Viral Video: ಅಜ್ಜಿಯ ಡ್ರೀಮ್ ಕಾರನ್ನು ಉಡುಗೊರೆಯಾಗಿ ನೀಡಿದ ಮೊಮ್ಮಗ: ಸರ್‍ಪ್ರೈಜ್ ಕಂಡು ಭಾವುಕರಾದ ಅಜ್ಜಿ

ವಿದೇಶದಲ್ಲಿ ಸಾಫ್ಟ್ ವೇರ್ ವೃತ್ತಿಯಲ್ಲಿರುವ ವ್ಲಾಗರ್ ಒಬ್ಬ, ಸ್ವದೇಶಕ್ಕೆ ತನ್ನ ವಿದೇಶಿ ಗೆಳಯಿಯ ಜೊತೆ ಬಂದು ತನ್ನ ಅಜ್ಜಿಗೆ ಹೊಸ ಕಾರನ್ನು ಉಡುಗೊರೆ ನೀಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಅಜ್ಜಿಗೆ ಉಡುಗೊರೆ ಕೊಟ್ಟ ಮೊಮ್ಮಗ

ಅಜ್ಜಿಗೆ ಉಡುಗೊರೆ ಕೊಟ್ಟ ಮೊಮ್ಮಗ

  • Share this:
ಉಡುಗೊರೆ ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ? ಆಫೀಸಿನಲ್ಲಿನ ಸಹುದ್ಯೋಗಿಗಳಿಗೆ, ಶಾಲಾ ಕಾಲೇಜುಗಳಲ್ಲಿ ಸ್ನೇಹಿತರಿಗೆ ಮತ್ತೆ ಹೆತ್ತವರಿಗೆ ಉಡುಗೊರೆಗಳನ್ನು ನೀಡುತ್ತೇವೆ ಹಾಗೇನೆ ತೆಗೆದುಕೊಳ್ಳೋದು ಸಹಜ. ಆದರೆ ಅಜ್ಜ-ಅಜ್ಜಿಯರಿಗೆ ಸರ್‍‍ಪ್ರೈಜ್ ಗಿಫ್ಟ್ ಕೊಟ್ಟಾಗ ಅವರ ಸಂತೋಷ ಹೇಗಿರುತ್ತೆ ಅಲ್ವಾ? ಇಲ್ಲೊಬ್ಬ ತನ್ನ ಅಜ್ಜಿಗೆ ಹೊಸ ಕಾರನ್ನು ಸರ್‍‍ಪ್ರೈಜ್ ಕೊಟ್ಟಿದ್ದಾನೆ. ವಿದೇಶದಲ್ಲಿ ಸಾಫ್ಟ್ ವೇರ್ (Software) ವೃತ್ತಿಯಲ್ಲಿರುವ ವ್ಲಾಗರ್ ಒಬ್ಬ, ಸ್ವದೇಶಕ್ಕೆ ತನ್ನ ತಂಡದ ಜೊತೆ ಬಂದು ತನ್ನ ಅಜ್ಜಿಗೆ ಹೊಸ ಕಾರನ್ನು ಉಡುಗೊರೆ ನೀಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗ್ತಿದೆ. ಸಿಂಗ್ ಇನ್ ಯುಎಸ್ಎ (Singh In USA) ಎಂಬ ಯುಟ್ಯೂಬ್‍ ಚಾನಲ್‍ನ ಮಾಲೀಕ ಈ ವಿಡಿಯೋವನ್ನು ತನ್ನ ಚಾನಲ್‍‍ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಪ್ರಕಾರ ಉಡುಗೊರೆಯಾಗಿ ಕಾರನ್ನು ಅಜ್ಜಿಗೆ ತಿಳಿಯದಂತೆ ಆಚ್ಚರಿಗೊಳಿಸಿ ನೀಡಬೇಕೆಂದು ವಿದೇಶದಲ್ಲಿದ್ದಾಗಲೇ ಆತ ಪ್ಲಾನ್ ಮಾಡಿಕೊಂಡಿದ್ದ. ಅಜ್ಜಿಯ ಬಳಿ ಈಗಾಗಲೇ ಮಾರುತಿ ಸುಜುಕಿ ಸ್ವಿಫ್ಟ್ ಕಾರಿದ್ದು, ತಾನು ತನ್ನ ಅಜ್ಜಿಗೆ ಇನ್ನೂ ದೊಡ್ಡ ಕಾರೊಂದನ್ನು ಕೊಡಿಸಬೇಕೆಂಬುದಾಗಿ ವಿಡಿಯೋನಲ್ಲಿ ಈತ ಹೇಳಿಕೊಂಡಿದ್ದಾನೆ. ಅದ್ರಲ್ಲೂ ಕೊಡ್ಸಿರೋ ಕಾರು ಅಜ್ಜಿಯ ಡ್ರೀಮ್ ಕಾರ್‍‍‍ಗಳಲ್ಲಿ ಒಂದಂತೆ!

ಆಜ್ಜಿಗೆ ಸರ್‍ಪ್ರೈಸ್ ಕೊಟ್ಟಿದ್ದು ಹೀಗೆ

ಕಾರ್ ಖರೀದಿಸಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ ವ್ಲಾಗರ್ ಹಾಗು ಅವನ ತಂಡ ಅಜ್ಜಿಯನು ಸಹ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಅಜ್ಜಿ ಏನೊ ಮೊಮ್ಮಗ ಕಾರು ಖರೀದಿ ಮಾಡ್ತಿದ್ದಾನೆ ಅಂತ ತಿಳಿದಿದ್ರು. ಆದ್ರೆ ಅಜ್ಜಿಗೆ ತಿಳಿದಿರಲಿಲ್ಲ ಆ ಕಾರು ಆಕೆಗೆ ತನ್ನ ಮೊಮ್ಮಗ ನೀಡುತ್ತಿರುವ ಉಡುಗೊರೆ ಅಂತ. 


ಕಾರು ಖರೀದಿಗೂ ಮುನ್ನವೇ ವ್ಲಾಗರ್ ಕಾರಿನ ಬಗ್ಗೆ ಹೇಗಿದೆ ಅಂತ ಅಜ್ಜಿಯ ಜೊತೆಗೆ ಊಟದ ಸಮಯದಲ್ಲಿ ಚರ್‍ಚಿಸಿದರು. ಶೋರೂಮ್‍ಗೆ ಹೋಗಿ ಕಾರು ಖರೀಸಿದುವ ಮುನ್ನ ಆತ "ಉಡುಗೊರೆ ಹೇಗಿರಲಿದೆ ಅಂತ ಆತ ಕೇಳಿದಾಗ ಅಜ್ಜಿ ಉಡುಗೊರೆಗಿಂತಾ ನಿನ್ನ ಹಾಜರಿ ನನಗೆ ಮತ್ತಷ್ಟು ಸಂತೋಷ ನೀಡುತ್ತಿದೆ" ಅಂತ ಹೇಳಿದ್ದಾರೆ. 

ಭಾವುಕಳಾದ ಅಜ್ಜಿ

ವ್ಲಾಗರ್ ಟಾಟಾ ನೆಕ್ಸಾನ್ ಕಾರು ಖರೀದಿಯ ನಂತರ ಕಾರಿನ ಕೀಲಿಯನ್ನು ಅಜ್ಜಿಯ ಕೈಗಿಟ್ಟು, ಕಾರಿನ ಒಳಗೆ ಕೂರಿಸಿ ಕಾರು ಹೇಗಿದೆ ಅಜ್ಜಿ ಅಂತ ಕೇಳಿದಾಗ, ಅಜ್ಜಿ ಭಾವುಕಳಾಗಿ ಮೊಮ್ಮಗನನ್ನು ತಬ್ಬಿಕೊಂಡಿರುವುದನ್ನು ನೀವು ವೀಡಿಯೋನಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ : ಗಣಿತದಲ್ಲಿ ಬರೀ 36 ಅಂಕ! IAS ಆಫೀಸರ್ SSLC ಮಾರ್ಕ್​ ಕಾರ್ಡ್ ವೈರಲ್

ಕಾರ್ ಶೋರೂಮ್ ಇಂದ ಹೊರ ಬಂದಂತೆ ಅಜ್ಜಿಯನ್ನು ಕೂರಿಸಿಕೊಂಡು ಊರು ಸುತ್ತಲು ಹೋದಾಗ ಕಾರಿನಲ್ಲಿರುವ ಫೀಚರ್‍ಸ್ ಬಗ್ಗೆ ಕೂಡಾ ಈತ ಹೇಳಿಕೊಂಡಿದ್ದಾನೆ. ಇನ್ನು ಈ ಉಡುಗೊರೆಯಾಗಿ ಪಡೆದ ಟಾಟಾ ನೆಕ್ಸಾನ್ ಕಾರಿನ ಬಗ್ಗೆ ಹೇಳುವುದಾದ್ರೆ, ಈ ಕಾರು ಎಕ್ಸ್ ಶೋರುಮ್ ಪ್ರಕಾರ ರೂ 9.65 ಲಕ್ಷ ಪ್ರಾರಂಭಿಕ ಬೆಲೆ ಇದ್ದು, ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ.

ಟಾಟಾ ನೆಕ್ಸಾನ್ ಕಾರಿನ ಫೀಚರ್‍ಸ್

ಟಾಟಾ ನೆಕ್ಸಾನ್ ಕಾರಿನಲ್ಲಿ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್, ಟಚ್ ಸ್ಕ್ರೀನ್, ಪ್ಯಾಸೆಂಜರ್ ಏರ್‍‍‍ಬ್ಯಾಗ್, ಡ್ರೈವರ್ ಏರ್‍‍‍ಬ್ಯಾಗ್, ಹೀಟರ್, ರಿಯರ್ ಸೀಟ್ ಹೆಡ್‍ರೆಸ್ಟ್, ಹಿಂಭಾಗದಲ್ಲಿ ಏಸಿ, ನ್ಯಾವಿಗೇಷನ್ ಸಿಸ್ಟಮ್, ಕೀಲೆಸ್ ಎಂಟ್ರಿ, ವಾಯ್ಸ್ ಕಂಟ್ರೋಲ್ ಸೇರಿದಂತೆ ಮತ್ತಷ್ಟು ಫೀಚರ್‍ಸ್ ಅನ್ನು ಹೊಂದಿದೆ.

ಇದನ್ನೂ ಓದಿ : ಡೌರಿ ಕೊಟ್ಟು ಹೆಣ್ಣು ಮೇಕೆಯನ್ನು ಮದುವೆಯಾದ ಭೂಪ! ಕಾರಣ ಕೇಳಿದ್ರೆ ಬಿದ್ದೂ ಬಿದ್ದೂ ನಗ್ತೀರಿ

ಟಾಟಾ ನೆಕ್ಸಾನ್ ಕಾರಿನಲ್ಲಿನ 1.2ಲೀಟರ್ ಟರ್‍ಬೋಚಾರ್‍ಜ್ಡ್ ರೆವಲ್ಟ್ರಾನ್ ಎಂಜಿನ್ 118 ಬಿಹೆಚ್‍ಪಿ ಹಾಗು 170ಎನ್ಎಮ್ ಟಾರ್‍ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕ್ರಾಶ್ ಟೆಸ್ಟ್ ನಲ್ಲಿ ಇದಕ್ಕೆ ಔಟ್ ಆಫ್ ಔಟ್

ಸೇಫ್ಟಿ ಪರವಾಗಿ ಬಹಳ ಹಿಂದೆಯೇ ಕ್ರಾಶ್ ಟೆಸ್ಟಿಂಗ್‍‍ನಲ್ಲಿ 5ಕ್ಕೆ 5 ಸ್ಟಾರ್‍‍‍ಗಳನ್ನು ಪಡೆದ ಭಾರತದ ಮೊಟ್ಟ ಮೊದಲ ಕಾರು ಇದಾಗಿದೆ. ಇದಾದ ಕೆಲವು ದಿನಗಳ ನಂತರವೇ ನೆಕ್ಸಾನ್ ಕಾರಿನ ಮಾರಾಟ ಹಾಗು ಟಾಟಾ ಕಂಪೆನಿಯ ಶೇರ್ ಮಾರ್‍ಕೆಟ್ ಕೂಡಾ ಹೆಚ್ಚಿತು. ಈಗ ಬಿಡುಗಡೆಯಾಗುತ್ತಿರುವ ಟಾಟಾ ಮೋಟಾರ್‍ಸ್ ನ ಎಲ್ಲಾ ಕಾರುಗಳು ಕೂಡಾ ಸೇಫ್ಟಿ ಪರವಾಗಿ ಉತ್ತಮ ಎಂದು ಹೇಳಲಾಗುತ್ತಿದೆ.
Published by:Rahul TS
First published: