HOME » NEWS » Trend » OLD AGE HOME INMATES WHO HAVE BEEN IN LOVE FOR 20 YEARS ALL SET TO MARRY IN DECEMBER WEDDING HG

ಹಸೆಮಣೆ ಏರುತ್ತಿದ್ದಾರೆ 60ರ ಜೋಡಿಗಳು!

ಕೇರಳ ತ್ರಿಶೂರ್​ನ ಲಕ್ಮೀ ಅಮ್ಮಾಳ್​ 21 ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಆದರೆ ಅವರ ಪತಿ ಸಾಯುವುದಕ್ಕೂ ಮುಂಚೆ ಅವರ ಅಡುಗೆ ಸಹಾಯಕ ಕೋಚಿಯಾನ್ ​ಅವರಿಗೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದರು.

news18-kannada
Updated:December 19, 2019, 3:00 PM IST
ಹಸೆಮಣೆ ಏರುತ್ತಿದ್ದಾರೆ 60ರ ಜೋಡಿಗಳು!
ಲಕ್ಷ್ಮೀ ಅಮ್ಮಾಳ್, ಕೋಚಿಯಾನ್
  • Share this:
ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಹಂಗಿಲ್ಲ. ಹಾಗಾಗಿ ಯಾರಿಗೆ ಯಾವಾಗ ಬೇಕಾದರೂ ಪ್ರೀತಿ ಹುಟ್ಟಿಕೊಳ್ಳಬಹುದು. ಅದರಲ್ಲೂ ವಯೋವೃದ್ಧರ ಪ್ರೀತಿಯನ್ನಂತೂ ಹೇಳತೀರದು. ಅದಕ್ಕೆ ಉದಾಹರಣೆ ಎಂಬಂತೆ 60 ವರ್ಷ ಪ್ರಾಯದ ಜೋಡಿಗಳು ಹಸೆಮಣೆ ಏರುತ್ತಿರುವುದು.

ಕೇರಳ ತ್ರಿಶೂರ್​ನ ಲಕ್ಮೀ ಅಮ್ಮಾಳ್​ 21 ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಆದರೆ ಅವರ ಪತಿ ಸಾಯುವುದಕ್ಕೂ ಮುಂಚೆ ಅವರ ಅಡುಗೆ ಸಹಾಯಕ ಕೋಚಿಯಾನ್ ​ಅವರಿಗೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದರು.

ಲಕ್ಷ್ಮೀ ಅಮ್ಮಾಳ್​ ತಮ್ಮ ಪತಿಯನ್ನು ಕಳೆದುಕೊಂಡ ನಂತರ ಅವರನ್ನು ಕೋಚಿಯಾನ್​ ನೋಡಿಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ನಡುವಿನ ಕಾಳಜಿ ಪ್ರೀತಿಯಾಗಿ ಮಾರ್ಪಟ್ಟಿದೆ. ಇದೀಗ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಇವರಿಬ್ಬರು ವಾಸವಿರುವ ವೃದ್ಧಾಶ್ರಮವೇ ಇವರಿಬ್ಬರ ಮದುವೆಗೆ ವೇದಿಕೆ ಕಲ್ಪಿಸಿಕೊಡಲಿದೆ. ಡಿ.30ಕ್ಕೆ 60ರ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕೊಚಿಯಾನ್​ ಕಷ್ಟದಲ್ಲಿದ್ದಾಗ ಸ್ವಯಂ ಸೇವಾ ಸಂಸ್ಥೆಯೊಂದು ಇವರ ನೆರವಿಗೆ ಧಾವಿಸಿ ವೃದ್ಧಾಶ್ರಮಕ್ಕೆ ಸೇರಿಸಿತು. ಎರಡು ತಿಂಗಳ ನಂತರ ಅವರನ್ನು ರಾಮವರ್ಮ ವೃದ್ಧಾಶ್ರಮಕ್ಕೆ ಸ್ಥಳಾಂತರ ಮಾಡಲಾಯಿತು. ಲಕ್ಷ್ಮೀ ಅಮ್ಮಾಳ್​​ ಕೂಡ ಆ ಆಶ್ರಮದಲ್ಲಿದ್ದರು. ನಂತರ ಇಬ್ಬರಿಬ್ಬರ ನಡುವೆ ಪ್ರೀತಿ ಚಿಗುರಿತು. ಇದು ಅಲ್ಲಿದ್ದ ಆಶ್ರಮದವರಿಗೆ ತಿಳಿದು ಈ ಜೋಡಿಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ‘ನೋಕಿಯಾ 2.3‘; ಕೈಗೆಟಕುವ ದರದಲ್ಲಿ ನೂತನ ಸ್ಮಾರ್ಟ್​ಫೋನ್​

ಇದನ್ನೂಓದಿ: ಭಾರತೀಯ ಮಾರುಕಟ್ಟೆಗೆ ‘ನೋಕಿಯಾ 2.3‘; ಕೈಗೆಟಕುವ ದರದಲ್ಲಿ ನೂತನ ಸ್ಮಾರ್ಟ್​ಫೋನ್​
Youtube Video
Published by: Harshith AS
First published: December 19, 2019, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories