ನೀಲಿ ಚಿತ್ರ ವೀಕ್ಷಿಸಲು ಕೆಲಸಕ್ಕೆ ಸೇರಿದ 70ರ ವೃದ್ಧ!; 10 ವರ್ಷಗಳ ನಂತರ ಬಯಲಾಯ್ತು ಅಸಲಿ ವಿಚಾರ!

ನಿತ್ಯ ಕಚೇರಿಗೆ ತೆರಳುತ್ತಿದ್ದ ಪೀಟರ್​ ಅಲ್ಲಿ ತಾವು ಕೆಲಸ ಮಾಡುವ ಕಂಪ್ಯೂಟರ್​ನಲ್ಲಿ ಫೋಲ್ಡರ್​ ಒಂದನ್ನು ಕ್ರಿಯೆಟ್​ ಮಾಡಿಕೊಂಡಿದ್ದ. ಅದರಲ್ಲಿ ಒಂದಷ್ಟು ಪಾರ್ನ್​ ವಿಡಿಯೋಗಳನ್ನು ಡೌನ್​ಲೋಡ್​ ಮಾಡಿ ಶೇಖರಿಸಿಟ್ಟಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗಂಡ ನೀಲಿ ಚಿತ್ರ ವೀಕ್ಷಣೆ ಮಾಡುವುದು ಅನೇಕ ಹೆಂಡತಿಯರಿಗೆ ಇಷ್ಟವಾಗುವುದಿಲ್ಲ.  ಈ ವಿಚಾರದಲ್ಲಿ ಅನೇಕ ದಂಪತಿ ನಡುವೆ ತಿಕ್ಕಾಟ ನಡೆದೇ ಇರುತ್ತದೆ. ಲಂಡನ್​ನ ವೃದ್ಧ ಡಾಕ್ಟರ್​ ಹಾಗೂ ಆತನ ಪತ್ನಿ ನಡುವೆ ಇದೇ ವಿಚಾರಕ್ಕೆ ಜಗಳ ಏರ್ಪಟ್ಟಿತ್ತು. ನಂತರ ಪಾರ್ನ್​​ ವಿಡಿಯೋ ನೋಡಲು ಈತ ಅನುಸರಿಸಿದ ಮಾರ್ಗ ಮಾತ್ರ ವಿಚಿತ್ರವಾದುದ್ದು!

    ಪೀಟರ್​ ಡೇವಿಸ್​ ವೈದ್ಯನ ಹೆಸರು. ಈತನ ವಯಸ್ಸು 70 ವರ್ಷ. ಕ್ಷಯ ರೋಗದ ಸ್ಪೆಷಲಿಸ್ಟ್​ ಆಗಿದ್ದ ಈತ 18ನೇ ವರ್ಷಕ್ಕೆ ಪಾರ್ನ್​ಗೆ ಅಡಿಕ್ಟ್​ ಆಗಿದ್ದ. 10 ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿ ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. 60ರ ವಯಸ್ಸಲ್ಲೂ ಪೀಟರ್​ಗೆ ಪಾರ್ನ್​ ವಿಡಿಯೋ ನೋಡುವ ಹುಚ್ಚು ಅತಿಯಾಗಿತ್ತು. ಮನೆಯ ಕಂಪ್ಯೂಟರ್​ನಲ್ಲಿ ಕುಳಿತು ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದ.

    ಒಂದು ದಿನ ಇದು ಪತ್ನಿಗೆ ಗೊತ್ತಾಗಿತ್ತು. ಈ ವೇಳೆ ಪೀಟರ್​ಗೆ ಪತ್ನಿ ಕ್ಲಾಸ್​ ತೆಗೆದುಕೊಂಡಿದ್ದಳು. ಅಷ್ಟೇ ಅಲ್ಲ, ಕಂಪ್ಯೂಟರ್​ನಲ್ಲಿ ಪಾರ್ನ್​ ವಿಡಿಯೋ ನೋಡದಂತೆ ನಿರ್ಬಂಧ ಹೇರಿದ್ದಳು. ಈ ವಿಚಾರ ಪೀಟರ್​ಗೆ ಶಾಕ್​ ನೀಡಿತ್ತು. ಇನ್ನುಮುಂದೆ ಪಾರ್ನ್​ ವಿಡಿಯೋ ನೋಡುವುದು ಹೇಗೆ ಎಂದು ಆತ ಚಿಂತಾಕ್ರಾಂತನಾಗಿದ್ದ. ನಂತರ ಇದ್ದಕ್ಕಾಗಿ ಹೊಸ ಪ್ಲಾನ್​ ಒಂದನ್ನು ಮಾಡಿದ್ದ.

    ನಿತ್ಯ ಕಚೇರಿಗೆ ತೆರಳುತ್ತಿದ್ದ ಪೀಟರ್​ ಅಲ್ಲಿ ತಾವು ಕೆಲಸ ಮಾಡುವ ಕಂಪ್ಯೂಟರ್​ನಲ್ಲಿ ಫೋಲ್ಡರ್​ ಒಂದನ್ನು ಕ್ರಿಯೆಟ್​ ಮಾಡಿಕೊಂಡಿದ್ದ. ಅದರಲ್ಲಿ ಒಂದಷ್ಟು ಪಾರ್ನ್​ ವಿಡಿಯೋಗಳನ್ನು ಡೌನ್​ಲೋಡ್​ ಮಾಡಿ ಶೇಖರಿಸಿಟ್ಟಿದ್ದ. ನಿತ್ಯ ಕಚೇರಿಗೆ ಬಂದು ಕೆಲಸದ ಮಧ್ಯೆಯೇ ಪಾರ್ನ್​ ವಿಡಿಯೋ ನೋಡುತ್ತಿದ್ದ! ಇದು ಸುಮಾರು 10 ವರ್ಷಗಳ ಕಾಲ ನಡೆದೇ ಇತ್ತು. ಆದಾಗ್ಯೂ ಯಾರೊಬ್ಬರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ.

    ಇದನ್ನೂ ಓದಿ: Viral Video: ದೇಶವೇ ಲಾಕ್​ಡೌನ್​ ಆದಾಗ ಪೊಲೀಸರಿಗೇ ಮಚ್ಚು ತೋರಿಸಿದ್ದ ಸ್ವಘೋಷಿತ ದೇವಮಾತೆ ವಿಡಿಯೋ ಮತ್ತೆ ವೈರಲ್​!

    ಈಗ ಈ ವಿಚಾರ ಸಂಸ್ಥೆಯ ಮುಖ್ಯಸ್ಥನಿ​ಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಬಗ್ಗೆ ಸಂಸ್ಥೆ ತನಿಖೆಗೆ ಆದೇಶಿಸಿತ್ತು. ಈ ವೇಳೆ ಕಳೆದ 10 ವರ್ಷಗಳಿಂದ ಕಚೇರಿ ಕಂಪ್ಯೂಟರ್​ನಲ್ಲಿ ನಿತ್ಯ ಪಾರ್ನ್​ ವಿಡಿಯೋ ನೋಡುತ್ತಿರುವದನ್ನು ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ.
    Published by:Rajesh Duggumane
    First published: