ಜಪಾನ್​ ಕಡಲಲ್ಲಿ ಸಮುದ್ರ ಸರ್ಪ ಪತ್ತೆ: ಸುನಾಮಿ ಎಚ್ಚರಿಕೆ?

ಈ ಮೀನುಗಳ ಸಾವು ಮತ್ತು ಇವುಗಳ ಬಲೆಯಲ್ಲಿ ಸಿಕ್ಕರೆ ದುರಂತದ ಸೂಚನೆ ಎಂದು ಹೇಳಲಾಗುತ್ತದೆ. ಆದರೆ ಜಪಾನಿನ ಜನರ ಈ ನಂಬಿಕೆಗೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.

zahir | news18
Updated:February 5, 2019, 1:35 PM IST
ಜಪಾನ್​ ಕಡಲಲ್ಲಿ ಸಮುದ್ರ ಸರ್ಪ ಪತ್ತೆ: ಸುನಾಮಿ ಎಚ್ಚರಿಕೆ?
@Pic: Uozu Aquarium
 • News18
 • Last Updated: February 5, 2019, 1:35 PM IST
 • Share this:
ಜಪಾನ್​ನ ಸಮುದ್ರದಲ್ಲಿ ಅಪರೂಪ ಎನ್ನಲಾಗುವ ಓರ್ ಫಿಶ್​ಗಳು ಪತ್ತೆಯಾಗಿವೆ. ಸಮುದ್ರ ಸರ್ಪಗಳೆಂದು ಕರೆಯಲಾಗುವ ಈ ಮೀನುಗಳು ಸಿಕ್ಕರೆ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತದೆ ಎಂದು ನಂಬಲಾಗುತ್ತದೆ. ಜಪಾನ್ ತೀರದ ಕಡಲಿನಲ್ಲಿ ಇಂತಹ ಏಳು ಮೀನುಗಳು ಸಿಕ್ಕಿರುವುದು ಇದೀಗ ಜನರಲ್ಲಿ ಆತಂಕ ಮೂಡಿಸಿದೆ.

ಈ ಹಿಂದೆ ಸಂಭವಿಸಿದ ಸುನಾಮಿಗಿಂತ ಕೆಲವು ದಿನಗಳ ಮುಂಚಿತವಾಗಿ ಓರ್​ಫಿಶ್​ಗಳು ಜಪಾನ್​ನ ಸಮುದ್ರ ತೀರದಲ್ಲಿ ಸಿಕ್ಕಿತ್ತು. ಈ ಮೀನುಗಳು ಕಂಡು ಬಂದರೆ ಸುನಾಮಿ ಅಥವಾ ಭೂಕಂಪ ಸಂಭವಿಸುತ್ತದೆ ಜಪಾನಿಯರು ನಂಬುತ್ತಾರೆ. ಈ ಹಿನ್ನಲೆಯಲ್ಲಿ ಮತ್ತೆ ಸುನಾಮಿ ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

@Pic: Uozu Aquarium


ಶುಕ್ರವಾರ ತೊಯೆಮಾ ಕಡಲತೀರದಲ್ಲಿ 10.5 ಅಡಿ ಉದ್ದದ ಮೀನು ಸಿಕ್ಕಿದೆ. ಹಾಗೆಯೇ ಇಮೀಜು ಬಂದರಿನ ಸಮೀಪ 13 ಅಡಿ ಉದ್ದದ ಮೀನು ಕಂಡು ಬಂದಿದೆ. ಬೆಳ್ಳಿ ಮತ್ತು ಕೆಂಪು ಮೈ ಬಣ್ಣ ಹೊಂದಿರುವ ಈ ಮೀನುಗಳು ಸಮುದ್ರದಡಿಯಲ್ಲಿ ಕಂಡು ಬರುತ್ತದೆ. ಅಂದರೆ 650 ರಿಂದ 3,200 ಆಳದಲ್ಲಿ ಈ ಮೀನುಗಳು ವಾಸಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: VIDEO: ಸುಮಲತಾ ಮಂಡ್ಯದ ಗೌಡ್ತಿ ಅಲ್ಲ: ಹಾಗಿದ್ರೆ ಸಿಎಂ ಕುಮಾರಸ್ವಾಮಿ ಅವರ ಪತ್ನಿ? ಅಂಬಿ ಅಭಿಮಾನಿಗಳ ಪಶ್ನೆ

ಈ ಮೀನುಗಳ ಸಾವು ಅಥವಾ ಇವುಗಳು ಬಲೆಯಲ್ಲಿ ಸಿಕ್ಕರೆ ದುರಂತದ ಸೂಚನೆ ಎಂದು ಹೇಳಲಾಗುತ್ತದೆ. ಆದರೆ ಜಪಾನಿನ ಜನರ ಈ ನಂಬಿಕೆಗೆ ಯಾವುದೇ ವೈಜ್ಞಾನಿಕ ಕಾರಣವಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ. ಅತಿ ಹೆಚ್ಚು ಪ್ರಾಕೃತಿಕ ವಿಕೋಪಗಳಿಗೆ ಒಳಗಾಗುವ ದೇಶಗಳಲ್ಲಿ ಜಪಾನ್  ಕೂಡ ಒಂದು. ಈ ಹಿನ್ನಲೆಯಲ್ಲಿ ಇಲ್ಲಿನ ಜನರ ನಂಬಿಕೆ ಈಗ ವಿಶ್ವದ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ನ್ಯೂಜಿಲ್ಯಾಂಡ್​ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ

First published:February 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres