ಬ್ರಿಟನ್‌ನಲ್ಲಿರುವ (Brittan) ಇಟಾಲಿಯನ್ (Italian) ರೆಸ್ಟಾರೆಂಟ್‌ಗಳು (Restaurant) ಟೊಮೆಟೊ (Tomato) ರಹಿತ ಪಾಸ್ತಾ (Pasta) ಸಾಸ್ ಹಾಗೂ ಬಿಳಿ ಪಿಜ್ಜಾಗಳನ್ನು ತನ್ನ ಗ್ರಾಹಕರಿಗೆ ನೀಡುವ ನಿರ್ಧಾರ ಕೈಗೊಂಡಿವೆ. ಟೊಮೆಟೊ ಸರಬರಾಜು ಇಲ್ಲದಿರುವುದು ಹಾಗೂ ಟೊಮೆಟೊ ಸೇರಿದಂತೆ ಹಣ್ಣು ತರಕಾರಿಗಳ ಬೆಲೆ (Price) ಗಗನಕ್ಕೇರಿರುವುದರಿಂದ ಇದೀಗ ರೆಸ್ಟಾರೆಂಟ್‌ಗಳು ಪಾಸ್ತಾದೊಂದಿಗೆ ನೀಡುವ ಟೊಮೆಟೊಗಳಿಂದ ತಯಾರಿಸಿದ ಸಾಸ್ ಪೊಮೊಡೊರೊವನ್ನು ಮೆನುವಿನಿಂದ ತೆಗೆದುಹಾಕಿವೆ ಎಂದು ವರದಿಯಾಗಿದೆ.
ಟೊಮೆಟೊಗೆ ದುಪ್ಪಟ್ಟು ಬೆಲೆ
ಷೆಫ್ಸ್ ಅಸೋಸಿಯೇಶನ್‌ನ ಫೆಡರೇಜಿಯೋನ್ ಇಟಾಲಿಯನ್ ಕ್ಯುಚಿ ಯುಕೆ (ಎಫ್‌ಐಸಿ ಯುಕೆ) ಪ್ರಕಾರ, ಕಳೆದ ವರ್ಷದಲ್ಲಿ ಟೊಮೆಟೊಗಳ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.
ಕ್ಯಾನ್ಡ್ ಟೊಮೆಟೊ ಬೆಲೆ 15 ಪೌಂಡ್‌ನಿಂದ 30 ಪೌಂಡ್‌ಗೆ ದುಪ್ಪಟ್ಟುಗೊಂಡಿದೆ ಎಂದು ಅಸೋಸಿಯೇಶನ್ ತಿಳಿಸಿದೆ. ಐಸ್‌ಬರ್ಗ್ ಲೆಟ್ಯೂಸ್ ಬೆಲೆ ಕೂಡ ಏರಿಕೆಯಾಗಿದ್ದು 7 ಪೌಂಡ್‌ನಿಂದ 22 ಪೌಂಡ್‌ಗೆ ಹೆಚ್ಚಾಗಿದೆ.
ಯುಕೆಯ ಹಣ್ಣು ಹಾಗೂ ತರಕಾರಿ ಕೊರತೆಯಿಂದ ಹೆಚ್ಚು ಪರಿಣಾಮಕ್ಕೊಳಪಟ್ಟಿರುವ ಬೆಳೆಗಳಲ್ಲಿ ಟೊಮೆಟೊ ಕೂಡ ಒಂದು. ಸೂಪರ್‌ಮಾರ್ಕೆಟ್ ಹಾಗೂ ಹೆಚ್ಚಿನ ಅಂಗಡಿಗಳಲ್ಲಿ ಟೊಮೆಟೊ ಖಾಲಿಯಾಗಿದ್ದು ಗ್ರಾಹಕರು ಹಾಗೂ ವರ್ತಕರಲ್ಲಿ ಆತಂಕ ಹೆಚ್ಚಿಸಿದೆ.
ಟೊಮೆಟೊ ಲಭ್ಯವಿಲ್ಲದೇ ಇರುವುದಕ್ಕೆ ಯುಕೆ ಸರಕಾರ ದಕ್ಷಿಣ ಯುರೋಪ್ ಮತ್ತು ಉತ್ತರ ಆಫ್ರಿಕಾದಲ್ಲಿ ಕೆಟ್ಟ ಹವಾಮಾನವನ್ನು ದೂಷಿಸಿದೆ. ಇನ್ನು ಹೆಚ್ಚಿನ ವಿದ್ಯುತ್ ಬೆಲೆಗಳು ಬ್ರಿಟನ್ ಮತ್ತು ನೆದರ್ಲ್ಯಾಂಡ್‌ನಲ್ಲಿನ ಹಸಿರುಮನೆಗಳಲ್ಲಿ ಬೆಳೆದ ಉತ್ಪನ್ನಗಳ ಸರಬರಾಜಿಗೆ ಕೂಡ ಹೊಡೆತ ನೀಡಿವೆ.
ಟೊಮೆಟೊಗಾಗಿ ಪರದಾಟ, ಹೆಚ್ಚುತ್ತಿರುವ ವೆಚ್ಚ
ಹೆಚ್ಚುತ್ತಿರುವ ವೆಚ್ಚಗಳು ಮತ್ತು ಬ್ರೆಕ್ಸಿಟ್‌ನ (ಐರೋಪ್ಯ ಒಕ್ಕೂಟದಿಂದ ಯುನೈಟೆಡ್ ಕಿಂಗ್‌ಡಮ್ ವಾಪಸಾತಿ) ಸಮಸ್ಯೆಗಳನ್ನು ಅನುಸರಿಸುತ್ತಿರುವುದು ಇಟಾಲಿಯನ್ ರೆಸ್ಟೋರೆಂಟ್‌ಗಳಿಗೆ ಕಷ್ಟಕರ ಸಮಯವಾಗಿದೆ ಎಂದು ಎಫ್‌ಐಸಿ ಯುಕೆ ಅಧ್ಯಕ್ಷ ಎಂಜೊ ಒಲಿವೆರಿ ತಿಳಿಸಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹೆಚ್ಚಿನವರು ವ್ಯವಹಾರಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಎಂಜೊ ತಿಳಿಸಿದ್ದು, ಯಾವುದೇ ಭರವಸೆಗಳನ್ನು ಈ ಸಮಯದಲ್ಲಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೆಚ್ಚಿನ ರೆಸ್ಟಾರೆಂಟ್‌ಗಳು, ಅಂಗಡಿಗಳು ಸಾಮಾನ್ಯವಾಗಿ ತಮ್ಮ ಟೊಮೆಟೊಗಳನ್ನು ಇಟಲಿ, ಸ್ಪೇನ್ ಅಥವಾ ಮೊರಾಕೊದಿಂದ ಪಡೆಯುತ್ತಾರೆ. ಆದರೆ ಇದೀಗ ಎಲ್ಲಾ ಕಡೆ ಟೊಮೆಟೊ ಕೊರತೆ ಇರುವುದರಿಂದ ಎಲ್ಲಿಂದಲೂ ಟೊಮೆಟೊ ಬರುತ್ತಿಲ್ಲ ಎಂದು ಎಂಜೊ ತಿಳಿಸಿದ್ದಾರೆ.
ರೆಸ್ಟಾರೆಂಟ್‌ಗಳು ಕೈಗೊಂಡಿವೆ ಬದಲಿ ವ್ಯವಸ್ಥೆ
ಒಲಿವೆರಿ ಉತ್ತಮ ಗುಣಮಟ್ಟದ ಕ್ಯಾನ್ಡ್ ಮತ್ತು ಪುಡಿಮಾಡಿದ ಟೊಮೆಟೊಗಳ ಪ್ರಮಾಣವನ್ನು ಸುರಕ್ಷಿತಗೊಳಿಸಲು ಟೊಮೆಟೊ ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತಿದ್ದು, ಆದರೆ ಇವುಗಳು ಕೊರತೆಯನ್ನು ಕಾಣುತ್ತಿವೆ ಎಂದು ತಿಳಿಸಿದ್ದಾರೆ.
ಕೆಲವೊಂದು ರೆಸ್ಟಾರೆಂಟ್‌ಗಳು ಟೊಮೆಟೊ ಕಡಿಮೆ ಇರುವ ಪಿಜ್ಜಾಗಳು ಹಾಗೂ ಬಿಳಿಪಾಸ್ತಾಗಳನ್ನು ತಮ್ಮ ಮೆನುವಿನಲ್ಲಿ ಪರಿಚಯಿಸುತ್ತಿವೆ ಎಂದು ತಿಳಿಸಿದ್ದಾರೆ.
ಬಾಣಸಿಗರು ರಿಕೋಟಾದಂತಹ ಚೀಸ್‌ಗಳನ್ನು ಅಥವಾ ಸೌತೆಕಾಯಿಗಳು ಅಥವಾ ಬದನೆಕಾಯಿಗಳನ್ನು ಬಳಸುವ ಮೂಲಕ ಸಾಸ್‌ಗಳನ್ನು ದಪ್ಪವಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಒಲೆವೆರಿ ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ರೆಸ್ಟಾರೆಂಟ್‌ಗಳು
ವೈಟ್ ಪಿಜ್ಜಾ, ವೈಟ್ ಸಾಸ್ ಅಥವಾ ಕಡಿಮೆ ಟೊಮೆಟೊ ಇರುವ ಸಾಸ್‌ಗಳನ್ನು ಪರಿಚಯಿಸುತ್ತಿದ್ದೇವೆ. ಇಂತಹ ವೈವಿಧ್ಯತೆಗಳನ್ನು ಟ್ರೆಂಡ್‌ನಂತೆ ಗ್ರಾಹಕರಿಗೆ ಪರಿಚಯಿಸುತ್ತಿದ್ದು, ಟೊಮೆಟೊಗಳು ದೊರೆಯದೇ ಇರುವುದರಿಂದ ಈ ರೀತಿ ಮಾಡಲಾಗುತ್ತಿದೆ ಎಂದು ರೆಸ್ಟಾರೆಂಟ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:Bun Pizza: ಮಕ್ಕಳು ಪಿಜ್ಜಾ ಬೇಕು ಅಂತ ಹಠ ಮಾಡ್ತಿದ್ದಾರಾ? ಚಿಂತಿಸಬೇಡಿ, ಮನೆಯಲ್ಲೇ ಮಾಡಿ ಬನ್ನಲ್ಲಿ ಪಿಜ್ಜಾ!
ಬೆಲೆಗಳು ಗಗನಕ್ಕೇರಿರುವುದರಿಂದ ಟೊಮೆಟೊ ಬೆಲೆಯನ್ನು ಮಿತಿಗೊಳಿಸುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಿರುವ ವರ್ತಕರು, ನಾವೀಗ ಸಂಕಷ್ಟದಲ್ಲಿದ್ದೇವೆ ಹಾಗಾಗಿ ಇನ್ನು ಮುಂದೆ ಮಾರ್ಜಿನ್‌ಗಳನ್ನು ಲೆಕ್ಕಹಾಕಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಎಂದಿನಂತೆ ಟೊಮೆಟೊ ದೊರೆಯುತ್ತಿಲ್ಲ
ಕಳೆದ ಎರಡು ವಾರಗಳಲ್ಲಿ ಟೊಮೆಟೊ ಬೆಲೆ ಮೂರು ಬಾರಿ ಏರಿಕೆಯಾಗಿದೆ ಎಂದು ಇಟಾಲಿಯನ್ ಪಾಕಶಾಲೆಯ ಒಕ್ಕೂಟದ ಅಧ್ಯಕ್ಷ ಕಾರ್ಮೆಲೊ ಕಾರ್ನೆವಾಲೆ ತಿಳಿಸಿದ್ದಾರೆ. ರೆಸ್ಟೋರೆಂಟ್‌ಗಳು ಇನ್ನೂ ಟೊಮೆಟೊಗಳನ್ನು ಪಡೆಯುತ್ತಿದ್ದರೂ, ಯಾವಾಗಲೂ ಪಡೆಯುವಂತೆ ಸಾಮಾನ್ಯ ಪ್ರಮಾಣದಲ್ಲಿ ಅವುಗಳನ್ನು ಪಡೆಯುತ್ತಿಲ್ಲ ಎಂದು ಕಾರ್ನೆವಾಲೆ ತಿಳಿಸಿದ್ದಾರೆ.
ಟೊಮೆಟೊ ಲಭ್ಯವಿಲ್ಲದಿರುವುದು ತುಂಬಾ ಒತ್ತಡವನ್ನುಂಟು ಮಾಡಿದ್ದು ವಿಶೇಷವಾಗಿ ನಾವು ವಾರಕ್ಕೆ ಎರಡು ಬಾರಿ ಇಟಲಿಯಿಂದ ಆಮದು ಮಾಡಿಕೊಳ್ಳುತ್ತೇವೆ. ಎಲ್ಲಿಯಾದರೂ ಟೊಮೆಟೊ ದೊರೆತರೆ ಅದುವೆ ನಮ್ಮ ಅದೃಷ್ಟ ಎಂದು ಕಾರ್ನೆವಾಲೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ