ಆಗಸ್ಟ್ ತಿಂಗಳಲ್ಲಿ ಎಷ್ಟಿದೆ ವಿಶೇಷತೆಗಳು? ಇಲ್ಲಿದೆ ಪಟ್ಟಿ

ಆಗಸ್ಟ್ 1, 2021, ಇದರ ಹೊರತಾಗಿಯೂ ಹಲವು ವಿಶೇಷಗಳಿಗೆ ಸಾಕ್ಷಿಯಾಗಿತ್ತು. ಸಹೋದರಿಯರ ದಿನ, ವಲ್ರ್ಡ್ ವೈಡ್ ವೆಬ್ ಡೇ, ಪ್ಲಾನರ್ ಡೇ, ಗೌರವಾನ್ವಿತ ಪೋಷಕರ ದಿನ, ಗೊಂಬೆಗಳ ದಿನ, ಅಂತರಾಷ್ಟ್ರೀಯ ಶ್ವಾಸಕೋಶ ಕ್ಯಾನ್ಸರ್ ದಿನ, ಇಂಟರ್‍ನ್ಯಾಷನಲ್ ಚೈಲ್ಡ್ ಫ್ರೀ ಡೇ, ರಸ್ಬೆರಿ ಕ್ರೀಮ್ ಪೈ ಡೇ, ವಲ್ರ್ಡ್ ಸ್ಕೌಟ್ ಸ್ಕ್ರಾಫ್ ಡೇ, ಸೈಕಿಕ್ ಡೇಯಾಗಿ ಆಚರಿಸಲಾಯಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಆಗಸ್ಟ್ ಮೊದಲ ಭಾನುವಾರವನ್ನು ಸ್ನೇಹಿತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಅಂದರೆ ಆಗಸ್ಟ್ ಪ್ರಥಮ ಭಾನುವಾರ ಬದುಕಿನ ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಸ್ನೇಹಿತರಿಗಾಗಿ ಮೀಸಲಿರಿಸಲಾಗಿದೆ. ಈ ಬಾರಿ ಆಗಸ್ಟ್ 1, 2021 ಭಾನುವಾರವೇ ಬಂದಿದೆ. ಹಾಗಾಗಿ ಆಗಸ್ಟ್ ತಿಂಗಳು ಸ್ನೇಹಮಯವಾಗಿಯೇ ಪ್ರಾರಂಭವಾಗಿದೆ.


  ಆದರೆ ಆಗಸ್ಟ್ 1 ಬೇರೆಯದೇ ವಿಶೇಷ. ಅಂದರೆ ಇದನ್ನು ರಾಷ್ಟ್ರೀಯ ಗೆಳತಿಯರ ದಿನವನ್ನಾಗಿ (Girl Friends Day) ಆಚರಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಆಗಸ್ಟ್ ತಿಂಗಳು ವಿವಿಧ ಆಚರಣೆಗಳ ಮೂಲಕ ವಿಶೇಷವಾದ ತಿಂಗಳು ಎನಿಸಿದೆ.


  ರಾಷ್ಟ್ರೀಯ ಗೆಳತಿಯರ ದಿನ (Girl Friends Day) ಪ್ರೇಮಿಗಳ ದಿನದಂತಲ್ಲ. ಅಂದರೆ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾ ಒಂದು ಹುಡುಗಿ ಆಪ್ತ ಸ್ನೇಹಿತೆಯಾಗಿರುತ್ತಾಳೆ. ಈ ದಿನವನ್ನು ಆಕೆಗಾಗಿ ಮೀಸಲಿರಿಸಲಾಗುವುದು. ಆಗಸ್ಟ್ 1, 2004ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಸುಸಾನ್ ಎಂಬುವವರು ಒಬ್ಬರಿಗೊಬ್ಬರು ಕೃತಜ್ಞತೆಯನ್ನು ವ್ಯಕ್ತಪಡಿಸಲು ಕೇವಲ ಗೆಳತಿಯರಿಗಾಗಿಯೇ ವಿಶೇಷ ದಿನವನ್ನು ರಚಿಸಿದರು. ಅದುವೇ ರಾಷ್ಟ್ರೀಯ ಗೆಳತಿಯರ ದಿನ (Girl Friends Day).


  ಅಲ್ಲದೇ ಈ ದಿನವನ್ನು ಅಮೆರಿಕಾದಲ್ಲಿ ತಮ್ಮ ಜೀವನದ ವಿಶೇಷ ಮಹಿಳೆಗಾಗಿ ಮೀಸಲಿರಿಸಲಾಗಿದೆ. ಅಂದರೆ ತಮ್ಮ ಜೀವನದಲ್ಲಿ ಯಾವ ಮಹಿಳೆಯನ್ನು ಅತಿಯಾಗಿ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೋ ಅವರಿಗಾಗಿ ಮೀಸಲಿಡುತ್ತಾರೆ. ವರದಿಗಳ ಪ್ರಕಾರ, ಗೆಳತಿ ಎಂಬ ಪದವನ್ನು 1863ರಲ್ಲಿ ಮಹಿಳಾ ಸ್ನೇಹಿತೆಯನ್ನು ವ್ಯಾಖ್ಯಾನಿಸಲು ಬಳಸಲಾಯಿತು. ನಂತರ, 1920 ರ ನಂತರ, ಈ ಪದದ ವ್ಯಾಖ್ಯಾನವೇ ಬದಲಾಯಿತು. ಯಾರೋ ಒಬ್ಬರು ತಮ್ಮ ಪ್ರೇಯಸಿಯನ್ನು ಉಲ್ಲೇಖಿಸಲು ಜನರು ಬಳಸಲಾರಂಭಿಸಿದರು.


  ಆಗಸ್ಟ್ 1, 2021, ಇದರ ಹೊರತಾಗಿಯೂ ಹಲವು ವಿಶೇಷಗಳಿಗೆ ಸಾಕ್ಷಿಯಾಗಿತ್ತು. ಸಹೋದರಿಯರ ದಿನ, ವಲ್ರ್ಡ್ ವೈಡ್ ವೆಬ್ ಡೇ, ಪ್ಲಾನರ್ ಡೇ, ಗೌರವಾನ್ವಿತ ಪೋಷಕರ ದಿನ, ಗೊಂಬೆಗಳ ದಿನ, ಅಂತರಾಷ್ಟ್ರೀಯ ಶ್ವಾಸಕೋಶ ಕ್ಯಾನ್ಸರ್ ದಿನ, ಇಂಟರ್‍ನ್ಯಾಷನಲ್ ಚೈಲ್ಡ್ ಫ್ರೀ ಡೇ, ರಸ್ಬೆರಿ ಕ್ರೀಮ್ ಪೈ ಡೇ, ವಲ್ರ್ಡ್ ಸ್ಕೌಟ್ ಸ್ಕ್ರಾಫ್ ಡೇ, ಸೈಕಿಕ್ ಡೇಯಾಗಿ ಆಚರಿಸಲಾಯಿತು.


  ಇದರ ಹೊರತಾಗಿ, ಆಗಸ್ಟ್ನಲ್ಲಿ ಆಚರಿಸುವ ದಿನಗಳ ಪಟ್ಟಿ ಇದೆ.


  ಆಗಸ್ಟ್ 2 - ಐಸ್ ಕ್ರೀಮ್ ಸ್ಯಾಂಡ್ವಿಚ್ ದಿನ


  ಆಗಸ್ಟ್ 3- ಕಲ್ಲಂಗಡಿ ದಿನ


  ಆಗಸ್ಟ್ 5 - ನಾಯಿಯ ದಿನ


  ಆಗಸ್ಟ್ 10 – ರಾಷ್ಟ್ರೀಯ ಸೋಮಾರಿ ದಿನ (ಸೋಮಾರಿಗಳನ್ನು ಗೌರವಿಸಲು ಯುಎಸ್‍ನಲ್ಲಿ ಆಚರಿಸಲಾಗುತ್ತದೆ)


  ಆಗಸ್ಟ್ 12 – ಮಿಡಲ್ ಚಿಲ್ಡ್ರನ್ ಡೇ


  ಆಗಸ್ಟ್ 16 - ನ್ಯಾಷನಲ್ ಟೆಲ್ ಎ ಜೋಕ್ ಡೇ


  ಆಗಸ್ಟ್ 22 - ಏಂಜಲ್ ಡೇ


  ಆಗಸ್ಟ್ 23 ಗಾಳಿಯ ದಿನ (ರೈಡ್ ಡೇ)


  ಆಗಸ್ಟ್ 25 - ಕಿಸ್ ಮತ್ತು ಮೇಕಪ್ ದಿನ
  ಆಗಸ್ಟ್ 31- ಈಟ್ ಔಟ್ ಡೇ


  ಇದನ್ನೂ ಓದಿ: EXCLUSIVE: ಎಕ್ಸ್​ರೇ ಹೇಳುತ್ತಿದೆ ಭಯಾನಕ ಕತೆ; ಛಾಯಾಗ್ರಾಹಕ ದಾನಿಶ್​ ಸಿದ್ದಿಕಿ ಮೇಲೆ ಎಸ್​ಯುವಿ ಹತ್ತಿಸಿದ್ದ ಉಗ್ರರು

  ನೀವು ಅದನ್ನು ಆಚರಿಸುತ್ತೀರೋ ಇಲ್ಲವೋ ನಿಮ್ಮ ಸುತ್ತಲೂ ನಡೆಯುತ್ತಿರುವ ಇಂತಹ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಯಾವಾಗಲೂ ನಮ್ಮ ಜೀವನವನ್ನು ಒಂದು ರೀತಿಯಲ್ಲಿ ಖುಷಿಯಾಗಿ ಇಡುತ್ತದೆ ಎಂದಷ್ಟೇ ಹೇಳಬಹುದು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: