Arts: 2 ಸಾವಿರಕ್ಕೆ ಮಾರಾಟವಾಗಿದ್ದ ಅಪರೂಪದ ಚಿತ್ರಕ್ಕೆ ಈಗ 74 ಕೋಟಿ ಬೆಲೆ!

ಅದು ಖ್ಯಾತ ಕಲಾವಿದ ಬಿಡಿಸಿದ್ದ ವಿಶ್ವವಿಖ್ಯಾತ ಚಿತ್ರಪಟ. ಆದರೆ ಅದು ಸೇಲ್ ಆಗಿದ್ದು ಹಳೆ ಪುಸ್ತಕದ ಅಂಗಡಿಯಲ್ಲಿ! ಅದೂ ಬರೀ 2 ಸಾವಿರ ರೂಪಾಯಿಗೆ. ಮಾರಾಟವಾಗಿದ್ದ ಆ ಚಿತ್ರ ಹುಡುಕಲು ಬೇಕಾಯ್ತು ಬರೋಬ್ಬರಿ 3 ವರ್ಷ! ಹಾಗಿದ್ರೆ ಅಂಥಾದ್ದೇನಿದೆ ಆ ಚಿತ್ರದಲ್ಲಿ?

'ದಿ ವರ್ಜಿನ್ ಆ್ಯಂಡ್ ಚೈಲ್ಡ್' ರೇಖಾಚಿತ್ರ

'ದಿ ವರ್ಜಿನ್ ಆ್ಯಂಡ್ ಚೈಲ್ಡ್' ರೇಖಾಚಿತ್ರ

  • Share this:
16ನೇ ಶತಮಾನದ (16th  Century) 'ದಿ ವರ್ಜಿನ್ ಆ್ಯಂಡ್ ಚೈಲ್ಡ್' (The Virgin and Child) ಎಂಬ ರೇಖಾಚಿತ್ರವು (Art) ಯಾರ್ಡ್ ಮಾರಾಟದಲ್ಲಿ ಕೇವಲ 2 ಸಾವಿರ ರೂ.ಗೆ ಮಾರಾಟವಾಗಿತ್ತು. ಆದರೆ ಡ್ರಾಯಿಂಗ್‌ನ ವಾಸ್ತವ ಬೆಲೆಯನ್ನು ಕೇಳಿದ್ರೆ ನಿಮಗೆ ನಿಜಕ್ಕೂ ಅಚ್ಚರಿ ಆಗುತ್ತದೆ. ಹೌದು, 16ನೇ ಶತಮಾನದ ಜರ್ಮನ್ (German) ನವೋದಯ ಕಲಾವಿದ ಆಲ್ಬ್ರೆಕ್ಟ್ ಡ್ಯೂರರ್ ಬಿಡಿಸಿರುವ ರೇಖಾ ಚಿತ್ರದ ವಾಸ್ತವ ಬೆಲೆ 74 ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಆಲ್ಬ್ರೆಕ್ಟ್ ಡ್ಯೂರರ್ ಅವರ ಚಿತ್ರಕಲೆಯನ್ನು 2017ರಲ್ಲಿ ಯಾರ್ಡ್ ಮಾರಾಟದಲ್ಲಿ (Sale) ಕೇವಲ 30 ಡಾಲರ್‌ಗೆ ಅಂದರೆ 2000 ಸಾವಿರ ರೂ. ಗೆ ಖರೀದಿಸಲಾಗಿತ್ತು, ಆದರೆ ಇದರ ವಾಸ್ತವ ಬೆಲೆ 74 ಕೋಟಿಗಿಂತ ($ 10 ಮಿಲಿಯನ್‌) ಹೆಚ್ಚು ಮೌಲ್ಯದ್ದಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಪ್ರಸ್ತುತ ಕಲಾಕೃತಿಯು ಲಂಡನ್ (Landon) ಮೂಲದ ಹರಾಜು ಮನೆಯಾದ ಆಗ್ನ್ಯೂಸ್ ಗ್ಯಾಲರಿಯ ಸ್ವಾಧೀನದಲ್ಲಿದೆ. ಯಾರ್ಡ್‌ನಲ್ಲಿ ಮಾರಾಟವಾಗುವ ಸಮಯದಲ್ಲಿ ಚಿತ್ರಕಲೆಯು ಡ್ಯೂರರ್ ಅವರದ್ದು ಎಂದು ತಿಳಿದಿರಲಿಲ್ಲ, ಮತ್ತು ಸಂಶೋಧನೆಯ ನಂತರ ಚಿತ್ರವು ಶ್ರೇಷ್ಠ ಕಲಾವಿದ ಡ್ಯೂರರ್‌ಗೆ ಸೇರಿದ ಕಲೆ ಎಂದು ತಿಳಿದು ಬಂದಿದೆ.

ಯಾರು ಈ ಕಲಾವಿದ ಡ್ಯೂರಲ್?

1529ರಲ್ಲಿ ನಿಧನರಾದ ಡ್ಯೂರರ್, ಜರ್ಮನ್ ನವೋದಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಆ ಕಾಲದ ಶ್ರೇಷ್ಠ ಕಲಾವಿದ ಎಂದು ಖ್ಯಾತರಾಗಿದ್ದರು. ಡ್ಯೂರರ್ ಅವರ ಈ ರೇಖಾಚಿತ್ರವನ್ನು 'ದಿ ವರ್ಜಿನ್ ಆ್ಯಂಡ್ ಚೈಲ್ಡ್' ಎಂದು ಹೆಸರಿಸಲಾಗಿದೆ. “ಡ್ಯೂರರ್ ಅವರ ಪರಂಪರೆಯನ್ನು ಪ್ರಪಂಚದಾದ್ಯಂತದ ವಿದ್ವಾಂಸರು ಬಹಳ ವಿವರವಾಗಿ ಅಧ್ಯಯನ ಮಾಡಿದ್ದಾರೆ. ಹೀಗಾಗಿ ಡ್ಯೂರರ್ ಅಜ್ಞಾತ ಕೃತಿಗಳನ್ನು ಕಂಡುಹಿಡಿಯುವುದು ಅತ್ಯಂತ ಅಪರೂಪ” ಎಂದು ಲಂಡನ್ ಮೂಲದ ಹರಾಜು ಮನೆಯಾದ ಆಗ್ನ್ಯೂಸ್ ಸಿಬ್ಬಂದಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪುಸ್ತಕದ ಅಂಗಡಿಯಲ್ಲಿ ಸಿಕ್ಕಿತ್ತು ಕಲಾಕೃತಿ!

ಬೋಸ್ಟನ್ ಮೂಲದ ಕಲಾ ಸಂಗ್ರಾಹಕ ಮತ್ತು ಗ್ಯಾಲರಿಯ ಸಲಹೆಗಾರ ಕ್ಲಿಫರ್ಡ್ ಸ್ಕೋರರ್ ಎಂಬಾತ 2019ರಲ್ಲಿ ಮ್ಯಾಸಚೂಸೆಟ್ಸ್ ಪುಸ್ತಕದಂಗಡಿಯಲ್ಲಿದ್ದಾಗ ಡ್ಯೂರರ್ ಅವರ ಈ ಕಲಾಕೃತಿಯನ್ನು ನೋಡಿದ ಮೊದಲಿಗರು. ಸ್ಕೋರರ್ ಈ ಚಿತ್ರ ನೋಡುತ್ತಿದ್ದಂತೆ ಅವರಿಗೆ ಇದು ಡ್ಯೂರರ್ ಚಿತ್ರವಿರಬಹುದು ಎಂಬ ಅನುಮಾನ ಬಂದಿತಂತೆ.

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತದ Coffeeಗೆ ಭಾರೀ ಡಿಮ್ಯಾಂಡ್..! ಹೆಚ್ಚಿದ ಬೆಲೆಯಿಂದ ಭಾರೀ ಲಾಭ

ಮಾರಾಟದ ಬಳಿಕ ಅಂಗಡಿ ಮಾಲೀಕನಿಗೆ ಆಘಾತ

ವರದಿಗಳು ಹೇಳುವ ಪ್ರಕಾರ, ಪುಸ್ತಕದ ಅಂಗಡಿಯ ಮಾಲೀಕರು ತನ್ನ ಸ್ನೇಹಿತ ಖರೀದಿಸಿದ ರೇಖಾಚಿತ್ರವನ್ನು ನೋಡಲು ಕೇಳಿದ್ದರು. ಪುಸ್ತಕ ಮಾರಾಟಗಾರನು ಚಿತ್ರವು ಡ್ಯೂರರ್‌ನ ಮೂಲವಾಗಿರಬಹುದೆಂದು ಊಹಿಸಿದ ನಂತರ ರೇಖಾಚಿತ್ರವನ್ನು ಸ್ಕೋರರ್‌ಗೆ ಮಾರಾಟ ಮಾಡಿದನು. ಆದರೆ, ಕೆಲವೇ ವಾರಗಳಲ್ಲಿ ಡ್ರಾಯಿಂಗ್ ಡ್ಯೂರರ್ ಅವರದ್ದು ಎಂದು ಗೊತ್ತಾದಾಗ ಸ್ಕೋರರ್ ಆಘಾತಕ್ಕೊಳಗಾಗಿದ್ದರಂತೆ.

ಕಲಾಕೃತಿಯನ್ನು ಪುನಃ ಹುಡುಕಲು 3 ವರ್ಷ

ಅಲ್ಲದೆ, ಕಲಾಕೃತಿಯನ್ನು ಪರಿಶೀಲಿಸಲು ಅವರು ಮೂರು ವರ್ಷಗಳ ಕಾಲ ಸಂಶೋಧನೆಯಲ್ಲಿ ತೊಡಗಿದ್ದರಂತೆ. ಅದಕ್ಕಾಗಿ ಸ್ಕೋರರ್ ಹಲವು ಕಡೆ ಪ್ರಯಾಣವನ್ನು ಕೈಗೊಂಡಿದ್ದರು. ಸ್ಕೋರರ್ ಅವರು ಪ್ರಪಂಚದಾದ್ಯಂತ 17 ತಜ್ಞರನ್ನು ಭೇಟಿಯಾಗಿ ಚಿತ್ರದ ಬಗ್ಗೆ ತಿಳಿದುಕೊಂಡು ಇದು ಡ್ಯೂರರ್ ಚಿತ್ರವೇ ಎಂದು ಖಚಿತ ಪಡಿಸಿಕೊಂಡಿದ್ದಾರೆ.

"ನೀವು ನನ್ನ ಜಗತ್ತಿನಲ್ಲಿ ಇರುವಾಗ ನಿಮ್ಮ ಜೀವನವನ್ನು ಆಕರ್ಷಕ ಸಂಶೋಧನಾ ಮಾರ್ಗಗಳಿಗೆ ಕಾರಣವಾಗುವ ಅಜ್ಞಾತ ವಿಷಯಗಳನ್ನು ಹುಡುಕುತ್ತಿದ್ದೀರಿ.. ಮತ್ತು ನಾನು ಅತ್ಯಂತ ರೋಮಾಂಚನಕಾರಿ ಸಂಗತಿಯ ಆರಂಭದಲ್ಲಿದ್ದನ್ನು ನಾನು ನೋಡಿದೆ" ಎಂದು ಸ್ಕೋರರ್ ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ: Viral News: ಇವು ಒಂದಲ್ಲಾ, ಎರಡಲ್ಲಾ 99 ಮಿಲಿಯನ್ ವರ್ಷಗಳ ಹಿಂದಿನ ಹೂವು! ವಿಶೇಷ ಪುಷ್ಪದ ಬಗ್ಗೆ ಮಾಹಿತಿ

ಡ್ಯೂರರ್ ಚಿತ್ರಕಲೆಯ ಬಗ್ಗೆ ಸತ್ಯಾಸತ್ಯತೆಯನ್ನು ದೃಢಪಡಿಸಿದ ನಂತರ, ಈ ವಿಶಿಷ್ಟ ಚಿತ್ರವು ಸುಮಾರು $10 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಸ್ಕೋರರ್ ಮತ್ತು ಇತರೆ ತಜ್ಞರು ಹೇಳಿದ್ದಾರೆ.

"ಸಾಪೇಕ್ಷ ಮೌಲ್ಯದ ವಿಷಯದಲ್ಲಿ, ನೀವು ಅದನ್ನು ಇತರ ಹಳೆಯ ಮಾಸ್ಟರ್ ರೇಖಾಚಿತ್ರಗಳಿಗೆ ಹೋಲಿಸಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಸ್ಕೋರರ್ ತಿಳಿಸಿದ್ದಾರೆ. ಯಾರ್ಡ್‌ನಲ್ಲಿ ಕೇವಲ 2 ಸಾವಿರ ರೂಪಾಯಿಗೆ ಮಾರಾಟವಾಗಿದ್ದ ಚಿತ್ರಕಲೆಯು ಬರೋಬ್ಬರಿ 74 ಕೋಟಿ ಮೌಲ್ಯದ್ದು ಅಂದರೆ ನಿಜಕ್ಕೂ ಅಚ್ಚರಿಯೇ ಸರಿ.
Published by:Annappa Achari
First published: