ಎಲೋನ್ ಮಸ್ಕ್ (Elon Musk )ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಟೆಸ್ಲಾ, ಸ್ಪೇಸ್‌ಎಕ್ಸ್ ಮತ್ತು ಸಿಇಒ ಎಲಾನ್ ಮಸ್ಕ್ ಬಿಲಿಯಾಧಿಪತಿ ಆಗಿದ್ದರೂ ತಮ್ಮ ವಿಲಕ್ಷಣ ಕಾಮೆಂಟ್‌ಗಳಿಂದೂ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ತಾಣದಲ್ಲಿ (Social Media) ಚರ್ಚೆಗಳನ್ನು, ಸಂಗರ್ಷಗಳನ್ನು ಹುಟ್ಟುಹಾಕುವ ಟೀಕೆಗಳನ್ನು ನೇರವಾಗಿ ಮಾಡುವ ಎಲಾನ್ ಮಸ್ಕ್ ಮಾಜದ ಇತರ ಗಣ್ಯರಿಗೂ ಮಾತಿನ ಚಾಟಿ ಏಟು ಬೀಸುವಲ್ಲಿ ಸಿದ್ಧಹಸ್ತರಾದವರು. ಇದೀಗ ಶಾಂಘೈನಲ್ಲಿರುವ ಟೆಸ್ಲಾ ಪ್ಲಾಂಟ್‌ನಲ್ಲಿ 2020 ರ ಈವೆಂಟ್‌ನಲ್ಲಿ ಎಲಾನ್ ಮಸ್ಕ್ ಮಾಡಿರುವ ವಿಲಕ್ಷಣ ನೃತ್ಯ ಚಲನೆಗಳನ್ನು ಪ್ರದರ್ಶಿಸಿರುವ ಹಳೆಯ ವಿಡಿಯೋ ವೈರಲ್ (Video Viral) ಆಗಿದ್ದು ಇಂಟರ್ನೆಟ್‌ನಾದ್ಯಂತ ವಿನೋದದ ಅಲೆಯನ್ನು ಸೃಷ್ಟಿಸಿದೆ.
ವಿಡಿಯೋ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಟೆಸ್ಲಾ ಓನರ್ಸ್ ಸಿಲಿಕಾನ್ ವ್ಯಾಲಿ ಹೆಸರಿನ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಎಲಾನ್ ಮಸ್ಕ್ ನರ್ತಿಸುತ್ತಿರುವ ಈ ವಿಡಿಯೋ ಮನೋರಂಜಕವಾಗಿದ್ದು, ಎಷ್ಟು ಹಾಸ್ಯಸ್ಪದವಾಗಿ ನರ್ತನಗೈಯ್ಯುತ್ತಿದ್ದಾರೆ ಎಂಬುದನ್ನು ವಿಡಿಯೋ ಬಹಿರಂಗಪಡಿಸಿದೆ.
ಮಸ್ಕ್ ನೃತ್ಯಕ್ಕೆ ಪ್ರೋತ್ಸಾಹ ನೀಡಿದ ಸಭಿಕರು
ವಿಡಿಯೋದಲ್ಲಿ ಜಾಕೆಟ್ ಕಳಚಿಟ್ಟು ನರ್ತಿಸುತ್ತಿರುವ ಎಲಾನ್ ಮಸ್ಕ್ ಸಂಗೀತದ ಲಯಕ್ಕೆ ತಕ್ಕಂತೆ ಹೆಜ್ಜೆಹಾಕುತ್ತಿದ್ದಾರೆ. ಇನ್ನು ವೇದಿಕೆಯ ಕೆಳಗಿದ್ದವರು ಅವರ ನರ್ತನಕ್ಕೆ ಪ್ರೋತ್ಸಾಹ ನೀಡುವಂತೆ ಚಪ್ಪಾಳೆ ತಟ್ಟುವುದು, ಶಿಳ್ಳೆಹೊಡೆಯುವುದು ಹಾಗೂ ಚೀರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
CNN ಪ್ರಕಾರ, ಚೀನಾದ ಶಾಂಘೈನಲ್ಲಿರುವ ತನ್ನ ಕಂಪನಿಯ ಪ್ಲಾಂಟ್ ಟೆಸ್ಲಾ ಗಿಗಾಫ್ಯಾಕ್ಟರಿಯಲ್ಲಿ ಎಲಾನ್ ಮಸ್ಕ್ ವಿಚಿತ್ರವಾದ ನೃತ್ಯವನ್ನು ಪ್ರದರ್ಶಿಸಿದ್ದಾರೆ ಎಂಬುದು ವರದಿಯಾಗಿದೆ.
ಇದನ್ನೂ ಓದಿ: ನಾಯಿಮರಿ ಎಂದು ತಿಳಿದು ಕತ್ತೆ ಕಿರುಬನನ್ನು ಸಾಕಿದ ಭೂಪ! ಆಮೇಲಾಗಿದ್ದು ಮಾತ್ರ ಸಖತ್ ಸುದ್ದಿ
2020 ರಲ್ಲಿ ಟೆಸ್ಲಾದಿಂದ ಚೀನಾದಲ್ಲಿ ತಯಾರಿಸಿದ ಎಲೆಕ್ಟ್ರಿಕ್ ವಾಹನಗಳ ಮೊದಲ ವಿತರಣೆಯನ್ನು ಆಚರಿಸಲು ಈವೆಂಟ್ ಅನ್ನು ಆಯೋಜಿಸಲಾಗಿತ್ತು ಹಾಗೂ ಈ ಈವೆಂಟ್‌ನಲ್ಲಿ ಮಸ್ಕ್ ಮನಬಿಚ್ಚಿ ನರ್ತಿಸಿದ್ದಾರೆ.
ಟ್ವಿಟರ್‌ನಲ್ಲಿ ಕಾಮೆಂಟ್‌ಗಳ ಮಹಾಪೂರ
ವಿಡಿಯೋ ಕ್ಲಿಪ್‌ನಲ್ಲಿ, ಉದ್ಯೋಗಿಗಳು ಮತ್ತು ಟೆಸ್ಲಾ ಮಾಲೀಕರಿಗಾಗಿ ನಡೆದ ಸಮಾರಂಭದಲ್ಲಿ ಎಲೋನ್ ಮಸ್ಕ್ ವೇದಿಕೆಯ ಮೇಲೆ ನರ್ತಿಸುವ ಹೆಜ್ಜಗಳನ್ನಿಟ್ಟು ನಡೆಯುತ್ತಿರುವುದು ಕಂಡುಬಂದಿದೆ. ಅಂತೆಯೇ ತಮ್ಮ ಬ್ಲೇಜರ್ ತೆಗೆದು ಯಾರೂ ನೋಡದ ಹಾಗೆ ಕುಣಿದು ಕುಪ್ಪಳಿಸುತ್ತಿದ್ದುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದು, ಎಲಾನ್ ಮಸ್ಕ್ ತಮ್ಮ ವರ್ತನೆಗೆ ತಕ್ಕಂತೆ ವಿಡಿಯೋದಲ್ಲಿ ಕಂಡುಬಂದಿದ್ದಾರೆ ಎಂದೇ ವಿಮರ್ಶೆಗಳನ್ನು ನಡೆಸಿದ್ದಾರೆ.
.@elonmusk knows how to get down pic.twitter.com/yIwcByxAuL
— Tesla Owners Silicon Valley (@teslaownersSV) March 6, 2023
ನರ್ತನ ಲಯಗಳನ್ನು ಆತ ನಿಸ್ಸೀಮರಾಗಿ ಕಲಿತುಕೊಳ್ಳಬಲ್ಲರು. ಆತನಿಗೆ ಇದು ಉತ್ತಮ ಹೂಡಿಕೆಯ ವಿಧಾನವಾಗಿದೆ ಎಂದು ಇನ್ನೊಬ್ಬ ಟ್ವಿಟರ್ ಬಳಕೆದಾರರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಮಸ್ಕ್ ಒಬ್ಬ ಮನೋರಂಜಕ ವ್ಯಕ್ತಿ
ಹಣದಿಂದ ಖರೀದಿಸಲು ಆಗದೇ ಇರುವುದು ತಾಳವಾಗಿದೆ. ಒಂದಾ ನೀವು ಅದನ್ನು ಜನ್ಮತಃ ಹೊಂದಿರುವಿರಿ ಇಲ್ಲದಿದ್ದರೆ ನಿಮ್ಮಲ್ಲಿ ಆ ಕಲೆ ಇಲ್ಲ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಎಲಾನ್ ಮಸ್ಕ್ ಎಂದರೆ ತುಂಬಾ ಇಷ್ಟ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ಗಳಿಸಿದ ಲೈಕ್ ಹಾಗೂ ವೀಕ್ಷಣೆಗಳೆಷ್ಟು?
ವಿಡಿಯೋ ಹಂಚಿಕೊಂಡಾಗಿನಿಂದ ಇದುವರೆಗೆ 576,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 3,500 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಇನ್ನು 2020 ರಲ್ಲಿ ತಮ್ಮ ನೃತ್ಯ ವಿಡಿಯೋದ ಬಗ್ಗೆ ಸ್ವತಃ ಎಲಾನ್ ಮಸ್ಕ್ ಕಾಮೆಂಟ್ ಮಾಡಿದ್ದು, "ಟೆಸ್ಲಾ ಗಿಗಾ ಶಾಂಘೈ NSFW ನಲ್ಲಿ!!" ಎಂಬ ಶೀರ್ಷಿಕೆ ನೀಡಿ ಕ್ಲಿಪ್ ಹಂಚಿಕೊಂಡಿದ್ದಾರೆ. ಹಳೆಯ ವಿಡಿಯೋವಾಗಿದ್ದರೂ ಎಲೋನ್ ಮಸ್ಕ್‌ರ ನರ್ತನ ವಿಡಿಯೋ ತಾಣದಲ್ಲಿ ಸಂಚಲನ ಸೃಷ್ಟಿಸಿದ್ದು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ