Money Matters: ನಿಮ್ಮ ಬಳಿ ಹಳೇ 25 ಪೈಸೆ ನಾಣ್ಯ ಇದ್ಯಾ? 1.5 ಲಕ್ಷ ರೂಪಾಯಿಗೆ ಅದನ್ನು ಕೊಳ್ಳುವವರಿದ್ದಾರೆ ನೋಡಿ !

ಹಳೆಯ 25 ಪೈಸೆ ನಾಣ್ಯ ನಿಮ್ಮ ಬಳಿ ಇದ್ದರೆ ಅದನ್ನು ನೀವು ಒಂದೂವರೆ ಲಕ್ಷ ರೂಪಾಯಿಗೆ ಮಾರಾಟ ಮಾಡಬಹುದು. ಆ ನಾಣ್ಯ 1985 ಇಸವಿಯದ್ದಾದರೆ ಇನ್ನೂ ಹೆಚ್ಚಿನ ಹಣ ದೊರೆಯುತ್ತದೆ. ಹೇಗೆ ಮಾರಾಟ ಮಾಡುವುದು, ಯಾರು ಕೊಳ್ಳುತ್ತಾರೆ? ಫುಲ್ ಡೀಟೆಲ್ಸ್ ಇಲ್ಲಿದೆ..

25 ಪೈಸೆಯ ಹಳೆಯ ನಾಣ್ಯಗಳು

25 ಪೈಸೆಯ ಹಳೆಯ ನಾಣ್ಯಗಳು

  • Share this:
Money Matters: ಕೆಲವು ವಸ್ತುಗಳು ಹಾಗೇ.. ಹಳೆಯದಾದಷ್ಟೂ ಬೆಲೆ ಜಾಸ್ತಿ. ಮತ್ತೂ ಹಳೆಯದಾಗಿ ಆಂಟಿಕ್ ಗುಂಪಿಗೆ ಸೇರೋ ಮೊದಲು ಹೀಗೇ ಒಂದಕ್ಕೆ ಲಕ್ಷಾಂತರ ಪಟ್ಟು ತಮ್ಮ ಬೆಲೆ ಹೆಚ್ಚಿಸಿಕೊಳ್ಳುತ್ತವೆ. ಆದರೆ ಇನ್ನು ಕೆಲವು ವಸ್ತುಗಳಿರುತ್ತವೆ. ಅವು ಹೆಚ್ಚೇನೂ ಹಳೆಯವಲ್ಲ.. ಆದರೂ ಬೆಲೆ ಕೇಳಿದ್ರೆ ಒಂದೇ ಸಲ ಲಾಟರಿ ಹೊಡೆದಂಥಾ ಅನುಭವ ಕೊಡುತ್ತವೆ. ಇತ್ತೀಚೆಗಷ್ಟೇ ಹಳೇ 2 ರೂಪಾಯಿ ನಾಣ್ಯದಿಂದ ನೀವು ಹೇಗೆ ಲಕ್ಷ ಲಕ್ಷ ಸಂಪಾದಿಸಬಹುದು ಎನ್ನುವುದನ್ನು ನಾವೇ ವಿವರಿಸಿದ್ದೆವು. ಈಗ ಅದಕ್ಕಿಂತ ಕಡಿಮೆ ಬೆಲೆಯ ಅಂದರೆ ಕೇವಲ 25 ಪೈಸೆ ಮುಖಬೆಲೆಯ ನಾಣ್ಯ ಇದ್ದರೆ ಸಾಕು, ನೀವು ಕನಿಷ್ಟ ಒಂದೂವರೆ ಲಕ್ಷ ರೂಪಾಯಿ ಕೊಳ್ಳಬಹುದು.

ಇದರಲ್ಲಿ ನೀವು ಬಹಳ ಮುಖ್ಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಚಾರ ಅಂದ್ರೆ ನಿಮ್ಮ ಬಳಿ ಇರುವ 25 ಪೈಸೆ ನಾಣ್ಯ ಬೆಳ್ಳಿ ಬಣ್ಣದ್ದಾಗಿರಬೇಕು, ಅಂದ್ರೆ ನೋಡೋಕೆ ಸ್ಟೀಲ್ ನಾಣ್ಯದಂಥಾ ಕಾಯ್ನ್ ಒಂದು ಮೊದಲು ಇತ್ತಲ್ಲಾ? ಆ ನಾಣ್ಯ ಇದು. ಒಂದು ವೇಳೆ ನಿಮ್ಮ ಬಳಿ ಇರುವ ನಾಣ್ಯ 1985ರಲ್ಲಿ ತಯಾರಾಗಿದ್ದಾದರೆ ಅದಕ್ಕೂ ಇನ್ನೂ ಹೆಚ್ಚಿನ ಹಣ ದೊರೆಯುತ್ತದೆ. ಇದನ್ನು ಆನ್​ಲೈನ್ ಮೂಲಕ ಮಾರಾಟ ಮಾಡಬಹುದು.

www.IndiaMART.com ವೆಬ್​ಸೈಟ್ ಮೂಲಕ ನೀವು ಈ ನಾಣ್ಯಗಳನ್ನು ಮಾರಬಹುದು ಅಥವಾ ಆಸಕ್ತಿ ಇದ್ದವರು ಕೊಳ್ಳಲೂಬಹುದು. ಮಾರಾಟ ಮಾಡಲು ಹೀಗೆ ಮಾಡಿ:

1 ಮೊದಲು ನೀವು indiamart.com ವೆಬ್​ಸೈಟನ್ನು ಓಪನ್ ಮಾಡಿ. ಇಲ್ಲಿ ಮಾರಾಟಗಾರರು ಮತ್ತು ಆಸಕ್ತಿ ಇರುವ ಗ್ರಾಹಕರು ಭೇಟಿಯಾಗುತ್ತಾರೆ. ನೇರವಾದ ವಹಿವಾಟು ಆಗಿರುವುದರಿಂದ ನಿಮ್ಮ ನಾಣ್ಯವನ್ನು ಕೊಳ್ಳುವವರು ಇಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ.

2  ಈ ವೆಬ್​ಸೈಟಿನಲ್ಲಿ ನಿಮ್ಮ ಹೆಸರು, ಈಮೇಲ್ ವಿಳಾಸ ಮುಂತಾದವನ್ನು ನಮೂದಿಸಿ ರೆಜಿಸ್ಟರ್ ಮಾಡಿಕೊಳ್ಳಿ.

3 ನಂತರ ನಿಮ್ಮ ಬಳಿ ಇರುವ ನಾಣ್ಯದ ಎರಡೂ ಮುಖಗಳು ಸ್ಪಷ್ಟವಾಗಿ ಕಾಣುವಂತೆ ಚಿತ್ರಗಳನ್ನು ತೆಗೆಯಿರಿ. ಆ ಚಿತ್ರಗಳನ್ನು ಇಲ್ಲಿ ಅಪ್​ಲೋಡ್ ಮಾಡಿ. ಇದನ್ನು ಸೇಲ್ ಗೆ ಇರುವ ಪೇಜ್ ನಲ್ಲಿ ಹಾಕಿರಿ.

ಇದನ್ನೂ ಓದಿ: Money Tips: ನಿಮ್ಮ ಬಳಿ ಹಳೇ 2 ರೂಪಾಯಿ ನಾಣ್ಯ ಇದ್ಯಾ? 5 ಲಕ್ಷ ರೂಪಾಯಿ ಸಿಗುತ್ತೆ ನೋಡಿ !

4 ಇಷ್ಟಾದರೆ ಆಯ್ತು, ಆಸಕ್ತಿ ಇರುವ ಗ್ರಾಹಕರು ನೇರವಾಗಿ ನಿಮ್ಮನ್ನು ಸಂಪರ್ಕಿಸುತ್ತಾರೆ.

5 ನಂತರ ಬೆಲೆಯ ಬಗ್ಗೆ ನೀವು ಮತ್ತು ಗ್ರಾಹಕರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದು.

ಇಂಡಿಯಾ ಮಾರ್ಟ್ ಅಲ್ಲದೇ ಕ್ವಿಕರ್ (Quikr) ಮತ್ತು ಕಾಯ್ನ್ ಬಜಾರ್ (Coinbazzar) ವೆಬ್ ಸೈಟ್​ಗಳಲ್ಲೂ ನಿಮ್ಮ ಬಳಿ ಇರುವ ಹಳೆಯ ನಾಣ್ಯಗಳನ್ನು ಉತ್ತಮ ಬೆಲೆಗೆ ಮಾರಬಹುದಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: