Millionaire Story: ಪಾರ್ಕ್​ ಬೆಂಚ್​ಗಳ ಮೇಲೆ ಮಲಗಿ ದಿನಗಳನ್ನು ಕಳೆದಿದ್ದ ವ್ಯಕ್ತಿ ಈಗ ಮಿಲಿಯನೇರ್..!

Nick Mocuta: ಅವರು ಸಣ್ಣ ಫ್ಲ್ಯಾಟ್‍ಗಾಗಿ ಹಣವನ್ನು ಉಳಿಸಲು, ಪರಿಚಾರಕನಂತೆ ಕಾರುಗಳನ್ನು ಪಾರ್ಕಿಂಗ್ ಮಾಡುವಂತಹ ಚಿಕ್ಕಪುಟ್ಟ ಉದ್ಯೋಗಗನ್ನು ಹುಡುಕುವಲ್ಲಿ ಅವರು ಯಶಸ್ವಿಯಾದರು. ಕೆಲವು ತಿಂಗಳ ಬಳಿಕ ಅವರ ಇಂಗ್ಲೀಷ್ ಸುಧಾರಣೆ ಆಯಿತು ಮತ್ತು ಅವರಿಗೆ ರಿಯಲ್ ಎಸ್ಟೇಟ್ ಬ್ರೋಕರ್ ಲೈಸೆನ್ಸ್ ಸಿಕ್ಕಿತು.

Nick Mocuta / ನಿಕ್ ಮೊಕುಟಾ

Nick Mocuta / ನಿಕ್ ಮೊಕುಟಾ

 • Share this:
  ಸೂರಿಗೆ ಗತಿಯಿಲ್ಲದೆ ಉದ್ಯಾನವನದ ಬೆಂಚುಗಳ ಮೇಲೆ ಮಲಗಿ ದಿನಗಳನ್ನು ಕಳೆದಿದ್ದ ವ್ಯಕ್ತಿಯೊಬ್ಬ ಈಗ ಲಕ್ಷಾಧಿಪತಿ. 37 ವರ್ಷದ ನಿಕ್ ಮೊಕುಟಾ (Nick Mocuta), ತಮಗೆ 21 ವರ್ಷ ವಯಸ್ಸಿದ್ದಾಗ ಜೇಬಲ್ಲಿ 500 ಡಾಲರ್ (37,000 ರೂ.) ಇಟ್ಟುಕೊಂಡು ರೊಮೇನಿಯಾದಿಂದ (Romania ) ಯುಎಸ್‍ಗೆ ಬಂದಿದ್ದರು. ಅವರು ಲಾಸ್ ಏಂಜಲೀಸ್‌ಗೆ ಬಂದಾಗ, ತಮಗಾಗಿ ಒಂದು ಅಪಾರ್ಟ್‍ಮೆಂಟನ್ನು ಹುಡುಕುವುದು ಸಾಧ್ಯವಾಗಲಿಲ್ಲ ಮತ್ತು ಅವರು ಬೇರೆ ಗತಿ ಇಲ್ಲದೆ ಉದ್ಯಾನವನಗಳ ಬೆಂಚುಗಳಲ್ಲಿ ಮಲಗಬೇಕಾಯಿತು. ಹೊಟ್ಟೆ ತುಂಬಿಸಿಕೊಳ್ಳುವುದು ಕೂಡ ಕಷ್ಟವಿತ್ತು. ಅವರಿಗೆ ಸರಿಯಾಗಿ ಇಂಗ್ಲೀಷ್ (English) ಕೂಡ ಬರುತ್ತಿರಲಿಲ್ಲ.

  ಅಂತಹ ಕಷ್ಟದ ದಿನಗಳನ್ನು ಕಂಡಿದ್ದ ಅವರೀಗ ಯುಎಸ್‍ನ ನಾಗರೀಕ, ಅಷ್ಟೇ ಅಲ್ಲ ತನ್ನ ಕುಟುಂಬದವರಿಗೂ ಮನೆಗಳನ್ನು ಖರೀದಿಸಿಕೊಡುವಷ್ಟು ಶ್ರೀಮಂತ.

  “ನಾನು ಮೊದಲ ಬಾರಿಗೆ ನಗರಕ್ಕೆ ಬರಲು ಟ್ಯಾಕ್ಸಿಯಲ್ಲಿ ಪ್ರಯಾಣಿಸಿದಾಗ 100 ಡಾಲರ್ ವೆಚ್ಚವಾಯಿತು, ನನ್ನಲ್ಲಿ 400 ಡಾಲರ್ ಮಾತ್ರ ಉಳಿಯಿತು – ಅದೊಂದು ಸಾಂಸ್ಕೃತಿಕ ಶಾಕ್ ಆಗಿತ್ತು. ನಾನು ಅದನ್ನು ಯಾವತ್ತೂ ಮರೆಯುವುದಿಲ್ಲ. ಲಾಸ್ ಏಂಜಲೀಸ್‌ನಲ್ಲಿ ನಾನು ನಿರಾಶ್ರಿತನಾಗಿದ್ದೆ, ಉದ್ಯಾನವನಗಳ ಬೆಂಚುಗಳಲ್ಲಿ ಮಲಗಿದೆ ಮತ್ತು ಅತ್ಯಂತ ಕಡಿಮೆ ಹಣದಲ್ಲಿ ಊಟ ಮಾಡಿದೆ. ಮೆಕ್‍ಡೊನಾಲ್ಡ್ಸ್‌ಗೆ ಹೋಗಿ ಒಂದು ಡಾಲರ್‌ಗೆ ಬರ್ಗರ್ ಖರೀದಿಸುತ್ತಿದ್ದೆ ಮತ್ತು ಹೆಚ್ಚುವರಿ ಶುಲ್ಕ ವಿಧಿಸುತ್ತಾರೆ ಎಂಬ ಕಾರಣಕ್ಕೆ ಚೀಸ್ ಬೇಡ ಎನ್ನುತ್ತಿದ್ದೆ,” ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ ನಿಕ್.

  ಅವರು ಸಣ್ಣ ಫ್ಲ್ಯಾಟ್‍ಗಾಗಿ ಹಣವನ್ನು ಉಳಿಸಲು, ಪರಿಚಾರಕನಂತೆ ಕಾರುಗಳನ್ನು ಪಾರ್ಕಿಂಗ್ ಮಾಡುವಂತಹ ಚಿಕ್ಕಪುಟ್ಟ ಉದ್ಯೋಗಗನ್ನು ಹುಡುಕುವಲ್ಲಿ ಅವರು ಯಶಸ್ವಿಯಾದರು. ಕೆಲವು ತಿಂಗಳ ಬಳಿಕ ಅವರ ಇಂಗ್ಲೀಷ್ ಸುಧಾರಣೆ ಆಯಿತು ಮತ್ತು ಅವರಿಗೆ ರಿಯಲ್ ಎಸ್ಟೇಟ್ ಬ್ರೋಕರ್ ಲೈಸೆನ್ಸ್ ಸಿಕ್ಕಿತು.

  2013ರಲ್ಲಿ , ಆಮದು ಮಾಡಿಕೊಂಡ ವಸ್ತುಗಳನ್ನು ಇಬೇಯಲ್ಲಿ ಮಾರುವ ಪ್ರಯೋಗ ಮಾಡಲು ನಿರ್ಧರಿಸಿದರು. ಅದರಿಂದ, ಆರು ತಿಂಗಳೊಳಗೆ ತಿಂಗಳಿಗೆ 3,000 - 4,000 ಡಾಲರ್ ಆದಾಯ ಗಳಿಸುವಂತಾದರು. ಅವರು ಬ್ರೋಕರ್ ಕೆಲಸವನ್ನು ಬಿಟ್ಟು, ಪೂರ್ಣ ಪ್ರಮಾಣದಲ್ಲಿ ಇ ಕಾಮರ್ಸ್‍ನಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದರು.

  “ತಂದೆ ಅಕೌಟೆಂಟ್ ಮತ್ತು ತಾಯಿ ಶಿಕ್ಷಕಿ ಆಗಿದ್ದಂತಹ ಕುಟುಂಬದಲ್ಲಿ ಬೆಳೆದವನು ನಾನು. ಹಾಗಾಗಿ, ನಾನು ಬೆಳೆಯುವಾಗ ಗಮನ ಕೇಂದ್ರೀಕರಿಸಿದ್ದ ಮೊತ್ತ ಮೊದಲ ಸಂಗತಿ ಶಾಲೆಯಾಗಿತ್ತು, ಆದರೆ ಪದವಿಯ ಬಳಿಕ ಹೆಚ್ಚಿನದ್ದನ್ನು ಮಾಡಲು ಮತ್ತು ಬೆಳೆಯುವ ಉತ್ಕಟ ಆಸೆಯಿಂದ ಅಮೆರಿಕಗೆ ವಲಸೆ ಬಂದೆ. ಆನ್‍ಲೈನ್ ಭವಿಷ್ಯವಾಗಲಿದೆ ಮತ್ತು ನಾನು ಅದರ ಭಾಗವಾಗಬೇಕು ಎಂದು ಯಾವಾಗಲೂ ಅಂದುಕೊಳ್ಳುತ್ತಿದ್ದೆ” ಎಂದು ಅವರು ಹೇಳಿದ್ದಾರೆ.

  Read Also: Pee Power: ನಿಮ್ಮ ಮೂತ್ರದಿಂದ ಮೊಬೈಲ್ ಚಾರ್ಜ್ ಮಾಡಬಹುದಂತೆ! ವಿಜ್ಞಾನಿಗಳ ಸಂಶೋಧನೆ ಯಶಸ್ವಿ..

  ಈಗ, ಅಮೆಜಾನ್ ಮತ್ತು ವಾಲ್‍ಮಾರ್ಟ್‍ನಂತಹ ಸೈಟ್‍ಗಳಲ್ಲಿ ನಿಕ್ ಹಲವಾರು ಆನ್‍ಲೈನ್ ಸ್ಟೋರ್‌ಗಳನ್ನು ಹೊಂದಿದ್ದಾರೆ. ಅವರು 40 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದಾರೆ ಮತ್ತು ಕ್ಲೈಂಟ್‍ಗಳೊಂದಿಗೆ ನೂರಾರು ಪಾಲುದಾರಿಕೆಗಳನ್ನು ಹೊಂದಿದ್ದಾರೆ.

  ಯುಎಸ್ ಮತ್ತು ರೊಮೇನಿಯಾದಾದ್ಯಂತ ಅವರು 100 ಫ್ಲ್ಯಾಟ್‍ಗಳನ್ನು ಹೊಂದಿದ್ದಾರೆ ಮತ್ತು ಅವರ ಬಳಿ 4 ಐಷಾರಾಮಿ ಕಾರುಗಳಿವೆ. ಅವರು ತಮ್ಮ ತಂದೆ ಮತ್ತು ಸಹೋದರನಿಗಾಗಿ ಕೂಡ ಫ್ಲ್ಯಾಟ್‍ಗಳನ್ನು ಖರೀದಿಸಿ ಕೊಟ್ಟಿದ್ದಾರೆ.

  Read Also: China; ಹೆಚ್ಚು ಮಕ್ಕಳು ಪಡೆಯುವಂತೆ ಪ್ರೋತ್ಸಾಹಿಸಲು ಚೀನಾ ಸರ್ಕಾರದಿಂದ ಮಹತ್ವದ ಘೋಷಣೆ

  “ನಾನು ಯಶಸ್ವಿಯಾಗುವುದಕ್ಕೆ ಕಾರಣವೆಂದರೆ, ಕೇವಲ ಪ್ರಯತ್ನಿಸದೆ , ಸೋಲುವುದರ ಬಗ್ಗೆ ಯಾವತ್ತೂ ಭಯಪಡಲಿಲ್ಲ. ನಾನು ತುಂಬಾ ಪರಿಶ್ರಮಿ ಮತ್ತು ಎಂದಿಗೂ ಬಿಟ್ಟು ಕೊಡುವುದಿಲ್ಲ. ನಾನು ಏಳು ಬಾರಿ ಸೋಲುತ್ತೇನೆ ,ಎಂಟನೇ ಬಾರಿ ಎದ್ದೇಳುತ್ತೇನೆ. ಮತ್ತು ನಾನು ಮನೆಯಿಂದಲೇ ಕೆಲಸ ಮಾಡಬಹುದು ಎಂಬ ಅಂಶದಿಂದ ಖುಷಿಯಾಗಿದ್ದೇನೆ. ಅದಕ್ಕಾಗಿ ನನಗೆ ಬೇಕಾಗಿರುವುದು ಒಂದು ಲ್ಯಾಪ್‍ಟಾಪ್ ಮತ್ತು ಇಂಟರ್‌ನೆಟ್‌ ಹಾಗೂ ನಾನು ವ್ಯಾಪಾರ ಮಾಡುತ್ತೇನೆ” ಎನ್ನುತ್ತಾರೆ ನಿಕ್.

  ತನಗೆ 500 ಡಾಲರ್ ಉಡುಗೊರೆ ನೀಡಿದ್ದ, ಈಗ ದಿವಂಗತರಾಗಿರುವ ತನ್ನ ಅಜ್ಜಿಗೆ ಸದಾ ಋಣಿಯಾಗಿರುವುದಾಗಿ ಹೇಳುತ್ತಾರೆ ನಿಕ್.
  First published: