ಇತ್ತೀಚಿಗಿನ ಕಾಲದಲ್ಲಿ (Recent Days) ಯಾವುದೇ ಆಹಾರ, ವಸ್ತುಗಳನ್ನು ಕೊಂಡುಕೊಳ್ಳುವಾಗ ಹುಷಾರಾಗಿರಬೇಕು. ಯಾಕೆಂದರೆ, ಒಂದು ಫ್ರಾಡ್ ಆಗಿರುತ್ತೆ, ಇಲ್ಲದಿದ್ದಲ್ಲಿ ಕಾಸ್ಟ್ಲಿ ಐಟಮ್ಗಳು (Costly Items) ಆಗಿರುತ್ತೆ. ತೆಗೆದುಕೊಳ್ಳುವಾಗ ನೂರು ಬಾರಿ ಯೋಚನೆ ಮಾಡಿ ಕೊಂಡುಕೊಳ್ಳಬೇಕು. ಯಾರಾದ್ರು ಫ್ರೀಯಾಗಿ ಆಹಾರವನ್ನು ಕೊಡ್ತಾರಾ? ಅಬ್ಬಾ! ಇಂಥಾ ಕಾಲದಲ್ಲಿ ಯಾರೂ ಕೂಡ ಬಹುಶಃ ಫ್ರೀಯಾಗಿ ಫುಡ್ ಕೊಡೋದು ಡೌಟೇ (Doubt) ಬಿಡಿ. ದೇವಸ್ಥಾನದ ಬಳಿ ಇರುವ ಭಿಕ್ಷುಕರಿಗೆ ಆಹಾರ ನೀಡುವುದನ್ನು ನಾವು ನೋಡಿರ್ತೇವೆ ಅಥವಾ ಅನಾಥಾಶ್ರಮ, ವೃದ್ಧಾಶ್ರಮದಗಳಲ್ಲಿ ಫ್ರೀಯಾಗಿ ಊಟ ಕೊಡೋದನ್ನು ನೋಡಿರುತ್ತೇವೆ. ಇದೀಗ ಒಂದು ಹೋಟೇಲ್ ಫ್ರೀಯಾಗಿ ಊಟ ನೋಡ್ತಾ ಇದ್ಯಂತೆ.
ಅರೇ! ಇದು ನಿಜನಾ, ಯಾಕೆ ಹೀಗೆ? ಈ ಎಲ್ಲಾ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಬಹುದು. ಯಾರು ತಾನೇ ಈ ಕಾಲದಲ್ಲಿ ಹೀಗೆ ಫ್ರೀಯಾಗಿ ಕೊಡ್ತಾರೆ ಅಲ್ವಾ? ಧರ್ಮಛತ್ರಗಳು ಇರೋದು ನಿಮಗೆ ಗೊತ್ತು. ಅಲ್ಲಿ ಫ್ರೀಯಾಗಿ ನಿರಾಶ್ರಿತರು, ಎಮರ್ಜನ್ಸಿಯ ಜನರು ತಂಗಬಹುದು ಹಾಗೆಯೇ ಆಹಾರವನ್ನು ಸೇವಿಸಬಹುದು. ಇದೀಗ ಬೆಂಗಳೂರಿನ ಒಂದು ಹೋಟೇಲ್ ಸಖತ್ ವೈರಲ್ ಆಗ್ತಾ ಇದೆ. ಏನು ಅಂತ ತಿಳಿಸುಕೊಳ್ಳಲು ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.
ಬೆಂಗಳೂರಿನಲ್ಲೊಂದು ನೋ ಬಿಲ್ ಹೋಟೆಲ್ ಆರಂಭವಾಗಿದೆ. ಇದರ ವಿಶೇಷತೆ ಏನು ಗೊತ್ತಾ? ಹೌದು, ಬೆಂಗಳೂರಿನ ನಾಗರಬಾವಿಯಲ್ಲಿ ವಿಶಿಷ್ಟ ಹೋಟೆಲ್‌ವೊಂದು ಆರಂಭವಾಗಿದೆ. ಇಲ್ಲಿ ಹೊಟ್ಟೆ ತುಂಬೋ ಅಷ್ಟು ಎಷ್ಟು ಬೇಕಾದರೂ ತಿನ್ನಬಹುದು. ಆದರೆ ವಿಶೇಷ ಎಂಬಂತೆ ನೀವು ಎಷ್ಟು ಊಟ ಮಾಡಿದರೂ ಇಲ್ಲಿ ಬಿಲ್ ಪಾವತಿಸುವ ಅಗತ್ಯವಿಲ್ಲ! ಅರೆ ಈಗಿನ ಕಾಲದಲ್ಲೂ ಇಂತ ಹೋಟೆಲ್ ಆರಂಭವಾಗುತ್ತಾ ಅಂತ ನೀವು ಆಶ್ಚರ್ಯ ಪಟ್ಟರೆ ನಿಜಕ್ಕೂ ಹೌದು.
ಇದನ್ನೂ ಓದಿ: 31 ದಿನಗಳ ಕಾಲ ಕೀಟ ತಿಂದು ಬದುಕಿದ ಪುಣ್ಯಾತ್ಮ, ಕಥೆ ಕೇಳಿದ್ರೆ ಮೈ ಜುಮ್ಮೆನ್ನುತ್ತೆ
ನಾಗರಬಾವಿಯ 11ನೇ ಬ್ಲಾಕ್, ಎರಡನೇ ಹಂತದಲ್ಲಿರುವ ‘ನಮ್ಮನೆ ಊಟ’ ಪಕ್ಕದಲ್ಲಿ ‘ಅನ್ನಪೂರ್ಣೇಶ್ವರಿ ಹೋಟೆಲ್ ತೆರೆಯಲಾಗಿದೆ. ಇಲ್ಲಿ ಫ್ರೀಯಾಗಿ ಊಟ ಸಿಗುತ್ತದೆ. ಇಲ್ಲಿ ಎಷ್ಟು ಬೇಕೋ ಅಷ್ಟು ಹೊಟ್ಟೆ ತುಂಬಾ ತಿಂದು, ತೃಪ್ತಿಯಾಗಿದ್ದರೆ ಅಲ್ಲಿರುವ ಹುಂಡಿಯಲ್ಲಿ ನಮಗೆ ಸಾಧ್ಯವಾದಷ್ಟು ಹಣವನ್ನು ಹಾಕಬಹುದಾಗಿದೆ. ಹಣ ಹಾಕಲೇಬೇಕೆಂಬ ಏನಿಲ್ಲ.
ಇಲ್ಲಿ ಡೈಲಿ ನಾಟಿ ಸ್ಟೈಲ್ ಮುದ್ದೆ, ವೆಜ್ ಊಟವನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಊಟ ಕೊಡಲಾಗುತ್ತದೆ. ನಾಟಿ ಸ್ಟೈಲ್ ಮುದ್ದೆ, ಚಪಾತಿ, ಪಲ್ಯ, ಸಾರು, ಅನ್ನ, ಸ್ವೀಟ್ ಈ ಹೋಟೆಲಿನ ಮೆನು. ಊಟದ ನಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿ ಪ್ರತಿದಿನ ನೂರಾರು ಕೂಲಿ ಕಾರ್ಮಿಕರು, ಬಡವರು ಊಟ ಮಾಡುತ್ತಿದ್ದಾರೆ. ಈ ರೀತಿಯ ಹೋಟೆಲ್‌ಗಳನ್ನು ನಾನಾ ಕಡೆ ತೆರೆಯುವ ಯೋಜನೆ ಕೂಡ ಇದೆ ಎಂದು ಹೋಟೆಲ್ ಮಾಲಿಕ ಕಿರಣ್ ಗೌಡ ತಿಳಿಸಿದ್ದಾರೆ.
ಈ ಹೋಟೆಲ್ ಅನ್ನು ಬಿಗ್ ಬಾಸ್ - 6 ರ ಸ್ಪರ್ಧಿ ಜಿಮ್ ರವಿ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಎಲ್ಲಾ ಸೆಲೆಬ್ರಿಟಿಗಳನ್ನು ಈ ಹೋಟೆಲ್‌ಗೆ ಕರೆಯುತ್ತೇವೆ ಎಂದರು.
ಡಿ.ಹೆಚ್.ಕಿರಣ್ ಗೌಡ ಹಾಗೂ ಸ್ನೇಹಿತರ ತಂಡ ಸೇರಿಕೊಂಡು ಈ ಹೋಟೆಲನ್ನು ಆರಂಭಿಸಿದ್ದಾರೆ. ಈ ಪರಿಕಲ್ಪನೆಯನ್ನು ಅವರು ಸಿಂಗಾಪುರದ ರೆಸ್ಟೋರೆಂಟ್‌ನಿಂದ ಅನುಕರಿಸಿದ್ದಾರೆ. ಇದರಿಂದಲೇ ಸ್ಪೂರ್ತಿಯನ್ನು ಪಡೆದು ಈ ಹೋಟೆಲನ್ನು ತೆರೆಯಲಾಗಿದೆ. ಇವರ ಈ ಕಾರ್ಯಕ್ಕೆ ಹಲವಾರು ಜನರು ಶ್ಲಾಘನೆ ಮಾಡಿ, ಸಹಾಯ ಕೂಡ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ