ಇನ್ಮೇಲೆ ಆನ್​​ಲೈನ್​​ನಲ್ಲಿ ಸಿಗ್ತಾರೆ ಕೂಲಿಗಳು; ಸದ್ಯದಲ್ಲೇ ಹೊಸ ಆ್ಯಪ್​ ಬಿಡುಗಡೆ

ಕಂಪ್ಯೂಟರ್​ ಇಂಜಿನಿಯರ್​ ವಿದ್ಯಾರ್ಥಿಗಳು ಪ್ರತಿ ರೈಲ್ವೆ ಸ್ಟೇಶನ್​ನಲ್ಲಿರುವ ಕೂಲಿಗಳ ಬಗೆಗೆ ಮಾಹಿತಿ ನೀಡು ಆ್ಯಪ್​ ಡೆವಲಪ್​ ಮಾಡಿದ್ದಾರೆ. ಈ ಮೂಲಕ ಪ್ರಯಾಣಿಕರು ತಮ್ಮ ಸ್ಮಾರ್ಟ್​ಫೋನ್​ ಮೂಲಕ ಕೂಲಿಗಳನ್ನು ಬುಕ್​ ಮಾಡಬಹುದಾಗಿದೆ.

news18
Updated:August 4, 2019, 3:09 PM IST
ಇನ್ಮೇಲೆ ಆನ್​​ಲೈನ್​​ನಲ್ಲಿ ಸಿಗ್ತಾರೆ ಕೂಲಿಗಳು; ಸದ್ಯದಲ್ಲೇ ಹೊಸ ಆ್ಯಪ್​ ಬಿಡುಗಡೆ
.
  • News18
  • Last Updated: August 4, 2019, 3:09 PM IST
  • Share this:
ಸ್ಮಾರ್ಟ್​ಯುಗದಲ್ಲಿರುವ ಜನರು ಎಲ್ಲವನ್ನು ಸ್ಮಾರ್ಟ್​ ಆಗಿಯೇ ಚಿಂತನೆ ಮಾಡುತ್ತಾರೆ. ಸ್ಮಾರ್ಟ್​ಫೋನ್​ವೊಂದಿದ್ದರೆ ಸಾಕು ಕುಳಿತಲ್ಲಿಂದಲೇ ಎಲ್ಲಾ ಕೆಲಸವನ್ನು ಮುಗಿಸಿಕೊಳ್ಳುತ್ತಾರೆ. ದಿನಸಿ ಸಾಮಾಗ್ರಿಗಳಿಂದ ಹಿಡಿದು, ಆಹಾರ, ಟ್ಯಾಕ್ಸಿ, ಬಸ್ಸ್​ ಹೀಗೆ ಪ್ರತಿಯೊಂದನ್ನು ಆನ್​ಲೈನ್​ನಲ್ಲೆ ಬುಕ್​ ಮಾಡಿಕೊಳ್ಳಬಹುದಾಗಿದೆ. ಇದರಿಂದ ಜನರ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತಿದೆ. ಎಲ್ಲವನ್ನು ಸ್ಮಾರ್ಟ್​ಫೋನ್​ಗಳ ಮೂಲಕ ಬುಕ್​ ಮಾಡುತ್ತಿರುವ ಜನರು ,ಇದೀಗ ರೈಲ್ವೆ ಸ್ಟೇಷನ್​ನಲ್ಲಿ ಲಗೇಜ್​ ಹೊರುವ ಕೂಲಿಗಳನ್ನು ಬುಕ್​ ಮಾಡಬಹುದಾಗಿದೆ. ಅದಕ್ಕಾಗಿ ಆ್ಯಪ್​ ಕೂಡ ಪ್ರಾರಂಭವಾಗಿದೆ.

ಹೌದು. ಕಂಪ್ಯೂಟರ್​ ಇಂಜಿನಿಯರ್​ ವಿದ್ಯಾರ್ಥಿಗಳು ಪ್ರತಿ ರೈಲ್ವೆ ಸ್ಟೇಷನ್​ನಲ್ಲಿರುವ ಕೂಲಿಗಳ ಬಗೆಗೆ ಮಾಹಿತಿ ನೀಡುವ ಆ್ಯಪ್​ ಡೆವಲಪ್​ ಮಾಡಿದ್ದಾರೆ. ಈ ಮೂಲಕ ಪ್ರಯಾಣಿಕರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಕೂಲಿಗಳನ್ನು ಬುಕ್​ ಮಾಡಬಹುದಾಗಿದೆ.

ಇದನ್ನೂ ಓದಿ: Children’s Day: ಗೂಗಲ್​ನಿಂದ ಮಕ್ಕಳಿಗೆ 5 ಲಕ್ಷ ಗೆಲ್ಲುವ ಅವಕಾಶ

ಆನ್​ಲೈನ್​ ಕೂಲಿಗಳಿಗಾಗಿ ತಯಾರಿಸಲಾದ ಈ ಅಪ್ಲಿಕೇಷನ್​ ವಯಸ್ಸಾದವರಿಗೆ ಮತ್ತು ಮಹಿಳೆಯರಿಗೆ ಪ್ರಯೋಜನಕಾರಿಯಾಗಲಿದೆ. ಅದಕ್ಕಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ಆ್ಯಪ್​ ಅನ್ನು ವಿನ್ಯಾಸಗೊಳಿಸಲಾಗಿದ್ದು, ರೈಲ್ವೆ ಅಧಿಕಾರಿಗಳಿಂದ ಅನುಮತಿ ದೊರೆತರೆ ಆ್ಯಪ್​​​ ಅನ್ನು ಬಿಡುಗಡೆಗೊಳಿಸಲಿದೆಯಂತೆ.
First published:August 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...