ಹಿಂದೊಮ್ಮೆ ಒಂದು ಹೊಟೇಲ್ ನ ಹಳೆಯ ಬಿಲ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಂದು ಸಾಕಷ್ಟು ದುಬಾರಿ ಅನಿಸುವಂತಹ ಖಾದ್ಯ ಅಂದು ತಿಂದಿದ್ದಾಗ ಬಿಲ್ ಕೇವಲ ಎರಡಂಕಿಯಲ್ಲಿದ್ದುದನ್ನು ನೋಡಿ ಜನರು ಶಾಕ್ ಆಗಿದ್ದರು. ಹೊಟೇಲ್ ನಲ್ಲಿ (Hotel) ಸಿಕ್ಕಂತಹ ಆ ಒಂದು ಹಳೆಯ ಊಟದ ಬಿಲ್ ನಲ್ಲಿ (Bill) ಸರಿಯಾಗಿ ಎರಡು ಬಗೆಯ ಪಲ್ಯಗಳನ್ನು ಮತ್ತು ರೋಟಿಗಳನ್ನು (Roti) ತೆಗೆದುಕೊಂಡರೆ ಬರೀ ಎರಡಂಕಿಯ ಬಿಲ್ ಆಗಿದ್ದನ್ನು ಈಗ ನೆಟ್ಟಿಗರು ನೋಡಿ ಒಂದು ಕ್ಷಣಕ್ಕೆ ‘ಅಬ್ಬಾ.. ಆಗಿನ ಬೆಲೆ ಮತ್ತು ಈಗಿನ ಬೆಲೆಗಳನ್ನ ಹೋಲಿಸಿ ನೋಡಿದರೆ ಭೂಮಿ ಮತ್ತು ಆಕಾಶದಷ್ಟು ಅಂತರವಿದೆ’ ಅಂತ ಮನಸ್ಸಿನಲ್ಲಿ ಅಂದುಕೊಂಡಿದಂತೂ ನಿಜ ಅಂತ ಹೇಳಬಹುದು. ಹೌದು.. 10-20 ವರ್ಷಗಳ ಹಿಂದೆ ಆಹಾರ ಪದಾರ್ಥಗಳ ಬೆಲೆಗಳನ್ನು ಈಗಿನ ಬೆಲೆಗಳಿಗೆ ಹೋಲಿಸಿ ನೋಡಿದರೆ ಬೆಲೆಯಲ್ಲಿ ಭಾರಿ ಬದಲಾವಣೆ ಕಾಣಿಸುವುದಂತೂ ಸುಳ್ಳಲ್ಲ.
ಹಳೆಯ ಬಿಲ್ ನಲ್ಲಿ ಒಂದು ಕೆಜಿ ಗೋಧಿಯ ಬೆಲೆ ಎಷ್ಟಿದೆ?
ಈಗ ಇಲ್ಲಿ ಸಹ ಅಂತಹುದ್ದೆ ಇನ್ನೊಂದು ಹಳೆಯ ಬಿಲ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಹೌದು.. ಭಾರತೀಯ ಅರಣ್ಯ ಸೇವೆ ಎಂದರೆ ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಅವರು 1987ರ ಹಳೆಯ ಬಿಲ್ ನ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.
Time when wheat used to be at 1.6 rupees per kg. The wheat crop my grandfather sold in 1987 to Food Corporation of India. pic.twitter.com/kArySiSTj4
— Parveen Kaswan, IFS (@ParveenKaswan) January 2, 2023
ಏನಿದು ಜೆ ಫಾರ್ಮ್?:
"ಒಂದು ಕೆಜಿ ಗೋಧಿ ಕೇವಲ 1.6 ರೂಪಾಯಿಗಳಿಗೆ ಬರುತ್ತಿದ್ದ ಕಾಲ ಅದು. ನನ್ನ ತಾತ 1987 ರಲ್ಲಿ ಭಾರತೀಯ ಆಹಾರ ನಿಗಮಕ್ಕೆ ಮಾರಾಟ ಮಾಡಿದ ಗೋಧಿ ಬೆಳೆಯ ಬೆಲೆ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bengaluru: 12 ವರ್ಷದ ಬಾಲಕನ ಜನನಾಂಗ ಮರುಜೋಡಣೆ, ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾದ ಬೆಂಗಳೂರಿನ ಆಸ್ಪತ್ರೆ
ಇನ್ನೂ ಫಾಲೋ-ಅಪ್ ಟ್ವೀಟ್ ನಲ್ಲಿ ಐಎಫ್ಎಸ್ ಅಧಿಕಾರಿ ತನ್ನ ಅಜ್ಜನಿಗೆ ಹಳೆಯ ಎಲ್ಲಾ ದಾಖಲೆಗಳನ್ನು ಹಾಗೆಯೇ ಉಳಿಸಿಕೊಳ್ಳುವ ಅಭ್ಯಾಸವಿತ್ತು ಎಂದು ಹಂಚಿಕೊಂಡಿದ್ದಾರೆ. "ಈ ದಾಖಲೆಯನ್ನು ಜೆ ಫಾರ್ಮ್ ಎಂದು ಕರೆಯಲಾಗುತ್ತದೆ. ಅವರ ಸಂಗ್ರಹದಲ್ಲಿ ಕಳೆದ 40 ವರ್ಷಗಳಲ್ಲಿ ಮಾರಾಟವಾದ ಬೆಳೆಗಳ ಎಲ್ಲಾ ದಾಖಲೆಗಳಿವೆ. ಮನೆಯಲ್ಲಿಯೇ ಒಂದು ದಿನ ಕೂತು ಇದೆಲ್ಲದರ ಬಗ್ಗೆ ಅಧ್ಯಯನವನ್ನೆ ಮಾಡಬಹುದು" ಎಂದು ಬರೆದುಕೊಂಡಿದ್ದಾರೆ.
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ಪೋಸ್ಟ್:
ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದಲೂ ಇದುವರೆಗೆ 38,400 ಕ್ಕೂ ಹೆಚ್ಚು ವೀಕ್ಷಣೆಗಳು, 643 ಲೈಕ್ ಗಳನ್ನು ಮತ್ತು ಹಲವಾರು ಕಾಮೆಂಟ್ ಗಳನ್ನು ಗಳಿಸಿದೆ. ನೆಟ್ಟಿಗರಂತೂ ಇದನ್ನು ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ ಅಂತ ಹೇಳಬಹುದು. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿ "ಇದನ್ನು ಪೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್. ನಾನು ಇಂದು ಮೊದಲ ಬಾರಿಗೆ ಜೆ ಫಾರ್ಮ್ ಬಗ್ಗೆ ತಿಳಿದುಕೊಂಡಿದ್ದೇನೆ" ಎಂದು ಹೇಳಿದರು.
ಇನ್ನೊಬ್ಬ ಬಳಕೆದಾರರು "ಅದ್ಭುತ.. ಆಗ ಹಿರಿಯರು ತಾವು ಖರ್ಚು ಮಾಡಿದ ಪ್ರತಿ ಪೈಸೆಯ ಎಲ್ಲಾ ವಿವರಗಳನ್ನು ಬರೆಯುತ್ತಿದ್ದರು. ಅವರು ಮಾರಾಟ ಮಾಡಿದ ಬೆಳೆಗೆ ಈ ರೀತಿಯ ದಾಖಲೆಗಳನ್ನು ಇಟ್ಟುಕೊಂಡಿರುವುದು ತುಂಬಾನೇ ಒಳ್ಳೆಯ ಕೆಲಸ. ಇವರಿಂದ ಕಲಿಯುವುದು ಬಹಳಷ್ಟಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ