Electricity ಇಲ್ಲದೆ ಕಡಿಮೆ ನೀರಿನಲ್ಲಿ ಬಟ್ಟೆ ತೊಳೆಯುತಂತ್ತೆ ಈ Washing Machine: ಹೇಗಿದೆ ನೋಡಿ..!

ಸಲಾಡ್ ಸ್ಪಿನ್ನರ್ ತತ್ವಗಳ ಆಧಾರದ ಮೇಲೆ ಯಂತ್ರವನ್ನು ವಿನ್ಯಾಸಗೊಳಿಸಿದ್ದು, ಇದು ಪ್ರತಿ ತೊಳೆಯುವಿಕೆಗೆ 5 ಕೆಜಿ ಸಾಮರ್ಥ್ಯ ಮತ್ತು 500 RPM ವರೆಗಿನ ವೇಗವನ್ನು ಹೊಂದಿದೆ.

ನವಜೋತ್ ಸಾಹ್ನಿ

ನವಜೋತ್ ಸಾಹ್ನಿ

  • Share this:
ಬಟ್ಟೆ ತೊಳೆಯುವ ಮಷಿನ್ ಈಗ ಮನೆಯ ಅಗತ್ಯವಾದ ಸಾಧನ. ಫೋನ್, ಟಿವಿ, ಮಿಕ್ಸಿ, ರೆಫ್ರಿಜರೇಟರ್‌ಗಳಂತೆ (Refrigerator) ಮನೆಯಲ್ಲಿ ಇರಲೇಬೇಕಾದ (Home Appliances) ಸಾಧನಗಳಲ್ಲಿ ಬಟ್ಟೆ ತೊಳೆಯುವ ಯಂತ್ರ ಕೂಡ ಸೇರಿದೆ. ಈಗಿನ ಕಾಲದ ಮಹಿಳೆಯರು ಕೈಯಲ್ಲಿ ಬಟ್ಟೆ ತೊಳಯುವುದೆಂದರೆ ಮೂಗು ಮುರಿಯುತ್ತಾರೆ, ಅದೇ ವಾಷಿಂಗ್ ಮೆಶಿನ್(Washing Machine) ಆದ್ರೆ ಖುಷಿ ಪಡ್ತಾರೆ. ಈಗಂತೂ ಎಲ್ಲದಕ್ಕೂ ಯಂತ್ರಗಳನ್ನು ಉಪಯೋಗಿಸುವ ಕಾಲ ಬಂದುಬಿಟ್ಟಿದೆ.ಬಟ್ಟೆ ತೊಳೆಯಬೇಕಾದರೆ ಸಾಕಷ್ಟು ಪ್ರಮಾಣದ ನೀರು, ಡಿಟರ್ಜೆಂಟ್​ ಬೇಕು. ಇದಲ್ಲದೇ ಅಧಿಕ ಪ್ರಮಾಣದ ನೀರೂ ಪೋಲಾಗುತ್ತದೆ. ಇದನ್ನು ತಪ್ಪಿಸಲು ಮಹಿಳೆಯರಿಗೆ ನೆರವಾಗಲು ತಮಿಳುನಾಡಿನಲ್ಲಿ (NRI in Tamil Nadu) ಎನ್ಆರ್‌ಐ ಒಬ್ಬರು ಹೊಸ ಮಾದರಿಯ ವಾಷಿಂಗ್ ಮಷಿನ್​ ಒಂದನ್ನು ಕಂಡುಹಿಡಿದಿದ್ದಾರೆ. ಹಾಗಾದರೆ ಏನಿದೆ ವಿಶೇಷತೆ ಈ ಹೊಸ ಬಟ್ಟೆ ತೊಳೆಯುವ ಯಂತ್ರದಲ್ಲಿ ನೋಡೋಣ.

ಹೊಸ ವಾಷಿಂಗ್ ಮಷಿನ್‌ಗೆ ಸ್ಪೂರ್ತಿ

ಬ್ರಿಟಿಷ್ ಸಂಜಾತ ಭಾರತೀಯ ನವಜೋತ್ ಸಾಹ್ನಿ ಎಂಬುವವರು ಹೊಸ ರೀತಿಯ ವಾಷಿಂಗ್ ಮಷಿನ್ ಕಂಡುಹಿಡಿದಿದ್ದಾರೆ. ಇದರ ವಿಶೇಷತೆ ಏನೆಂದರೆ ಇದು ವಿದ್ಯುತ್ ಇಲ್ಲದೆ ಮತ್ತು ಕಡಿಮೆ ಪ್ರಮಾಣದ ನೀರನ್ನು ಬಳಸಿಕೊಂಡು ಬಟ್ಟೆಯನ್ನು ಸ್ವಚ್ಛವಾಗಿ ತೊಳೆಯುತ್ತದೆಯಂತೆ. ನವಜೋತ್ ಯುಕೆಯಿಂದ ಭಾರತಕ್ಕೆ ಮರಳಿದಾಗ ತಮಿಳುನಾಡಿನ ಕುಯಿಲಪಾಳ್ಯಂ ಗ್ರಾಮದಲ್ಲಿ ತನ್ನ ಗೆಳತಿ ದಿವ್ಯಾ ಅವರನ್ನು ಭೇಟಿಯಾಗಿದ್ದರು. ಗೃಹಿಣಿ ದಿವ್ಯಾ ನವಜೋತ್ ಸಾಹ್ನಿ ಅನ್ವೇಷಿಸಿರುವ ಹೊಸ ವಾಷಿಂಗ್ ಮಷಿನ್‌ಗೆ ಸ್ಪೂರ್ತಿ ಎನ್ನಬಹುದು.

ನವಜೋತ್ ಸಾಹ್ನಿ ತನ್ನ ಸ್ನೇಹಿತೆ ದಿವ್ಯಾಳ ಮನೆಗೆ ಭೇಟಿ ನೀಡಿದ ಸಂದರ್ಭ ದಿವ್ಯಾ ಬಟ್ಟೆ ತೊಳೆಯಲು ಕಷ್ಟಪಡುತ್ತಿರುವುದನ್ನು ನೋಡಿದ ನಂತರ ನವಜೋತ್ ಕಡಿಮೆ ಬೆಲೆಯ, ವಿಶಿಷ್ಟವಾದ ವಾಷಿಂಗ್ ಮಷಿನ್ ಅನ್ನು ಆವಿಷ್ಕರಿಸಿದರು. ವೃತ್ತಿಯಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿರುವ ನವಜೋತ್ ವಿದ್ಯುತ್ ಇಲ್ಲದೇ ಕೇವಲ 50% ಕಡಿಮೆ ನೀರಲ್ಲಿ ಬಟ್ಟೆ ತೊಳೆಯುವ ಯಂತ್ರವನ್ನು ಕಂಡುಹಿಡಿದಿದ್ದಾರೆ, ಈ ಮಷಿನ್ ಬಟ್ಟೆಗಳನ್ನು ತೊಳೆಯುವುದು ಮಾತ್ರವಲ್ಲದೆ ಒಣಗಿಸುತ್ತದೆ ಕೂಡ. ಇದರ ಬೆಲೆ ಜನಸಾಮಾನ್ಯರ ಕೈಗೆಟಕುವಂತಿದೆ. 5,000-6,000 ರೂ. ಬೆಲೆಯಲ್ಲಿ ಈ ಯಂತ್ರ ಸಿಗುತ್ತದೆ. ನವಜೋತ್‌ನ ಆವಿಷ್ಕಾರವು ವಿಶ್ವದಾದ್ಯಂತ ಗುರುತಿಸಿಕೊಂಡಿದ್ದು, ಹಲವು ಅನುದಾನಗಳು, ಪ್ರಶಸ್ತಿಗಳು ಲಭಿಸುತ್ತಿವೆ.

ಇದನ್ನೂ ಓದಿ: Life Hacks: ಬಟ್ಟೆಯನ್ನು ವಾಷಿಂಗ್ ಮೆಷಿನ್​ಗೆ ಹಾಕುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಹೇಗೆ ಕೆಲಸ ಮಾಡುತ್ತದೆ..?

ಸಲಾಡ್ ಸ್ಪಿನ್ನರ್ ತತ್ವಗಳ ಆಧಾರದ ಮೇಲೆ ಯಂತ್ರವನ್ನು ವಿನ್ಯಾಸಗೊಳಿಸಿದ್ದು, ಇದು ಪ್ರತಿ ತೊಳೆಯುವಿಕೆಗೆ 5 ಕೆಜಿ ಸಾಮರ್ಥ್ಯ ಮತ್ತು 500 RPM ವರೆಗಿನ ವೇಗವನ್ನು ಹೊಂದಿದೆ. ಇದು 2 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ ಮತ್ತು 35 ಕೆಜಿ ತೂಕವಿದೆ. ಸ್ಪೀಡ್-ಸೋಕ್ ಡ್ರಮ್ ಅತ್ಯುತ್ತಮವಾದ ನಿರ್ಜಲೀಕರಣವನ್ನು ಒದಗಿಸುತ್ತದೆ. ಅದು ಒಣಗಿಸುವ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಕೈಯಲ್ಲಿ ತೊಳೆಯುವುದಕ್ಕಿಂತ 75% ವೇಗವಾಗಿರುತ್ತದೆ.

ವಿಡಿಯೋ ನೋಡಿ:

ಬಟ್ಟೆಗಳನ್ನು ಒಳಗೆ ಹಾಕಿ ಹ್ಯಾಂಡಲ್‌ನಿಂದ ಚಕ್ರವನ್ನು ತಿರುಗಿಸಿದರೆ ಬಟ್ಟೆ ಕ್ಲೀನ್ ಆಗುತ್ತದೆ. ನವಜೋತ್‌ ಆಗಸ್ಟ್ 2018ರಲ್ಲಿ ತಮ್ಮ ಮೊದಲ ಯಂತ್ರವನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ಇರಾಕ್ ಮತ್ತು ಲೆಬನಾನ್‌ನಾದ್ಯಂತ 150ಕ್ಕೂ ಹೆಚ್ಚು ಮಷಿನ್‌ಗಳನ್ನು ನೀಡಿದ್ದು, ಸುಮಾರು 1,350 ಜನರು ಲಾಭ ಪಡೆದಿದ್ದಾರೆ. ಇವರ 'ದಿ ವಾಷಿಂಗ್ ಮೆಷಿನ್ ಪ್ರಾಜೆಕ್ಟ್' ನಿಂದ ಯೋಜನೆಯಡಿ ಸಂಸ್ಥೆಗಳು ಇವರಿಂದ ಯಂತ್ರಗಳನ್ನು ಖರೀದಿಸಿ ಉಚಿತವಾಗಿ ವಿತರಿಸುತ್ತಿವೆ.

ಕ್ಲೀನ್ ಅಡುಗೆ ಸ್ಟೌವ್‌

"ನಾನು ಒಂದೊಳ್ಳೆಯ ವ್ಯಾಕ್ಯೂಮ್ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಹಳ್ಳಿಯ ಜೀವನಶೈಲಿ ಮತ್ತು ಅದರ ಸಮಸ್ಯೆಗಳನ್ನು ಅನುಭವಿಸಿದ ನಂತರ ಅವರಿಗಾಗಿ ನಾನು ಏನನ್ನಾದರೂ ಮಾಡಬೇಕು ಅನ್ನಿಸಿತ್ತು. ಹಾಗಾಗಿ ಕೆಲಸ ಬಿಟ್ಟು ಸುಮಾರು ಒಂದು ವರ್ಷ ಈ ಯಂತ್ರ ತಯಾರಿಸಲು ಕಳೆದಿದ್ದೇನೆ ಮತ್ತು ನನಗೆ ಫಲ ಸಿಕ್ಕಿದೆ ಎಂದು ನವಜೋತ್ ಹೇಳಿದ್ದಾರೆ. ನವಜೋತ್ ಮೊದಲ ಆವಿಷ್ಕಾರವೆಂದರೆ 2017ರಲ್ಲಿ ಬಂದ ಕ್ಲೀನ್ ಅಡುಗೆ ಸ್ಟೌವ್‌ಗಳು. ಇದು ಕಟ್ಟಿಗೆ ಸಂಗ್ರಹಿಸಲು ಆಗಾಗ್ಗೆ ಕಾಡಿನೊಳಗೆ ಪ್ರಯಾಣಿಸುವ ಮಹಿಳೆಯರ ಸಲುವಾಗಿ ಆಗಿತ್ತು. ಮಹಿಳೆಯರು ಕೈಗಳಿಂದ ಬಟ್ಟೆ ಒಗೆಯುವುದರಿಂದ ಸಮಯವೆಲ್ಲಾ ಅಲ್ಲೇ ವ್ಯರ್ಥವಾಗುತ್ತದೆ. ಅಲ್ಲದೇ ಅವರು ಬೆನ್ನು ನೋವು ಚರ್ಮದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇವೆಲ್ಲದ್ದಕ್ಕೆ ಪರಿಹಾರ ಈ ಮಷಿನ್ ಎಂದಿದ್ದಾರೆ.

ಇದನ್ನೂ ಓದಿ: Guinness World Record: ಒಂದೂವರೆ ಸಾವಿರ ವಾಷಿಂಗ್ ಮಷೀನ್​ನಿಂದ ವಿಶ್ವದಾಖಲೆ!

ನವಜೋತ್ 12 ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪ್ರಯಾಣಿಸಿ ಅಧ್ಯಯನ ನಡೆಸಿದರು. ಸುಮಾರು 2,500ಕ್ಕೂ ಹೆಚ್ಚು ಕುಟುಂಬಗಳೊಂದಿಗೆ ಮಾತನಾಡಿದರು. ಅವರೆಲ್ಲಾ ಕೈಯಲ್ಲಿ ಬಟ್ಟೆ ತೊಳೆಯುವ ಕಷ್ಟಗಳನ್ನು ಹೇಳಿಕೊಂಡರು. ಪ್ರಸ್ತುತ, ಅವರು 15 ದೇಶಗಳಿಂದ ಯಂತ್ರದ 2,000ಕ್ಕೂ ಹೆಚ್ಚು ಫ್ರೀ ಆರ್ಡರ್‌ಗಳು ಬಂದಿರುವುದಾಗಿ ಹೆಳಿದ್ದಾರೆ.
Published by:vanithasanjevani vanithasanjevani
First published: