Dog Swimming: ಈ ಈಜುಕೊಳದಲ್ಲಿ ಮನುಷ್ಯರು ಮಾತ್ರ ಅಲ್ಲ ನಾಯಿಗಳು ಕೂಡ ಸ್ವಿಮ್ ಮಾಡುತ್ತವೆ! ವಿಡಿಯೋ ವೈರಲ್

ಹಡ್ಸನ್ ಎಂಬ ಹೆಸರಿನ ನಾಯಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆದ ವಿಶೇಷ ಘಟನೆಯ ವೀಡಿಯೋ ಈಗ ಇನ್‌ಸ್ಟಾಗ್ರಾಮ್ ನಲ್ಲಿ ಅನೇಕರಿಗೆ ಆರೋಗ್ಯಕರ ಮನರಂಜನೆಯ ಮೂಲವಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು. ಟೆನ್ನಿಸ್ ಚೆಂಡುಗಳಿಂದ ತುಂಬಿದ ಒಂದು ಈಜುಕೊಳಕ್ಕೆ ಜಿಗಿಯುವ ಮೂಲಕ ನಾಯಿಯೊಂದು ತನ್ನ ಪಾರ್ಟಿಯನ್ನು ಆನಂದಿಸುತ್ತಿರುವುದನ್ನು ವೀಡಿಯೋದಲ್ಲಿ ನಾವು ನೋಡಬಹುದಾಗಿದೆ.

ಈಜುಕೊಳದಲ್ಲಿ ನಾಯಿ

ಈಜುಕೊಳದಲ್ಲಿ ನಾಯಿ

  • Share this:
ಹಡ್ಸನ್ (Hudson) ಎಂಬ ಹೆಸರಿನ ನಾಯಿಯ (Dog) ಹುಟ್ಟುಹಬ್ಬದ ಪಾರ್ಟಿಯಲ್ಲಿ (Birthday Party) ನಡೆದ ವಿಶೇಷ ಘಟನೆಯ ವೀಡಿಯೋ (Video) ಈಗ ಇನ್‌ಸ್ಟಾಗ್ರಾಮ್ ನಲ್ಲಿ (Instagram) ಅನೇಕರಿಗೆ ಆರೋಗ್ಯಕರ ಮನರಂಜನೆಯ ಮೂಲವಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು. ಟೆನ್ನಿಸ್ ಚೆಂಡುಗಳಿಂದ (Tennis Ball) ತುಂಬಿದ ಒಂದು ಈಜುಕೊಳಕ್ಕೆ (Swimming Pool) ಜಿಗಿಯುವ ಮೂಲಕ ನಾಯಿಯೊಂದು ತನ್ನ ಪಾರ್ಟಿಯನ್ನು ಆನಂದಿಸುತ್ತಿರುವುದನ್ನು ವೀಡಿಯೋದಲ್ಲಿ ನಾವು ನೋಡಬಹುದಾಗಿದೆ. ಕ್ಯಾಮಿ ಗ್ರಿಫಿತ್ (Cami Griffith) ಎಂಬ ಹೆಸರಿನವರು ತನ್ನ ವೈಯಕ್ತಿಕ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿವರಣಾತ್ಮಕ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಾಯಿ ಮತ್ತು ಅದರ ಒಡಹುಟ್ಟಿದವರಿಗಾಗಿ ಮೀಸಲಾದ ಪುಟದಲ್ಲಿ ಸಹ ಪೋಸ್ಟ್ ಮಾಡಿದ್ದಾರೆ. "ಹಡ್ಸನ್ ನ ಮೊದಲ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಾವು ಸಾಕಷ್ಟು ಸಂತೋಷದಿಂದಿರುವಂತಹ ಗೋಲ್ಡನ್ ರಿಟ್ರೀವರ್ ಗಳನ್ನು (Golden Retriever) ಹೊಂದಿದ್ದೆವು. ಮುಂದಿನ ಕೆಲವು ಸಾಲುಗಳಲ್ಲಿ, ಅವರು ಟೆನಿಸ್ ಚೆಂಡುಗಳನ್ನು ಹೇಗೆ ಈಜುಕೋಳಕ್ಕೆ ಬಿಡಲಾಗುತ್ತಿತ್ತು” ಎಂದು ವೀಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿತ್ತು ಎಂದು ಹೇಳಬಹುದು.

ಟೆನಿಸ್ ಚೆಂಡುಗಳ ಮರುಬಳಕೆ

ಈ ಪೋಸ್ಟ್ ನ ಜೊತೆಗೆ ಒಂದು ಸೈಡ್ ನೋಟ್ ಅನ್ನು ಸಹ ಬರೆಯಲಾಗಿತ್ತು. "ಈ ಟೆನಿಸ್ ಚೆಂಡುಗಳನ್ನು ಅವುಗಳ ಲಾಭ ರಹಿತತೆಯನ್ನು ಬಳಸಿದ ಟೆನಿಸ್ ಬಾಲ್ ಗಳ ವೆಬ್‌ಸೈಟ್ ನಿಂದ ಖರೀದಿಸಲಾಗಿದೆ. ಯುಎಸ್ಎ ಯಲ್ಲಿನ ಎಲ್ಲಾ ಟೆನಿಸ್ ಚೆಂಡುಗಳನ್ನು ಮರುಬಳಕೆ ಮಾಡುವುದು ಅವರ ಧ್ಯೇಯವಾಗಿದೆ. ನೀವು ಅವುಗಳನ್ನು ಬಳಸಿದ ನಂತರ, ಮರುಬಳಕೆಯ ಮಾದರಿಯನ್ನು ಮುಂದುವರಿಸಲು ಅವುಗಳನ್ನು ಕಂಪನಿಗೆ ಮರಳಿ ಕಳುಹಿಸಬಹುದು" ಎಂದು ಅವರು ಹೇಳಿದರು.

ಅವರು ಹಂಚಿಕೊಂಡ ವೀಡಿಯೋ ಸುಮಾರು 200 ಟೆನಿಸ್ ಚೆಂಡುಗಳಿಂದ ಈಜುಕೊಳವನ್ನು ತುಂಬುವುದನ್ನು ತೋರಿಸುತ್ತದೆ. ಕ್ಲಿಪ್ ನಂತರದ ಮತ್ತೊಂದು ದೃಶ್ಯವು ನಾಯಿಗಳು ಹೇಗೆ ಅದ್ಭುತ ಸಮಯವನ್ನು ಕಳೆಯುತ್ತಿವೆ ಎಂಬುದನ್ನು ತೋರಿಸುತ್ತದೆ.

ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್

ಈ ವೀಡಿಯೋವನ್ನು ಒಂದು ದಿನದ ಹಿಂದೆ ಪೋಸ್ಟ್ ಮಾಡಲಾಗಿದೆ. ಇದನ್ನು ಹಂಚಿ ಕೊಂಡಾಗಿನಿಂದಲೂ ಕ್ಲಿಪ್ ಸುಮಾರು 2,500ಕ್ಕೂ ಹೆಚ್ಚು ಲೈಕ್ ಗಳನ್ನು ಸಂಗ್ರಹಿಸಿದೆ ಮತ್ತು ಈ ಲೈಕ್ ಗಳ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ ಎಂದು ಹೇಳಬಹುದು. ಈ ಹಂಚಿಕೆಯು ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ.

ಇದನ್ನೂ ಓದಿ:  Viral Dog: ತನಾಗೇ ಕೂಲ್​ಬಾರ್​ಗೆ ಬಂದು ಐಸ್​ಕ್ರೀಂ ಕೊಂಡು ತಿನ್ನುತ್ತೆ ಈ ಸ್ಮಾರ್ಟ್ ಶ್ವಾನ!




"ಇದು ಅದ್ಭುತವಾಗಿದೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. "ನನ್ನ ಜೀವನದಲ್ಲಿ ನೋಡಿದ ಅತೀ ಅದ್ಭುತವಾದ ವೀಡಿಯೋ ಆಗಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದರು. "ಅವರ ಜೀವನದ ಉತ್ತಮ ಸಮಯವನ್ನು ಹೊಂದಿದ್ದಾರೆ" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ. "ಸೋ ಕ್ಯೂಟ್ ಓ ದೇವರೇ" ಎಂದು ಸಹ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ನಾನು ನೋಡಿದ ಅತ್ಯುತ್ತಮ ಸಂಗತಿಗಳಲ್ಲಿ ಒಂದಾಗಿದೆ" ಎಂದು ಮಗದೊಬ್ಬರು ಬರೆದಿದ್ದಾರೆ.

ನಾಯಿಗೆ ಸುರಿದು ಬಂದ ಹುಟ್ಟು ಹಬ್ಬದ ಶುಭಾಶಯಗಳು

ನಾಯಿಗಳಿಗೆ ಮೀಸಲಾದ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮತ್ತೊಂದು ಪೋಸ್ಟ್ ಅನ್ನು ಹಂಚಿ ಕೊಳ್ಳಲಾಗಿದೆ. ಶೇರ್ ನಲ್ಲಿ ಹುಟ್ಟುಹಬ್ಬದ ಹುಡುಗ ಮತ್ತು ಪಾರ್ಟಿಯ ಕೆಲವು ಫೋಟೋಗಳನ್ನು ಹಂಚಿ ಕೊಂಡಿದ್ದಾರೆ. ಈ ಪೋಸ್ಟ್ ಕೂಡ ಟನ್ ಗಟ್ಟಲೆ ಪ್ರೀತಿ ತುಂಬಿದ ಕಾಮೆಂಟ್ ಗಳನ್ನು ಸ್ವೀಕರಿಸಿದೆ. ಈ ನಾಯಿಗೆ "ಹ್ಯಾಪಿ ಬರ್ತ್ ಡೇ" ಎಂದು ಅನೇಕರು ತಮ್ಮ ಕಾಮೆಂಟ್ ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:  Viral Video: ಈ ಒಂಟೆಯ ಬೆಲೆ 14 ಕೋಟಿ! ಅಬ್ಬಾ, ಅಷ್ಟೊಂದು ಬೆಲೆ ನೀಡಿ ಖರೀದಿಸಿದ ಪುಣ್ಯಾತ್ಮ ಯಾರು?

ಒಟ್ಟಿನಲ್ಲಿ ಇಂದಿನ ದಿನಮಾನಗಳಲ್ಲಿ ಜನರು ನಾಯಿ ಬೆಕ್ಕುಗಳ ಮುದ್ದಾದ ವಿಡಿಯೋಗಳನ್ನು ಹೆಚ್ಚು ಹೆಚ್ಚು ಮೆಚ್ಚುತ್ತಿದ್ದಾರೆಂದು ತಿಳಿದುಬರುತ್ತದೆ. ಅಲ್ಲದೇ, ಈ ರೀತಿಯ ವಿಡಿಯೋಗಳಿಗೆ ಪ್ರತಿಕ್ರಿಯೆಯೂ ಸಾಕಷ್ಟು ಉತ್ತಮವಾಗಿ ಸಿಗುವುದರಿಂದ ಜನರು ಪದೇ ಪದೇ ಇಂತಹ ವಿಡಿಯೋಗಳನ್ನು ಮಾಡುವಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆಂದು ಹೇಳಬಹುದಾಗಿದೆ.
Published by:Ashwini Prabhu
First published: