ಮಕ್ಕಳ ಮದುವೆ ಪಾಲಕರಿಗೆ ಹೊರೆಯಲ್ಲ; ವಿವಾಹದಲ್ಲೂ ಸ್ವಾವಲಂಬಿತನ ತೋರುತ್ತಿದೆ ಯುವಪೀಳಿಗೆ

ಯುವಕರು ತಮ್ಮ ಮದುವೆಯ ಖರ್ಚಿನ ಬಹುಪಾಲು ತಾವು ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಯುವತಿಯರು ಕೂಡಾ ಸರಿಸಮನಾಗಿ ತಮ್ಮ ಮದುವೆ ಖರ್ಚಿನ ವೆಚ್ಚ ಭರಿಸುತ್ತಿದ್ದಾರೆ.

news18-kannada
Updated:February 18, 2020, 3:57 PM IST
ಮಕ್ಕಳ ಮದುವೆ ಪಾಲಕರಿಗೆ ಹೊರೆಯಲ್ಲ; ವಿವಾಹದಲ್ಲೂ ಸ್ವಾವಲಂಬಿತನ ತೋರುತ್ತಿದೆ ಯುವಪೀಳಿಗೆ
ಸಾಂದರ್ಭಿಕ ಚಿತ್ರ
  • Share this:
ವಿಜಯ್ ಮತ್ತು ನಿವೇದಿತಾ ಎರಡು ತಿಂಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದರು. ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಿಂದ ರಿಸೆಪ್ಶನ್​ವರೆಗೆ ತಮ್ಮ ಮದುವೆಯ ಅಷ್ಟೂ ಖರ್ಚನ್ನು ತಾವೇ ನಿಭಾಯಿಸಿದ್ದರು. ಈಗಿನ ಬಹುತೇಕ ಯುವಕ ಯುವತಿಯರು ಹೀಗೇ ಮಾಡುತ್ತಿದ್ದಾರೆ. ತಂದೆ ತಾಯಿಯರ ಬದಲಾಗಿ ತಾವೇ ಮದುವೆಯ ಎಲ್ಲಾ ಖರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬ್ಯಾಂಕುಗಳೂ ಮದುವೆಗೆ ಅಂತಲೇ ಸಾಲ ಕೊಡೋಕೆ ಶುರುಮಾಡಿವೆ. ಮದುವೆ ಸಾಲದ ಪ್ರಮಾಣ ಕೂಡಾ ಶೇ. 44ರಷ್ಟು ಜಾಸ್ತಿ ಇದೆ.

ಭಾರತದಲ್ಲಿ ಮದುವೆ ಅಂದರೆ ಅದೊಂದು ದೊಡ್ಡ ಖರ್ಚಿನ ಸಮಾರಂಭ. ಅದೆಷ್ಟೋ ಜನ ಮಕ್ಕಳ ಮದುವೆ ಸಾಲವನ್ನ ಮೊಮ್ಮಕ್ಕಳಾದ್ಮೇಲೂ ತೀರಿಸ್ತಾನೇ ಇರ್ತಾರೆ. ಆದರೆ ಈಗಿನ ಅನೇಕ ಪೋಷಕರಿಗೆ ಈ ತಲೆನೋವು ಇಲ್ಲ. ದುಡಿಯೋ ಯುವಕ ಯುವತಿಯರು ತಮ್ಮ ಮದುವೆ ಖರ್ಚನ್ನ ತಾವೇ ನೋಡಿಕೊಳ್ತಾರೆ. ಮದುವೆಗೆ ಅಂತಲೇ ಬ್ಯಾಂಕುಗಳಿಂದ ಲೋನ್ ಪಡೆದುಕೊಳ್ತಾರೆ. ಹೀಗೆ ಲೋನ್ ಪಡೆದು ಮದುವೆಯಾಗುವವರ ಸಂಖ್ಯೆ ಈ ವರ್ಷ ಅತೀ ಹೆಚ್ಚಿದೆ.

ಮದುವೆ ಅಂದ್ರೆ ಮನೆಯವರಿಗೆಲ್ಲಾ ಖುಷಿ, ಸಂತಸದ ವಿಚಾರ. ಅದೆಷ್ಟೇ ಸಿಂಪಲ್ ಮದ್ವೆ ಎಂದು ಮಾಡಿದರೂ ನಮ್ಮ  ದೇಶದಲ್ಲಿ ಕೆಲವು ಲಕ್ಷಗಳಾದರೂ ಖರ್ಚಾಗುತ್ತದೆ. ಅಪ್ಪ-ಅಮ್ಮನೇ ಎಲ್ಲ ಖರ್ಚುಗಳನ್ನೂ ನೋಡಿಕೊಂಡು ಸಾಲ ಮಾಡಿ ಮಕ್ಕಳ ಮದುವೆಯನ್ನು ಮಾಡುತ್ತಾರೆ. ಆದರೆ, ಈಗಿನ ಮಕ್ಕಳು ಸ್ವಲ್ಪ ಡಿಫರೆಂಟ್. ಅಪ್ಪ ಅಮ್ಮ ವಿದ್ಯಾಭ್ಯಾಸ ಕೊಡಿಸಿರುತ್ತಾರೆ. ಅದರ ಆಧಾರದ ಮೇಲೆ ಕೈತುಂಬಾ ಸಂಬಳ ಕೊಡೋ ಕೆಲಸ ಮಾಡ್ತಿರ್ತಾರೆ. ಹೀಗಿದ್ದ ಮೇಲೆ ನಮ್ಮ ಮದುವೆ ಖರ್ಚನ್ನು ನಾವೇ ನೋಡಿಕೊಳ್ಳುವುದು ಸರಿ ಎನ್ನುವ ಆಲೋಚನೆ ಇವರದ್ದು. ಹಾಗಾಗಿ ಮದುವೆಗೆ ಅಂತ ಒಂದಷ್ಟು ಸೇವಿಂಗ್ಸ್ ಮಾಡೋದರ ಜೊತೆಗೆ ಬ್ಯಾಂಕುಗಳಲ್ಲಿ ಮದುವೆಗೆ ಅಂತ ಸಾಲ ತೆಗೆದುಕೊಳ್ಳುತ್ತಿದ್ದಾರೆ.

ಯುವಕರು ತಮ್ಮ ಮದುವೆಯ ಖರ್ಚಿನ ಬಹುಪಾಲು ತಾವು ನೋಡಿಕೊಳ್ತಿದ್ದರು. ಇತ್ತೀಚೆಗೆ ಯುವತಿಯರು ಕೂಡಾ ಸರಿಸಮನಾಗಿ ತಮ್ಮ ಮದುವೆ ಖರ್ಚಿನ ವ್ಯಚ್ಛ ಭರಿಸುತ್ತಿದ್ದಾರೆ. ಒಡವೆ, ಬ್ಯೂಟಿಶಿಯನ್, ಬುಟೀಕ್ ಹೀಗೆ ಅಪ್ಪ ಅಮ್ಮನಿಗೆ ಹೊರೆಯಾಗದಂತೆ ತಮ್ಮೆಲ್ಲಾ ಖರ್ಚುಗಳಿಗೆ ಅವರೂ ಬ್ಯಾಂಕುಗಳ ಮದುವೆ ಸಾಲವನ್ನ ಬಳಸಿಕೊಳ್ತಿದ್ದಾರೆ.

ಇದನ್ನೂ ಓದಿ: ಆನ್​ಲೈನ್​ ಶಾಪಿಂಗ್ ಮಾಡುವ ಮುನ್ನ ಎಚ್ಚರ!; ನೇಲ್ ಪಾಲಿಶ್​ ಖರೀದಿಸಿ ರೂ. 92,446 ಕಳೆದುಕೊಂಡ ಯುವತಿ

ಆರ್ಥಿಕ ಹಿಂಜರಿತದಿಂದಾಗಿ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಒಟ್ಟಾರೆ ಪರ್ಸನಲ್ ಲೋನ್​ಗಳಲ್ಲಿ ಮದುವೆ ಸಾಲಗಳದ್ದೇ ಸಿಂಹಪಾಲು. ವೈಯಕ್ತಿಕ ಸಾಲ ಪಡೆಯುವವರಲ್ಲಿ ಶೇಕಡಾ 44ರಷ್ಟು ಜನ ಮದುವೆ ಸಾಲ ಕೇಳಿಕೊಂಡು ಬರುತ್ತಾರಂತೆ. ಉಳಿದ ಪರ್ಸನಲ್ ಲೋನ್​ಗಳಿಗೆ 18% ಬಡ್ಡಿ ಇದ್ದರೆ ಮದುವೆ ಸಾಲಗಳಿಗೆ 12ರಿಂದ 13% ಮಾತ್ರ ಬಡ್ಡಿ ಇರುತ್ತದೆ. ಅವರವರ ಸಂಬಳದ ಆಧಾರದ ಮೇಲೆ 3ರಿಂದ 5 ಲಕ್ಷ ರೂಪಾಯಿ ಸಾಲ ಕೊಡುತ್ತವೆ ಬ್ಯಾಂಕುಗಳು.

ಕೆಲವು ಬ್ಯಾಂಕುಗಳಂತೂ ಆಸ್ತಿಪತ್ರಗಳನ್ನು ಅಡವಿಟ್ಟುಕೊಂಡು ಕೂಡಾ ಮದುವೆ ಸಾಲಗಳನ್ನು ನೀಡುತ್ತವೆ. ಬ್ಯಾಂಕಿನಿಂದ ಸಾಲ ಪಡೆದಿರುವಾಗ ಖರ್ಚು ಮದುವೆಗೇ ಆದ್ರೂ ಜನ ಯೋಚಿಸಿ ಸೂಕ್ತವಾಗಿ ಬಳಕೆ ಮಾಡ್ತಾರೆ ಅಂತಾರೆ ಎಸ್ ಬಿ ಐ ನ ನಿವೃತ್ತ ನಿರ್ದೇಶಕ ಲಕ್ಷ್ಮೀಶ. ಒಟ್ಟಿನಲ್ಲಿ ಸ್ವತಂತ್ರವಾಗಿ ಆಲೋಚಿಸೋ ಈ ಪೀಳಿಗೆ ಪೋಷಕರ ಮೇಲೆ ಹೊರೆ ಹೊರೆಸದೇ ಇರೋದು ಉತ್ತಮ ವಿಚಾರ. ಬ್ಯಾಂಕುಗಳೂ ಜನರ ಅಗತ್ಯತೆಗೆ ತಕ್ಕಂತೆ ಸಾಲದ ಕಾರ್ಯಕ್ರಮಗಳಲ್ಲಿ ಮಾಡಿರೋ ಬದಲಾವಣೆಗಳು ಅನೇಕರಿಗೆ ಪ್ರಯೋಜನಕ್ಕೆ ಬಂದಿದೆ. ತಮ್ಮ ಮದುವೆ, ಬದುಕು ಸಂಪೂರ್ಣವಾಗಿ ತಮ್ಮದೇ ಜವಾಬ್ದಾರಿ ಅನ್ನೋ ಯುವಜನತೆಯ ಆಲೋಚನೆ ಮೆಚ್ಚುವಂಥದ್ದು.ಇದನ್ನೂ ಓದಿ: ಕೊರನಾ ವೈರಸ್ ಎಫೆಕ್ಟ್; ಚೀನಾದಲ್ಲಿ ಮಾಸ್ಕ್ ಧರಿಸಿ ಓಡಾಡುತ್ತಿವೆ ಬೆಕ್ಕುಗಳು!
First published:February 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading