ನಂಬರ್ ಪ್ಲೇಟ್ನಲ್ಲಿ (Number Plate) ‘ಸೆಕ್ಸ್’ ಇರುವುದರಿಂದ ಪಾಪ ದೆಹಲಿಯ ಹುಡುಗಿಯೊಬ್ಬಳು ತನ್ನ ಸ್ಕೂಟರ್ ಓಡಿಸುವ ಧೈರ್ಯವನ್ನೇ ಮಾಡುತ್ತಿಲ್ಲ. ಹೊಸದಾಗಿ ಕೊಂಡ ಸ್ಕೂಟರ್ಗೆ (Scooter) ನಂಬರ್ ಪ್ಲೇಟ್ ಹಾಕಿಸಲು ಹೋದ ಹುಡುಗಿಯ ಸಹೋದರನಿಗೆ ಈ ಮೂರು ಅಕ್ಷರಗಳು ತನ್ನ ಕುಟುಂಬದ ಸಮಸ್ಯೆಗಳನ್ನು ಹೆಚ್ಚಿಸುತ್ತವೆ ಎಂಬ ಬಗ್ಗೆ ಸಣ್ಣ ಸುಳಿವೂ ಇರಲಿಲ್ಲ. ವಾಹನದ ನಂಬರ್ ಪ್ಲೇಟ್ ವಿಶೇಷವಾಗಿ ನಂಬರ್ ಪ್ಲೇಟ್ನಲ್ಲಿರುವ ಪದ ಅಥವಾ ಸಂಖ್ಯೆಯು ವಿಶಿಷ್ಟವಾಗಿದ್ದಾಗ ತಕ್ಷಣವೇ ಅದು ಎಲ್ಲರ ಗಮನಕ್ಕೆ ಬರುತ್ತದೆ. BOSS ಎಂಬೆಲ್ಲಾ ವಿಶೇಷ ಅಕ್ಷರ ಮತ್ತು ನಂಬರ್ ಗೇಮ್ಗಳ ಜೊತೆಗೆ ಅದು ಕೆಲವೊಮ್ಮೆ ಎಲ್ಲರ ಆಶ್ಚರ್ಯ ಮತ್ತು ಓನರ್ನ ಹೆಮ್ಮೆಗೆ ಕಾರಣ ಆಗಬಹುದು. ಅದೇ ಸಮಯದಲ್ಲಿ, ಕೊಂಚ ಎಡವಟ್ಟಾದರೆ ಇದು ವಾಹನ ಮಾಲೀಕರ ಮುಜುಗರಕ್ಕೂ ಕಾರಣವಾಗಬಹುದು.
ದೆಹಲಿಯ ವಿದ್ಯಾರ್ಥಿನಿಯೊಬ್ಬಳು ಈಗ ಇಂತಹದ್ದೇ ಪರಿಸ್ಥಿತಿ ಎದುರಿಸುತ್ತಿದ್ದಾಳೆ. ಅವಳ ಸ್ಕೂಟರ್ನ ನಂಬರ್ ಪ್ಲೇಟ್ನಲ್ಲಿನ ಅಕ್ಷರಗಳ ಸಂಯೋಜನೆ ಅವಳಿಗೆ ದೊಡ್ಡ ಮುಜುಗರವನ್ನುಂಟುಮಾಡಿದೆ. ಹಾಗಾಗಿ ಹೊಸ ಗಾಡಿ ಕೊಂಡು, ಮೂರು ವಾರಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ, ಇದುವರೆಗೂ ಆಕೆ ಒಂದು ಬಾರಿಯೂ ತನ್ನ ದ್ವಿಚಕ್ರ ವಾಹನ ಓಡಿಸಲು ಸಾಧ್ಯವಾಗಿಲ್ಲ.
ಜನಕಪುರಿಯಿಂದ ನೋಯ್ಡಾಗೆ ದೆಹಲಿ ಮೆಟ್ರೋ ಮೂಲಕ ಪ್ರಯಾಣಿಸುತ್ತಿದ್ದ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿ ಈಕೆ. ಆದರೆ ದೆಹಲಿ ಮೆಟ್ರೋದಲ್ಲಿ ದೀರ್ಘ ಪ್ರಯಾಣದ ಸಮಯ ಮತ್ತು ಕಿರಿಕಿರಿಯ ಕಾರಣ, ಅವಳು ತನ್ನ ತಂದೆಗೆ ಸ್ಕೂಟಿ ಕೊಡಿಸುವಂತೆ ಕೇಳಿದ್ದಾಳೆ.
ತನ್ನ ತಂದೆಯ ಮುಂದೆ ಸ್ಕೂಟರ್ಗಾಗಿ ಬೇಡಿಕೆ ಇಟ್ಟು, ಒಂದು ವರ್ಷದ ನಂತರ ಈ ದೀಪಾವಳಿಯಲ್ಲಿ ಆಕೆಗೆ ಸ್ಟೂಟರ್ ಕೀ ಕೈಗೆ ಬಂದಿದೆ. ಇದು ಅವಳ ತಂದೆಯಿಂದ ಸಿಹಿ ದೀಪಾವಳಿ ಉಡುಗೊರೆಯಾಗಿತ್ತು. ಆದರೆ ಪಾಪ ಈಗ ಕೈಗೆ ಸಿಕ್ಕಿದ್ದು ರೋಡಿಗೆ ಬರಲಿಲ್ಲ ಅನ್ನೋ ಪರಿಸ್ಥಿತಿ ಆಕೆಯದ್ದು.
ಗಾಡಿಕೊಂಡ ಸ್ವಲ್ಪ ಸಮಯದ ನಂತರ ಅವಳ ಸ್ಕೂಟರ್ಗೆ ನಂಬರ್ ಪ್ಲೇಟ್ ಬಂದಿತು. ಸಂಖ್ಯಾ ಅನುಕ್ರಮದ ಪ್ರಕಾರ, ಆರ್ಟಿಒ ಆಕೆಗೆ ನಂಬರ್ ಪ್ಲೇಟ್ ಅನ್ನು ನಿಗದಿಪಡಿಸಿದೆ. ಅದರಂತೆ ಮೇಲೆ ಎಸ್-ಇ-ಎಕ್ಸ್ ಎಂಬ ಪದವಿತ್ತು. ಹಾಗಾಗಿ, ಅವಳ ನೋಂದಣಿ ಸಂಖ್ಯೆ DL 3 SEX**** ಎಂದು ಗಾಡಿಯ ಮೇಲೆ ಬರೆಸಲಾಗಿದೆ.
ಸ್ಕೂಟಿಗೆ ನಂಬರ್ ಪ್ಲೇಟ್ ಹಾಕಿಸಲು ಹೋದ ಹುಡುಗಿಯ ಸಹೋದರನಿಗೆ ಇದು ಗಮನಕ್ಕೆ ಬಂದಿಲ್ಲ. ಆದರೆ, ವಾಹನದ ನಂಬರ್ ಪ್ಲೇಟ್ನಲ್ಲಿ ಬರೆದಿರುವ ಈ SEX ಎಂಬ ಅಕ್ಷರಗಳು ಈಗ ಅನೇಕರಿಗೆ ತಮಾಷೆಯಾಗಿ ಕಾಣುತ್ತಿವೆ.
ದಾರಿಯಲ್ಲಿ ನಂಬರ್ ಪ್ಲೇಟ್ ನೋಡಿದ ಹಲವರು ಇದರ ಬಗ್ಗೆ ಕುಹಕವಾಡುತ್ತಾ ಮಾತನಾಡಲು ಶುರು ಮಾಡಿದರು. ಇದರಿಂದಾಗಿ, ಹುಡುಗಿಯ ತಂದೆಯೂ ಮುಜುಗರ ಎದುರಿಸಬೇಕಾಯಿತು. ಹಾಗಾಗಿ, ಇವರು ವಾಹನದ ನಂಬರ್ ಬದಲಾವಣೆ ಮಾಡುವಂತೆ ಮನವಿ ಮಾಡಿದರು. ಆದರೆ ದೆಹಲಿ ಆರ್ಟಿಒ ಅಧಿಕಾರಿಯೊಬ್ಬರು ಹೇಳುವಂತೆ, ಸಾಕಷ್ಟು ಸಂಖ್ಯೆಯ ಕಾರುಗಳು ಮತ್ತು ಸ್ಕೂಟರ್ಗಳು ಅಂತಹ ಸಂಖ್ಯೆಯನ್ನು ಹೊಂದಿವೆ ಮತ್ತು ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ.
ಈ ದೆಹಲಿ ಆರ್ಟಿಒ ಅಧಿಕಾರಿಯ ಪ್ರಕಾರ, ಒಮ್ಮೆ ವಾಹನದ ಸಂಖ್ಯೆಯನ್ನು ನಿಗದಿಪಡಿಸಿದ ನಂತರ, ಅದನ್ನು ಬದಲಾಯಿಸಲು ಯಾವುದೇ ಅವಕಾಶವಿಲ್ಲ. ಏಕೆಂದರೆ ಈ ಎಲ್ಲಾ ಪ್ರಕ್ರಿಯೆಯು ನಿಗದಿತ ಮಾದರಿಯಲ್ಲಿ ನಡೆಯುತ್ತದೆ ಎಂದಿದ್ದಾರೆ. ಹಾಗಾಗಿ ಪಾಪ, ಆ ಹುಡುಗಿಗೆ ಹೊಸ ಸ್ಕೂಟರ್ ಕೊಂಡರೂ ಅದನ್ನು ಓಡಿಸುವ ಭಾಗ್ಯ ಮಾತ್ರ ಸಿಕ್ಕಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ