ಒಂದೂ Bedroom ಇಲ್ಲದ ಮನೆಗೆ 14 ಕೋಟಿ ರೂಪಾಯಿ! ಅಷ್ಟು ಹಣ ಕೊಟ್ಟು ಕೊಂಡುಕೊಂಡಿದ್ದಾರೆ ನೋಡಿ

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಒಂದು ಹಳೆಯ ಮನೆಯ ಬೆಲೆ 1.97 ಮಿಲಿಯನ್ ಡಾಲರ್ ಎಂದರೆ ಭಾರತದ ಬೆಲೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಕೋಟಿ ರೂಪಾಯಿ ಆಗಿದ್ದು, ಈ ವಾರದ ಆರಂಭದಲ್ಲಿ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

ಮಾರಾಟಗೊಂಡ ಮನೆ

ಮಾರಾಟಗೊಂಡ ಮನೆ

  • Share this:
ಸಾಮಾನ್ಯವಾಗಿ ಒಂದು ಮನೆ (House) ಎಂದರೆ ಗಾತ್ರದಲ್ಲಿ ಎಷ್ಟೇ ಚಿಕ್ಕದಾಗಿದ್ದರೂ ಸಹ ಒಂದು ಅಡುಗೆ ಮನೆ, ಮಲಗುವ ಕೋಣೆ ಮತ್ತು ಒಂದು ಪುಟ್ಟ ದೇವರನ್ನು ಪೂಜೆ ಮಾಡುವ(God-Worshiping) ಕೋಣೆ ಮತ್ತು ಒಂದು ಹಾಲ್ ಇರಬೇಕೆಂಬುದು ಬಹುತೇಕರಿಗೆ (Majority) ಇರುವ ಮನೆಯ ಕಲ್ಪನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಇಲ್ಲಿ ಒಂದು ಹಳೆ ಮನೆಯಿದ್ದು, ಅದರಲ್ಲಿ ಮಲಗುವ (No Bedrooms) ಕೋಣೆಗಳಿಲ್ಲ, ಆದರೂ ಇದು ಮಾರಾಟವಾದ ಬೆಲೆ ನೀವು ಕೇಳಿದರೆ ಬೆಚ್ಚಿ ಬೀಳುವುದಂತೂ (Guaranteed) ಗ್ಯಾರಂಟಿ.

ಬರೋಬ್ಬರಿ 14 ಕೋಟಿ ರೂಪಾಯಿ ಮಾರಾಟ
ಆದರೆ ಕೆಲವೊಮ್ಮೆ ಮನೆಯೂ ಎಷ್ಟೇ ಚಿಕ್ಕದಾಗಿದ್ದರೂ ಸಹ ಅದು ಇರುವಂತಹ ಸ್ಥಳದ ಮೇಲೆ ಅದರ ಮಾರಾಟದ ಬೆಲೆ ನಿಗದಿಪಡಿಸಲಾಗುತ್ತದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಒಂದು ಹಳೆಯ ಮನೆಯ ಬೆಲೆ 1.97 ಮಿಲಿಯನ್ ಡಾಲರ್ ಎಂದರೆ ಭಾರತದ ಬೆಲೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಕೋಟಿ ರೂಪಾಯಿ ಆಗಿದ್ದು, ಈ ವಾರದ ಆರಂಭದಲ್ಲಿ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

ನೊಯಿ ವ್ಯಾಲಿಯಲ್ಲಿರುವ ಒಂದು ಕುಟುಂಬ ಸದಸ್ಯರು ಇರಬಹುದಾದ ಒಂದು ಹಳೆಯ ಮನೆ ಇದಾಗಿದ್ದು, ಇದರ ಫ್ಲೋರಿಂಗ್ ಸಹ ಅಡ್ಡಾತಿಡ್ಡಿಯಾಗಿದ್ದು, ಆಸ್ತಿ ಮಾರುವ ಮತ್ತು ಕೊಂಡುಕೊಳ್ಳುವ ವೆಬ್‌ಸೈಟ್‌ನಲ್ಲಿ ಈ ಹಳೆಯ ಮನೆಯನ್ನು “ಉತ್ತಮವಾದ ಸ್ಥಳದಲ್ಲಿರುವ ಕೆಟ್ಟ ಮನೆ” ಎಂದು ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿತ್ತು.

ಇದನ್ನೂ ಓದಿ: Luxurious palace: ಜುಂಜುನ್ವಾಲಾರ 14 ಅಂತಸ್ತಿನ ಭವ್ಯ ಬಂಗಲೆಯಲ್ಲಿ ಏನೆಲ್ಲಾ ಇದೆ ಗೊತ್ತಾ..!

ಮನೆ ಇರುವ ಸ್ಥಳ
ಸುದ್ದಿ ಮಾಧ್ಯಮ ವರದಿಯ ಪ್ರಕಾರ, 1900ನೆಯ ಇಸವಿಯಲ್ಲಿ ಕಟ್ಟಿಸಲಾದ ಈ ಮನೆಯನ್ನು ಇಷ್ಟು ದುಬಾರಿ ಹಣ ನೀಡಿ ತೆಗೆದುಕೊಂಡಿರುವುದಕ್ಕೆ ಮುಖ್ಯವಾದ ಕಾರಣವೆಂದರೆ ಆ ಮನೆ ಇರುವ ಸ್ಥಳವೆಂದು ಹೇಳಲಾಗುತ್ತಿದೆ. ಈ ಮನೆಯ ಸುತ್ತ ಮುತ್ತಲೂ ಮಿಲಿಯನ್ ಡಾಲರ್ ಹಣ ಖರ್ಚು ಮಾಡಿ ಕಟ್ಟಿಸಿದ ಭವ್ಯವಾದ ಬಂಗಲೆಗಳು ಈ ಸ್ಥಳದಲ್ಲಿ ಇವೆಯಂತೆ ಎಂದು ಹೇಳಲಾಗುತ್ತಿದೆ. ಇದು ಕೊಳ್ಳುವವರಿಗೆ ತಮ್ಮ ಮನೆಯ ಅಕ್ಕ ಪಕ್ಕದವರು ಆಗರ್ಭ ಶ್ರೀಮಂತರು ಆಗಿರುತ್ತಾರೆ ಮತ್ತು ನಿಮಗೆ ಅವರ ಮಧ್ಯೆ ಇರುವಂತಹ ಅವಕಾಶ ಇದಾಗಿದೆ” ಎಂದು ವೆಬ್‌ಸೈಟ್‌ನಲ್ಲಿ ಬರೆಯಲಾಗಿತ್ತು.

ರಿಯಲ್ ಎಸ್ಟೇಟ್ ಏಜಂಟ್ ಒಬ್ಬರು ಸುದ್ದಿ ಮಾಧ್ಯಮದ ಪೋರ್ಟಲ್ ಜೊತೆಗೆ ಮಾತನಾಡುತ್ತಾ “ಈ ಹಳೆಯ ಮನೆಯನ್ನು ಇಷ್ಟು ದುಬಾರಿ ಬೆಲೆಗೆ ಮಾರಾಟ ಮಾಡಿರುವುದರ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಅವರ ತಂಡದವರು ಹಾಕಿದಂತಹ ಲೆಕ್ಕಾಚಾರದ ಪ್ರಕಾರ ಆ ಹಳೆ ಮನೆ ಅಬ್ಬಬ್ಬಾ ಎಂದರೆ 1.6 ಮಿಲಿಯನ್ ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ 11 ಕೋಟಿಗೆ ಮಾರಾಟವಾಗಬಹುದೆಂದು ಊಹಿಸಿದ್ದರಂತೆ” ಎಂದು ಹೇಳಿದ್ದಾರೆ.

ಇಳಿಜಾರಿನ ಕಾರಿಡಾರ್ ನಲ್ಲಿರುವ ಮನೆ
“ಆದರೆ ಜನರ ಸ್ಪರ್ಧಾತ್ಮಕ ಗುಣದಿಂದಾಗಿ ಈ ಹಳೆಯ ಮನೆಗೆ ಉತ್ತಮವಾದ ಬೆಲೆ ದೊರಕಿದೆ ಅದು 1.97 ಮಿಲಿಯನ್ ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಅದು 14 ಕೋಟಿ ಆಗಿದೆ” ಎಂದು ಹೇಳಿದರು. ನಿಮಗೆ ನಾವು ಮೊದಲೇ ಹೇಳಿರುವಂತೆ ಈ ಮನೆಯಲ್ಲಿ ಒಂದೂ ಮಲಗುವ ಕೋಣೆಗಳಿಲ್ಲ.

ಇದನ್ನೂ ಓದಿ: Tree House: ಮುಂಬೈನಲ್ಲಿ ಶೀಘ್ರ ತಲೆ ಎತ್ತಲಿದೆ 'ಟ್ರೀ ಹೌಸ್'..! ಏನಿದರ ವಿಶೇಷ..

ಈ ಮನೆಯಲ್ಲಿ ಒಂದು ಇಳಿಜಾರಿನ ಕಾರಿಡಾರ್ ಇದ್ದು, ಒಂದು ಅಡುಗೆ ಮಾಡುವ ಕೋಣೆ ಮತ್ತು ಒಂದು ಬಾತ್ ರೂಂ ಇದೆ. ಈ ಮನೆಯ ಒಟ್ಟು ಜಾಗ 2,848 ಚದರ ಅಡಿಗಳು ಮಾತ್ರ ಎಂದು ಹೇಳಲಾಗುತ್ತಿದೆ. ಈ ಮನೆ ಒಂದು ಕುಟುಂಬ ನೆಲೆಸಲು ಇರುವಂತಹ ಅತೀ ಚಿಕ್ಕ ಸ್ಥಳದಲ್ಲಿ ಈ ಮನೆಯನ್ನು ಕಟ್ಟಲಾಗಿದ್ದು, ಈ ಏರಿಯಾದಲ್ಲಿರುವ ಮನೆಗಳು ಇದಕ್ಕಿಂತಲೂ ತುಂಬಾ ದೊಡ್ಡದು ಎಂದು ಹೇಳಲಾಗುತ್ತಿದೆ.

ಇದೇ ಏರಿಯಾದಲ್ಲಿ ಇಂಚು ಮಿಂಚು ಇಷ್ಟೇ ಚದರ ಅಡಿಯಲ್ಲಿರುವ ರೆನೊವೇಟ್ ಮಾಡಿದ ಒಂದು ಕುಟುಂಬ ಇರುವ ಮನೆಗಳ ಬೆಲೆಯೂ 4 ಮಿಲಿಯನ್ ಡಾಲರ್ ಎಂದರೆ ಭಾರತೀಯ ಬೆಲೆಯಲ್ಲಿ ಸುಮಾರು 29 ಕೋಟಿ ರೂಪಾಯಿ ಆಗಿರುತ್ತದೆ ಎಂದು ಹೇಳಲಾಗುತ್ತಿದೆ.
Published by:vanithasanjevani vanithasanjevani
First published: