• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral News: 60 ವರ್ಷಗಳ ಬಳಿಕ ಮನೆಗೆ ಬಂದ ವ್ಯಕ್ತಿಗೆ, ಸ್ಪೆಷಲ್​ ಆಗಿ ಸ್ವಾಗತಿಸಿದ ಗ್ರಾಮಸ್ಥರು!

Viral News: 60 ವರ್ಷಗಳ ಬಳಿಕ ಮನೆಗೆ ಬಂದ ವ್ಯಕ್ತಿಗೆ, ಸ್ಪೆಷಲ್​ ಆಗಿ ಸ್ವಾಗತಿಸಿದ ಗ್ರಾಮಸ್ಥರು!

ವೈರಲ್​ ದೃಶ್ಯ

ವೈರಲ್​ ದೃಶ್ಯ

ಜೀವನದಲ್ಲಿ ಏನಾದರೂ ಆಗಬಹುದು ಅನ್ನೋದಕ್ಕೆ ಇಂತಹ ಘಟನೆಗಳೇ ಸಾಕ್ಷಿ ನೋಡಿ. ಕುಟುಂಬ ಸದಸ್ಯರು ಈ ವ್ಯಕ್ತಿ ಸಾವನ್ನಪ್ಪಿರಬಹುದು ಅಂತ ಭಾವಿಸಿದ್ರಂತೆ.

 • Share this:

ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ ಅಂತ ಅವರನ್ನು ಅಂತ್ಯಕ್ರಿಯೆಗೆ ಅಂತ ಸ್ಮಶಾನಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಜೀವ ಮತ್ತೆ ಬಂದು ಮೇಲಕ್ಕೆ ಎದ್ದಿರುವ ಘಟನೆಗಳನ್ನು ಈ ಹಿಂದೆ ನೋಡಿದ್ದೆವು. ಅದೇ ರೀತಿಯಾಗಿ ಎಷ್ಟೋ ವರ್ಷಗಳ ಹಿಂದೆ ಯಾವುದೋ ಒಂದು ಕಾರಣಕ್ಕೆ (Reason) ಅಂತ ಮನೆ ಬಿಟ್ಟು ಹೋದವರು ಮಧ್ಯೆ ಸಾವನ್ನಪ್ಪಿದ್ದಾರೆ ಅಂತ ಸುದ್ದಿ ಕೇಳಿರುತ್ತೇವೆ. ಅಂತಹವರು ಮತ್ತೆ ಒಂದು ದಿನ ಮನೆಯ ಬಾಗಿಲ ಮುಂದೆ ಬಂದು ನಿಂತಿರುವಂತಹ ಘಟನೆಗಳನ್ನು (Situation) ಸಹ ನಾವು ನೋಡಿರುತ್ತೇವೆ. ಜೀವನದಲ್ಲಿ (Life) ಏನಾದರೂ ಆಗಬಹುದು ಅನ್ನೋದಕ್ಕೆ ಇಂತಹ ಘಟನೆಗಳೇ ಸಾಕ್ಷಿ ನೋಡಿ. ಕುಟುಂಬ ಸದಸ್ಯರು ಈ ವ್ಯಕ್ತಿ ಸಾವನ್ನಪ್ಪಿರಬಹುದು ಅಂತ ಭಾವಿಸಿದ್ರಂತೆ.


ಇಲ್ಲಿಯೂ ಸಹ ಇಂತಹದೇ ಒಂದು ಅಸಾಧ್ಯ ಅಂತ ಅನ್ನಿಸುವ ಘಟನೆ ನಡೆದಿದೆ ನೋಡಿ. ಕೇವಲ 12 ವರ್ಷ ವಯಸ್ಸಿನವರಾಗಿದ್ದಾಗ ಮನೆಯಿಂದ ಹೊರಗೆ ಹೋದ ಪುಟ್ಟ ಹುಡುಗನೊಬ್ಬ ಈಗ 60 ವರ್ಷಗಳ ನಂತರ ಮನೆಗೆ ತಿರುಗಿ ಬಂದಿದ್ದಾರೆ.


ಬರ್ಧಾನಾ ಲಹಾರ ಅವರು ಇಷ್ಟು ವರ್ಷಗಳ ನಂತರ ತಮ್ಮ ಮನೆಗೆ ಮತ್ತೆ ಹಿಂತಿರುಗಿ ಬಂದದ್ದು, ಕುಟುಂಬ ಸದಸ್ಯರಿಗೆ ತುಂಬಾನೇ ಖುಷಿಯಾಗಿದೆ. ಅವರು ಹಿಂದಿರುಗಿದ ನಂತರ ಇಡೀ ಗ್ರಾಮವು ಸಂತೋಷದಿಂದ ಡೊಲ್, ಸಂಗೀತ ಮತ್ತು ನೃತ್ಯ ಮಾಡುವುದರೊಂದಿಗೆ ಅವರನ್ನು ಊರಿಗೆ ಸ್ವಾಗತಿಸಿತು.


ಇದನ್ನೂ ಓದಿ: 600 ವರ್ಷಗಳಷ್ಟು ಹಳೆಯ ಸಮಾಧಿಗೆ ಭೇಟಿ ನೀಡಿದ ಪುರಾತತ್ವಶಾಸ್ತ್ರಜ್ಞ ರಕ್ತವಾಂತಿ ಮಾಡಿಕೊಂಡಿದ್ದೇಕೆ?

12ನೇ ವಯಸ್ಸಿನಲ್ಲಿ ಜೀತದಾಳುವಾಗಿ ಕೆಲಸ ಮಾಡಲು ಹೋದ ವ್ಯಕ್ತಿ


ಗಜಪತಿ ಜಿಲ್ಲೆಯ ಮೋಹನಾ ಬ್ಲಾಕ್ ನ ಲುಹಾಗುಡಿ ಹರಿಜನ ಸಾಹಿಯ ಗೋಬರ್ಧಾನಾ ಅವರು ಕೇವಲ 12 ವರ್ಷದವನಾಗಿದ್ದಾಗ ಕೆಲವು ಗ್ರಾಮಸ್ಥರೊಂದಿಗೆ ಜೀತದಾಳುಗಳಾಗಿ ಕೆಲಸ ಮಾಡಲು ಹೋಗಿದ್ದರಂತೆ. ಬೆರ್ಹಾಂಪುರ ಮೂಲದ ಮಧ್ಯವರ್ತಿಯೊಬ್ಬರು ಮಧ್ಯಪ್ರದೇಶದ ಹುರ್ಸಿಂಗ್ಗಬಾ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡಲು ಅವರನ್ನು ಕರೆದೊಯ್ದಿದ್ದರು.


ಆದರೆ, ವಲಸೆ ಕಾರ್ಮಿಕರಿಗೆ ಉತ್ತಮ ವೇತನವನ್ನು ನೀಡಲಿಲ್ಲ ಮತ್ತು ತುಂಬಾನೇ ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವಂತೆ ಮಾಡಲಾಯಿತು, ನಂತರ ಅವರು ತಮ್ಮ ಗ್ರಾಮಕ್ಕೆ ಮರಳಲು ನಿರ್ಧರಿಸಿದರು. ಅವರೆಲ್ಲರೂ ಬೆರ್ಹಾಂಪುರಕ್ಕೆ ಮರಳಲು ರೈಲು ಹತ್ತಿದರು, ಆದರೆ ಟಿಟಿಇ ಗೋಬರ್ಧಾನಾ ಅವರನ್ನು ಹಿಡಿದು ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಹೊರಗೆ ಹಾಕಿದರಂತೆ.

ಇದನ್ನೂ ಓದಿ: 84ನೇ ವಯಸ್ಸಿನಲ್ಲೂ ಯುವಕರನ್ನೇ ನಾಚಿಸುವ ಉತ್ಸಾಹ; 114 ಪದಕಗಳನ್ನು ಗೆದ್ದ ಸಾಹಸಿ ಅಜ್ಜ

ಅವರ ಸಹ ಗ್ರಾಮಸ್ಥರು ಮನೆಗೆ ಹಿಂದಿರುಗಿದಾಗ, ಅವರು ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಕಳೆದು ಹೋದರು ಅಂತ ಹೇಳಿದರಂತೆ. ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆಂದು ಭಾವಿಸಿ, ನಾಗ್ಪುರ ಪುರಸಭೆಯ ಅಧಿಕಾರಿಗಳು ಅವರನ್ನು ಮಾನಸಿಕ ಆಸ್ಪತ್ರೆಗೆ ಕಳುಹಿಸಿದರು, ಅಲ್ಲಿ ಅವರು ಬೆಳೆದರಂತೆ ಎಂದು ಹೇಳಲಾಗುತ್ತಿದೆ.


ತಮ್ಮನ್ನು ರೈಲ್ವೆ ನಿಲ್ದಾಣದಲ್ಲಿಯೇ ಬಿಡಲಾಯಿತು ಅಂತ ಹಳೆಯ ದಿನಗಳನ್ನು ನೆನಪಿಸಿಕೊಂಡ ವ್ಯಕ್ತಿ


"ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದರು, ಆದರೆ ನನ್ನನ್ನು ಮಾತ್ರ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಬಿಡಲಾಯಿತು. ಆಗ ನಾನು ತುಂಬಾ ಚಿಕ್ಕವನಾಗಿದ್ದೆ. ನಾನು ರೈಲ್ವೆ ನಿಲ್ದಾಣದಲ್ಲಿ ಏಕಾಂಗಿಯಾಗಿ 15 ದಿನಗಳನ್ನು ಕಳೆದಿದ್ದೇನೆ. ನಂತರ, ಪುರಸಭೆಯ ಕಾರ್ಮಿಕರು ನಾನು ಬುದ್ಧಿಮಾಂದ್ಯ ಎಂದು ಭಾವಿಸಿ ನನ್ನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿದರು. ನಂತರ, ಮಾನಸಿಕ ಆಸ್ಪತ್ರೆಯ ಉದ್ಯೋಗಿಯೊಬ್ಬರು ನಾನು ಸಾಮಾನ್ಯ ಮಗು ಎಂದು ಅರ್ಥ ಮಾಡಿಕೊಂಡರು ಮತ್ತು ನನ್ನನ್ನು ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿಸಿದರು. ಅಂದಿನಿಂದ, ನಾನು ಆ ಹೋಟೆಲ್ ನಲ್ಲಿಯೇ ಕೆಲಸ ಮಾಡುತ್ತಿದ್ದೆ" ಎಂದು ಗೋಬರ್ಧಾನಾ ಲಹರಾ ಭಾವುಕರಾಗಿ ಹೇಳಿದರು.


top videos


  "ಕಳೆದ 60 ವರ್ಷಗಳಿಂದ ಕಾಣೆಯಾಗಿದ್ದ ಅವರು ಈಗ ಮತ್ತೆ ತಮ್ಮ ಮನೆಗೆ ಮರಳಿದ್ದಾರೆ. ಅವನನ್ನು ಪತ್ತೆಹಚ್ಚಲು ಅಥವಾ ಅವನ ಇರುವಿಕೆಯನ್ನು ತಿಳಿಯಲು ಆ ಸಮಯದಲ್ಲಿ ಮೊಬೈಲ್ ಸಹ ಇರಲಿಲ್ಲ. ನಾವು ಅವನನ್ನು ಹುಡುಕಲು ಪ್ರಯತ್ನಿಸಿದೆವು ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅವನು ಸತ್ತಿದ್ದಾನೆಂದು ನಾವು ಭಾವಿಸಿದ್ದೆವು, ಆದರೆ ಅವನು ಜೀವಂತವಾಗಿದ್ದು ಮನೆಗೆ ಬಂದಿದ್ದು ನಮಗೆ ತುಂಬಾನೇ ಖುಷಿ ಕೊಟ್ಟಿದೆ" ಅಂತ ಅವರ ಕಿರಿಯ ಸಹೋದರಿ ರೂಪಮ್ ಪ್ರಧಾನ್ ಹೇಳಿದರು.

  First published: