ಬ್ರೇಕ್​ ಡಾನ್ಸ್​ ಮಾಡಿ ಟ್ರಾಫಿಕ್​ ನಿಯಂತ್ರಿಸುವ ಗಾರ್ಡ್​: ವಿಡಿಯೋ ನೋಡಿದ್ರೆ ನಿಮಗೂ ಅಚ್ಚರಿಯಾಗುತ್ತೆ


Updated:September 12, 2018, 2:39 PM IST
ಬ್ರೇಕ್​ ಡಾನ್ಸ್​ ಮಾಡಿ ಟ್ರಾಫಿಕ್​ ನಿಯಂತ್ರಿಸುವ ಗಾರ್ಡ್​: ವಿಡಿಯೋ ನೋಡಿದ್ರೆ ನಿಮಗೂ ಅಚ್ಚರಿಯಾಗುತ್ತೆ
  • Share this:
ನ್ಯೂಸ್​ 18 ಕನ್ನಡ

ಭುವನೇಶ್ವರ(ಸೆ.12): ಒಡಿಶಾದ ಭುವನೇಶ್ವರದ ವಿಡಿಯೋ ಒಂದು ವೈರಲ್​ ಆಗಿದ್ದು, ಇದನ್ನು ಬಹುತೇಕ ಮಂದಿ ಇಷ್ಟಪಡುತ್ತಿದ್ದಾರೆ. ಟ್ರಾಫಿಕ್​ ಪೊಲೀಸ್​ ಗಾರ್ಡ್​ ಒಬ್ಬರು ಬ್ರೇಕ್​ ಡಾನ್ಸ್​ ಮಾಡಿ ಟ್ರಾಫಿಕ್​ ನಿಯಂತ್ರಿಸುತ್ತಾರೆ. ಈ ಹಿಂದೆ ಮೈಕಲ್​ ಜಾಕ್ಸನ್​ರಂತೆ ಮೂನ್​ವಾಕ್​ ಮಾಡಿ ಟ್ರಾಫಿಕ್​ ಕಂಟ್ರೋಲ್​ ಮಾಡುತ್ತಿದ್ದ ಮಧ್ಯಪ್ರದೇಶದ ಇಂದೋರ್​ನ ಟ್ರಾಫಿಕ್​ ಪೊಲೀಸ್​ ರಂಜಿತ್​ ಸಿಂಹ ಎಂಬವರ ವಿಡಿಯೋ ವೈರಲ್​ ಆಗಿತ್ತು. ಆದರೆ ಭುವನೆಶ್ವರದ ಈ ಗಾರ್ಡ್​ ಬ್ರೇಕ್​ ಡಾನ್ಸ್​ ಮಾಡಿ ಟ್ರಾಫಿಕ್​ ನಿಯಂತ್ರಿಸುತ್ತಾರೆ. ಪ್ರತಾಪ್​ ಚಂದ್ರ ಖಂಡ್​ವಾಲಾ ಹೆಸರಿನ ಈ ಗಾರ್ಡ್​ಗೆ 33 ವರ್ಷ.

ಇನ್ನು ಇವರ ಬಳಿ ಡಾನ್ಸ್​ ಮಾಡಿ ಟ್ರಾಫಿಕ್​ ನಿಯಂತ್ರಿಸುವುದರ ಹಿಂದಿರುವ ಕಾರಣವಚೇನು ಎಂದು ಕೇಳಿದಾಗ ಸಾಮಾನ್ಯವಾಗಿ ಜನರು ಟ್ರಾಫಿಕ್​ ನಿಯಮಗಳನ್ನು ಪಾಲಿಸುವುದಿಲ್ಲ. ಆದರೆ ನನ್ನ ಈ ಸ್ಟೈಲ್​ನಿಂದ ಜನರು ನಿಯಮಗಳನ್ನು ಪಾಲಿಸುತ್ತಾರೆ. ಹಾಗೂ ಜನರಿಗೆ ನನ್ನ ಈ ಶೈಲಿಯೂ ಬಹಳಷ್ಟು ಇಷ್ಟವಾಗುತ್ತಿದೆ ಎಂದಿದ್ದಾರೆ.


ವಿಡಿಯೋವನ್ನು ಗಮನಿಸಿದರೆ ಸಿಗ್ನಲ್​ ಲೈಟ್​ ಹಸಿರು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಚಂದ್ರ ಪ್ರತಾಪ್​ ತನ್ನದೇ ಸ್ಟೈಲ್​ನಲ್ಲಿ ಜನರಿಗೆ ಮುಂದೆ ಹೋಗಿ ಎಂಬಂತೆ ಸನ್ನೆ ಮಾಡುತ್ತಾರೆ ಹಾಗೂ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಡಾನ್ಸ್​ ಆರಮಭಿಸುತ್ತಾರೆ. ಇತ್ತ ಜನರೂ ನಿಂತು ಇವರ ಡಾನ್ಸ್​ ನೋಡುತ್ತಿರುತ್ತಾರೆ. ಸದ್ಯ ANI ಈ ವಿಡಿಯೋವನ್ನು ಸೇರ್​ ಮಾಡಿದ್ದು, ಇದು ಭಾರೀ ವೈರಲ್​ ಆಗುತ್ತಿದೆ.
First published:September 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ