ಚಿನ್ನದ ಹೇರ್​ ಡ್ರೈಯರ್ ಕೂಡ ಬಂತು: ಬೆಲೆ ಎಷ್ಟು ಗೊತ್ತಾ?

news18
Updated:September 27, 2018, 7:11 PM IST
ಚಿನ್ನದ ಹೇರ್​ ಡ್ರೈಯರ್ ಕೂಡ ಬಂತು: ಬೆಲೆ ಎಷ್ಟು ಗೊತ್ತಾ?
@Dyson Supersonic
  • Advertorial
  • Last Updated: September 27, 2018, 7:11 PM IST
  • Share this:
-ನ್ಯೂಸ್ 18 ಕನ್ನಡ

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಒಂದು ಹೇರ್ ಡ್ರೈಯರ್ ಬೆಲೆ ಎಷ್ಟಿರಬಹುದು? ಸಾವಿರ, ಎರಡು ಸಾವಿರ...ಅಬ್ಬಬ್ಬಾ ಎಂದರೆ ಒಂದೈದಾರು ಸಾವಿರ ರೂ. ಆದರೆ ಇಲ್ಲೊಂದು ಹೊಸ ಹೇರ್ ಡ್ರೈಯರ್ ಬಿಡುಗಡೆಯಾಗಿದೆ. ಅದರ ಬೆಲೆ ಬರೋಬ್ಬರಿ 37,900 ಅಂದರೆ ನಂಬುತ್ತೀರಾ? ಹೌದು, ಡೈಸನ್ ಸೂಪರ್​​ಸೋನಿಕ್ ಕಂಪನಿ ತಯಾರಿಸಿರುವ ಈ ಹೇರ್ ಡ್ರೈಯರ್​ನ ವಿಶೇಷತೆ ಎಂದರೆ ಇದನ್ನು  ಚಿನ್ನದಿಂದ ನಿರ್ಮಿಸಲಾಗಿದೆ.

@Dyson Supersonic


ಜೇಮ್ಸ್ ಡೈಸನ್ ವಿನ್ಯಾಸಗೊಳಿಸಿರುವ ಈ ಹೇರ್ ಡ್ರೈಯರ್​ನ್ನು 23.75 ಕ್ಯಾರೆಟ್ ಚಿನ್ನವನ್ನು ಬಳಸಿ ತಯಾರಿಸಲಾಗಿದೆ. ಹೊಸ ಆಕರ್ಷಣೆಗೆ ಕಾರಣವಾಗಿರುವ ಈ ಹೇರ್ ಡ್ರೈಯರ್ ಈಗಾಗಲೇ ಡೈಸನ್ ಆನ್​ಲೈನ್​ ಶಾಪಿಂಗ್​ನಲ್ಲಿ ಲಭ್ಯವಿದೆ.

@Dyson Supersonic


'ಚಿನ್ನ ಎಂಬುದು ವಿಶ್ವದ ಅತ್ಯಂತ ದುಬಾರಿ ವಸ್ತುಗಳಲ್ಲಿ ಒಂದು. ಶತಮಾನಗಳಿಂದ ಶಿಲ್ಪ, ಹಲವು ವಿನ್ಯಾಸಗಳಿಗೆ ಚಿನ್ನವನ್ನು ಬಳಸಲಾಗುತ್ತದೆ. ಇದರ ಬಣ್ಣದಿಂದಲೇ ಹೆಚ್ಚಿನವರು  ಆಕರ್ಷಿಸಲ್ಪಡುತ್ತಾರೆ. ಇದೀಗ ನಾವು ಕೂಡ ಚಿನ್ನದಿಂದ ವಸ್ತುವನ್ನು ವಿನ್ಯಾಸಗೊಳಿಸಿರುವುದು ಹೆಮ್ಮೆ ಅನಿಸುತ್ತದೆ. ಇದನ್ನು ವಿನ್ಯಾಸಗೊಳಿಸಲು ನಾವು ಮಾಡಿದ ಶ್ರಮ ಸಾರ್ಥಕವಾಗಿದೆ' ಎಂದು ಗೋಲ್ಡನ್ ಹೇರ್​ ಡ್ರೈಯರ್ ವಿನ್ಯಾಸಗೊಳಿಸಿದ ಜೇಮ್ಸ್ ಸಂತೋಷ ವ್ಯಕ್ತಪಡಿಸಿದ್ದಾರೆ.

@Dyson Supersonic

Loading...

ಸದ್ಯ ಮಾರುಕಟ್ಟೆಯಲ್ಲಿ ಅತ್ಯಕರ್ಷಣೀಯ ನೀಲಿ ಬಣ್ಣದಲ್ಲಿ ಈ ಹೇರ್​ ಡ್ರೈಯರ್ ಲಭ್ಯವಿದ್ದು, ಬೇಡಿಕೆಯನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ವಿನ್ಯಾಸಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಡೈಸನ್ ಸೂಪರ್​​ಸೋನಿಕ್ ಕಂಪನಿ ತಿಳಿಸಿದೆ.
First published:September 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...