ಸಾಮಾನ್ಯವಾಗಿ ಯಾರಾದರೂ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತಿದ್ದರೆ, ಅವರಿಗೆ ವೈದ್ಯರು ಕೀಮೋಥೆರಪಿ ಚಿಕಿತ್ಸೆ ನೀಡಲು ಶುರುಮಾಡುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಸಮಯದಲ್ಲಿ ಕ್ಯಾನ್ಸರ್ (Cancer) ರೋಗದಿಂದ ಬಳಲುತ್ತಿರುವವರು ತಮ್ಮ ತಲೆಯ ಮೇಲಿನ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಳ್ಳುವುದನ್ನು ಸಹ ನಾವು ನೋಡಿರುತ್ತೇವೆ. ಹೌದು, ಕೀಮೋಥೆರಪಿ ಪ್ರಾರಂಭಿಸುವ ಮೊದಲು ತಲೆ ಮೇಲಿರುವ ಕೂದಲನ್ನು ಕತ್ತರಿಸುತ್ತಾರೆ, ಏಕೆಂದರೆ ಕೀಮೋಥೆರಪಿಯನ್ನು (Chemotherapy) ಪ್ರಾರಂಭಿಸಿದ ನಂತರ, ಕೂದಲು ಉದುರುವುದಕ್ಕೆ ಶುರುವಾಗುತ್ತವೆ ಮತ್ತು ನಿಮ್ಮ ನೆತ್ತಿಯಲ್ಲಿ ತುರಿಕೆ ಮತ್ತು ಕಿರಿಕಿರಿ ಉಂಟು ಮಾಡಬಹುದು. ನಿಮ್ಮ ತಲೆ ಬೋಳಿಸುವುದು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ (Help) ಮಾಡುತ್ತದೆ. ಅನೇಕ ಜನರು ಭಾಗಶಃ ಕೂದಲು ಉದುರುವಿಕೆಗಿಂತ ಸ್ವಚ್ಛವಾಗಿ (Cleaning) ತಲೆಯನ್ನು ಬೋಳಿಸಿಕೊಳ್ಳಲು ಇಷ್ಟಪಡುತ್ತಾರೆ.
ಹೀಗೆ ತಲೆ ಬೋಳಿಸಿಕೊಂಡಾಗ ಕೆಲವರು ನಾಲ್ಕು ಜನರ ಮಧ್ಯೆ ಬರೋದಕ್ಕೆ ಸ್ವಲ್ಪ ಮುಜುಗರವನ್ನು ಸಹ ಪಡಬಹುದು. ಇದನ್ನೆಲ್ಲಾ ಈಗೇಕೆ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸುತ್ತಿರಬಹುದಲ್ಲವೇ? ಇಲ್ಲೊಂದು ಇಂತಹದೇ ಒಂದು ಘಟನೆ ನಡೆದಿದೆ ನೋಡಿ.
ತಮ್ಮ ಸ್ನೇಹಿತೆಯ ಸಲುವಾಗಿ ಎಲ್ಲರೂ ತಲೆ ಬೋಳಿಸಿಕೊಂಡರಂತೆ..
ಹದಿಹರೆಯದವರ ಒಂದು ಗುಂಪು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತಮ್ಮ ಸ್ನೇಹಿತೆಗೆ ಬೆಂಬಲ ನೀಡಲು ಎಲ್ಲರೂ ತಮ್ಮ ತಲೆಯ ಮೇಲಿನ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿದ್ದಾರೆ. ಈ ಕ್ಷಣದ ಭಾವನಾತ್ಮಕ ವೀಡಿಯೋ ಈಗ ಆನ್ಲೈನ್ ನಲ್ಲಿ ಕಾಣಿಸಿಕೊಂಡಿದ್ದು, ಅನೇಕ ಜನರು ಇದನ್ನು ನೋಡಿ ತುಂಬಾನೇ ಭಾವುಕರಾಗಿದ್ದಾರೆ.
ಇದನ್ನೂ ಓದಿ: ವಿಶ್ವದ ಟಾಪ್ 10 ಅತ್ಯಂತ ಅಪಾಯಕಾರಿ ಇರುವೆಗಳಿವು!
ಕ್ಯಾನ್ಸರ್ ಪೀಡಿತ ಯುವತಿಯೊಬ್ಬಳು ತನ್ನ ಸ್ನೇಹಿತರ ತಂಡವು ಆಕೆಯ ಮನೆಯ ಬಾಗಿಲಿನ ಮುಂದೆ ಕಾಯುತ್ತಿರುವುದನ್ನು ನೋಡಿ ಆಶ್ಚರ್ಯಚಕಿತಳಾಗಿರುವುದನ್ನು ತೋರಿಸುವ ದೃಶ್ಯಗಳೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ. ಆರೋಗ್ಯ ಬಿಕ್ಕಟ್ಟಿನ ನಡುವೆ ನೈತಿಕ ಬೆಂಬಲವನ್ನು ನೀಡಲು ಅವರೆಲ್ಲರೂ ತಮ್ಮ ತಲೆಯ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿರುವುದನ್ನು ನೋಡಿದಾಗ ಅವಳು ಭಾವುಕಳಾಗಿ ಕಣ್ಣೀರು ಹಾಕುತ್ತಾಳೆ. ನಂತರ ಕ್ಯಾನ್ಸರ್ ನಿಂದ ಬಳಲುತ್ತಿರುವ ಆ ಯುವತಿ ಒಬ್ಬ ಸ್ನೇಹಿತನನ್ನು ತಬ್ಬಿಕೊಳ್ಳುತ್ತಾಳೆ, ಅವಳ ಎಲ್ಲಾ ಸ್ನೇಹಿತರು ಮನೆಯೊಳಗೆ ಸಾಲುಗಟ್ಟಿ ನಿಲ್ಲುವುದನ್ನು ಈ ವಿಡಿಯೋದಲ್ಲಿ ನಾವು ನೋಡಬಹುದು.
NO ONE FIGHTS ALONE: Teen fighting cancer is surprised by her group of friends when they show up to her house after shaving their own heads in an act of solidarity. If you have friends, you have everything! pic.twitter.com/CELM89caeQ
— GoodNewsMovement (@GoodNewsMVT) May 25, 2023
ಈ ಕ್ಲಿಪ್ ಮುಗಿಯುವವರೆಗೂ ಎಲ್ಲಾ ಹದಿಹರೆಯದವರ ಮುಖದಲ್ಲಿ ನಿಷ್ಕಲ್ಮಷವಾದ ನಗು ಇರುತ್ತದೆ. "ಯಾರೂ ಏಕಾಂಗಿಯಾಗಿ ಹೋರಾಡುವುದಿಲ್ಲ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹದಿಹರೆಯದವರು ಒಗ್ಗಟ್ಟಿನ ಕ್ರಿಯೆಯಲ್ಲಿ ತಮ್ಮ ತಲೆ ಬೋಳಿಸಿಕೊಂಡ ನಂತರ ತನ್ನ ಮನೆಗೆ ಬಂದಾಗ ಅವಳ ಸ್ನೇಹಿತರ ಗುಂಪನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ.ನೀವು ನಿಮ್ಮ ಜೀವನದಲ್ಲಿ ಒಳ್ಳೆಯ ಸ್ನೇಹಿತರನ್ನು ಹೊಂದಿದ್ದರೆ, ನಿಮಗೆ ಎಲ್ಲವೂ ಇದ್ದಂತೆ" ಎಂದು ಗುಡ್ ನ್ಯೂ ಮೂವ್ಮೆಂಟ್ ನ ಟ್ವಿಟರ್ ಪುಟದಲ್ಲಿ ಹಂಚಿಕೊಳ್ಳಲಾದ ಭಾವನಾತ್ಮಕ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. 71 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಈ ಆರೋಗ್ಯಕರ ಕ್ಲಿಪ್ ಈಗ ಟ್ವಿಟರ್ ನಲ್ಲಿ ನೋಡುಗರಿಗೆ ಕಣ್ಣೀರು ತರಿಸಿದೆ.
ಈ ವೀಡಿಯೋ ನೋಡಿ ಹೇಗೆಲ್ಲಾ ಪ್ರತಿಕ್ರಿಯಿಸಿದ್ದಾರೆ ನೋಡಿ ನೆಟ್ಟಿಗರು
ಈ ಕ್ಲಿಪ್ ಗೆ ಪ್ರತಿಕ್ರಿಯಿಸುವಾಗ, ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ತುಂಬಾ ಸುಂದರವಾಗಿದೆ ಈ ವಿಡಿಯೋ ಈ ರೀತಿಯ ಸ್ನೇಹಿತರನ್ನು ಹೊಂದಿರುವಾಗ ನೀವು ಜೀವನದಲ್ಲಿ ಎಂದಿಗೂ ಏಕಾಂಗಿಯಾಗಿರುವುದಿಲ್ಲ. ನೀವೆಲ್ಲರೂ ತುಂಬಾನೇ ಒಳ್ಳೆಯ ಸ್ನೇಹಿತರು" ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ಪ್ರಾಣಿಯ ಹಾಲಿನಲ್ಲಿ ಬಿಯರ್ಗಿಂತ ಹೆಚ್ಚು ಆಲ್ಕೋಹಾಲ್ ಇರುತ್ತಂತೆ!
ಇನ್ನೊಬ್ಬರು ಪ್ರತಿಕ್ರಿಯಿಸಿ "ಯುವಕರೆಲ್ಲರೂ ತಮ್ಮ ಸ್ನೇಹಿತೆಗಾಗಿ ಒಗ್ಗಟ್ಟಿನಿಂದ ನಿಂತಿರುವುದನ್ನು ನೋಡಿ ತುಂಬಾನೇ ಸಂತೋಷವಾಗಿದೆ. ನಾವು ಹೆಚ್ಚು ಒಟ್ಟಿಗೆ ನಿಂತಷ್ಟೂ ಹೊರೆ ಕಡಿಮೆಯಾಗುತ್ತದೆ. ಈ ರೀತಿಯ ಒಳ್ಳೆಯ ಕೆಲಸವನ್ನು ಹೀಗೆಯೇ ಮುಂದುವರಿಸಿ" ಎಂದು ಹೇಳಿದ್ದಾರೆ.
ಇಂತಹ ಘಟನೆಗಳು ಅಂತರ್ಜಾಲದಲ್ಲಿ ಜನರನ್ನು ಆಕರ್ಷಿಸುತ್ತಿರುವುದು ಇದೇ ಮೊದಲೇನಲ್ಲ. ಇದೇ ರೀತಿಯ ಒಂದು ಘಟನೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ತನ್ನ ಮಗಳನ್ನು ಬೆಂಬಲಿಸಲು ತಂದೆ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡಿರುತ್ತಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ