Treatment: ಪಾರ್ಶ್ವವಾಯು ರೋಗಿಗೆ Dance ಮೂಲಕ ಚಿಕಿತ್ಸೆ, ನರ್ಸ್ ಟ್ರಿಟ್ಮೆಂಟ್​ಗೆ ಪ್ರಶಂಸೆಯ ಸುರಿಮಳೆ!

ಚಿಕಿತ್ಸೆಯ ನಡುವೆ ರೋಗಿಗೆ ತಾಪತ್ರಯ ಅನ್ನಿಸಬಾರದು ಎಂದು ಮಧ್ಯೆ ಡ್ಯಾನ್ಸ್ ಮಾಡಿ ಅವರನ್ನು ಸಹ ಡ್ಯಾನ್ಸ್ ಮಾಡಲು ಹುರಿದುಂಬಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ನೆಟ್ಟಿಗರು ಹೇಳಿದ್ದಾರೆ.

ಚಿಕಿತ್ಸೆ ನೀಡಿದ ನರ್ಸ್

ಚಿಕಿತ್ಸೆ ನೀಡಿದ ನರ್ಸ್

  • Share this:
ಇಂಪಾದ ಸಂಗೀತ ಕೇಳಿದರೆ (Beautiful Music) ಎಂತಹ ಮಾನಸಿಕ ಒತ್ತಡ(Anxiety) ಮತ್ತು ಆತಂಕಗಳಿದ್ದರೂ ಮನಸ್ಸು ಪ್ರಶಾಂತವಾಗುತ್ತದೆ ಮತ್ತು ಒಂದು ಒಳ್ಳೆಯ ಹಾಡಿಗೆ ಡ್ಯಾನ್ಸ್ ಮಾಡಿದರೆ ಸಿಗುವ ಮಜಾನೇ ಬೇರೆ. ಹೌದು.. ಎಂತಹ ನೋವನ್ನು ಸಹ ಮರೆಸುವಂತಹ ಶಕ್ತಿ ಆ ಸಂಗೀತಕ್ಕೆ ಮತ್ತು ಡ್ಯಾನ್ಸ್ ಗೆ ಇದೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಕೋವಿಡ್ ಸಾಂಕ್ರಾಮಿಕ (Covid epidemic) ರೋಗದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ(Hospitalized) ದಾಖಲಾದವರು ತಮ್ಮ ನೋವನ್ನು ಮರೆಯುವುದಕ್ಕೆ ಹಾಡಿಗೆ ಡ್ಯಾನ್ಸ್ ಮಾಡಿರುವ ವೀಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದನ್ನು ನೋಡಿದ್ದೆವು.

ಪಾರ್ಶ್ವವಾಯುವಿಗೆ ಚಿಕಿತ್ಸೆ
ಇಲ್ಲಿ ಅದೇ ರೀತಿಯ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ ಎಂದು ಹೇಳಬಹುದು. ಆದರೆ ಈ ವೀಡಿಯೋದಲ್ಲಿ ಸ್ವಲ್ಪ ಬದಲಾವಣೆ ಇದೆ, ಅದೇನೆಂದರೆ ಆಸ್ಪತ್ರೆಯಲ್ಲಿರುವ ವ್ಯಕ್ತಿಯೊಬ್ಬರು ಪಾರ್ಶ್ವವಾಯುವಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶುಶ್ರೂಷಕಿ (ನರ್ಸ್) ಎಂತಹ ಚಿಕಿತ್ಸೆಯನ್ನು ನೀಡಿದ್ದಾರೆ ನೋಡಿ.

ನಂದಿನಿ ವೆಂಕಟಾದ್ರಿ ಎನ್ನುವವರು ತಮ್ಮ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ಖಾತೆಯಲ್ಲಿನ ಪುಟದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ನಾವು ಒಬ್ಬ ಶುಶ್ರೂಷಕಿ ಪಾರ್ಶ್ವವಾಯುನಿಂದ ಬಳಲುತ್ತಿರುವ ವ್ಯಕ್ತಿಯನ್ನು ಡ್ಯಾನ್ಸ್ ಮಾಡುವ ಮೂಲಕ ಅವರನ್ನು ಡ್ಯಾನ್ಸ್ ಮಾಡಲು ಪ್ರೇರೇಪಿಸಿ ಅವರಿಗೆ ಚಿಕಿತ್ಸೆಯನ್ನು ನೀಡುತ್ತಿರುವುದನ್ನು ನಾವು ನೋಡಬಹುದಾಗಿದೆ.

ಇದನ್ನೂ ಓದಿ: Pregnancy Tips: ಗರ್ಭಿಣಿಯಾಗಿ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ

ಚಿಕಿತ್ಸೆ ತುಂಬಾನೇ ಸಹಾಯಕ
ರೋಗಿಯೂ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು ಅವರ ಪಕ್ಕದಲ್ಲಿ ನಿಂತು ನರ್ಸ್ ಒಬ್ಬರು ಹಾಡಿಗೆ ಡ್ಯಾನ್ಸ್ ಮಾಡಿದರು, ಇದನ್ನು ನೋಡಿದ ರೋಗಿಯೂ ಸಹ ಅವರ ಕೈಯನ್ನು ಮೇಲಕ್ಕೆ ಎತ್ತಿಕೊಂಡು ಡ್ಯಾನ್ಸ್ ಮಾಡಲು ಪ್ರಯತ್ನ ಪಟ್ಟಿದ್ದು, ಈ ಚಿಕಿತ್ಸೆ ತುಂಬಾನೇ ಸಹಾಯಕವಾಗಿದೆ. ಡ್ಯಾನ್ಸ್ ಮಾಡಿದ ರೋಗಿಯ ಮುಖದಲ್ಲಿ ಆ ಸಂತೋಷ ತುಂಬಿ ತುಳುಕುತ್ತಿರುವುದನ್ನು ನಾವು ನೋಡಬಹುದಾಗಿದೆ.

ಈ 1 ನಿಮಿಷ 29 ಸೆಕೆಂಡಿನ ವೀಡಿಯೋವನ್ನು ಈಗಾಗಲೇ ಸುಮಾರು 1,40,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 3000ಕ್ಕೂ ಹೆಚ್ಚು ಬಾರಿ ಈ ವೀಡಿಯೋವನ್ನು ಮರು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಈ ವೀಡಿಯೋವನ್ನು 14,000 ಜನರು ಇಷ್ಟಪಟ್ಟಿದ್ದಾರೆ ಎಂದು ಹೇಳಬಹುದು.

ವಿಡಿಯೋ ನೋಡಿ:



ನೆಟ್ಟಿಗರು ಮೆಚ್ಚುಗೆ
ಈ ವೀಡಿಯೋ ನೋಡಿದ ನೆಟ್ಟಿಗರು ಸಹ ಎ ನರ್ಸ್ ನ ವಿನೂತನ ಚಿಕಿತ್ಸಾ ಕ್ರಮದ ಬಗ್ಗೆ ತುಂಬಾನೇ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಆಸ್ಪತ್ರೆಯ ಸಿಬ್ಬಂದಿಗಳನ್ನು ಪ್ರಶಂಸಿಸಿದ್ದಾರೆ, ಅಲ್ಲದೇ ಇಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ರೋಗಿಗಳು ಬೇಗನೆ ಗುಣಮುಖರಾಗಲು ಜೀವಂತ ಮೀನುಗಳ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಅವರ ಚಿಕ್ಕಪ್ಪನ ಚಿಕಿತ್ಸೆಯನ್ನು ಉದಾಹರಣೆಯಾಗಿ ಹೇಳಿದ್ದಾರೆ.

ಇಂತಹ ರೋಗಕ್ಕೆ ಫೀಸಿಯೋಥೇರಪಿ ಮಾಡುವುದರ ಮೂಲಕ ನಿಧಾನವಾಗಿ ರೋಗಿಯನ್ನು ಸಾಮಾನ್ಯ ಸ್ಥಿತಿಗೆ ತರಲು ತುಂಬಾ ಸಮಯ ಹಿಡಿಯುತ್ತದೆ. ಅದರಲ್ಲಿ ಈ ನರ್ಸ್ ಮಾಡಿಸಿದ ಡ್ಯಾನ್ಸ್ ರೋಗಿಗೆ ತುಂಬಾನೇ ಸಂತೋಷ ನೀಡಿದೆ ಎಂದು ಹೇಳಬಹುದು. ತುಂಬಾ ರೋಗಿಗಳು ಫೀಸಿಯೋಥೇರಪಿ ಚಿಕಿತ್ಸೆಯನ್ನು ಅವರಿಗೆ ಹುರಿದುಂಬಿಸುವವರಿಲ್ಲದೆ ಅರ್ಧಕ್ಕೆ ನಿಲ್ಲಿಸುತ್ತಾರೆ.

ಇದನ್ನೂ ಓದಿ: Health tips: ಗಂಟಲು ನೋವಿಗೆ ಮನೆಯಲ್ಲಿಯೇ ಇದೆ ಮದ್ದು

ಪ್ರಮಾಣ ಪತ್ರ
ಆದರೆ ಇಂತಹ ಒಂದು ಚಿಕಿತ್ಸೆಯ ನಡುವೆ ರೋಗಿಗೆ ತಾಪತ್ರಯ ಅನ್ನಿಸಬಾರದು ಎಂದು ಮಧ್ಯೆ ಡ್ಯಾನ್ಸ್ ಮಾಡಿ ಅವರನ್ನು ಸಹ ಡ್ಯಾನ್ಸ್ ಮಾಡಲು ಹುರಿದುಂಬಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ನೆಟ್ಟಿಗರು ಹೇಳಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋದಲ್ಲಿ ಕಾಣಿಸಿಕೊಂಡ ಆ ಶುಶ್ರೂಷಕಿಯನ್ನು ಹೊಗಳಿದ್ದು, ಅಲ್ಲದೇ ಆ ರೋಗಿಯೂ ಬೇಗನೆ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಬರೆದಿದ್ದಾರೆ.

ಜನರು ಈ ನರ್ಸ್ ನ ಸೇವೆಗೆ ಮೆಚ್ಚಿ ಆಕೆಗೆ ಆಸ್ಪತ್ರೆಯವರು ಹೊಗಳಿಕೆ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಕೋರಿದ್ದಾರೆ. ಈ ಕೋವಿಡ್ ಸಂದರ್ಭದಲ್ಲಿ ವೈದ್ಯರು ಮತ್ತು ನರ್ಸ್ ಗಳು ಜನರ ಪ್ರಾಣವನ್ನು ಉಳಿಸುವಲ್ಲಿ ತುಂಬಾನೇ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿ ಇನ್ನೊಬ್ಬ ಬಳಕೆದಾರರು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
Published by:vanithasanjevani vanithasanjevani
First published: