ಟೀಂ ಇಂಡಿಯಾ(Team India) ಹಾಗೂ ಪಾಕಿಸ್ತಾನ(Pakistan) ಕಿಕ್ರೆಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡು ದೇಶದ ಅಭಿಮಾನಿಗಳ(Fans) ಎದೆ ಬಡಿತ(Heart Beat) ಹೆಚ್ಚಾಗಿದೆ. ದೇಶದಾದ್ಯಂತ ಭಾರತದ ಗೆಲುವುಗಾಗಿ ಹೋಮ- ಹವನಗಳು ನಡೆಯುತ್ತಿವೆ. ಈ ವಿಡಿಯೋಗಳು ಎಲ್ಲೆಡೆ ವೈರಲ್(Viral) ಆಗುತ್ತಿವೆ. ಇದರ ನಡುವೆ ಮತ್ತೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅದು ಮೊಮಿನ್ ಸಕೀಬ್(Momin Saqib) ಅವರ ವಿಡಿಯೋವೊಂದು ವೈರಲ್ ಆಗುತ್ತಿದೆ. ಯಾರು ಇದು ಮೊಮಿನ್ ಸಕೀಬ್ ಅಂತೀರಾ? ಹೆಸರು ಹೇಳಿದರೆ ಈ ವ್ಯಕ್ತಿ ಬಗ್ಗೆ ಹೆಚ್ಚಾಗಿ ಯಾರಿಗೂ ಗೊತ್ತಾಗಲ್ಲ. ಅದೇ ಭಾಯ್ ಮಾರೋ ಮುಜೆ ಮಾರೋ ಎಂಬ ಡೈಲಾಗ್(Dialogs) ಹೇಳಿದರೆ ಈತನ ಮುಖ(Face) ಕಣ್ಣು ಮುಂದೆ ಬರುತ್ತದೆ. ಹೌದು, ಈಗ ಮತ್ತೆ ಈತ ಸುದ್ದಿಯಲ್ಲಿದ್ದಾನೆ. ಈತ ಮಾಡಿರುವ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಭಾರತ ಮತ್ತು ಪಾಕ್ ಮ್ಯಾಚ್ ಬಗ್ಗೆ ಮೊಮಿನ್ ಮಾತು!
ಇಂದು ನಡೆಯಲಿರುವ ಹೈವೋಲ್ಟೇಜ್ ಕದನದ ಬಗ್ಗೆ ಮೊಮಿನ್ ವಿಡಿಯೋ ಮಾಡಿದ್ದಾರೆ. ಈ ಎರಡು ತಂಡಗಳ ಪಂದ್ಯ ಮಾತ್ರ ಇಷ್ಟು ಕೂತುಹಲ ಮೂಡಿಸಲು ಸಾಧ್ಯ. ಈ ಎರಡು ತಂಡಗಳ ಪಂದ್ಯ ಮಾತ್ರ ವಿಭಿನ್ನ ರೀತಿಯ ಭಾವನೆಯನ್ನ ಮೂಡಿಸುತ್ತೆ. ಈ ಎರಡು ತಂಡಗಳ ಪಂಡ್ಯ ಅಮಿರ್ ಖಾನ್ ನಟನೆಯ ಲಗಾನ್ ಸಿನಿಮಾದಲ್ಲಿ ನಡೆಯುವ ಪಂದ್ಯದಷ್ಟು ರೋಚಕವಾಗಿರುತ್ತೆ ಅಂತ ಮೊಮಿನ್ ಹೇಳಿದ್ದಾನೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಬಹಳ ಕುತೂಹಲದ ಒತ್ತಡದ ಪಂದ್ಯಕ್ಕೆ ನೀವು ಸಿದ್ಧರಿದ್ದೀರಾ? ಎಂದು ಮೊಮಿನ್ ಕೇಳಿದ್ದಾರೆ.
ಇದನ್ನು ಓದಿ :
ಟೀಂ ಇಂಡಿಯಾ ಗೆಲುವಿಗಾಗಿ ಬೆಂಗಳೂರಿನಲ್ಲಿ ಹೋಮ, ಹವನ!
2019ರಲ್ಲಿ ಸಖತ್ ವೈರಲ್ ಆಗಿದ್ದ ಈತ
2019ರ ಭಾರತ ಹಾಗೂ ಪಾಕಿಸ್ತಾನದ ಪಂದ್ಯ ಬಲು ರೋಚಕವಾಗಿತ್ತು. ಕೊನೆಗೂ ಪಾಕ್ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಸ್ಟೇಡಿಯಂ ಆಚೆ ನಡೆದ ಸಂದರ್ಶನವೊಂದರಲ್ಲಿ ಈತ ತನ್ನ ಬೇಸರವನ್ನು ವ್ಯಕ್ತಪಡಿಸಿದ್ದ. ಪಾಕಿಸ್ತಾನ ತಂಡವನ್ನು ಸಪೋರ್ಟ್ ಮಾಡಿದ್ದ ಮೊಮಿನ್ ಕ್ಯಾಮರಾ ಕಂಡ ಕೂಡಲೇ ಬೇಸರವನ್ನು ತೋಡಿಕೊಂಡಿದ್ದ. ಪಾಕಿಸ್ತಾನ ಆಟಗಾರರು ಎಲ್ಲವನ್ನೂ ಕ್ಷಣದಲ್ಲಿ ಹಾಳುಮಾಡಿಕೊಂಡರು. ಹೊಡೆಯಿರಿ ನನಗೆ ಹೊಡೆಯಿರಿ ಎಂದು ಕ್ಯಾಮರಾ ಮುಂದೆ ಅಳಲು ತೋಡಿಕೊಂಡಿದ್ದರು. ಅವರ ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಈ ವಿಡಿಯೋಗಳನ್ನ ಟ್ರೋಲ್ ಪೇಜ್ಗಳು ಸಖತ್ತಾಗಿ ಬಳಸಿಕೊಂಡಿದ್ದಾರೆ. ಇಂದಿಗೂ ಇವರ ಈ ವಿಡಿಯೋ ಟ್ರೆಂಡಿಂಗ್ನಲ್ಲಿದೆ
ತಂಡಕ್ಕೆ ಶುಭಕೋರಿದ ಯುವಕ
2019 ರ ಪಂದ್ಯ ನಿನ್ನೆ ಮಾತ್ರ ಮುಗಿದಂತೆ ಭಾಸವಾಗುತ್ತಿದೆ. ಸಮಯ ಎಷ್ಟು ಬೇಗ ಕಳೆದುಹೋಗುತ್ತದೆ. ಅಂದಿನ ಪಂದ್ಯ ಪಾಕಿಸ್ತಾನಕ್ಕೆ ಬಹಳ ಮುಖ್ಯವಾದ ಪಂದ್ಯವಾಗಿತ್ತು. ಅಂದು ಮಾಡಲು ಸಾಧ್ಯವಾಗದ್ದನ್ನು ಇಂದಿನ ಪಂದ್ಯದಲ್ಲಿ ಮಾಡಲಿ ಅಂತ ಮೊಮಿನ್ ತಂಡಕ್ಕೆ ಶುಭಹಾರೈಸಿದ್ದಾರೆ. ಇನ್ನೂ ಈ ವಿಡಿಯೋ ಈಗಾಗಲೇ 9 ಮಿಲಿಯನ್ಗೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.
ಇದನ್ನು ಓದಿ :
ಭಾರತ ವಿರುದ್ಧ ಗೆದ್ದರೆ ಪಾಕಿಸ್ತಾನ ಕ್ರಿಕೆಟಿಗರಿಗೆ ಸಿಗಲಿದೆ ಬಂಪರ್ ಕೊಡುಗೆ
ಮತ್ತೆ ಈತನ ಕಾಲೆಳೆದ ನೆಟ್ಟಿಗರು
ಮೊಮಿನ್ರ ಈ ವಿಡಿಯೋ ಕೂಡ ಸಖತ್ ಟ್ರೋಲ್ ಆಗುತ್ತಿದೆ. ನೆಟ್ಟಿಗರು ಚಿತ್ರ ವಿಚಿತ್ರವಾಗಿ ಬರೆದುಕೊಂಡು ಈತನ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಈ ಪಂದ್ಯ ಮುಗಿದ ಕೂಡಲೇ ಮತ್ತೊಂದು ಮೀಮ್ಸ್ ಮಾಡಲು ಹೊಸ ಕೆಂಟೆಂಟ್ ಸಿಗಲಿದೆ ಅಂತ ಕೆಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಪಾಕಿಸ್ತಾನ ತಂಡ ಸೋತ ನಂತ್ರ ನಿಮ್ಮ ಪ್ರತಿಕ್ರಿಯೆ ನೋಡಲು ಬಹಳ ಕೂತಹಲದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾನೆ. ಇನ್ನೂ ಹಲವುರು ಪಾಕಿಸ್ತಾನ ಹಾಗೂ ಇಂಡಿಯಾ ಪಂದ್ಯಕ್ಕಿಂತ ನಿಮ್ಮ ಮಾತುಗಳು, ಪ್ರತಿಕ್ರಿಯೆ ನಮಗೆ ಹೆಚ್ಚು ಮಜಾ ಕೊಡುತ್ತೆ ಅಂತ ಕಾಲೆಳೆದಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ