ಪ್ರಾಣಿಗಳೇ (Animals) ಹಾಗೇ, ಕೆಲವೊಮ್ಮೆ ಆಟ-ತುಂಟಾಟದಿಂದ ಗಮನ ಸೆಳೆದರೆ, ಇನ್ನೊಮ್ಮೆ ತಮ್ಮ ಮುಗ್ಧತೆ, ಬುದ್ಧಿವಂತಿಕೆಯಿಂದ ಗಮನ ಸೆಳೆಯುತ್ತವೆ. ಆದರೆ ಕೆಲವೊಮ್ಮೆ ಇವುಗಳ ಆಟ-ತುಂಟಾಟ, ಕಾಟ ಒಂದು ರೀತಿಯ ಮುಜುಗರಕ್ಕೂ ಈಡು ಮಾಡುತ್ತವೆ. ಅದರಲ್ಲೂ ಮಾನವನ ಜೊತೆ ಬೇಗ ಸಲುಗೆ ಬೆಳೆಸಿಕೊಳ್ಳುವ ಮಂಗ, ಗೊರಿಲ್ಲಾದಂತಹ ಪ್ರಾಣಿಗಳು ಮಾಡುವ ತುಂಟಾಟ ಅಷ್ಟಿಷ್ಟಲ್ಲ. ಎಲ್ಲಾದರೂ ಇವುಗಳ ಸಂಖ್ಯೆ (Numbers) ಹೆಚ್ಚಿದ್ದಾಗ ಪ್ರವಾಸಿಗರ ತಿಂಡಿ ಕದಿಯೋದು, ಒಮ್ಮೆಲೆ ಬಂದು ನೆಗೆಯುವುದು, ಜಿಗಿಯುವುದನ್ನೆಲ್ಲಾ ಮಾಡಿ ಬಿಡುತ್ತವೆ. ಇಂತಹ ಸಾಕಷ್ಟು ದೃಶ್ಯಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ (Social Media) ಕಾಣಸಿಗುತ್ತವೆ. ಅರೆಕ್ಷಣದಲ್ಲಿ ನಮ್ಮ ಹೃದಯವನ್ನು ಗೆಲ್ಲುತ್ತವೆ. ಆದರೆ ಕೆಲ ಘಟನೆಗಳು ಒಮ್ಮೊಮ್ಮೆ ಮುಜುಗರ ಕೂಡ ಉಂಟು ಮಾಡಬಹುದು. ಹೀಗೆ ಇಲ್ಲೊಂದು ಒರಾಂಗುಟಾನ್ ಮೃಗಾಲಯಕ್ಕೆ ಬಂದ ಯುವತಿಗೆ ಮಾಡಿದ್ದನ್ನು ಕೇಳಿದರೆ, ಅಬ್ಬಾ ಎಂತಾ ಕಿಲಾಡಿ, ತುಂಟ ಪ್ರಾಣಿ ಇದು. ಎನ್ನದೇ ಇರಲಾರಿರಿ.
ಯುವತಿಗೆ ಒರಾಂಗುಟಾನ್ ಮಾಡಿದ್ದೇನು?
ಹೌದು, ಥಾಯ್ಲೆಂಡ್‌ನ ಮೃಗಾಲಯಕ್ಕೆ ಪನಿಸಾರಾ ರಿಕುಲ್ಸುರಕನ್ ಎಂಬ ಯುವತಿ ಭೇಟಿ ನೀಡಿದ್ದರು. ಅಲ್ಲಿನ ಎಲ್ಲಾ ಪ್ರಾಣಿ-ಪಕ್ಷಿಗಳನ್ನು ನೋಡಿ ನಂತರ ಒರಾಂಗುಟಾನ್ ಅನ್ನು ನೋಡಲು ಬಂದಿದ್ದಾಳೆ.
ಹೀಗೆ ಒರಾಂಗುಟಾನ್ ನೋಡಿ ಅದರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದಾಗ ಪನಿಸಾರಾ ರಿಕುಲ್ಸುರಕನ್‌ಗೆ ಈ ಗೊರಿಲ್ಲಾ ಮಾಡಿದ್ದೇ ಬೇರೆ. ಈ ವಿಡಿಯೋ ಈಗ ಸದ್ಯ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತುಂಟ ಒರಾಂಗುಟಾನ್ ಎಂದಿದ್ದಾರೆ.
ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿರುವ ಸಫಾರಿ ವರ್ಲ್ಡ್ ಮೃಗಾಲಯಕ್ಕೆ ಪನಿಸಾರಾ ರಿಕುಲ್ಸುರಕನ್ ಭೇಟಿ ನೀಡಿದ್ದಾಗ ನ್ಹಾಂಗ್ ಎಂಬ ಒರಾಂಗುಟಾನ್ ಪ್ರಾಣಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದಳು.
ಫೋಟೋ ತೆಗೆಯುವಾಗ ಒರಾಂಗುಟಾನ್ ಕೂಡ ಒಳ್ಳೆ ಪೋಸ್ ನೀಡಿತು. ಫೋಟೋಗೆ ಫೋಸ್ ನೀಡಿದ ನಂತರ ಮಾಡಿದ ತುಂಟಾಟ ಮಾತ್ರ ಬೇರೆಯದ್ದೇ ಆಗಿತ್ತು.
ಯುವತಿಯ ಎದೆಯನ್ನು ಸ್ಪರ್ಶಿಸಿದ ತುಂಟ ಪ್ರಾಣಿ
ಡೈಲಿ ಮೇಲ್ ವರದಿ ಪ್ರಕಾರ, ಪನಿಸಾರ ಕಪಿಯ ಮುಂದೆ ಬೆಂಚಿನ ಮೇಲೆ ಕುಳಿತಾಗ, ಅದು ತನ್ನ ಉದ್ದನೆಯ ತೋಳುಗಳಿಂದ ಅವಳನ್ನು ಬಳಸಿ ತಬ್ಬಿಕೊಂಡಿತು.
ಇದನ್ನೂ ಓದಿ: ಅಮ್ಮನಿಗೊಂದು ಥ್ಯಾಂಕ್ಸ್ ಹೇಳಲು ಈ ದಿನವೇ ವಿಶೇಷ! ನಿಮ್ಮ ತಾಯಿಗೆ ಲೈಫ್ ಲಾಂಗ್ ನೆನಪಿರುವಂತಹ ಗಿಫ್ಟ್ ಕೊಡಿ
ನಂತರ ಆಕೆ ಕೆನ್ನೆಗೆ ಮುತ್ತು ಸಹ ನೀಡಿತು. ಇದೆಲ್ಲಾ ಆದ ನಂತರ ನ್ಹಾಂಗ್ ಯುವತಿ ಎದೆ ಮೇಲೆ ಕೈ ಇಟ್ಟು ಸ್ತನಗಳನ್ನು ಸ್ಪರ್ಶಿಸಿದೆ. ಹಾಗೆಯೇ ತೊಡೆ ಮೇಲೆ ಒರಗಿ ಮಲಗಿಕೊಂಡಿದೆ.
ಮೃಗಾಲಯದ ಕೇಂದ್ರಬಿಂದು ಈ ಪ್ರಾಣಿ
ಪನಿಸಾರಗೆ ಇದು ಆಘಾತಕಾರಿ ಕ್ಷಣವಾಗಿದ್ದರೂ, ಒರಾಂಗುಟಾನ್ ಜೊತೆ ಸಮಾಧಾನವಾಗಿ ವರ್ತಿಸಿದರು. ಬ್ಯಾಂಕಾಕ್‌ನಲ್ಲಿರುವ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ಒರಾಂಗುಟಾನ್ ಸ್ಟಾರ್ ಆಕರ್ಷಣೆಯಾಗಿದ್ದು, ಎಲ್ಲರೂ ಈ ಪ್ರಾಣಿಯ ಜೊತೆ ಫೋಟೋ ತೆಗೆದುಕೊಳ್ಳಲು ಬಯಸುತ್ತಾರೆ. ಝೂಗೆ ಭೇಟಿ ನೀಡುವ ಪ್ರತಿ ಪ್ರವಾಸಿಗರ ಜೊತೆ ಚೇಷ್ಟೆ ಮಾಡುವ ಈ ಪ್ರಾಣಿ ಎಲ್ಲರಿಗೂ ಇಲ್ಲಿ ಪ್ರೀತಿಯ ಪ್ರಾಣಿಯಾಗಿದೆ.
ಇದನ್ನೂ ಓದಿ: 85ರ ಅಜ್ಜನನ್ನು ಮದುವೆಯಾದ 24ರ ಯುವತಿ! ಗೋಳೋ ಅಂತಿದ್ದಾರೆ ಗಂಡ್ ಹೈಕ್ಳು!
ನ್ಹಾಂಗ್ ಸಫಾರಿ ವರ್ಲ್ಡ್ ಮೃಗಾಲಯದ ಆವರಣದಲ್ಲಿ ವಾಸಿಸುತ್ತಾನೆ. ಹ್ಯಾಂಡ್ಲರ್‌ಗಳು ಮತ್ತು ಇತರ ಸಂದರ್ಶಕರ ಪ್ರೋತ್ಸಾಹದೊಂದಿಗೆ ನ್ಹಾಂಗ್ ಮಹಿಳೆಯರ ಸ್ತನಗಳನ್ನು ಸ್ಪರ್ಶಿಸುವ ಮತ್ತು ಚುಂಬಿಸುವ ಅಭ್ಯಾಸವನ್ನು ಕಲಿತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ವೀಡಿಯೊಗಳಿಂದಾಗಿ ಮಹಿಳೆಯರು ವಿಶೇಷವಾಗಿ ಸಫಾರಿಗೆ ಭೇಟಿ ನೀಡುತ್ತಾರೆ ಎಂದು ಹೇಳಲಾಗಿದೆ.
ಪ್ರಾಣಿ ಬಗ್ಗೆ PETA ಕಳವಳ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, PETA ಸೇರಿದಂತೆ ಪ್ರಾಣಿ ಹಕ್ಕುಗಳ ಗುಂಪುಗಳು ಕಳವಳ ವ್ಯಕ್ತಪಡಿಸಿದೆ. ಒರಾಂಗುಟಾನ್ "ಶೋಷಣೆ ಮತ್ತು ಅವಮಾನಕ್ಕೊಳಗಾಗಿದೆ" ಎಂದು ದೂರಿದ್ದಾರೆ.
ಈ ಮೃಗಾಲಯವು ತನ್ನ ವರ್ತನೆಗಳಿಗಾಗಿ ಪ್ರಸಿದ್ಧವಾಗಿದೆ, ಅದು ಮಂಗವನ್ನು "ಶೋಷಣೆಗೆ ಒಳಪಡಿಸುತ್ತದೆ" ಎಂದು ಪ್ರಾಣಿ ಗುಂಪುಗಳು ಆಕ್ಷೇಪಿಸಿದರೂ ಅದನ್ನು ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ