9/11 ಕಹಿ ನೆನಪು: 17 ವರ್ಷಗಳ ಬಳಿಕ ಮತ್ತೆ ಕಾರ್ಯಾರಂಭ ಮಾಡಿದ ಸಬ್​ವೇ

news18
Updated:September 10, 2018, 12:02 PM IST
9/11 ಕಹಿ ನೆನಪು: 17 ವರ್ಷಗಳ ಬಳಿಕ ಮತ್ತೆ ಕಾರ್ಯಾರಂಭ ಮಾಡಿದ ಸಬ್​ವೇ
@MTA New York
news18
Updated: September 10, 2018, 12:02 PM IST
-ನ್ಯೂಸ್ 18 ಕನ್ನಡ

2001ರ ಸೆಪ್ಟೆಂಬರ್ 11 ರಂದು ಅಮೆರಿಕ ವರ್ಲ್ಡ್​ ಟ್ರೇಡ್ ಸೆಂಟರ್​ಗಳ ಮೇಲೆ ಅಲ್ ಖೈದಾ ಉಗ್ರಗಾಮಿಗಳು ವೈಮಾನಿಕ ದಾಳಿ ಮಾಡಿದ್ದರು. ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸೂಚನೆಯಂತೆ ಅಮೆರಿಕದ ವಾಣಿಜ್ಯ ಕಟ್ಟಡಕ್ಕೆ ವಿಮಾನ ನುಗ್ಗಿಸಿ ಅಪಾರ ಸಾವು ನೋವಿಗೆ ಕಾರಣರಾಗಿದ್ದರು. ಈ ಭಯೋತ್ಪಾದಕರ ದಾಳಿಯಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಈ ದಾಳಿಯ ನಂತರ ಅಮೆರಿಕ ಚೇತರಿಸಿಕೊಂಡಿದ್ದರೂ, ನ್ಯೂಯಾರ್ಕ್​ ನಗರದ ಕೊರ್ಟ್​ಲ್ಯಾಂಡ್ ಸುರಂಗ ಮಾರ್ಗವನ್ನು ಮುಚ್ಚಲಾಗಿತ್ತು.

ದಾಳಿಯ ತೀವ್ರತೆಗೆ ಸಬ್​ವೇ ಅನೇಕ ಭಾಗಗಳು ಹಾನಿಯಾಗಿದ್ದು ಇದಕ್ಕೆ ಪ್ರಮುಖ ಕಾರಣ. ಆದರೆ ಇದೀಗ ಬರೋಬ್ಬರಿ 17 ವರ್ಷಗಳ ಬಳಿಕ ಕೊರ್ಟ್​ಲ್ಯಾಂಡ್ ಸಬ್​ ವೇ ರೈಲು ಮಾರ್ಗವನ್ನು ಮತ್ತೆ ಕಾರ್ಯಾರಂಭ ಮಾಡಲಾಗಿದೆ. ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ 17ನೇ ವಾರ್ಷಿಕೋತ್ಸವಕ್ಕೆ ಅಂಗವಾಗಿ ಈ ನಿಲ್ದಾಣವನ್ನು ಮತ್ತೆ ಸಾರ್ವಜನಿಕ ಬಳಕೆಗೆ ತೆರೆಯಲಾಗಿದೆ. ನ್ಯೂಯಾರ್ಕ್ ನಗರದ ಕೇಂದ್ರ ಭಾಗದಲ್ಲಿರುವ ಈ ನಿಲ್ದಾಣವನ್ನು ಆಧುನಿಕ ತಂತ್ರಜ್ಞಾನದಿಂದ ಪುನಃ ನಿರ್ಮಿಸಲಾಗಿದ್ದು, ಸಬ್​ ವೇ ನಿಲ್ದಾಣವನ್ನು ಸಂಪೂರ್ಣ ಹವಾನಿ ನಿಯಂತ್ರಿತಗೊಳಿಸಲಾಗಿದೆ.​


Loading...

ಪುನರ್ ರ್ನಿರ್ಮಾಣದ ಯೋಜನೆಯನ್ನು 2015ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಸುತ್ತಮುತ್ತಲಿನ ಪ್ರದೇಶವನ್ನು ನವೀಕರಣಗೊಳಿಸಬೇಕಾಗಿತ್ತು. ಹೀಗಾಗಿ ಕೆಲಸ ಕಾರ್ಯಗಳು ವಿಳಂಬವಾಗಿದೆ. ಅಲ್ಲದೆ ಸಬ್​ ವೇ ಪ್ರವೇಶ ದ್ವಾರದ ಕಟ್ಟಡಗಳನ್ನು ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದ್ದು, 17 ವರ್ಷಗಳ ಬಳಿಕ ಮತ್ತೊಮ್ಮೆ ಜನರನ್ನು ಸೆಳೆಯಲು ಕೊರ್ಟ್​ಲ್ಯಾಂಡ್ ಸುರಂಗ ಮಾರ್ಗವನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ 17 ವರ್ಷಗಳಿಂದ ಸಾರ್ಜನಿಕರ ಭೇಟಿಗೆ ನಿರ್ಬಂಧವಿಧಿಸಲಾಗಿದ್ದ ಈ ಸಬ್​ ವೇ ಪುನರಾಂಭಗೊಂಡಿರುವುದಕ್ಕೆ ಅಮೆರಿಕದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ