HOME » NEWS » Trend » NORTHEAST EXPRESS HITS A BIKE AT FULL SPEED AT BHARWARI LEVEL CROSSING HG

Video Viral: ರೈಲಿಗೆ ತಾಕಿ ನುಚ್ಚುನೂರಾದ ಬೈಕ್​; ಹಾಗಿದ್ದರೆ ಸವಾರ....?

ರೈಲು​ ಬರುವ ವೇಳೆ ರಸ್ತೆ ಬದಿಯಲ್ಲಿರುವ ಎರಡು ಗೇಟುಗಳನ್ನು ಹಾಕಲಾಗುತ್ತದೆ. ಆದರೆ ರೈಲು ಹೋಗುವುದನ್ನು ಕಾಯದೆ ಗೇಟ್​ಗಳನ್ನು ದಾಟಿಕೊಂಡು ಹೋಗುವವರು ಅನೇಕರು. ಅದರಂತೆ ಈ ದೃಶ್ಯದಲ್ಲಿ ರೈಲು ಬರುವ ಸಮಯದಲ್ಲಿ ಗೇಟುಗಳನ್ನು ದಾಟಿ ಬೈಕ್​ ಸವಾರನೊಬ್ಬ ರಸ್ತೆ ದಾಟಲು ಮುಂದಾಗುತ್ತಾನೆ.

news18-kannada
Updated:January 31, 2021, 1:48 PM IST
Video Viral: ರೈಲಿಗೆ ತಾಕಿ ನುಚ್ಚುನೂರಾದ ಬೈಕ್​; ಹಾಗಿದ್ದರೆ ಸವಾರ....?
Photo: Youtube
  • Share this:
ರೈಲು ಹಳಿ ದಾಟುವಾಗ ತುಂಬಾ ಜಾಗೃತೆ ವಹಿಸುವುದು ಅಗತ್ಯ. ಏಕೆಂದರೆ ಕೊಂಚ ಅವಸರ ಮಾಡಿದರು ಪ್ರಾಣ ನಿಮಿಷಾರ್ಧದಲ್ಲೇ ಹೋಗುವ ಚಾನ್ಸ್​ ಇರುತ್ತದೆ. ಆದರಂತೆ ಇಲ್ಲೊಂದು ದೃಶ್ಯ ನೋಡುಗರ ಕಣ್ಣು ಕಟ್ಟಿದೆ. ಕೊಂಚ ಅವಸರ ಮಾಡಿದರು ವ್ಯಕ್ತಿ ಪ್ರಾಣ ಪಕ್ಷಿ ಹೋಗುವುದರಲ್ಲಿ ಅನುಮಾನವೇ ಇಲ್ಲ!.

ರೈಲು​ ಬರುವ ವೇಳೆ ರಸ್ತೆ ಬದಿಯಲ್ಲಿರುವ ಎರಡು ಗೇಟುಗಳನ್ನು ಹಾಕಲಾಗುತ್ತದೆ. ಆದರೆ ರೈಲು ಹೋಗುವುದನ್ನು ಕಾಯದೆ ಗೇಟ್​ಗಳನ್ನು ದಾಟಿಕೊಂಡು ಹೋಗುವವರು ಅನೇಕರು. ಅದರಂತೆ ಈ ದೃಶ್ಯದಲ್ಲಿ ರೈಲು ಬರುವ ಸಮಯದಲ್ಲಿ ಗೇಟುಗಳನ್ನು ದಾಟಿ ಬೈಕ್​ ಸವಾರನೊಬ್ಬ ರಸ್ತೆ ದಾಟಲು ಮುಂದಾಗುತ್ತಾನೆ. ಪುಣ್ಯಕ್ಕೆ ರೈಲು ಹತ್ತಿರದಲ್ಲೇ ಇದೆ ಎಂದು ತಿಳಿದು ಬೈಕ್​ ಅನ್ನು ಅಲ್ಲೇ ನಿಲ್ಲಿಸುತ್ತಾನೆ. ಆದರೆ ಬೈಕ್​ ನಿಲ್ಲಿಸುವ ಸಮಯಕ್ಕೆ ಬೈಕ್​ ಕೊಂಚ ಮುಂದಕ್ಕೆ ಚಲಿಸಿ ಅಡ್ಡ ಬೀಳುತ್ತದೆ.

ಬೈಕ್​ ಬೀಳುತ್ತಿದ್ದಂತೆ ಚಲಿಸುವ ರೈಲಿಗೆ ತಾಕಿ ಬೈಕ್​ ನುಚ್ಚು ನೂರಾಗಿ ಎಸೆಯಲ್ಪಡುತ್ತದೆ. ಆದರೆ ಯುವಕ ಮಾತ್ರ ಬೈಕ್​ ಬಿದ್ದಂತೆ ಹಿಂದೆ ಸರಿದುಕೊಂಡಿದ್ದಾನೆ.

ಭಾರತದಲ್ಲಿ ಈ ದೃಶ್ಯ ಬೆಳಕಿಗೆ ಬಂದಿದ್ದು, ಆದರೆ ಯಾವಾಗ? ಯಾವ ಸ್ಥಳದಲ್ಲಿ? ಈ ಘಟನೆ ನಡೆದಿದೆ ಎಂಬುದು ಮಾತ್ರ ಬೆಳಕಿಗೆ ಬಂದಿಲ್ಲ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್​ ಆಗುತ್ತಿದೆ. ಅನೇಕರು ಯುವಕನ ಪ್ರಾಣ ಉಳಿದಿದ್ದೆ ಹೆಚ್ಚು ಎಂದು ಕಾಮೆಂಟ್​ ಬರೆಯುತ್ತಿದ್ದಾರೆ. ಇನ್ನು ಕೆಲವರು ಬೈಕಿನ ಪೆಟ್ರೋಲ್​ ಟ್ಯಾಂಕ್​ಗೆ ತಾಕಿದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
Published by: Harshith AS
First published: January 31, 2021, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories