Bomby HighCourt: ಸಾರ್ವಜನಿಕ ರಜೆ ವಿಚಾರ ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್

ಯಾರಿಗೂ ಸಹ ಸಾರ್ವಜನಿಕ ರಜೆಗಾಗಿ ಮೂಲಭೂತ ಹಕ್ಕಿಲ್ಲ ಎಂಬ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ

ಬಾಂಬೆ ಹೈಕೋರ್ಟ್

ಬಾಂಬೆ ಹೈಕೋರ್ಟ್

  • Share this:
ಸಾರ್ವಜನಿಕ ರಜೆಗೆ (Public Holiday) ಯಾವುದೇ ಕಾನೂನು ಹಕ್ಕಿಲ್ಲ ಎಂಬ ಮಹತ್ವವಾದ ತೀರ್ಪೊಂದನ್ನು ಬುಧವಾರದಂದು ಬಾಂಬೆ ಉಚ್ಛ ನ್ಯಾಯಲಯ (Bombay High Court) ನೀಡಿದೆ. ಇದಕ್ಕೆ ಸಂಬಂಧಿಸಿದ ಅರ್ಜಿಯ(Application) ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮೇಲಿನ ತೀರ್ಪನ್ನು ನೀಡುತ್ತಾ, ದಾದ್ರಾ ಮತ್ತು ನಗರ ಹವೇಲಿ (Dadra and Nagar Haveli) ಆಡಳಿತಕ್ಕೆ ಆಗಸ್ಟ್ 2 ಅನ್ನು ಸಾರ್ವಜನಿಕ ರಜೆಯನ್ನಾಗಿ ಘೋಷಿಸುವಂತೆ ಸೂಚನೆ(Instructed) ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಸಾರ್ವಜನಿಕ ರಜೆಗಳ ಪಟ್ಟಿ
ಈ ಮುಂಚೆ ದಾದ್ರಾ ಹಾಗೂ ನಗರ ಹವೇಲಿಯ ಸಿಲ್ವಾಸ್ಸಾ ನಗರದ ನಿವಾಸಿಯಾಗಿರುವ ಕೃಷ್ಣಾಭಾಯಿ ಗೂಟಿಯಾ (51) ಹಾಗೂ ಆದಿವಾಸಿ ನವಜೀವನ್ ಜಂಗಲ್ ಆಂದೋಲನ್ ಎಂಬುವವರು ಅಕ್ಟೋಬರ್ 2021ರಲ್ಲಿ ಹೊರಡಿಸಲಾಗಿದ್ದ 2022ರ ಸಾರ್ವಜನಿಕ ರಜೆಗಳ ಪಟ್ಟಿಯ ಸೂಚನೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅವರು ಆಗಸ್ಟ್ 2, 2022ರ ದಿನಾಂಕವು ದಾದ್ರಾ ಮತ್ತು ನಗರ ಹವೇಲಿಯ ಸ್ವಾತಂತ್ರ್ಯಗೊಂಡ ದಿನವಾಗಿದ್ದು ಅದನ್ನು ಏಕೆ ಸಾರ್ವಜನಿಕ ರಜೆಯಲ್ಲಿ ಸೇರಿಸಿಲ್ಲ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: Bombay High Court| ಶುದ್ಧ ಕುಡಿಯುವ ನೀರನ್ನು ಪಡೆಯುವುದು ಎಲ್ಲರ ಮೂಲಭೂತ ಹಕ್ಕು; ಬಾಂಬೆ ಹೈಕೋರ್ಟ್

ಈ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಪೀಠದ ನ್ಯಾಯ ಮೂರ್ತಿಗಳಾದ ಗೌತಮ್ ಪಟೇಲ್ ಹಾಗೂ ಮಾಧವ್ ಜಾಮ್ದಾರ್ ಅವರು ಅರ್ಜಿದಾರರನ್ನು ಕುರಿತು, "ಸಾರ್ವಜನಿಕ ರಜೆಗಾಗಿ ಕಾನೂನಿನಲ್ಲಿ ನಿಮಗೆ ಯಾವ ಹಕ್ಕಿದೆ?"ಎಂದು ಪ್ರಶ್ನಿಸಿದ್ದಾಗಿ ವರದಿಯಾಗಿದೆ.

ಏನಿದು ಅರ್ಜಿ
ಗೂಟಿಯಾ ಅವರು ತಮ್ಮ ಅರ್ಜಿಯಲ್ಲಿ , ಆಗಸ್ಟ್ 2, 1954 ರಿಂದ 2020ರ ಆಗಸ್ಟ್ 2ರವರೆಗೆ ಈ ಕೇಂದ್ರಾಡಳಿತ ಪ್ರದೇಶವು ಭಾರತದಲ್ಲಿ ಸೇರ್ಪಡೆಯಾಗಿದ್ದರ ಗುರುತಾಗಿ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗಿದೆ. ಆದರೆ 2022ರ ಸಾರ್ವಜನಿಕ ರಜೆಯಲ್ಲಿ ಈ ದಿನವನ್ನು ಸೇರಿಸಲಾಗಿಲ್ಲದುದರ ಬಗ್ಗೆ ಯಾವುದೇ ಸಮಜಾಯಿಷಿ ನೀಡಲಾಗಿಲ್ಲ. ಆಗಸ್ಟ್ 15 ಅನ್ನು ಸ್ವಾತಂತ್ರ್ಯ ದಿನ ಹಾಗೂ ಜನವರಿ 26 ಅನ್ನು ಗಣತಂತ್ರ ದಿನಗಳನ್ನು ಸಾರ್ವಜನಿಕ ರಜಾದಿನಗಳನ್ನಾಗಿ ಆಚರಿಸಲಾಗುತ್ತಿದ್ದು ಈ ಕೇಂದ್ರಾಡಳಿತ ಪ್ರದೇಶದಲ್ಲಿರುವ ಜನರನ್ನು ಅವರ ಸ್ವಾತಂತ್ರ್ಯ ದಿನ ಆಚರಿಸದಂತೆ ವಂಚಿತರನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದರು.

ಗುಡ್ ಫ್ರೈಡೆ ರಜಾದಿನ
ಇದಕ್ಕೆ ಸಂಬಂಧಿಸಿದಂತೆ ಗೂಟಿಯಾ ಪರ ವಕೀಲರಾಗಿದ್ದ ಭಾವೇಶ್ ಪರ್ಮಾರ್ ಏಪ್ರಿಲ್ 15,2019ರ ಹೈಕೋರ್ಟ್ ಆದೇಶವೊಂದನ್ನು ಉಲ್ಲೇಖಿಸಿದ್ದರು. ಆ ಆದೇಶದಲ್ಲಿ ನ್ಯಾಯಾಲಯವು ದಾದ್ರಾ ಮತ್ತು ನಗರ ಹವೇಲಿ ಆಡಳಿತಕ್ಕೆ ಗುಡ್ ಫ್ರೈಡೇ ಅನ್ನು ಸಾರ್ವಜನಿಕ ರಜಾದಿನವನ್ನಾಗಿ ಸೇರ್ಪಡೆಗೊಳಿಸುವಂತೆ ಸೂಚಿಸಿತ್ತು. ಈ ಕುರಿತು ಭಾವೇಶ್ ಅವರು ಹೈಕೋರ್ಟ್ ಪೀಠಕ್ಕೆ "ಗುಡ್ ಫ್ರೈಡೆ ಅನ್ನು ರಜಾದಿನವನ್ನಾಗಿ ಘೋಷಿಸಬಹುದಾದರೆ ಆಗಸ್ಟ್ ಎರಡನ್ನು ಏಕೆ ಘೋಷಿಸಬಾರದು" ಎಂದು ಪ್ರಶ್ನಿಸಿದ್ದರು.

ಅರ್ಜಿಗಿಂತ ಅತ್ಯಂತ ಭಿನ್ನ
ಇದಕ್ಕೆ ಉತ್ತರ ನೀಡಿದ ನ್ಯಾಯಾಲಯವು, ಏಪ್ರಿಲ್ 19ರ ಆದೇಶವು ಬೇರೆಯದ್ದೆ ಆದ ತಳಹದಿಯನ್ನು ಹೊಂದಿತ್ತು ಎಂದು ಹೇಳಿದೆ. ಅಂದರೆ, ಗ್ಯಾಜೆಟ್‌ನಲ್ಲಿ ಹೇಳಿರುವಂತೆ ಕಡ್ಡಾಯವಾಗಿ ಗುಡ್ ಫ್ರೈಡೇ ಅನ್ನು ಸಾರ್ವಜನಿಕ ರಜೆಗೆ ಸೇರಿಸುವಂತೆ ಆದೇಶವನ್ನು ಅನುಷ್ಠಾನಕ್ಕೆ ತರಲು ವೈಫಲ್ಯವಾದುದರ ಬಗ್ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈಗ ಸಲ್ಲಿಸಲಾಗಿರುವ ಅರ್ಜಿಯಲ್ಲಿರುವುದು ಆ ಅರ್ಜಿಗಿಂತ ಅತ್ಯಂತ ಭಿನ್ನವಾಗಿರುವುದಾಗಿ ಕೋರ್ಟ್ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಕಪ್ಪು ಕೋಟು ಧರಿಸುವುದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಸಲ್ಲಿಸಿದ ವಕೀಲ

ಅಷ್ಟೆ ಅಲ್ಲದೆ ಬಾಂಬೆ ಹೈಕೋರ್ಟ್, "ಈಗಾಗಲೇ ನಾವು ಸಾಕಷ್ಟು ಸಾರ್ವಜನಿಕ ರಜಾದಿನಗಳನ್ನು ಹೊಂದಿದ್ದೇವೆ. ಈಗ ಆ ಸಂಖ್ಯೆಗಳನ್ನು ಕುಗ್ಗಿಸಬೇಕಾದ ಸಮಯ ಬಂದಿದೆ.. ಯಾರಿಗೂ ಸಹ ಸಾರ್ವಜನಿಕ ರಜೆಗಾಗಿ ಮೂಲಭೂತ ಹಕ್ಕಿಲ್ಲ" ಎಂಬ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.
Published by:vanithasanjevani vanithasanjevani
First published: