ಕಾಲ ಸಿಕ್ಕಾಪಟ್ಟೆ ಫಾಸ್ಟ್ ಆಗಿ ಓಡ್ತಾ ಇರುತ್ತೆ. ಟೈಮ್ ತೋರಿಸುವ ವಾಚ್‌ಗಳು (Watch ಕೂಡ ದಿನ ಬದಲಾದಂತೆ ಹಳೆಯದಾಗಿ ಇರುತ್ತವೆ. ಆದ್ರೆ, ಇಲ್ಲಿ 60 ವರ್ಷದ ಹಳೆಯ ವಾಚ್ ಒಂದು 41 ಲಕ್ಷ ರೂಪಾಯಿಗೆ ಮಾರಾಟ ಆಗಿದೆ. ನಿಜ, ಒಂದೆರಡು ವರ್ಷಗಳು ಕಳೆದ್ರೆ ಸಾಕು, ನಮ್ ಜನರಿಗೆ ಹಾಕಿಕೊಂಡಿರುವ ವಾಚ್ ಬೋರಾಗಿ ಹೋಗುತ್ತೆ. ಹೊಸ ಹೊಸ ವಾಚ್ ಖರೀದಿಸಿ ಮನೆಯಲ್ಲಿ ಇಟ್ಕೊಳ್ತಾರೆ. ಹಳೇ ವಾಚ್ ಅನ್ನ ಅವರಿವರಿಗೆ ಕೊಟ್ಟು ಸುಮ್ಮನಾಗ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿಯ ಹಳೇ ವಾಚ್ ಲಕ್ಷ ಲಕ್ಷ ರೂಪಾಯಿಗೆ ಸೇಲ್ (Sale) ಆಗಿದೆ. ಜಸ್ಟ್ 7 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದ ವಾಚ್ ಅನ್ನು ಆನ್‌ಲೈನ್ ಬಿಡ್ಡಿಂಗ್‌ನಲ್ಲಿ (Online Bidding) ವ್ಯಕ್ತಿಯೊಬ್ಬರು 41 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ.
6 ದಶಕದಷ್ಟು ಹಳೆಯದಾದ್ರೂ ತನ್ನ ಮೌಲ್ಯವನ್ನ ಹೆಚ್ಚಿಸಿಕೊಂಡಿರುವ ವಾಚ್ ಯಾವುದು ಗೊತ್ತಾ?. ಅದುವೇ ರೋಲೆಕ್ಸ್. ಹೌದು, ರೋಲೆಕ್ಸ್ ಕಂಪನಿಯ ಸಬ್ ಮರಿನರ್ ಅನ್ನೋ ವಾಚ್ ಈಗ ಅತ್ಯಂತ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಸಖತ್ ಸುದ್ದಿ ಮಾಡ್ತಿದೆ.
1963 ರಲ್ಲಿ ತಯಾರಿಸಲಾಗಿದ್ದ ವಾಚ್ ಇದು!
ಈ ವಾಚ್ ಅನ್ನು 1963 ತಯಾರಿಸಲಾಗಿತ್ತು. 1964ರಲ್ಲಿ ಜೇನಿಯಾದ ನಾರ್‌ಫ್ಲೋಕ್‌ನ ದಿಸ್ ನಿವಾಸಿಯಾಗಿದ್ದ ಸಿಮನ್ ಬರ್ನೆಟ್ ಅವರು ಸಿಂಗಾಪುರದಲ್ಲಿ ಈ ವಾಚ್ ಅನ್ನ ಖರೀದಿ ಮಾಡಿದ್ರು. ನೌಕಾದಳದ ಅಧಿಕಾರಿಯಾಗಿದ್ದ ಅವರು ಕರ್ತವ್ಯದಲ್ಲಿದ್ದಾಗ ಈ ವಾಚ್ ಖರೀದಿ ಮಾಡಿದ್ರು. ಸಮುದ್ರದ ರಕ್ಷಣಾ ಕಾರ್ಯ ಸೇರಿದಂತೆ ಇನ್ನಿತರ ಸಮಯದಲ್ಲೂ ಅವರು ಈ ವಾಚ್ ಧರಿಸುತ್ತಿದ್ರಂತೆ.
ಇದನ್ನೂ ಓದಿ: ಸ್ಕೈಡೈವಿಂಗ್ ಮಾಡುತ್ತಲೇ ಮೇಕಪ್ ಮಾಡಿಕೊಂಡ ಮಹಿಳೆ, ಅಬ್ಬಬ್ಬಾ ಈಕೆಯದ್ದು ಅಂತಿಂಥಾ ಸಾಹಸವಲ್ಲ!
ಈ ವಾಚ್ ಅನ್ನು ಅವರು ಖರೀದಿ ಮಾಡಿದ ಸಮಯದಲ್ಲಿ ಅವರು ಕುಟುಂಬಸ್ಥರ ಜತೆ ವಾಚ್ ಬಗ್ಗೆ ಹೊಗಳಿದ್ರು. ಇದೊಂದು ಬೆಲೆ ಕಟ್ಟಲಾಗದ ವಸ್ತು ಅಂತ ರೋಲೆಕ್ಸ್ ಸಬ್‌ಮರಿನರ್ ವಾಚ್ ಅನ್ನ ಕೊಂಡಾಡಿದ್ರು. ಸುಮಾರು 23 ವರ್ಷದ ವೃತ್ತಿ ಜೀವನದಲ್ಲಿ ಸಿಮನ್ ಅವರು ಈ ವಾಚ್ ಧರಿಸಿಕೊಂಡು ಕರ್ತವ್ಯ ನಿರ್ವಹಿಸಿದ್ರು. 2019ರಲ್ಲಿ ಸಿಮನ್ ಅವರು ಪ್ರಾಣಬಿಟ್ಟಿದ್ರು.
ಆನ್‌ಲೈನ್ ಬಿಡ್ಡಿಂಗ್‌ನಲ್ಲಿ ಮಾರಾಟವಾದ ವಾಚ್
ಅಂದಹಾಗೇ, ಈ ವಾಚ್ ಮಾರಾಟವಾಗಿರುವುದು ಆನ್ ಲೈನ್ ಬಿಡ್ಡಿಗೊಂದರಲ್ಲಿ. ತಂದೆಯ ಸಾವಿನ ಬಳಿಕ ವಾಚ್ ಸಿಮನ್ ಅವರ ಪುತ್ರ ಪೀಟರ್ ಬರ್ನೆಟ್ ಅವರ ಕೈ ಸೇರಿತ್ತು. ಕೆಲ ದಿನಗಳ ಕಾಲ ಅವರು ಕೂಡ ವಾಚ್ ಧರಿಸಿದ್ರು. ಬಳಿಕ ಅಪ್ಪನ ನೆನಪಿನ ವಾಚ್ ಅನ್ನ ಪೀಟರ್ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ರು. ಕೆಲ ದಿನಗಳ ಹಿಂದೆ ಎಲಿಜಬೆತ್ ಟಬ್ಲಾಟ್ ಅನ್ನೋರು ಆನ್‌ಲೈನ್‌ನಲ್ಲಿ ಹಳೇ ವಸ್ತುಗಳ ಹರಾಜು ಏರ್ಪಡಿಸಿದ್ರು.
ಅಲ್ಲಿ ಪೀಟರ್ ಅವರು ತಂದೆಯ ರೋಲೆಕ್ಸ್ ವಾಚ್ ಅನ್ನ ಹರಾಜಿಗೆ ಇಟ್ಟಿದ್ರು. ನೀರಿನಲ್ಲೇ ದಶಕಗಳನ್ನ ಕಳೆದ್ರು ಮಿರ ಮಿರ ಮಿಂಚುತ್ತಿದ್ದ ರೋಲೆಕ್ಸ್ ಸಬ್‌ಮರಿನರ್ ವಾಚ್ ಸುಮಾರು 55 ರಿಂದ 66 ಲಕ್ಷಕ್ಕೆ ಮಾರಾಟ ಆಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ರು. ಕೊನೆಗೆ ಆನ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬರು ಇದಕ್ಕೆ 41 ಲಕ್ಷಕ್ಕೆ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದಾರೆ.
7 ಸಾವಿರದ ವಾಚ್ 41 ಲಕ್ಷಕ್ಕೆ ಮಾರಾಟ
ಕೇವಲ 7 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದ ವಾಚ್ ಈಗ 41 ಲಕ್ಷಕ್ಕೆ ಮಾರಾಟವಾಗಿದೆ. 60 ವರ್ಷದ ಹಳೇಯ ವಾಚ್ ಅನ್ನ ದುಬಾರಿ ಮೊತ್ತದ ಹಣ ಕೊಟ್ಟು ಖರೀದಿ ಮಾಡಿದ್ದಾರೆ.. ಮೇ 11ರಂದು ಆನ್‌ಲೈನ್‌ನಲ್ಲೇ ಈ ಬಿಡ್ಡಿಂಗ್ ನಡೆಯಿತು. 41 ಲಕ್ಷಕ್ಕೆ ವಾಚ್ ಖರೀದಿ ಮಾಡಿರುವ ವ್ಯಕ್ತಿ ಕೂಡ ರೊಲೆಕ್ಸ್ ವಾಚ್ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ತನ್ನ ತಂದೆಯ ವಾಚ್ ಅನ್ನ ಮಾರಾಟ ಮಾಡಿರುವ ಪೀಟರ್ ಬರ್ನೆಟ್ ಕೂಡ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಈ ವಾಚ್ ಅನ್ನ ಅತ್ಯಂತ ಭಾರವಾದ ಹೃದಯದಿಂದ ಮಾರಾಟ ಮಾಡುತ್ತಿದ್ದೇನೆ. ಇದು ಅತ್ಯಂತ ಕಷ್ಟಕರವಾದ ನಿರ್ಧಾರ. ಆದರೆ ನನಗೆ ಈ ವಾಚ್ ಬಗ್ಗೆ ಅದರ ಹಿನ್ನೆಲೆ ಬಗ್ಗೆ ಎಲ್ಲರಿಗೂ ಗೊತ್ತಾಗುವಂತೆ ಮಾಡುತ್ತಿರೋದು ಹೆಮ್ಮೆ ತರಿಸಿದೆ ಅಂತ ಪೀಟರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ