Viral Video: ಈ ಭಿಕ್ಷುಕನ ಶ್ರೀಮಂತ ಕಂಠಕ್ಕೆ ಜನರು ಫಿದಾ: ಇದು ದೈವಿಕ ಧ್ವನಿ ಅಂದ್ರು ನೆಟ್ಟಿಗರು

ಈ ವೃದ್ಧ ಹಾಡುಲು ಆರಂಭಿಸಿದ್ರೆ ದಾರಿಹೋಕರು ಇವರತ್ತ ಆಕರ್ಷಿತರಾಗುವಂತೆ ಮಾಡುತ್ತದೆ ಇವರ ಶ್ರೀಮಂತ ಕಂಠ. ನೀವೇನಾದರೂ ಇವರ ಸಂಗೀತ ಕೇಳುತ್ತಾ ನಿಂತ್ರೆ ನಿಂತಲ್ಲಿಯೇ ಕಳೆದು ಹೋಗ್ತಿರಿ

ವೃದ್ಧ

ವೃದ್ಧ

  • Share this:
ಇಂದು ಇಂಟರ್ ನೆಟ್ (internet) ನಿಂದಾಗಿ ಅನೇಕ ಪ್ರತಿಭೆ(Talent)ಗಳು ಬೆಳಕಿಗೆ ಬರುತ್ತಿವೆ. ಕೆಲವರು ರಾತ್ರೋ ರಾತ್ರಿ ಸ್ಟಾರ್ ಗಳಾಗಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ (Singer Ranu Mondal) ಇಂದು ಸಿನಿಮಾ ಗಾಯಕಿಯಾಗಿದ್ದಾರೆ. ಇತ್ತ ಕಳೆದ ಎರಡ್ಮೂರು ತಿಂಗಳಿನಿಂದ ಸೋಶಿಯಲ್ ಮೀಡಿಯಾ(Social Media)ದಲ್ಲಿ ಕಡಲೆ ಬೀಜ ಮಾರಾಟ ಮಾಡುತ್ತಿದ್ದ ಭುವನ್ ಬದ್ಯಾಕರ್ (Bhuban Badyakar) ಹಾಡಿದ ಕಚ್ಚಾ ಬದಾಮ್ ಸದ್ದು ಮಾಡುತ್ತಿದೆ. ಭುವನ್ ಬದ್ಯಾಕರ್ ಸಹ ರಾತ್ರೋ ರಾತ್ರಿ ಸ್ಟಾರ್ ಆದವರರಲ್ಲಿ ಒಬ್ಬರು. ಓರ್ವ ಸಾಮಾನ್ಯ ವ್ಯಕ್ತಿಯನ್ನು ಸ್ಟಾರ್ ಪಟ್ಟಕ್ಕೇರಿಸುವ ಶಕ್ತಿ ಸೋಶಿಯಲ್ ಮೀಡಿಯಾಗಿದೆ. ಈ ಮೂಲಕ ದೇಶದ ಜನತೆ ಪ್ರತಿಭಾವಂತರ ಪ್ರತಿಭೆಯ ಪರಿಚಯ ಮಾಡಿಕೊಳ್ಳಲು ಸಾಮಾಜಿಕ ಜಾಲತಾಣಗಳು ಅವಕಾಶ ಮಾಡಿಕೊಡುತ್ತಿವೆ. ಇದೀಗ ಹಿರಿಯ ವ್ಯಕ್ತಿ ರಸ್ತೆ ಬದಿ ಕುಳಿತು ಹಾಡು (Old Man Singing Video)  ಹೇಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಇವರ ಧ್ವನಿ ಸಂಗೀತ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

ಈ ಹಿರಿಯ ಪ್ರತಿಭೆ ನೋಡಿ ಜನರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕೈಯಲ್ಲಿ ಚಿಕ್ಕದಾದ ಎರಡು ಕಲ್ಲುಗಳನ್ನು ಹಿಡಿದು ಹಾಡು ಹೇಳಿದ್ದು, ಇವರ ಧ್ವನಿಗೆ ಜನರು ಕಳೆದು ಹೋಗುತ್ತಿದ್ದಾರೆ. ಇವರ ಧ್ವನಿಗೇ ಆ ಎರಡು ಪುಟ್ಟ ಕಲ್ಲುಗಳ ಸಂಗೀತವೇ ಸಾಕೆನಿಸುತ್ತಿದೆ. ಇವರ ಕಂಠಕ್ಕೆ ಪ್ರಭಾವಿತರಾಗಿರುವ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.

ಹಾಡಿಗೆ ಮೈಮರೆಯುವ ದಾರಿಹೋಕರು

ಈ ವೃದ್ಧ ಹಾಡುಲು ಆರಂಭಿಸಿದ್ರೆ ದಾರಿಹೋಕರು ಇವರತ್ತ ಆಕರ್ಷಿತರಾಗುವಂತೆ ಮಾಡುತ್ತದೆ ಇವರ ಶ್ರೀಮಂತ ಕಂಠ. ನೀವೇನಾದರೂ ಇವರ ಸಂಗೀತ ಕೇಳುತ್ತಾ ನಿಂತ್ರೆ ನಿಂತಲ್ಲಿಯೇ ಕಳೆದು ಹೋಗ್ತಿರಿ. ಯಾವುದೇ ಸಂಗೀತ ವಾದ್ಯಗಳು ಇಲ್ಲದಿದ್ರೂ,. ಎರಡು ಕಲ್ಲುಗಳಿಂದ ಇಂಪಾದ ಸಂಗೀತವನ್ನು ಹೊರ ತಂದಿದ್ದಾರೆ. ವಯಸ್ಸಾದರೂ ಇವರ ಕಂಠಕ್ಕೆ ಮಾತ್ರ ಇನ್ನು ಖಡಕ್ ಆಗಿದೆ.
ವೈರಲ್ ಆಗುತ್ತಿರುವ ವೀಡಿಯೊವನ್ನು comedynation.teb ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದು, ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Viral Video: ರೈಲ್ವೇ ನಿಲ್ದಾಣದಲ್ಲಿ ಪೊಲೀಸಪ್ಪನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ

ದೈವಿಕ ಕಂಠ ಅಂತ ಹೇಳಿದ ನೆಟ್ಟಿಗರು

ಇಂತಹ ಪ್ರತಿಭೆಗಳನ್ನು ಬೆಳೆಸುವ ಅವಶ್ಯಕತೆ ಇದೆ ಎಂದು ಬಳಕೆದಾರರು ಬರೆದುಕೊಂಡಿದ್ದಾರೆ. ಅವರ ಧ್ವನಿ ದೈವಿಕವಾಗಿದ್ದು, ಮಂತ್ರಮುಗ್ಧರನ್ನಾಗಿ ಮಾಡುತ್ತಿದೆ. ರಾನು ಮೊಂಡಲ್ ರೀತಿ ಇವರಿಗೂ ಸಹಾಯ ಸಿಗುವಂತಾಗಲಿ ಎಂದು ಹಾರೈಸಿದ್ದಾರೆ. ಇನ್ನು ಬಹುತೇಕರು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಆದ್ರೆ ಈ ವೃದ್ಧ ಯಾರು ಮತ್ತು ಹೆಸರೇನು ಮತ್ತು ಯಾವ ಊರು ಎಂಬುವುದು ತಿಳಿದು ಬಂದಿಲ್ಲ.

ರೈಲ್ವೇ ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ರಾನು ಮೊಂಡಲ್ 

ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೇ ನಿಲ್ದಾಣದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಹಾಡಿರುವ ಏಕ್ ಪ್ಯಾರ ಕಾ ನಗಮಾ ಹಾಡು ಹಾಡಿದ್ದರು. 2019ರಲ್ಲಿ ಫೇಸ್‍ಬುಕ್ ನಲ್ಲಿ ರಾನು ಮೊಂಡಲ್ ಹಾಡನ್ನು ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ರಾನು ಮೊಂಡಲ್ ಇಂಪಾದ ಧ್ವನಿ ಕೇಳುಗರನ್ನು ರಂಜಿಸಿತ್ತು. ನಂತರ ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋಗೆ ಆಹ್ವಾನಿಸಲಾಗಿತ್ತು. ಇದಾದ ಬಳಿಕ ಸಂಗೀತ ನಿರ್ದೇಶಕ ಹಿಮೇಶ್ ರೆಶ್ಮಿಯಾ ತಮ್ಮ ಹ್ಯಾಪಿ ಹಾಡಿ ಆ್ಯಂಡಿ ಚಿತ್ರದಲ್ಲಿ ರಾನು ಮೊಂಡಲ್ ಗೆ ಅವಕಾಶ ನೀಡಿದ್ದರು. ಈ ಹಾಡು ಸಹ ರಾನು ಮೊಂಡಲ್ ಜೀವನವನ್ನು ಬದಲಿಸಿತ್ತು.

ಇದನ್ನೂ ಓದಿ:  Ranu Mondal New Viral Video: ಜಾನೇ ಮೇರಿ ಜಾನೇ ಮನ್.. ಮತ್ತೆ ಸೆನ್ಸೆಶನ್ ಕ್ರಿಯೇಟ್ ಮಾಡಿದ ರಾನು ಮೊಂಡಲ್

ರಾನು ಮೊಂಡಲ್ ಮೇಕಪ್

ರಾನು ಮೊಂಡಲ್ ಫೇಮಸ್ ಆಗುತ್ತಿದ್ದಂತೆ ಹಲವು ಕಾರ್ಯಕ್ರಮಗಳಿಗೆ ವಿಶೇಷ ಆಹ್ವಾನಿತರಾಗಿದ್ದರು. ಈ ವೇಳೆ ರಾನು ಮೊಂಡಲ್ ಮೇಕ್ ಓವರ್ ಸಲೂನ್ ಶಾಪ್ ಉದ್ಘಾಟನೆಗೆ ತೆರಳಿದ್ದರು. ಈ ಕಾರ್ಯಕ್ರಮದಲ್ಲಿ ರಾನು ಹಾಕಿದ್ದ ಮೇಕಪ್ ಫೋಟೋ ಹೆಚ್ಚು ವೈರಲ್ ಆಗಿದ್ದವು. ಒಂದೆರಡು ಹಾಡು ಮತ್ತು ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ರಾನು ಬದಲಾಗಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ಸೆಲ್ಫಿ ಕೇಳಲು ಬಂದ ಅಭಿಮಾನಿಯ ಜೊತೆಯಲ್ಲಿ ರಾನು ಮೊಂಡಲ್ ನಡೆದುಕೊಂಡ ರೀತಿ ನೆಟ್ಟಿಗರನ್ನು ಕೆರಳಿಸಿತ್ತು.
Published by:Mahmadrafik K
First published: