Debit Card: ಎಟಿಎಂನಲ್ಲಿ ಹಣ ಡ್ರಾ ಮಾಡಲು ಡೆಬಿಟ್​ ಕಾರ್ಡ್​ ಇರಲೇಬೇಕು ಅಂತೇನಿಲ್ಲ; ಯುಪಿಐ ಆ್ಯಪ್ ಇದ್ರೆ​ ಸಾಕು!

ಐಸಿಸಿಡಬ್ಲ್ಯೂ ಆಧಾರಿತ ಈ ವಿಶೇಷ ಎಟಿಎಂಗಳನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್‌ಸಿಆರ್ ಕಾರ್ಪೊರೇಶನ್‌ನೊಂದಿಗೆ ಕೈಜೋಡಿಸಿದೆ. ಡಿಎನ್‌ಎ ಇಂಡಿಯಾ ಪತ್ರಿಕೆಯ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಸುಮಾರು 1500 ಕ್ಕೂ ಹೆಚ್ಚು ಎಟಿಎಂಗಳನ್ನು ನವೀಕರಿಸಲಾಗಿದೆ. ಜೊತೆಗೆ ಹೆಚ್ಚಿನ ಎಟಿಎಂಗಳನ್ನು ಅಪ್‌ಗ್ರೇಡ್ ಮಾಡುವ ಕಾರ್ಯವು ಪ್ರಗತಿಯಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಟಿಎಂನಿಂದ ಹಣವನ್ನು ಡ್ರಾ ಮಾಡಬೇಕು ಅಂದ್ರೆ ಡೆಬಿಟ್​ ಕಾರ್ಡ್​ ಇರಲೇಬೇಕು. ಆದರೆ ಒಂದು ವೇಳೆ ನೀವೇನಾದರೂ ಡೆಬಿಡ್​ ಕಾರ್ಡ್​ ಮರೆತು ಬಂದಿದ್ದರೆ ಯೋಚನೆ ಮಾಡಬೇಡಿ. ನಿಮ್ಮ ಮೊಬೈಲ್​ನಲ್ಲಿ ಗೂಗಲ್​ ಪೇ, ಪೇಟಿಎಂನಂತಹ ಅಪ್ಲಿಕೇಷನ್​ ಇದ್ದರೆ ಸಾಕು ಎಟಿಎಂನಿಂದ ಹಣವನ್ನು ಪಡೆಯಬಹುದು. ಯುಪಿಐ ಆ್ಯಪ್‌​ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಗೂಗಲ್ ಪೇ ಮತ್ತು ಪೇಟಿಎಂನಂತಹ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಅಮೌಂಟ್​ ಡ್ರಾ ಮಾಡಬಹುದು.

ಈ ಕಾರಣಕ್ಕಾಗಿ ಎಟಿಎಂ ಕಂಪನಿಯಾಗಿರುವ ಎನ್‌ಸಿಆರ್ ಕಾರ್ಪೊರೇಷನ್ ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಇಂಟರಾಪೆರಬಲ್ ಕಾರ್ಡ್​ಲೆಸ್​ ಕ್ಯಾಶ್​ ವಿಥ್ ಡ್ರಾ (ICCW) ಬಿಡುಗಡೆ ಮಾಡಿದೆ. ಇನ್ಮುಂದೆ ಡೆಬಿಟ್​ ಕಾರ್ಡ್​ ಮರೆತುಬಿಟ್ರು ಚಿಂತೆಯಿಲ್ಲ. ನಿಮ್ಮ ಮೊಬೈಲ್​ನಲ್ಲಿರುವ ಈ ಆ್ಯಪ್‌​ಗಳನ್ನು ಬಳಸಿ ನೀವು ಹಣ ಡ್ರಾ ಮಾಡಬಹುದು. ಈ ಹೊಸ ಬೆಳವಣಿಗೆಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವಿವರಗಳು ಇಲ್ಲಿವೆ.

ಎಟಿಎಂಗಳನ್ನು ನವೀಕರಿಸಲಾಗುತ್ತಿದೆ

ಐಸಿಸಿಡಬ್ಲ್ಯೂ ಆಧಾರಿತ ಈ ವಿಶೇಷ ಎಟಿಎಂಗಳನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್‌ಸಿಆರ್ ಕಾರ್ಪೊರೇಶನ್‌ನೊಂದಿಗೆ ಕೈಜೋಡಿಸಿದೆ. ಡಿಎನ್‌ಎ ಇಂಡಿಯಾ ಪತ್ರಿಕೆಯ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಸುಮಾರು 1500 ಕ್ಕೂ ಹೆಚ್ಚು ಎಟಿಎಂಗಳನ್ನು ನವೀಕರಿಸಲಾಗಿದೆ. ಜೊತೆಗೆ ಹೆಚ್ಚಿನ ಎಟಿಎಂಗಳನ್ನು ಅಪ್‌ಗ್ರೇಡ್ ಮಾಡುವ ಕಾರ್ಯವು ಪ್ರಗತಿಯಲ್ಲಿದೆ.

Malaika Arora: ಕೊರೋನಾ ಲಸಿಕೆ ಪಡೆದ ನಟಿ ಮಲೈಕಾ ಅರೋರಾ ಜನತೆಗೆ ನೀಡಿದ ಸಂದೇಶ ಏನು ಗೊತ್ತಾ?

ಯುಪಿಐ ಅಪ್ಲಿಕೇಶನ್ ಬಳಸಿ ಎಟಿಎಂನಿಂದ ಹಣವನ್ನು ಡ್ರಾ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Google Pay, BHIM, Paytm, PhonePe, Amazon ನಂತಹ ಯುಪಿಐ ಅಪ್ಲಿಕೇಷನ್​ಗಳನ್ನು ಓಪನ್‌ ಮಾಡಿ. ಒಂದು ವೇಳೆ ಆ್ಯಪ್‌​ ಇಲ್ಲದಿದ್ದರೆ, ಪ್ಲೇ ಸ್ಟೋರ್​ನಲ್ಲಿ ಡೌನ್​ಲೋಡ್​ ಮಾಡಿಕೊಳ್ಳಿ.

ಹಂತ 2: ಯುಪಿಐ ಅಪ್ಲಿಕೇಶನ್ ತೆರೆದ ನಂತರ, ನೀವು ಎಟಿಎಂ ಸ್ಕ್ರೀನ್​ ಮೇಲೆ ಕಾಣಿಸುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.

ಹಂತ 3: ಬಳಿಕ ನೀವು ಡ್ರಾ ಮಾಡಲು ಇಚ್ಚಿಸುವ ಮೊತ್ತವನ್ನು ನಮೂದಿಸಬೇಕು. ನಂತರ proceed button ಎನ್ನುವ ಬಟನ್ ಅನ್ನು ಪ್ರೆಸ್ ಮಾಡಬೇಕು. ಸದ್ಯ ಈ ಯುಪಿಐ ಆ್ಯಪ್‌ ಬಳಸಿಕೊಂಡು ನೀವು ಒಂದು ಸಮಯದಲ್ಲಿ 5,000 ರೂ. ಗಳನ್ನು ಮಾತ್ರ ಡ್ರಾ ಮಾಡಬಹುದು.

ಹಂತ 4: proceed button ಪ್ರೆಸ್​ ಮಾಡಿದ ನಂತರ, ನೀವು 4 ಅಥವಾ 6 ಅಂಕಿಯ ಯುಪಿಐ ಪಿನ್ ನಮೂದಿಸಬೇಕು.

ಹಂತ 5: ಹೀಗೆ ಮಾಡಿದರೆ ಕಾರ್ಡ್ ಇಲ್ಲದೇ ನೀವು ಎಟಿಎಂನಿಂದ ಹಣವನ್ನು ಡ್ರಾ ಮಾಡಬಹುದು

ಯುಪಿಐ ಮತ್ತು ಅದರ ಕಾರ್ಯವೈಖರಿ

ಯುಪಿಐ(Unified Payments Interface) ಇದು ತಕ್ಷಣವೇ ಹಣವನ್ನು ಪಾವತಿಸುವ ವ್ಯವಸ್ಥೆಯಾಗಿದೆ. ನಿಮ್ಮ ಮೊಬೈಲ್ ಅಪ್ಲಿಕೇಶನ್ ಬಳಸಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣವನ್ನು ತಕ್ಷಣವೇ ವರ್ಗಾಯಿಸಬಹುದು. ಈ ಸೇವೆಯನ್ನು ಬಳಸಲು, ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಯುಪಿಐ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಬೇಕು. ಅಲ್ಲದೇ, ಯುಪಿಐ ಆ್ಯಪ್ ಮೂಲಕ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಬ್ಯಾಂಕ್​ ಅಕೌಂಟ್​ ಲಿಂಕ್ ಮಾಡಬಹುದು.
Published by:Latha CG
First published: