Viral News: 28 ಹೆಂಡತಿಯರ ಕಣ್ಣ ಮುಂದೆಯೇ 37ನೇ ಹೆಂಡತಿಯನ್ನು ಮದುವೆಯಾದ ಭೂಪ! ಇದಕ್ಕೆ ನೆಟ್ಟಿಗರು ಹೇಳಿದ್ದೇನು ನೋಡಿ

28 ಹೆಂಡತಿಯರ ಕಣ್ಣು ಮುಂದೆಯೇ 37ನೇ ಹೆಂಡತಿಯನ್ನು ಮದುವೆಯಾಗಿದ್ದಾನೆ ಈ ವಯೋವೃದ್ದ. ಇದು ನಿಜಕ್ಕೂ ಎಂದಿಗೂ ಕೇಳಿರಲಾರದ ಅಚ್ಚರಿ ಮೂಡಿಸುವ ಸಂಗತಿ ಎಂದು ಹೇಳಬಹುದು.

ವಧು ಮತ್ತು ವರ

ವಧು ಮತ್ತು ವರ

  • Share this:
ಇತ್ತೀಚೆಗೆ ಕೆಲವು ಮದುವೆ (Marriage) ವಯಸ್ಸಿಗೆ (Age) ಬಂದಂತಹ ಯುವಕರ (Youth) ಮುಂದೆ ನೀವು ಮದುವೆ ಎಂಬ ಮೂರು ಅಕ್ಷರಗಳ ಪದವನ್ನು (three letter word) ಒಮ್ಮೆ ಹೇಳಿದರೆ ಸಾಕು, ಅವರು ಅಲ್ಲಿಂದ ಎದ್ದು ಬೇರೆಡೆಗೆ ಹೋಗುತ್ತಾರೆ. ಈಗೇಕೆ ಮದುವೆ ವಿಷಯ (subject of marriage) ಬಂತು ಎಂದು ಮೈಲಿ ದೂರ ಓಡಿ ಹೋಗುತ್ತಾರೆ ಇವರು ಎಂದರೆ, ಕೆಲವು ಯುವಕರು ಈ ಮದುವೆ, ಹೆಂಡತಿ (Wife), ಮಕ್ಕಳು (Children) ಒಟ್ಟಿನಲ್ಲಿ ಈ ಸಂಸಾರದ (Family) ಜವಾಬ್ದಾರಿಯನ್ನು (Responsibility) ತೆಗೆದುಕೊಳ್ಳುವುದಕ್ಕೆ ತಯಾರಾಗಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

37ನೇ ಹೆಂಡತಿಯನ್ನು ಮದುವೆಯಾದ ವಯೋವೃದ್ದ
ಆದರೆ ಕೆಲವರು ಒಬ್ಬ ಮಹಿಳೆ ಜೊತೆ ಮದುವೆ ಮಾಡಿಕೊಂಡು ಕೆಲ ವರ್ಷಗಳ ಕಾಲ ಸಂಸಾರ ಮಾಡಿ, ಯಾಕೋ ವೈವಾಹಿಕ ಜೀವನ ಸರಿ ಹೊಂದುತ್ತಿಲ್ಲವೆಂದು, ಆಕೆಗೆ ಕಾನೂನಿನ ಪ್ರಕಾರವಾಗಿ ವಿಚ್ಛೇದನೆ ನೀಡಿ ಮತ್ತೆ ಇನ್ನೊಬ್ಬರನ್ನು ಮದುವೆ ಆಗುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ ತನ್ನ 28 ಹೆಂಡತಿಯರ ಕಣ್ಣು ಮುಂದೆಯೇ 37ನೇ ಹೆಂಡತಿಯನ್ನು ಮದುವೆಯಾಗಿದ್ದಾನೆ ಈ ವಯೋವೃದ್ದ. ಇದು ನಿಜಕ್ಕೂ ಎಂದಿಗೂ ಕೇಳಿರಲಾರದ ಅಚ್ಚರಿ ಮೂಡಿಸುವ ಸಂಗತಿ ಎಂದು ಹೇಳಬಹುದು.

ನಾವು ಚಿಕ್ಕವರಾಗಿದ್ದಾಗ ನಮ್ಮ ಅಜ್ಜಿ ತಾತ ಅನೇಕ ಕಥೆಗಳನ್ನು ಹೇಳಿರುತ್ತಾರೆ, ಅದರಲ್ಲಿ ನಾವು ಒಬ್ಬ ರಾಜನಿಗೆ ಒಂದು ಡಜನ್ ಗಟ್ಟಲೆ ರಾಣಿಯರು ಇದ್ದರು ಎಂದು ಕೇಳಿರುತ್ತೇವೆ. ಆದರೆ ಎಲ್ಲಿಯೂ ನಿಜವಾಗಿಯೂ ಇಂತಹದನ್ನು ನೋಡಿರುವುದು ತುಂಬಾನೇ ಅಪರೂಪ ಎಂದು ಹೇಳಬಹುದು. ಆಧುನಿಕ ಕಾಲದಲ್ಲಿ ಅನೇಕ ಸಂಗಾತಿಗಳನ್ನು ಹೊಂದುವ ಕಲ್ಪನೆಯು ನಿಜವಾಗಿಯೂ ವಿಲಕ್ಷಣವಾಗಿದೆ. ಆದರೆ ಇಲ್ಲೊಬ್ಬ ಭೂಪ ಇದ್ದಾನೆ ನೋಡಿ, ಅವನು ಮದುವೆಯಾದದ್ದು ಬರೋಬ್ಬರಿ 36 ಸಾರಿ ಎಂದು ಹೇಳಬಹುದು. ಈಗ ಈ ಭೂಪ ಸುದ್ದಿಯಾಗಿರುವುದು ತನ್ನ 37ನೆಯ ಮದುವೆಯಿಂದ ಎಂದು ಹೇಳಬಹುದು.

ಇದನ್ನೂ ಓದಿ: Viral Photo: ಇದು ಕೊಚ್ಚೆ ಅಂಟಿಕೊಂಡ ಹರಿದ ಶೂ ಅಲ್ಲ! ಲಕ್ಷ ಬೆಲೆ ಬಾಳುವ ಬ್ರಾಂಡೆಡ್​ ಶೂ

28 ಪತ್ನಿಯರು, 35 ಮಕ್ಕಳು ಮತ್ತು 126 ಮೊಮ್ಮಕ್ಕಳು
ಇಲ್ಲೊಬ್ಬ ವೃದ್ಧರೊಬ್ಬರು ತಮ್ಮ 28 ಪತ್ನಿಯರು, 35 ಮಕ್ಕಳು ಮತ್ತು 126 ಮೊಮ್ಮಕ್ಕಳ ಸಮ್ಮುಖದಲ್ಲಿ ತಮ್ಮ 37ನೇ ಪತ್ನಿಯನ್ನು ಮದುವೆಯಾಗಿದ್ದಾರೆ ಎಂಬ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ. ಈ 45 ಸೆಕೆಂಡಿನ ಅವಧಿಯ ವೀಡಿಯೋದಲ್ಲಿ ಅವರ ಮನೆಯವರು ವಧು ವರರ ಸುತ್ತಲೂ ನಿಂತು ಮದುವೆಗೆ ಚೆಪ್ಪಾಳೆ ಮತ್ತು ಶಿಳ್ಳೆ ಹೊಡೆಯುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು. ಈ ಮದುವೆಗೆ ಮನೆಯವರೆ ಇಷ್ಟು ಜನ ಇದ್ದಾರೆ ಎಂದರೆ ಇವರಿಗೆ ಬೇರೆ ಅತಿಥಿಗಳೆ ಬೇಕಾಗಿಲ್ಲ ಎಂದು ಹೇಳಬಹುದು ನೋಡಿ.

ಟ್ವಿಟ್ಟರ್ ನಲ್ಲಿ ವಿಡಿಯೋ ವೈರಲ್
ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. "ಧೈರ್ಯಶಾಲಿ ಮನುಷ್ಯ ಈತ... 28 ಪತ್ನಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಸಮ್ಮುಖದಲ್ಲಿ 37ನೇ ಮದುವೆ ಆಗುತ್ತಿದ್ದಾರೆ" ಎಂದು ಅವರು ಹಂಚಿ ಕೊಂಡ ವೀಡಿಯೋಗೆ ಶೀರ್ಷಿಕೆಯನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ: ಸೂಪರ್ ಆಗಿದ್ರೂ ಈ ಊರಿನ ಯುವಕರಿಗೆ ಯಾರೂ ಹೆಣ್ಣು ಕೊಡಲ್ಲ! ಮದುವೆಯಾಗಿ ಬಂದ್ರೂ ಹೆಣ್ಮಕ್ಕಳಿಗೆ ಗಂಡ ಮುಖ್ಯವೇ ಅಲ್ಲಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದ್ದರೂ ಸಹ ಇದನ್ನು ಎಲ್ಲಿ ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಕಳೆದ ವರ್ಷ ಜೂನ್ ನಲ್ಲಿ ವೈರಲ್ ಆಗಿದ್ದ ಈ ವೀಡಿಯೋ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಬಿಸಿ ಕೇಕ್ ನಂತೆ ಹರಿದಾಡುತ್ತಿದೆ.

ನೆಟ್ಟಿಗರು ಹೇಳಿದ್ದು ಹೀಗೆ
ಈ ವೀಡಿಯೋ ನೋಡಿದ ನೆಟ್ಟಿಗರಂತೂ ಈ ವೃದ್ದನನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ ಎಂದು ಹೇಳಬಹುದು. ಬಹುತೇಕರು “ಇಲ್ಲಿ ಒಬ್ಬ ಹೆಂಡತಿಯನ್ನೇ ಸಂಬಾಳಿಸುವುದು ಕಷ್ಟವಾಗಿದೆ, ಅಂತಹ ಸಮಯದಲ್ಲಿ ನೀವು ಹೇಗೆ ಇಷ್ಟೊಂದು ಜನ ಹೆಂಡತಿಯರನ್ನು ಮದುವೆಯಾಗಿ ಸಂಸಾರ ಮಾಡುತ್ತಿದ್ದೀರಿ ಗೊತ್ತಾಗುತ್ತಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು “ನನಗೆ ಒಂದು ಮದುವೆ ಆಗುವುದಕ್ಕೆ ಧೈರ್ಯ ಸಾಲುತ್ತಿಲ್ಲ, ನೀವು 37 ಮಹಿಳೆಯರನ್ನು ಹೇಗೆ ಮದುವೆ ಆಗಿದ್ದೀರಿ” ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: