಯುವಕರಿಗೆ, ಜೀವ ವಿಮೆಯ ಅಗತ್ಯತೆಯ ಬಗ್ಗೆ ಮತ್ತು ಅವರ ಆರ್ಥಿಕ ಗುರಿಗಳಿಗಾಗಿ ಸರಿಯಾದ ಸಮಯದಲ್ಲಿ ಯೋಜನೆ ರೂಪಿಸಲು ಸಹಾಯ ಮಾಡುವ ಅವಶ್ಯಕತೆಯಿದೆ ಎಂದು ನಾನು ನಂಬುತ್ತೇನೆ ಎಂದು ಪಾಲುದಾರಿಕೆಯ ಬಗ್ಗೆ ನೀರಜ್ ಚೋಪ್ರಾ ಹೇಳಿದ್ದಾರೆ.
ಎಂಥ ಹುಡುಗಿ ಬೇಕು ಎಂದು ಬಾಯ್ಬಿಟ್ಟ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯರ ಬಂಗಾರದ ಹುಡುಗ ಎನಿಸಿಕೊಂಡಿದ್ದಾರೆ. ಪದಕದ ಜೊತೆ ಜೊತೆಗೆ ಅದೆಷ್ಟೋ ಯುವತಿಯ ಹೃದಯವನ್ನು ಗೆದ್ದಿದ್ದಾರೆ. ಚಿನ್ನದ ಹುಡುಗ ಸದ್ಯ ನ್ಯಾಷನಲ್ ಕ್ರಷ್ ಆಗಿದ್ದು, ಬೆಡಗಿಯರ ಕನಸಿನ ರಾಜನಾಗಿದ್ದಾರೆ ಅಂದ್ರೆ ತಪ್ಪಾಗಲ್ಲ. ತನಗೆ ಗರ್ಲ್ ಫ್ರೆಂಡ್ ಇಲ್ಲ ಎನ್ನುತ್ತಿದ್ದ ನೀರಜ್ ಮೊದಲ ಬಾರಿಗೆ ತಾನು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದು ಬಾಯ್ಬಿಟ್ಟಿದ್ದಾರೆ. ಹಿಂದಿಯ ಡ್ಯಾನ್ಸ್ ಪ್ಲಸ್ 6 ರಿಯಾಲಿಟಿ ಶೋನಲ್ಲಿ ಅತಿಥಿಯಾಗಿ ನೀರಜ್ ಕಾಣಿಸಿಕೊಂಡಿದ್ದಾರೆ. ನಿರೂಪಕ ರಾಜೀವ್ ಜೊತೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ವೇಳೆ ನೀರಜ್ ಗರ್ಲ್ ಫ್ರೆಂಡ್ ಬಗ್ಗೆ ಪ್ರಶ್ನಿಸಲಾಗಿದೆ.ನಾನು ಮದುವೆಯಾಗುವ ಹುಡುಗಿ ನನ್ನ ಕುಟುಂಬವನ್ನು ಗೌರವಿಸುವಂತಿರಬೇಕು ಎನ್ನುವ ಮೂಲಕ ತಾನು ಮದುವೆ ಆಗುವ ಹುಡುಗಿಯಲ್ಲಿರಬೇಕಾದ ಗುಣದ ಬಗ್ಗೆ ಮಾತಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ