ದಾಂಪತ್ಯದಲ್ಲಿ ಪರಸ್ಪರ ಅನ್ಯೋನ್ಯತೆ, ಸಾಮರಸ್ಯ, ನಂಬಿಕೆ, ವಿಶ್ವಾಸ ಇದ್ದಾಗ ಮಾತ್ರ ಸಂಸರಾವೆಂಬ ಜೀವನದ ಬಂಡಿ ಒಳ್ಳೆಯ ರೀತಿಯಲ್ಲಿ ಮುಂದುವರೆಯಲು ಸಾಧ್ಯ. ಅಂತಹ ದಂಪತಿಗಳ ಮಧ್ಯೆ ಪ್ರೀತಿ ಕೊನೆವರೆಗೂ ಶಾಶ್ವತವಾಗಿ (Permanent) ಇರುತ್ತದೆ. ಮತ್ತು ಅದು ಇತರರಿಗೂ ಸ್ಪೂರ್ತಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವೆ ವೈಮನಸ್ಸುಗಳು ಹೆಚ್ಚಾಗುತ್ತಿದ್ದು. ಮದುವೆಯಾದ (Marriage) ಕೆಲವೇ ಸಮಯದಲ್ಲಿ ಡಿವೋಸ್ ಗಾಗಿ ಕೋರ್ಟ್ ಮೆಟ್ಟಿಲೆರುವ ಪ್ರಸಂಗಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೃದ್ಧ ದಂಪತಿಗಳ (Old Couple) ನಡುವಿನ ಪ್ರೀತಿ (Love) ಪ್ರತಿನಿಧಿಸುವ ವೀಡಿಯೋ ವೈರಲ್ (Viral Video) ಆಗುತ್ತಿದೆ. ಈ ಇಬ್ಬರೂ ಜಡಿ ಮಳೆಯ ನಡುವೆ ಜೊತೆ ಜೊತೆಯಾಗಿ ರಸ್ತೆ ದಾಟುವ (Road Crossing) ಘಟನೆಯು ನೆಟ್ಟಿಗರ (Netizens) ಗಮನ ಸೆಳೆದಿದೆ.
ಶಾಶ್ವತ ಪ್ರೀತಿಗೆ ವಯಸ್ಸಿನ ಮಿತಿಯಲ್ಲ
ಶಾಶ್ವತ ಪ್ರೀತಿ ಎಂಬ ವಿಚಾರಕ್ಕೆ ಈ ವೃದ್ಧ ದಂಪತಿಗಳ ನಡುವಿನ ಪರಸ್ಪರ ಕಾಳಜಿಯ ಮನಸ್ಥಿತಿಯೇ ಉತ್ತಮ ನಿದರ್ಶನವಾಗಿದೆ. ಸುರಿಯುತ್ತಿರುವ ಮಳೆಯಲ್ಲಿ ಜೊತೆ ಜೊತೆಯಾಗಿ ನಡೆಯುತ್ತಿರುವ ದಂಪತಿಗಳು ದಾಂಪತ್ಯದಲ್ಲಿನ ಪ್ರೀತಿ, ಕಾಳಜಿಗೆ ಯಾವುದೇ ರೀತಿಯಾದ ವಯಸ್ಸಿನ ಮಿತಿಯಿಲ್ಲ. ನಮ್ಮದು ಶಾಶ್ವತ ಪ್ರೀತಿ ಎಂಬಂತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಜೊತೆ ಜೊತೆಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಈ ದಂಪತಿಗಳ ನಡುವಿನ ಪ್ರೀತಿ ಜನತೆಯನ್ನು ಆಕರ್ಷಿಸಿದೆ.
ಇದನ್ನೂ ಓದಿ: Heart Warming Story: ಗಂಡ ಬಸ್ ಡ್ರೈವರ್ ಹೆಂಡತಿ ಕಂಡಕ್ಟರ್! 20 ವರ್ಷದ ಲವ್ಸ್ಟೋರಿ, ಲವ್ಲೀ ಆಗಿದೆ ಲೈಫ್ ಜರ್ನಿ
ಒಂದೇ ಛತ್ರಿಯೊಳಗಡೆ ಪಯಣ
ಈ ವೃದ್ಧ ದಂಪತಿಗಳು ಒಂದೇ ಕೊಡೆಯನ್ನು ಹಿಡಿದುಕೊಂಡಿದ್ದು, ಆ ಕೊಡೆಯೊಳಗೆ ಜೊತೆ ಜೊತೆಯಾಗಿ ನಡೆಯುತ್ತಿದ್ದಾರೆ. ಪತಿಯು ತನ್ನ ಸಂಗಾತಿಗೆ ಕೊಡೆಯನ್ನು ಹಿಡಿದಿದ್ದಾರೆ ಮತ್ತು ಪತ್ನಿ ಕೈಯಲ್ಲಿ ಚೀಲವನ್ನು ಹಿಡಿದುಕೊಂಡಿದ್ದಾರೆ. ಅವರಿಬ್ಬರು ಜೊತೆ ಜೊತೆಯಾಗಿ ರಸ್ತೆ ದಾಟುತ್ತಿದ್ದಾರೆ. ಈ ದೃಶ್ಯವು ನೋಡುಗರ ಗಮನ ಸೆಳೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಗಮನಸೆಳೆಯಿತು ವ್ರದ್ಧದಂಪತಿಗಳ ಪ್ರೀತಿ
ದಂಪತಿಗಳು ಒಟ್ಟಿಗೆ ರಸ್ತೆ ದಾಟುತ್ತಿರುವ ಮನಮೋಹಕ ದೃಶ್ಯವನ್ನು ಛಾಯಾಗ್ರಾಹಕ ಮತ್ತು ಡಿಜಿಟಲ್ ಕಂಟೆಂಟ್ ಮೆಟೀರಿಯಲ್ ಕ್ರಿಯೆಟರ್ ಆಸಿಪ್ ಖಾನ್ ಸೆರೆಹಿಡಿದಿದ್ದು ತನ್ನ ಇನ್ಸ್ಟ್ರಗ್ರಾಂ ಪೇಜ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದ್ದು ಜನರನ್ನು ಈ ವೃದ್ಧ ದಂಪತಿಗಳ ಪ್ರೀತಿಯು ಮನಸೋಲಿಸಿದೆ. ಮತ್ತು ದಾಂಪತ್ಯದಲ್ಲಿ ಶಾಶ್ವತ ಪ್ರೀತಿಯ ಬಗ್ಗೆ ತಿಳಿಸುತ್ತಿದೆ.
ವೀಡಿಯೋ ಇಲ್ಲಿದೆ ನೋಡಿ:
"ಯಾವುದು ಉಳಿಯದ ಈ ಭೂಮಿಯ ಮೇಲೆ ಶಾಶ್ವತ ಪ್ರೀತಿಯ ಆಲೋಚನೆ ಹೊಂದಲು ಈ ದೃಶ್ಯ ಮೋಡಿ ಮಾಡುವಂತಿದೆ" ಎನ್ನುವ ಶೀರ್ಷಿಕೆಯನ್ನು ನೀಡಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ನೋಡಿದ ಜನ ಇವರ ಪ್ರೀತಿಗೆ ಮನಸೋತಿದ್ದು ದೃಶ್ಯ ಹೃದಯ ಸ್ಪರ್ಶಿಸುವಂತಿದೆ ಎಂದು ಕಮೆಂಟ್ಗಳನ್ನು ಮಾಡಿದ್ದಾರೆ. ಮತ್ತು ಕ ಹಾರ್ಟ್ ಇಮೋಜಿಗಳ ಮೂಲಕ ಕಮೆಂಟ್ಗಳನ್ನು ತುಂಬಿದ್ದಾರೆ.
ಇದನ್ನೂ ಓದಿ: Wedding Viral Video: ಮದುವೆ ಮಂಟಪದಲ್ಲಿ ವರನ ತುಂಟಾಟ! ನಾಚಿ ನೀರಾದ ವಧು
26 ಮಿಲಿಯನ್ಗಿಂತಲೂ ಅಧಿಕ ವೀಕ್ಷಣೆಯನ್ನು ವೀಡಿಯೋ ಪಡೆದಿದೆ. ಮತ್ತು ಸಣ್ಣ ಸಣ್ಣ ವಿಷಯಕ್ಕೂ ಕಿತ್ತಾಡಿಕೊಂಡು ಸಂಬಂಧವನ್ನು ಕಡಿದುಕೊಳ್ಳುವ ದಂಪತಿಗಳ ನಡುವೆ ಈ ವೃಧ್ಧ ದಂಪತಿಗಳ ಪ್ರೀತಿ ನಿಜಕ್ಕೂ ಅದ್ಭುತವಾದುದು. ಮತ್ತು ಯುವ ಪ್ರೇಮಿಗಳಿಗೆ, ನೂತನ ದಮಪತಿಗಳಿಗೆ ಸಾಂಸರಿಕ ಜೀವನದ ಅನುಭವವನ್ನು ಹೇಳುವಂತಿರುವ ಈ ವೀಡಿಯೋ ನಿಜಕ್ಕೂ ದಾಂಪತ್ಯ ಜೀವನಕ್ಕೆ ಸ್ಪೂರ್ತಿದಾಯಕವಾದುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ