ಫೇಮಸ್​ ಆಗೋದಕ್ಕೆ ಟ್ಯಾಲೆಂಟೆ ಬೇಕಿಲ್ಲ; ಸೋಷಿಯಲ್ ಮೀಡಿಯಾದಲ್ಲಿ ವಿಕೃತಿಯ ಪರಮಾವಧಿ!

news18
Updated:July 7, 2018, 1:59 PM IST
ಫೇಮಸ್​ ಆಗೋದಕ್ಕೆ ಟ್ಯಾಲೆಂಟೆ ಬೇಕಿಲ್ಲ; ಸೋಷಿಯಲ್ ಮೀಡಿಯಾದಲ್ಲಿ ವಿಕೃತಿಯ ಪರಮಾವಧಿ!
news18
Updated: July 7, 2018, 1:59 PM IST
ನ್ಯೂಸ್​ 18 ಕನ್ನಡ 

ಸುಮಧುರ ಸಂಗೀತ, ಅಭಿನಯ ಕಲೆ ಸೇರಿದಂತೆ ಪ್ರಶಂಸೆ ಪಡೆದುಕೊಳ್ಳುವ ಕಲೆಗಳಿಗೆ  ಮಾರು ಹೋಗದ ಮನಸ್ಸುಗಳಿಲ್ಲ. ಆದರೆ ಈಗ ಸ್ಮಾರ್ಟ್​ ಫೋನ್​ ಹಾಗೂ ಸಾಮಾಜಿಕ ಜಾಲತಾಣಗಳದ್ದೇ ಕಾಲ. ಇದರಿಂದಾಗಿ ಪ್ರತಿಭೆಗಳಿಗೆ ಇದೊಂದು ವೇದಿಕೆಯಾಗಿ ಮಾರ್ಪಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ಜನರು ಹಣ ಗಳಿಕೆಯ ಜತೆಗೆ ತಮಗೊಂದು ಭವಿಷ್ಯವನ್ನೂ ಕಂಡುಕೊಳ್ಳುತ್ತಿದ್ದಾರೆ.

ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಕುಳಿತಲ್ಲೇ ಹಣ ಸಂಪಾದಿಸುವ ವಿಧಾನ ಕಂಡುಕೊಂಡಿರುವ ಜನರು ಈಗ ಹಣ ಹಾಗೂ ಹೆಸರಿಗಾಗಿ ಸ್ವಂತಿಕೆಯನ್ನೇ ಮಾರಟಕ್ಕಿಟ್ಟಿದ್ದಾರೆ. ಇದಕ್ಕೆ ತಕ್ಕಂತೆ ಜಾಲತಾಣಿಗರು ಸಹ ಇಂತಹ ವಿಕೃತಿಗೆ ಬೆಂಬಲ ನೀಡುತ್ತಿದ್ದಾರೆ.

ಹೌದು ಎಷ್ಟೇ ಸುಮಧುರವಾಗಿ ಹಾಡಿದರೂ ಸಿಗದ ಅಭಿಮಾನಿ ಬಳಗ, ರಾಗ, ತಾಳವಿಲ್ಲದೆ ಸಂಗೀತವನ್ನೇ ಕೊಲೆ ಮಾಡುವ ಗಾನ ಗಾರ್ದಭರು ಈಗ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಹೀರೋಗಳಾಗಿದ್ದಾರೆ. ಇವರಿಗೆ ರಾತ್ರೋರಾತ್ರಿ ಹುಟ್ಟುಕೊಳ್ಳುವ ಅಭಿಮಾನಿಗಳು ನಿಜಕ್ಕೂ ಆ ವಿಕೃತಿಯ ಒಂದು ಭಾಗವೇ ಆಗಿಬಿಟ್ಟಿದ್ದಾರೆ ಎನ್ನಬಹುದು.

ಕೇಳಲು ಹಾಗೂ ನೋಡಲು ಸಾಧ್ಯವಾಗದಂತಹ ವಿಡಿಯೋಗಳನ್ನು ನೋಡಿ ಖುಷಿ ಪಡುವ ಜನರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಇದನ್ನು ನೋಡಿದರೆ ನಮ್ಮ ನಾಗರಿಕ ಸಮಾಜ ಯಾವ ವಿಕೃತಿಯತ್ತ ಸಾಗುತಿದೆ ಎಂಬ ಭಯ ನಮ್ಮನ್ನು ಕಾಡಲು ಪ್ರಾರಂಭಿಸುತ್ತದೆ.

ಅಲ್ಲದೆ ಇಂತಹ ಜನರನ್ನು ವ್ಯಂಗ್ಯ ಮಾಡುವ ನೆಪದಲ್ಲಿ ಮತ್ತಷ್ಟು ಜನರು ಬೇರೆ ರೀತಿಯಲ್ಲೇ ತಮ್ಮ ವಿಕೃತಿಯನ್ನು ತೋರ್ಪಡಿಸುತ್ತಿದ್ದಾರೆ. ಕೆಲವರು ಹೆಸರು ಹಾಗೂ ಹಣಕ್ಕಾಗಿ ವಿಡಿಯೋ ಮಾಡಿದರೆ, ಮತ್ತೆ ಕೆಲವರು ಅವರನ್ನು ಅಣಕಿಸುವ ನೆಪದಲ್ಲಿ ತಾವೂ ಈ ವಿಕೃತಿಗೆ ಬಲಿಯಾಗುತ್ತಿದ್ದಾರೆ.

ಹೀಗೆ ಯಾವುದೇ ಪ್ರತಿಭೆ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಅಭಿಮಾನಿಗಳನ್ನು ಹೊಂದಿರುವ ಕೆಲವರ ವಿಡಿಯೋಗಳು ನಿಮಗಾಗಿ...
Loading...

 

First published:July 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...