• Home
 • »
 • News
 • »
 • trend
 • »
 • Trending| ಈ ಊರಿಗೆ ಸೂರ್ಯನೇ ಇಲ್ಲವೇ? ಸಮಸ್ಯೆ ಇಲ್ಲ ಬಿಡಿ; ದೈತ್ಯ ಕನ್ನಡಿಯ ಮೂಲಕ ಕೃತಕ ಸೂರ್ಯನ ಸೃಷ್ಟಿ!

Trending| ಈ ಊರಿಗೆ ಸೂರ್ಯನೇ ಇಲ್ಲವೇ? ಸಮಸ್ಯೆ ಇಲ್ಲ ಬಿಡಿ; ದೈತ್ಯ ಕನ್ನಡಿಯ ಮೂಲಕ ಕೃತಕ ಸೂರ್ಯನ ಸೃಷ್ಟಿ!

Youtube Video

ಸೂರ್ಯನ ಬೆಳಕಿನ ಕೊರತೆಯಿಂದಾಗಿ ಈ ಗ್ರಾಮದ ಜನರ ದೇಹದಲ್ಲಿನ ಸಿರೊಟೋನಿನ್ ಮಟ್ಟ ಕುಸಿಯುತ್ತಿದೆ. ನೈಸರ್ಗಿಕ ಬೆಳಕಿನ ಕೊರತೆಯು ಮನಸ್ಥಿತಿ, ನಿದ್ರೆ, ಶಕ್ತಿಯ ಮಟ್ಟಗಳು ಮತ್ತು ಅಪರಾಧ ದರಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದು ಎಂದು ಡಾ. ಕರಣ್ ರಾಜನ್ ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ.

ಮುಂದೆ ಓದಿ ...
 • Share this:

  ಆಳವಾದ ಕಣಿವೆ ಪ್ರದೇಶಗಳಲ್ಲಿರುವ ಈ ಇಟಾಲಿಯನ್ ಗ್ರಾಮವನ್ನು ಸುತ್ತಲಿನ ಆಲ್ಪ್ಸ್​ ಪರ್ತನ ಶ್ರೇಣಿಗಳು ಸುತ್ತುವರೆದಿವೆ. ಪರಿಣಾಮ ಈ ಗ್ರಾಮಕ್ಕೆ ವರ್ಷದಲ್ಲಿ ಮೂರು ತಿಂಗಳುಗಳ ಕಾಲ ಸೂರ್ಯನ ಬೆಳಕೇ ಬೀಳುತ್ತಿರಲಿಲ್ಲ. ಆದ್ದರಿಂದ, ಈ ಸಮಸ್ಯೆಯನ್ನು ನಿಭಾಯಿಸಲು, ಗ್ರಾಮಸ್ಥರು ಒಗ್ಗೂಡಿ ತಮ್ಮದೇ ಆದ ಸೂರ್ಯನ ಬೆಳಕನ್ನು ಇದೀಗ ನಿರ್ಮಿಸಿದ್ದಾರೆ. ತನ್ನ ಇತ್ತೀಚಿನ ಟಿಕ್‌ಟಾಕ್ ವೀಡಿಯೋದಲ್ಲಿ, ಎನ್‌ಎಚ್‌ಎಸ್ ಶಸ್ತ್ರಚಿಕಿತ್ಸಕ ಡಾ. ಕರಣ್ ರಾಜನ್ 90 ದಿನಗಳ ಕಾಲ ಸೂರ್ಯನ ಬೆಳಕನ್ನು ಸ್ವೀಕರಿಸದ ಸಮಸ್ಯೆಯನ್ನು ಈ ಗ್ರಾಮಸ್ಥರು ಹೇಗೆ ಪರಿಹರಿಸಿಕೊಂಡರು? ಎಂಬುದನ್ನು ವಿವರಿಸಿದ್ದಾರೆ.


  ಶಸ್ತ್ರಚಿಕಿತ್ಸಕ ಡಾ. ಕರಣ್ ರಾಜನ್ ಈ ವಾರದ ಆರಂಭದಲ್ಲಿ ಅಪ್‌ಲೋಡ್ ಮಾಡಿದ ತನ್ನ ವೀಡಿಯೊದಲ್ಲಿ, "ಸೂರ್ಯನ ಬೆಳಕಿನ ಕೊರತೆಯಿಂದಾಗಿ ಈ ಗ್ರಾಮದ ಜನರ ದೇಹದಲ್ಲಿನ ಸಿರೊಟೋನಿನ್ ಮಟ್ಟ ಕುಸಿಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಇದನ್ನು ಎಚ್ಚರಿಕೆಯ ಹಾರ್ಮೋನ್ ಎಂದೂ ಕರೆಯುತ್ತಾರೆ. ನೈಸರ್ಗಿಕ ಬೆಳಕಿನ ಕೊರತೆಯು ಮನಸ್ಥಿತಿ, ನಿದ್ರೆ, ಶಕ್ತಿಯ ಮಟ್ಟಗಳು ಮತ್ತು ಅಪರಾಧ ದರಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದು ಎಂದು ಅವರು ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ.


  ಹೀಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು, ಗ್ರಾಮಸ್ಥರು ಒಗ್ಗೂಡಿ ಒಂದು ದೈತ್ಯ ಕನ್ನಡಿಯನ್ನು ಸ್ಥಾಪಿಸಲು ನಿರ್ಧರಿಸಿದರು. 2006 ರಲ್ಲಿ, 8/5 ಮೀಟರ್ ಅಳತೆಯ ಉಕ್ಕಿನ ಹಾಳೆಯನ್ನು ಸಮೀಪದ ಶಿಖರದ ಮೇಲೆ ಸೂರ್ಯನ ಬೆಳಕನ್ನು ಪ್ರತಿಬಿಂಬಿಸಲು ಕೆಳಗಿರುವ ವಿಗನೆಲ್ಲಾ ಮುಖ್ಯ ಚೌಕದ ಮೇಲೆ ಇರಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಕನ್ನಡಿಯು ಕಂಪ್ಯೂಟರ್ ಚಾಲಿತವಾಗಿದ್ದು, ವಿಗನೆಲ್ಲಾ ಗ್ರಾಮವನ್ನು ಬೆಳಗಲು ಸೂರ್ಯನ ಹಾದಿಯನ್ನು ನಿರಂತರವಾಗಿ ಅನುಸರಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


  ಸ್ವಿಸ್ ಗಡಿಯ ಪಕ್ಕದಲ್ಲಿರುವ ವಿಗನೆಲ್ಲಾ ಗ್ರಾಮವು ಕಡಿದಾದ ಪರ್ವತಗಳಿಂದ ಆವೃತವಾಗಿದೆ. ಕನ್ನಡಿಯನ್ನು ಸ್ಥಾಪಿಸಿದ ಸಮಯದಲ್ಲಿ, ಹಳ್ಳಿ ಮೇಯರ್ ಪಿಯರ್‌ಫ್ರಾಂಕೊ ಮಿಡಾಲಿ ಇಟಲಿಯ ಅನ್ಸಾ ಸುದ್ದಿ ಸಂಸ್ಥೆಗೆ ಕನ್ನಡಿಯನ್ನು ಸ್ಥಾಪಿಸುವ ಪ್ರಕ್ರಿಯೆ ಸುಲಭವಲ್ಲ ಎಂದು ಹೇಳಿದರು. ಗ್ರಾಮ ಆಡಳಿತವು ಸರಿಯಾದ ವಸ್ತುಗಳನ್ನು ಕಂಡುಕೊಳ್ಳಬೇಕು, ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ವಿಶೇಷವಾಗಿ ಮಹತ್ವಾಕಾಂಕ್ಷೆಯ ಯೋಜನೆಗೆ ಅಪಾರ ಪ್ರಮಾಣದ ಹಣವನ್ನೂ ಹೂಡಿಕೆ ಮಾಡಬೇಕು ಎಂದು ಹೇಳಿದ್ದರು.


  ಈ ಯೋಜನೆಗೆ ಒಟ್ಟು ಸುಮಾರು 100,000 ಯೂರೋಗಳನ್ನು ವ್ಯಯಿಸಲಾಗಿದೆ(ರೂ. 87,30,022). ಈ ಯೋಜನೆಗೆ ಪ್ರಾದೇಶಿಕ ಅಧಿಕಾರಿಗಳು ಮತ್ತು ಬ್ಯಾಂಕ್ ಹಣಕಾಸು ಒದಗಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.


  ಆದಾಗ್ಯೂ, ಈ ಸಮಸ್ಯೆ ವಿಗನೆಲ್ಲಾ ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. 2013 ರಲ್ಲಿ, ನಾರ್ವೇಜಿಯನ್ ಪಟ್ಟಣವಾದ ಜುಖಾನ್ ಸೂರ್ಯನ ಬೆಳಕನ್ನು ಪಟ್ಟಣದ ಚೌಕಕ್ಕೆ ನಿರ್ದೇಶಿಸಲು ಪರ್ವತದ ಮೇಲೆ ಮೂರು ದೊಡ್ಡ ಕನ್ನಡಿಗಳನ್ನು ನಿರ್ಮಿಸಿತ್ತು. ಸ್ಕ್ಯಾಂಡಿನೇವಿಯನ್ ಪಟ್ಟಣವು ದೀರ್ಘ ಚಳಿಗಾಲವನ್ನು ಎದುರಿಸುತ್ತದೆ. ಈ ಪಟ್ಟಣದಲ್ಲಿ ವರ್ಷದ ಆರು ತಿಂಗಳ ಕಾಲ ಹಗಲು ಬೆಳಕೇ ಇರುವುದಿಲ್ಲ. ಸೂರ್ಯ ಚಲಿಸುವಾಗ ದಿನವಿಡೀ ತಿರುಗುತ್ತಿರುವ ಮೂರು ಹೆಲಿಯೋಸ್ಟಾಟ್‌ಗಳ ಸಹಾಯದಿಂದ ನಗರವಾಸಿಗಳು ಬೆಳಕನ್ನು ಪಡೆಯುತ್ತಾರೆ ಎಂದು ಬಿಬಿಸಿ ವರದಿ ಮಾಡಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:MAshok Kumar
  First published: