ಕೆಂಪುಮೂತಿ ಹಂದಿಯ ಬೆನ್ನುಬಿದ್ದಿದ್ದಾರೆ ಅಮೆರಿಕ ಪೊಲೀಸರು, ಕಾರಣ ಇದು

ಬಹುತೇಕ ಮಣ್ಣಿನ ಹಾನಿ ವ್ಯಗ್ರ ಹಂದಿಗಳಿಂದ ಆಗುತ್ತಿದ್ದು, ಓಷಿಯಾನಾ ಭಾಗದಲ್ಲಿ ಇಂಗಾಲದ ಹೊಸಸೂಸುವಿಕೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳು ವಾಸಿಸುತ್ತಿರುವುದು ಎಂದು ಹೇಳಲಾಗಿದೆ.

ಕೆಂಪು ಮೂತಿಯ ಹಂದಿ

ಕೆಂಪು ಮೂತಿಯ ಹಂದಿ

  • Share this:
ಪೊಲೀಸರೆಂದರೆ ಕಳ್ಳರನ್ನು ಹಿಡಿಯುವವರು, ಸಮಾಜ ವಿರೋಧಿಗಳನ್ನು ಹತ್ತಿಕ್ಕುವವರು, ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವವರು ಎಂದೇ ಜನಜನಿತ. ಆದರೆ, ಅಮೆರಿಕ ಪೊಲೀಸರು(American police) ಮಾತ್ರ ಕಳ್ಳರು, ಸಮಾಜವಿರೋಧಿಗಳು, ಭೂಗತ ದೊರೆಗಳ ಬೆನ್ನು ಹತ್ತುವ ಬದಲು ಒಂದು ಕೆಂಪು ಮೂತಿಯ ಹಂದಿಯನ್ನು (Red-Nosed pig) ಬಲೆಗೆ ಬೀಳಿಸಿಕೊಳ್ಳಲು ಅದರ ಬೆನ್ನು ಹತ್ತಿದ್ದಾರೆ!! ಕಾರಣ ಮಾತ್ರ ಸ್ವಾರಸ್ಯವಾಗಿದೆ: ಈ ಕೆಂಪು ಮೂತಿಯ ಹಂದಿ ಜನರನ್ನು(Scares) ಮಾಫಿಯಾ (Mafia dons) ಡಾನ್‌ಗಳಿಗಿಂತ ಹೆಚ್ಚು ಭಯಭೀತಗೊಳಿಸಿದೆಯಂತೆ!!!

ದಣಿವರಿಯದ ಹುಡುಕಾಟ
ಕೆಂಪು ಮೂತಿಯ ಹಂದಿಗಾಗಿ ಬೆನ್ನು ಬಿದ್ದಿರುವ ದಕ್ಷಿಣ ಕೆರೊಲಿನಾ ಪೊಲೀಸರು, ಹಂದಿಗಾಗಿ ದಣಿವರಿಯದ ಹುಡುಕಾಟ ನಡೆಸಿದ್ದಾರೆ. ಕಳೆದ ಸೋಮವಾರ ಈ ಕುರಿತು ಫೇಸ್‌ಬುಕ್ ಪೋಸ್ಟ್ ಮಾಡಿರುವ ಸಮ್ಟರ್ ಪೊಲೀಸರು, ವಾರಾಂತ್ಯದಲ್ಲಿ ಜನರು ಕರೆ ಮಾಡಿ, ದೊಡ್ಡ, ಕೆಂಪು ಮೂತಿಯ ಹಾಗೂ ಹಿಡಿತದಿಂದ ತಪ್ಪಿಸಿಕೊಳ್ಳುವ ಹಂದಿಯೊಂದು ನೆರೆಯಹೊರೆಯಲ್ಲಿ ತುಂಬಾ ನಷ್ಟವನ್ನುಂಟು ಮಾಡಿದೆ ಎಂದು ದೂರು ನೀಡಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Year Ender 2021: ಈ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸಿದ ಪ್ರಮುಖ ವಿದ್ಯಮಾನಗಳು

ದೊಡ್ಡ ಕಳವಳ
ಈ ತಮ್ಮ ಪೋಸ್ಟ್‌ನೊಂದಿಗೆ ಅವರು ದೊಡ್ಡ ಹಂದಿ ಹಾಗೂ ಅದು ಮನೆಯೊಂದರಲ್ಲಿ ಮಾಡಿರುವ ಕೊಳಕಿನ ಚಿತ್ರಗಳನ್ನು ಸೇರಿಸಿದೆ. ಹಂದಿಯ ಕುರಿತು ಜನರಿಗೆ ಎಚ್ಚರಿಕೆ ನೀಡಿರುವ ಅಧಿಕಾರಿಗಳು, “ಏಕಾಂಗಿಯಾಗಿ ಹಂದಿಯನ್ನು ಮುಖಾಮುಖಿಯಾಗಲು ಪ್ರಯತ್ನಿಸಬೇಡಿ” ಎಂದು ಮನವಿ ಮಾಡಿದ್ದಾರೆ. “ಹಂದಿಯ ಗಾತ್ರವೇ ನಮ್ಮ ಪಾಲಿನ ದೊಡ್ಡ ಕಳವಳ” ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ನೆಟ್ಟಿಗರು ಹಾಸ್ಯ
ದಕ್ಷಿಣ ಕೆರೊಲಿನಾದ ನೈಸರ್ಗಿಕ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಉಪದ್ರವಕಾರಿ ಹಂದಿ ಹಿಡಿಯಲು ತಮಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಇಂತಹ ಅಸಹಜವಾದ ಪೋಸ್ಟ್ ಹಾಕಿರುವುದರಿಂದ ನೆಟ್ಟಿಗರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಶೀಲಾ ಬಾರ್ಕ್ಸ್ ಡಲೆ ಎಂಬ ಜಾಲತಾಣಿಗರು, “ನೀವು ನಿಜವಾಗಲೂ ಹಂದಿ ಹಿಡಿಯಲು ಸಾರ್ವಜನಿಕರ ನೆರವು ಕೋರುತ್ತಿದ್ದೀರಾ? ಓ ಮೈ ಗಾಡ್” ಎಂದು ಹಾಸ್ಯ ಮಾಡಿದ್ದಾರೆ.

ಪೊಲೀಸರು ಪೋಸ್ಟ್ ಹಾಸ್ಯಾಸ್ಪದವಾಗಿ ಕಾಣಿಸುತ್ತಿದ್ದರೂ, ತೈವಾನ್‌ನಲ್ಲಿ ಮಣ್ಣನ್ನು ಬುಡಮೇಲು ಮಾಡಿದ ವ್ಯಗ್ರ ಹಂದಿಗಳಂತೆಯೇ ಈ ಹಂದಿಯೂ ಇರುವಂತೆ ಕಾಣುತ್ತಿದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ವ್ಯಗ್ರ ಹಂದಿಗಳು ಜಾಗತಿಕ ಮಟ್ಟದಲ್ಲಿ ಹಾನಿಯನ್ನುಂಟು ಮಾಡುತ್ತಿದ್ದು, ಅವು ಇಂಗಾಲ ಹೊರಹೊಮ್ಮುವಿಕೆಗೂ ಕಾಣಿಕೆ ನೀಡುತ್ತಿವೆ.

ಅಧ್ಯಯನ ವರದಿ
ಗ್ಲೋಬಲ್ ಚೇಂಜ್ ಬಯಾಲಜಿ ಕಳೆದ ವಾರ ಪ್ರಕಟಿಸಿರುವ ಅಧ್ಯಯನ ವರದಿಯಂತೆ, ವ್ಯಗ್ರ ಹಂದಿಗಳು ಬುಡಮೇಲು ಮಾಡಿರುವ ಮಣ್ಣಿನ ಪ್ರಮಾಣ ಸುಮಾರು 36,214 ನಿಂದ 123,517 ಚದರ ಕಿಮೀನಷ್ಟು. ಈ ಪ್ರಮಾಣವು ಹೆಚ್ಚುಕಮ್ಮಿ ತೈವಾನ್ ಮತ್ತು ಇಂಗ್ಲೆಂಡ್ ಹೊಂದಿರುವ ಭೂಪ್ರದೇಶಕ್ಕೆ ಸರಿಸಮವಾಗಿದೆ.

ಮಣ್ಣಿನಲ್ಲಿ ಭೂಮಿಯ ದೊಡ್ಡ ಪ್ರಮಾಣದ ಇಂಗಾಲ ಶೇಖರಣೆಯಾಗಿರುತ್ತದಾದ್ದರಿಂದ, ಮಣ್ಣನ್ನು ಬುಡಮೇಲು ಮಾಡುವುದರಿಂದ ಸಣ್ಣ ಪ್ರಮಾಣದ ಇಂಗಾಲ ವಾತಾವರಣಕ್ಕೆ ಬಿಡುಗಡೆಯಾದರೂ ಹಮಾಮಾನ ಬದಲಾವಣೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಅಧ್ಯಯನದಲ್ಲಿ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯ, ಕ್ಯಾಂಟರಿಬರ್ರಿ ವಿಶ್ವವಿದ್ಯಾಲಯ ಹಾಗೂ ಹವಾಯಿ ಅಟ್ ಮನೋವಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪಾಲ್ಗೊಂಡಿದ್ದರು.

ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳ ವಾಸ
ಅಂತಿಮ ತೀರ್ಮಾನದ ಪ್ರಕಾರ, ಬಹುತೇಕ ಮಣ್ಣಿನ ಹಾನಿ ವ್ಯಗ್ರ ಹಂದಿಗಳಿಂದ ಆಗುತ್ತಿದ್ದು, ಓಷಿಯಾನಾ ಭಾಗದಲ್ಲಿ ಇಂಗಾಲದ ಹೊಸಸೂಸುವಿಕೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳು ವಾಸಿಸುತ್ತಿರುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಇವ್ನೇನ್​ ಗುರೂ.. ಮಾಸ್ಕ್​ ಬದಲು ಮಹಿಳೆಯ ಒಳಉಡುಪು ಹಾಕೊಂಡವ್ನೆ..! ಆಮೇಲೆನಾಯ್ತು ನೀವೇ ನೋಡಿ..

ನಾವೆಲ್ಲ ಹಂದಿಗಳು ಮಣ್ಣು ಕೆದರುವುದು ಸಾಮಾನ್ಯ ಸಂಗತಿ ಎಂದು ನಿರ್ಲಕ್ಷಿಸಿಬಿಡುತ್ತೇವೆ. ಆದರೆ, ಹಾಗೆ ಮಣ್ಣನ್ನು ಬುಡಮೇಲು ಮಾಡುವುದರಿಂದ ಹವಾಮಾನದ ಮೇಲೆ ಎಂಥ ವ್ಯತಿರಿಕ್ತ ಪರಿಣಾಮವಾಗಬಹುದು ಎಂಬ ಬಗ್ಗೆ ಸಣ್ಣ ಊಹೆಯನ್ನೂ ಹೊಂದಿರಲಿಲ್ಲ. ಸದ್ಯ ಈ ಕುರಿತೂ ಅಧ್ಯಯನ ನಡೆಸಿರುವ ಅಮೆರಿಕ ವಿಜ್ಞಾನಿಗಳು, ಹವಾಮಾನ ವೈಪರೀತ್ಯದಲ್ಲಿ ಮಣ್ಣನ್ನು ಹಾನಿಗೊಳಿಸುವ ಹಂದಿಗಳ ಪಾತ್ರವೂ ಇದೆ ಎಂಬುದನ್ನು ಸಂಶೋಧಿಸಿದ್ದಾರೆ. ಇನ್ನಾದರೂ ನಾವು ಹಂದಿಗಳ ಬಗ್ಗೆ ಕೊಂಚ ಹುಷಾರಾಗಿರೋಣ!!!
Published by:vanithasanjevani vanithasanjevani
First published: