Gold Loan: ಗೋಲ್ಡ್ ಲೋನ್ ಮರುಪಾವತಿಸಲು RBI ಹೊಸ ರೂಲ್ಸ್

ಗೋಲ್ಡ್ ಲೋನ್‌ಗಳ ಮರುಪಾವತಿಯನ್ನು ಈ ಹಿಂದೆ ರೂಪಾಯಿಗಳಲ್ಲಿ ನಡೆಸಲಾಗುತ್ತಿತ್ತು

ಗೋಲ್ಡ್ ಬಿಸ್ಕತ್

ಗೋಲ್ಡ್ ಬಿಸ್ಕತ್

  • Share this:

ಆಭರಣ ರಫ್ತುದಾರರು ಮತ್ತು ಆಭರಣ ತಯಾರಿಸುವವರು ಗೋಲ್ಡ್ ಲೋನ್‌ಗಳನ್ನು ಚಿನ್ನದ ಆಭರಣಗಳು, ನಾಣ್ಯಗಳು ಇಲ್ಲವೇ ಬಿಸ್ಕತ್ತುಗಳ ಮೂಲಕ ಮರುಪಾವತಿಬಹುದಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಬ್ಯಾಂಕ್‌ಗಳು ಕೂಡ ಈ ರೀತಿಯ ಸಾಲ ಮರುಪಾವತಿಗೆ ಅವಕಾಶ ನೀಡಬೇಕೆಂದು ಆದೇಶಿಸಿದೆ. ಪ್ರಸ್ತುತವಿರುವ ನಿಯಮಗಳಿಗೆ ಅನುಸಾರವಾಗಿ ಚಿನ್ನದ ಆಮದಿನ ಅಧಿಕಾರ ಹೊಂದಿರುವ ಬ್ಯಾಂಕ್‌ಗಳು, ಚಿನ್ನದ ಹಣಗಳಿಕೆ ಯೋಜನೆ 2015 (GMS) ಭಾಗವಹಿಸುವ ನಿಗದಿಪಡಿಸಿದ ಬ್ಯಾಂಕ್‌ಗಳು ಜಿಎಮ್‌ಎಲ್ ಅನ್ನು ಆಭರಣ ರಫ್ತುದಾರರು ಮತ್ತು ಚಿನ್ನದ ಆಭರಣ ತಯಾರಿಸುವವರಿಗೆ ವಿಸ್ತರಿಸಬಹುದು.


ಗೋಲ್ಡ್ ಲೋನ್‌ಗಳ ಮರುಪಾವತಿಯನ್ನು ಈ ಹಿಂದೆ ರೂಪಾಯಿಗಳಲ್ಲಿ ನಡೆಸಲಾಗುತ್ತಿತ್ತು. ಆದರೆ ಈಗ ಆರ್‌ಬಿಐ ಸೂಚನೆ ಪ್ರಕಾರ ಬ್ಯಾಂಕ್‌ಗಳು ಚಿನ್ನದ ಆಭರಣ, ನಾಣ್ಯಗಳ ರೂಪದಲ್ಲಿ ಸಾಲ ಮರುಪಾವತಿ ಆಯ್ಕೆಗಳನ್ನು ಒದಗಿಸಬೇಕು ಎಂದು ತಿಳಿಸಿದೆ. ಬ್ಯಾಂಕ್‌ಗಳು ಸಾಲಗಾರರಿಗೆ ಲೋನ್‌ನ ಭಾಗವನ್ನು ಮರುಪಾವತಿಸಲು ಒಂದು ಕೆಜಿ ಚಿನ್ನ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನವನ್ನು ನೀಡುವ ಆಯ್ಕೆಯನ್ನು ಒದಗಿಸಲಿದೆ ಎಂದು ಆರ್‌ಬಿಐ ತಿಳಿಸಿದೆ.


ಇದನ್ನೂ ಓದಿ:Weekend Curfew: ರಾಜ್ಯಾದ್ಯಂತ ಇಂದು-ನಾಳೆ ವೀಕೆಂಡ್ ಕರ್ಫ್ಯೂ; ಮೈಸೂರಿನಲ್ಲಿ ಕೊನೆಗೂ ಅನ್​ಲಾಕ್​ ಶುರು

ಈ ಮರುಪಾವತಿಯನ್ನು ಸ್ಥಳೀಯ ಮೂಲದ ಭಾರತೀಯ ಡೆಲಿವರಿ ಮಾನದಂಡಗಳಿಗೆ ಅನುಗುಣವಾಗಿರುವ ಚಿನ್ನದ ವಸ್ತುಗಳನ್ನು ಬ್ಯಾಂಕ್‌ಗೆ ನೀಡಬೇಕು. ಚಿನ್ನದ ವಿತರಣೆಯನ್ನು ಬ್ಯಾಂಕಿಗೆ ನೇರವಾಗಿ ರಿಫೈನರ್ ಅಥವಾ ಕೇಂದ್ರ ಸಂಸ್ಥೆ ಸಾಲಗಾರನ ಪರವಾಗಿ ಮಾಡಬೇಕಾಗುತ್ತದೆ. ಸಾಲಗಾರನು ಬ್ಯಾಂಕುಗಳಿಗೆ ಬರುವ ಈ ಮರುಪಾವತಿಯ ಭಾಗವಾಗಿರಲು ಸಾಧ್ಯವಿಲ್ಲ. ಜಿಎಂಎಲ್ ಮರುಪಾವತಿ ಸ್ವೀಕಾರಾರ್ಹ ಮಾನದಂಡಗಳು ಹಾಗೂ ಚಿನ್ನದ ವಿತರಣಾ ವಿಧಾನಗಳ ವಿವರಗಳನ್ನು ಸಹ ಒಳಗೊಂಡಿರಬೇಕು.


ಜಿಎಂಎಲ್ ಅನ್ನು ನಿಯಂತ್ರಿಸುವ ಮಂಡಳಿ-ಅನುಮೋದಿತ ನೀತಿಯಲ್ಲಿನ ಎಲ್ಲಾ ಅಂಶಗಳನ್ನು ಸೂಕ್ತವಾಗಿ ಸಂಯೋಜಿಸುವಂತೆ ರಿಸರ್ವ್ ಬ್ಯಾಂಕ್ ಉಳಿದ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಬ್ಯಾಂಕುಗಳು ಸಂಬಂಧಿತ ಅಪಾಯ ನಿರ್ವಹಣಾ ಕ್ರಮಗಳನ್ನು ಸಹ ಒಳಗೊಂಡಿರಬೇಕು.


ಬ್ಯಾಂಕ್‌ಗಳು ಜಿಎಮ್‌ಎಲ್‌ನಲ್ಲಿ ಸಾಲ ನೀಡುವ ಫಂಡ್‌ಗಳ ಅಂತಿಮ ಬಳಕೆಯ ಮೇಲ್ವಿಚಾರಣೆಯನ್ನು ಮುಂದುವರಿಸಲಿದೆ ಎಂದು ಆರ್‌ಬಿಐ ತಿಳಿಸಿದೆ. ದೇಶದಲ್ಲಿರುವ ಮನೆ ಮತ್ತು ಸಂಸ್ಥೆಗಳಲ್ಲಿರುವ ಹಳದಿ ಲೋಹವನ್ನು ನಿಯೋಜಿಸಲು 2015 ರಲ್ಲಿ ಸರಕಾರವು ಚಿನ್ನದ ಹಣಗಳಿಸುವ ಯೋಜನೆಯನ್ನು ಪ್ರಾರಂಭಿಸಿತು. ಇದರಿಂದ ಚಿನ್ನದ ಆಮದಿನ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಈ ಯೋಜನೆಯ ಹಿಂದಿರುವ ಉದ್ದೇಶವಾಗಿದೆ.


ಇದನ್ನೂ ಓದಿ:Delhi-Goa Rajdhani Express: ಸುರಂಗದೊಳಗೆ ಹಳಿ ತಪ್ಪಿದ ರಾಜಧಾನಿ ಎಕ್ಸ್​ಪ್ರೆಸ್​; ಅದೃಷ್ಟವಶಾತ್ ಪ್ರಯಾಣಿಕರು ಸೇಫ್

ಮನೆಗಳು, ಸಂಸ್ಥೆಗಳು ಮತ್ತು ಟ್ರಸ್ಟ್‌ಗಳಲ್ಲಿರುವ ಚಿನ್ನವನ್ನು ನಿಯೋಜಿಸಲು ಈ ಯೋಜನೆ ಸಹಾಯ ಮಾಡುತ್ತದೆ. ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ನಿಯೋಜನೆಯು ಭಾರತದ ರಫ್ತು ಮತ್ತು ಆಭರಣ ಕ್ಷೇತ್ರಕ್ಕೆ ಮತ್ತಷ್ಟು ಪ್ರಯೋಜನವನ್ನು ಒದಗಿಸುತ್ತದೆ. ಇದು ಭಾರತದ ರಫ್ತಿಗೆ ಪ್ರಮುಖ ಕೊಡುಗೆಯನ್ನು ನೀಡಿದೆ. ನಿಮ್ಮ ಮನೆ ಅಥವಾ ಸಂಸ್ಥೆಯ ಲಾಕರ್‌ನಲ್ಲಿರುವ ಚಿನ್ನದಿಂದ ನಿಮಗೇನೂ ಲಾಭವಿಲ್ಲ. ನೀವು ಚಿನ್ನವನ್ನು ಲಾಕರ್‌ನಲ್ಲಿಟ್ಟರೆ ಕೂಡ ಬ್ಯಾಂಕ್ ಲಾಕರ್ ಶುಲ್ಕವನ್ನು ನೀವೇ ಕಟ್ಟಬೇಕು. ಚಿನ್ನದ ಹಣಗಳಿಸುವ ಯೋಜನೆಯ ಮೂಲಕ ನಿಮ್ಮ ಚಿನ್ನದ ಠೇವಣಿಗಳ ಮೇಲೆ ಬಡ್ಡಿಗಳಿಸಲು ಸಹಾಯ ಮಾಡುತ್ತದೆ ಇದರಿಂದ ನಿಮ್ಮ ಉಳಿತಾಯ ವೃದ್ಧಿಯಾಗುತ್ತದೆ.




​​ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

Published by:Latha CG
First published: