Viral Video: ಮನುಷ್ಯನಿಗೆ ಮಾತ್ರ ಅಲ್ಲ ಆನೆಗಳಿಗೂ ಹಲಸಿನಹಣ್ಣು ಅಂದ್ರೆ ಇಷ್ಟವಂತೆ, ಈ ವಿಡಿಯೋ ನೋಡಿ ಗೊತ್ತಾಗುತ್ತೆ
ಇತ್ತೀಚೆಗೆ ಎಂದರೆ ಈ ವರ್ಷದ ಮೇ ತಿಂಗಳಿಂದ ಆನೆಗಳ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ನಾವು ನೋಡಿದೆವು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗ ಆನೆಯ ಮತ್ತೊಂದು ವಿಡಿಯೋ ಹೊರ ಬಂದಿದೆ ನೋಡಿ. ಈ ವಿಡಿಯೋ ನೋಡಿದರೆ ನಿಮಗೆ ಮಾವಿನಹಣ್ಣಿನ ಮೇಲೆ ಇರುವಂತಹ ನಿಮ್ಮ ಪ್ರೀತಿ ನೆನಪಿಗೆ ಬರುವುದಂತೂ ಗ್ಯಾರೆಂಟಿ.
ಮೊದಲೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಪ್ರಾಣಿಗಳ ಪೈಕಿ ಈ ಸಾಕುನಾಯಿಗಳ ಮತ್ತು ಮುದ್ದಾದ ಬೆಕ್ಕುಗಳ ತುಂಟಾಟದ ಮತ್ತು ತರ್ಲೆಗಳ ವಿಡಿಯೋಗಳು (Video) ಹರಿದಾಡುತ್ತಿದ್ದವು ಮತ್ತು ಜನರು ಅವುಗಳನ್ನು ನೋಡಿ ತುಂಬಾನೇ ಇಷ್ಟ ಪಡುತ್ತಿದ್ದರು. ಹೀಗಾಗಿ ಆ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದವು. ಆದರೆ ಇತ್ತೀಚೆಗೆ ಎಂದರೆ ಈ ವರ್ಷದ ಮೇ ತಿಂಗಳಿಂದ ಆನೆಗಳ (Elephant) ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ನಾವು ನೋಡಿದೆವು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗ ಆನೆಯ ಮತ್ತೊಂದು ವಿಡಿಯೋ ಹೊರ ಬಂದಿದೆ ನೋಡಿ. ಈ ವಿಡಿಯೋ ನೋಡಿದರೆ ನಿಮಗೆ ಹಲಸಿನಹಣ್ಣಿನ (Jackfruit) ಮೇಲೆ ಇರುವಂತಹ ನಿಮ್ಮ ಪ್ರೀತಿ ನೆನಪಿಗೆ ಬರುವುದಂತೂ ಗ್ಯಾರೆಂಟಿ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಆನೆಗಳ ವಿಡಿಯೋ
ಮೊದಲಿಗೆ ಆನೆಯ ಸ್ನಾನ ಮಾಡಿಸುತ್ತಿರುವಾಗ ಅದು ತನ್ನ ತಲೆಯ ಮೇಲೆ ಎಲ್ಲಾ ದೇಹದ ಭಾರ ಹಾಕಿ ತನ್ನೆರಡು ಹಿಂಬದಿಯ ಕಾಲುಗಳನ್ನು ಮೇಲಕ್ಕೆ ಎತ್ತಿರುವ ವಿಡಿಯೋ ಆಗಿರಬಹುದು ಮತ್ತು ಆನೆ ಮರಿಯೊಂದು ತನ್ನ ಮಾವುತನು ಮಲಗಿದ್ದ ಹಾಸಿಗೆ ನಂದು ಅಂತ ಹಠ ಹಿಡಿದವರಂತೆ ಅವನ ಜೊತೆಯಲ್ಲಿ ಜಗಳವಾಡಿದ ವಿಡಿಯೋ ಇರಬಹುದು. ಹೀಗೆ ಒಂದೇ ಎರಡೇ.. ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೋಡಿದೆವು ಅಂತ ಹೇಳಬಹುದು. ಆನಂತರ ಸಹ ಕೆಲವು ಆನೆಗಳು ತಮ್ಮ ಫೋಟೋ ತೆಗೆಯಲು ಮುಂದಾದ ಯುವತಿಯ ಮೊಬೈಲ್ ಕಸಿದುಕೊಳ್ಳುವುದಕ್ಕೆ ಪ್ರಯತ್ನಿಸಿದ್ದ ವಿಡಿಯೋ ಸಹ ನೋಡುಗರಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿತು.
ಮರದಿಂದ ಹಲಸಿನ ಹಣ್ಣನ್ನು ಕೀಳುವ ಆನೆಯ ವಿಡಿಯೋ ವೈರಲ್
ಈ 30 ಸೆಕೆಂಡುಗಳ ವಿಡಿಯೋದಲ್ಲಿ ತುಂಬಾನೇ ಮೇಲಿರುವ ಮರದ ಕೊಂಬೆಯಿಂದ ಹಲಸಿನ ಹಣ್ಣುಗಳನ್ನು ಕೆಳಕ್ಕೆ ಉರುಳಿಸಲು ಆನೆಯು ಮಾಡಿದ ನಿರಂತರ ಪ್ರಯತ್ನಗಳು ಆನ್ಲೈನ್ ನಲ್ಲಿ ಅನೇಕರ ಹೃದಯವನ್ನು ಗೆದ್ದಿದೆ ಎಂದು ಹೇಳಬಹುದು. ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಈ ಕ್ಲಿಪ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ ಮತ್ತು ನೆಟ್ಟಿಗರು ಅದನ್ನು ಪದೇ ಪದೇ ನೋಡುವುದನ್ನು ನಿಲ್ಲಿಸುತ್ತಿಲ್ಲ, ಈ ವಿಡಿಯೋ ಇದುವರೆಗೆ 7,000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.
ಈ ವಿಡಿಯೋದಲ್ಲಿ ಇರುವುದೇನು?
ವಿಡಿಯೋದಲ್ಲಿ ಆನೆಯು ತನ್ನ ಸೊಂಡಿಲನ್ನು ಕೊಂಬೆಯ ಹತ್ತಿರ ಚಾಚುವುದನ್ನು ನೋಡಬಹುದು. ಆ ಮರವನ್ನು ಮೊದಲು ತನ್ನ ಸೊಂಡಿಲಿನಿಂದ ಅಲುಗಾಡಿಸುತ್ತದೆ, ಆದರೆ ಹಲಸಿನ ಹಣ್ಣುಗಳು ಕೆಳಕ್ಕೆ ಬೀಳುವುದಿಲ್ಲ. ಅಲ್ಲಿ ಆನೆಯೊಂದು ತನ್ನ ನೆಚ್ಚಿನ ಹಣ್ಣನ್ನು ಪಡೆಯಲು ಶತ ಪ್ರಯತ್ನ ಮಾಡುತ್ತಿದ್ದರೆ, ಹಿನ್ನೆಲೆಯಲ್ಲಿ ಜನರು ನಗುವುದು ಮತ್ತು ವಿನೋದದಿಂದ ಮಾತನಾಡುವುದನ್ನು ಕೇಳಬಹುದು. ನಂತರ ಆನೆ ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತುಕೊಂಡು ಅದರ ಉದ್ದನೆಯ ಸೊಂಡಿಲನ್ನು ಹಿಗ್ಗಿಸಿ ಹಲಸಿನ ಹಣ್ಣುಗಳನ್ನು ಯಶಸ್ವಿಯಾಗಿ ನೆಲಕ್ಕೆ ಎಳೆಯಿತು. ಆನೆಗೆ ಹಲಸಿನ ಹಣ್ಣುಗಳು ಸಿಗುತ್ತಿದ್ದಂತೆ, ಜನರು ಪ್ರಾಣಿಯನ್ನು ತುಂಬಾನೇ ಹುರಿದುಂಬಿಸುತ್ತಾರೆ ಮತ್ತು ಚಪ್ಪಾಳೆ ಸಹ ತಟ್ಟುತ್ತಾರೆ.
Jackfruit is to Elephants what Mangoes are to humans.. and the applause by humans at the successful effort of this determined elephant to get to Jackfruits is absolutely heartwarming 😝
ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ
"ಹಲಸಿನ ಹಣ್ಣು ಆನೆಗಳಿಗೆ, ಮನುಷ್ಯರಿಗೆ ಮಾವಿನ ಹಣ್ಣು ಹೇಗಿದೆ ನೋಡಿ. ಹಲಸಿನ ಹಣ್ಣುಗಳನ್ನು ಪಡೆಯಲು ಈ ಆನೆ ಮಾಡಿದ ದೃಢ ನಿರ್ಧಾರದ ಮತ್ತು ಯಶಸ್ವಿ ಪ್ರಯತ್ನಕ್ಕೆ ಮಾನವರು ಹೊಡೆದ ಚಪ್ಪಾಳೆ ಸಂಪೂರ್ಣವಾಗಿ ಹೃದಯಸ್ಪರ್ಶಿಯಾಗಿದೆ" ಎಂದು ಸಾಹು ಟ್ವೀಟ್ ಮಾಡಿದ್ದಾರೆ.
ನೆಟ್ಟಿಗರು ಈ ಕ್ಲಿಪ್ ಅನ್ನು ನೋಡಿ ತುಂಬಾನೇ ಇಷ್ಟಪಟ್ಟಿದ್ದಾರೆ. ಬಳಕೆದಾರರೊಬ್ಬರು ಇದನ್ನು ನೋಡಿ "ಎಂತಹ ಅದ್ಭುತ ಶಕ್ತಿ.. ಆ ಎತ್ತರದವರೆಗೆ ತ್ರಾಸದಾಯಕವಾಗಿರಬೇಕು. ಒಂದೇ ತಳ್ಳುವಿಕೆಯಲ್ಲಿ ಮರವನ್ನು ಉರುಳಿಸುವ ಶಕ್ತಿ ಸಹ ಆನೆಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ