Viral Video: ರೈಲಿನಲ್ಲಿ ಚಾಕೊಲೇಟ್ ಮಾರಿ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಈ ವೃದ್ಧೆ, ವಿಡಿಯೋವನ್ನೊಮ್ಮೆ ನೋಡಿ

ಚಾಕೊಲೇಟ್ ಮತ್ತು ಇತರ ಆಹಾರ ಪದಾರ್ಥಗಳ ಪೆಟ್ಟಿಗೆಯನ್ನು ಹೊತ್ತ ವೃದ್ಧ ಮಹಿಳೆಯೊಬ್ಬರು ಮುಂಬೈ ಸ್ಥಳೀಯ ರೈಲಿನಲ್ಲಿ ಪ್ರಯಾಣಿಕರ ಬಳಿ ಹೋಗಿ ಆ ಚಾಕೊಲೇಟ್ ಡಬ್ಬಿಗಳನ್ನು ತೋರಿಸಿ ‘ಚಾಕೊಲೇಟ್ ಬೇಕಾ ನಿಮಗೆ’ ಅಂತ ಕೇಳುತ್ತಿರುವ ಒಂದು ವಿಡಿಯೋ ಈಗ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುವುದರೊಂದಿಗೆ ಅನೇಕರಿಗೆ ಸ್ಪೂರ್ತಿಯಾಗಿದೆ.

ಚಾಕೊಲೇಟ್ ಮಾರುವ ವೃದ್ದೆ

ಚಾಕೊಲೇಟ್ ಮಾರುವ ವೃದ್ದೆ

  • Share this:
ನೀವು ಈ ಹೊಟ್ಟೆ ಹಸಿವು (Hunger), ನಿಜವಾದ ಬಾಯಾರಿಕೆ ಎನ್ನುವುದು ಹೇಗೆ ಇರುತ್ತದೆ ಅಂತ ಹೊಟ್ಟೆ ತುಂಬಾ ಮೃಷ್ಟಾನ್ನ ಸಿಗುವ ಜನರಿಗೆ (People) ಕೇಳಿದರೆ ಎಂದಿಗೂ ಅರ್ಥವಾಗುವುದಿಲ್ಲ. ಹೌದು.. ಯಾರು ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟು ದುಡಿದು (Working) ತಿನ್ನುತ್ತಾರೋ, ಅಂತವರಿಗೆ ಈ ಹಸಿವು, ಬಾಯಾರಿಕೆಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ.  ಈ ಸಮಾಜದಲ್ಲಿ (Society) ನಾವು ಎಲ್ಲಾ ರೀತಿಯ ಜನರನ್ನು ನೋಡುತ್ತೇವೆ, ಒಂದು ಕಡೆ ತಟ್ಟೆಯಲ್ಲಿ ಅನ್ನವನ್ನು ಹಾಗೆ ಬಿಟ್ಟು ಕೈ ತೊಳೆದುಕೊಳ್ಳುವವರಿದ್ದರೆ, ಇನ್ನೊಂದು ಕಡೆ ಕಸದಲ್ಲಿ ಬಿಸಾಡಿದ ಆಹಾರವನ್ನು (Food) ಹುಡುಕಿ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಜನರಿದ್ದಾರೆ.

ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತ್ತಿರುವ ಜನ 
ಎಷ್ಟೋ ಜನರು, ಈ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಸಣ್ಣ ಪುಟ್ಟ ಗೂಡಂಗಡಿಗಳನ್ನಿಟ್ಟು ಚಹಾ, ಕಡಲೆ ಬೀಜಗಳು, ಮಕ್ಕಳಿಗೆ ಚಾಕೊಲೇಟ್ ಗಳನ್ನು ಮಾರುತ್ತಾ ಅದರಿಂದ ಗಳಿಸುವ ಅಷ್ಟಿಷ್ಟು ಹಣದಿಂದ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದನ್ನು ನಾವೆಲ್ಲಾ ದಿನನಿತ್ಯ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೋಡುತ್ತೇವೆ.

ಇದನ್ನೂ ಓದಿ:  Dream Job: ಜನರೊಂದಿಗೆ ಒಡನಾಟ ಮಾಡೋದೇ ಇವರ ಕೆಲಸ ಅಂತೆ! ಅದರಲ್ಲೇ ನಡೆಯತ್ತೆ ಸಂಪಾದನೆ

ಚಿಕ್ಕಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೆ ಎಲ್ಲರೂ ತಮ್ಮ ಹೊಟ್ಟೆ ಪಾಡಿಗಾಗಿ ಏನಾದರೊಂದು ಕೆಲಸವನ್ನು ಮಾಡುತ್ತಿರುವುದನ್ನು ನಾವು ನೋಡುತ್ತೇವೆ. ಅವರಿಗೆಲ್ಲಾ ತಾವು ಮಾಡುವ ಆ ಚಿಕ್ಕಪುಟ್ಟ ಕೆಲಸಗಳು ಯಾವುದೇ ಮುಜುಗರ ತರುವುದಿಲ್ಲ, ಏಕೆಂದರೆ ಅದರಿಂದ ಅವರ ಹೊಟ್ಟೆ ಹಸಿವು ನೀಗುತ್ತದೆ ಅಂತ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ರೀತಿಯ ವಿಡಿಯೋಗಳನ್ನು ನೋಡಿರುತ್ತೇವೆ. ಅದರಲ್ಲಿರುವ ಕೆಲವು ವಿಡಿಯೋಗಳು ನಮಗೆ ಬದುಕಿನ ಪಾಠವನ್ನು ಹೇಳಿಕೊಡುತ್ತವೆ ಮತ್ತು ಅನೇಕರಿಗೆ ಸ್ಪೂರ್ತಿಯಾಗುತ್ತವೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ವೃದ್ದೆಯ ವಿಡಿಯೋ
ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿದೆ. ನೀವು ನಿಮ್ಮ ಗುರಿಯ ಬಗ್ಗೆ ಉತ್ಸುಕರಾಗಿದ್ದರೆ ಯಾವುದೂ ನಿಮಗೆ ಕಡಿಮೆ ಅಂತ ಅನ್ನಿಸುವುದಿಲ್ಲ. ಆ ಕೆಲಸವನ್ನು ಮಾಡಲು ನಿಮಗೆ ನಿಮ್ಮ ವಯಸ್ಸು ಸಹ ಯಾವುದೇ ತಡೆಯನ್ನು ಹಾಕಲು ಸಾಧ್ಯವಿಲ್ಲ.


View this post on Instagram


A post shared by Mona F Khan (@mona13khan)
ಚಾಕೊಲೇಟ್ ಮತ್ತು ಇತರ ಆಹಾರ ಪದಾರ್ಥಗಳ ಪೆಟ್ಟಿಗೆಯನ್ನು ಹೊತ್ತ ವೃದ್ಧ ಮಹಿಳೆಯೊಬ್ಬರು ಮುಂಬೈ ಸ್ಥಳೀಯ ರೈಲಿನಲ್ಲಿ ಪ್ರಯಾಣಿಕರ ಬಳಿ ಹೋಗಿ ಆ ಚಾಕೊಲೇಟ್ ಡಬ್ಬಿಗಳನ್ನು ತೋರಿಸಿ ‘ಚಾಕೊಲೇಟ್ ಬೇಕಾ ನಿಮಗೆ’ ಅಂತ ಕೇಳುತ್ತಿರುವ ಒಂದು ವಿಡಿಯೋ ಈಗ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ.

ವೈರಲ್ ಆದ ಈ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ  
ಈ ವಿಡಿಯೋ ನೋಡಿದ ನೆಟ್ಟಿಗರು ಆ ವೃದ್ದೆಯ ಉತ್ಸಾಹವನ್ನು ಮೆಚ್ಚುತ್ತಿದ್ದಾರೆ, ಏಕೆಂದರೆ, ವಯಸ್ಸಾಗಿದ್ದರೂ ಸಹ ಆಕೆ ಹೊಟ್ಟೆ ತುಂಬಿಸಿಕೊಳ್ಳಲು ಸ್ವತಃ ದುಡಿದು ತಿನ್ನುತ್ತಿದ್ದಾಳೆ. ಅನೇಕ ಜನರು ವಯಸ್ಸಾದ ನಂತರ ತಮ್ಮ ಸಹಾಯಕ್ಕಾಗಿ ಬೇರೆಯೊಬ್ಬರ ಮೇಲೆ ಅವಲಂಬಿತರಾಗುತ್ತಾರೆ. ಆದರೆ ಇವರು ಹಾಗೆ ಮಾಡದೆ, ಅವರೇ ಸ್ವತಃ ದುಡಿಯುತ್ತಿದ್ದಾರೆ ಎಂಬ ಅಂಶ ಅನೇಕರಿಗೆ ಸ್ಪೂರ್ತಿಯಾಗಿದೆ.

ಈ ವಿಡಿಯೋವನ್ನು ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ವೈರಲ್ ಆಗಿದೆ. ಈ ವಿಡಿಯೋವನ್ನು ಸ್ವಾತಿ ಮಲಿವಾಲ್ ಅವರ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಇಲ್ಲಿಯವರೆಗೆ ಇಂಟರ್ನೆಟ್ ನಲ್ಲಿ 5,500 ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ:  Coconut Shell: ಕೈಗೆ ಚಿಪ್ಪು ಕೊಟ್ರೆ ಮ್ಯಾಜಿಕ್ ಮಾಡ್ತಾರೆ! ತೆಂಗಿನ ಚಿಪ್ಪು ಎಸೆಯೋ ಮುನ್ನ ಇಲ್ನೋಡಿ

ಈ ವಿಡಿಯೋ ವೈರಲ್ ಆದ ತಕ್ಷಣ, ಬಳಕೆದಾರರು ಕಾಮೆಂಟ್ಸ್ ವಿಭಾಗವನ್ನು ತಮ್ಮ ಕಾಮೆಂಟ್ ಗಳಿಂದ ತುಂಬಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು "ಕೆಲವೊಮ್ಮೆ ನಮಗೆ ಅಗತ್ಯವಿಲ್ಲದಿದ್ದರೂ ಸಹ ಇಂತಹ ಕಠಿಣ ಪರಿಶ್ರಮಿ ಜನರಿಂದ ವಸ್ತುಗಳನ್ನು ಖರೀದಿಸಬೇಕು. ಇದು ಅವರಿಗೆ ಸಾಕಷ್ಟು ಸಹಾಯ ಮಾಡುತ್ತದೆ" ಎಂದು ಹೇಳಿದರು. ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ "ಈ ವೃದ್ಧ ಮಹಿಳೆಗೆ ಸೆಲ್ಯೂಟ್. ಸುಮ್ಮನೆ ನೆಪಗಳನ್ನು ಹೇಳುವ ಯುವಕರನ್ನು ಇವರು ಪ್ರೇರೇಪಿಸಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: