ಸಲೀಂ-ಸುಲೈಮಾನ್ ಅವರ ಸ್ಪೂರ್ತಿದಾಯಕ BYJU'S Young Genius ಗೀತೆಯೊಂದಿಗೆ ಭಾರತದ ಪ್ರತಿಭಾವಂತ ತಾರೆಗಳ ಸಂಭ್ರಮದ ಆಚರಣೆ!

ನಿಮ್ಮನ್ನು ಬೆಚ್ಚುವಂತೆ ಮಾಡುವ ಪ್ರತಿಭೆ, ಮತ್ತು ಅಷ್ಟೇ ಆಘಾತಕ್ಕೊಳಗಾದ ಖ್ಯಾತನಾಮರು! ಅದನ್ನೇ News18 ನ ಉಪಕ್ರಮವಾದ BYJU’S Young Genius ಶೀಘ್ರದಲ್ಲೇ ಮಾಡಲಿದೆ.

ಗಾಯಕ ಸಲೀಂ ಮರ್ಚೆಂಟ್

ಗಾಯಕ ಸಲೀಂ ಮರ್ಚೆಂಟ್

 • Share this:
  ಭಾರತವು ಯುವ ಸಂಶೋಧಕರು, ಪರಿಸರ ಯೋಧರು, ಡಾಟಾ ಸೈಂಟಿಸ್ಟ್ಸ್, ಜಿಮ್​ನಾಸ್ಟ್​‌ಗಳು, ನರ್ತಕರು, ಶಾರ್ಪ್‌ಶೂಟರ್‌ಗಳು, ಸಂಗೀತಗಾರರು, ಪ್ರಾಣಿ ರಕ್ಷಕರು ಮತ್ತು ಹೆಚ್ಚಿನ ಅನೇಕ ಪ್ರತಿಭಾವಂತರನ್ನು ಹೊಂದಿದೆ. ಅವರಲ್ಲಿ ಹಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಆ ಕಿಡಿ ಹತ್ತುವುದುಂಟು. BYJU'S Young Genius - News18 ನ ಒಂದು ಉಪಕ್ರಮ. ಭಾರತದ ಕೆಲವು ಕಿರಿಯ ಮತ್ತು ಪ್ರತಿಭಾವಂತ ತಾರೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ ಇಲ್ಲಿದೆ, ಮತ್ತು News18 India, CNN News18, History TV18 ಮತ್ತು ನೆಟ್‌ವರ್ಕ್‌ನ ಎಲ್ಲಾ ಪ್ರಾದೇಶಿಕ ಚಾನೆಲ್‌ಗಳಂತಹ 18 ಚಾನೆಲ್‌ಗಳಲ್ಲಿ ಭಾರತದ ಅತಿದೊಡ್ಡ ಮತ್ತು ಖ್ಯಾತರಿಂದ  ಅವರ ಪ್ರತಿಭೆಯನ್ನು ಹುರಿದುಂಬಿಸಲಾಗುತ್ತದೆ.

  "ಟಿವಿಯಲ್ಲಿ 70 ಕೋಟಿ ಮತ್ತು ಡಿಜಿಟಲ್‌ನಲ್ಲಿ 20 ಕೋಟಿಯಷ್ಟು ಸಂಪರ್ಕವಿರುವ ದೇಶದ ಅತಿದೊಡ್ಡ ಸುದ್ದಿ ಜಾಲವಾಗಿ, ನಾವು BYJU’S Young Genius ಭಾರತದ ಭವಿಷ್ಯವನ್ನು ಆಚರಿಸುವ ಒಂದು ವಿಶಿಷ್ಟ ಸಂಚಲನವಾಗಿ ಹೊರಹೊಮ್ಮುವುದನ್ನು ಎದುರು ನೋಡುತ್ತಿದ್ದೇವೆ ಮತ್ತು ಇದು ಮಕ್ಕಳು ಅವರ ಕನಸನ್ನು ಅನುಸರಿಸಲು ಪ್ರೇರೇಪಿಸಲು ಸಹಾಯ ಮಾಡುತ್ತದೆ ಅವರ ಉತ್ಸಾಹ ಮತ್ತು ಉತ್ಕೃಷ್ಟತೆಗಾಗಿ ಶ್ರಮಿಸುತ್ತದೆ”ಎಂದು News18 Network ‌ನ ಹಿಂದಿ ನ್ಯೂಸ್ ಸಿಇಒ ಮಾಯಾಂಕ್ ಜೈನ್ ಹೇಳುತ್ತಾರೆ.

  ಈ ವಿಶೇಷ ಉಪಕ್ರಮವು ಯುವ ಪ್ರತಿಭೆಗಳ ಸಕಾರಾತ್ಮಕ ಮತ್ತು ಅದ್ಭುತವಾದ ಕಥೆಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸುತ್ತದೆ, ಇದು ಭಾರತದ ಅತ್ಯಂತ ವಿಶ್ವಾಸಾರ್ಹ ಸುದ್ದಿ ನೆಟ್‌ವರ್ಕ್‌ಗಳಲ್ಲಿ ಲಕ್ಷಾಂತರ ಜನರಿಗೆ ಪ್ರಸಾರವಾಗಲಿದೆ. ವಿವಿಧ ನಗರಗಳು ಮತ್ತು ಭಾಷೆಯ ಈ ಅದ್ಭುತ ಮಕ್ಕಳನ್ನು ಸರಿಯಾದ ರೀತಿಯ ಕೇಂದ್ರ ಹಂತದಲ್ಲಿ ಗುರುತಿಸಲು Network18 ಸರಿಯಾದ ಮಾರ್ಗವಾಗಿದೆ.

  ಮಕ್ಕಳ ದಿನಾಚರಣೆಯಂದು 'ಕಾಲ್ ಫಾರ್ ಎಂಟ್ರಿ' ಪ್ರಚಾರ ಅಭಿಯಾನದೊಂದಿಗೆ BYJU’S ‘Young Genius ಪ್ರಾರಂಭವಾಯಿತು, ಇದು ಹೆಚ್ಚಿನ ಸಂಖ್ಯೆಯ ಎಂಟ್ರಿಗಳನ್ನು ಪಡೆದುಕೊಂಡಿದೆ. ಸ್ವೀಕರಿದ ಎಂಟ್ರಿಗಳಲ್ಲಿ, ಅಂತಿಮ ಆಯ್ದ ಯುವ ಪ್ರತಿಭೆಗಳು 11 ಭಾಗಗಳ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದು, ಅದು News18 Network ‌ನ 18 ಚಾನೆಲ್‌ಗಳಲ್ಲಿ ಪ್ರತಿ ಶನಿವಾರ ಸಂಜೆ 16 ಜನವರಿ 2021 ರಿಂದ ಪ್ರಾರಂಭವಾಗುತ್ತದೆ ಮತ್ತು ಭಾನುವಾರ ಬೆಳಿಗ್ಗೆ / ಮಧ್ಯಾಹ್ನ ಪುನರಾವರ್ತನೆಯಾಗುತ್ತದೆ. ಪ್ರತಿಯೊಂದು ಸಂಚಿಕೆಯಲ್ಲಿ ಶಿಕ್ಷಣ , ಪ್ರದರ್ಶನ ಕಲೆಗಳು, ತಂತ್ರಜ್ಞಾನ ಮತ್ತು ಕ್ರೀಡೆಗಳಂತಹ ವಿವಿಧ ಕ್ಷೇತ್ರಗಳ ಮಕ್ಕಳ ಪ್ರತಿಭೆಗಳನ್ನು ಒಳಗೊಂಡಿರುತ್ತದೆ ಮತ್ತು ವೀಕ್ಷಕರಿಗೆ ಅವರ ಜೀವನ ಮತ್ತು ಕಥೆಯನ್ನು ಹೇಳುತ್ತದೆ ಮತ್ತು ಅವರ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.

  ಪ್ರೋಮೋವನ್ನು ಇಲ್ಲಿ ವೀಕ್ಷಿಸಿ:

  ಯುವ ಪ್ರತಿಭೆಗಳೊಂದಿಗೆ ಕೈಜೋಡಿಸುತ್ತಿದ್ದಾರೆ ಪ್ರಖ್ಯಾತ ಸಂಗೀತ ಸಂಯೋಜಕರಾದ ಸಲೀಮ್ ಮತ್ತು ಸುಲೈಮಾನ್ ಮರ್ಚೆಂಟ್, ಅವರು ಹೇಳುತ್ತಾರೆ “ಚಿಕ್ಕ ವಯಸ್ಸಿನಿಂದಲೇ ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ಮಕ್ಕಳನ್ನು ಗುರುತಿಸಲು ಮತ್ತು ಬೆಳೆಸುವ ಸಾಮರ್ಥ್ಯ ಹೊಂದಿರುವ Young Genius ಗಾಗಿ ಸಂಗೀತ ಸಂಯೋಜಿಸುವ ಅವಕಾಶವನ್ನು ಪಡೆದಿರುವುದು ನಮ್ಮ ಅದೃಷ್ಟವಾಗಿದೆ. ನಮ್ಮ ದೇಶ ಮತ್ತು ಸಮಾಜಕ್ಕೆ ವಿಶಿಷ್ಟವಾದ ರೀತಿಯಲ್ಲಿ ಕೊಡುಗೆ ನೀಡುವಂತಹದನ್ನು News18  ಮತ್ತು BYJU’S ಪ್ರೋತ್ಸಾಹಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ”

  ಅವರ ಮನಮೋಹಕ ಗೀತೆ 'ನೀನು ಬೆಳಗುವ ತಾರೆ' ಅನೇಕ ನಂಬಲಾಗದ ಕಥೆಗಳಿಗೆ ಹಿನ್ನೆಲೆಯಾಗಿದೆ. ಸಲೀಂ-ಸುಲೈಮಾನ್ ರಚಿಸಿ ಮತ್ತು ಹಾಡಿರುವ ಮತ್ತು ಶ್ರದ್ಧಾ ಪಂಡಿತ್ ಬರೆದಿರುವ, ಈ ಗೀತೆ ಕಾರ್ಯಕ್ರಮದ ಪ್ರಾರಂಭವನ್ನು ಪ್ರಕಟಿಸುತ್ತದೆ, ಮಕ್ಕಳು ತಮ್ಮ ಮನಸ್ಸ ಮಾಡಿದಲ್ಲಿ ಏನನ್ನಾದರೂ ಸಾಧಿಸಬಹುದು ಮತ್ತು ಶ್ರೇಷ್ಠತೆಯನ್ನು ಸಾಧಿಸಬಹುದು ಎಂಬ ವಿಮರ್ಶಾತ್ಮಕ ಸಂದೇಶವನ್ನು ಪುನರುಚ್ಚರಿಸುತ್ತಾರೆ. ಈ ಅರ್ಹ ಯುವ ಪ್ರತಿಭೆಗಳನ್ನು  ತಲುಪಲು ಮತ್ತು ಆಚರಿಸಲು ಭಾರತದಾದ್ಯಂತದ ಪ್ರೇಕ್ಷಕರನ್ನು ಈ ಗೀತೆ ಕರೆ ನೀಡುತ್ತದೆ , ಆದರೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಈಗಾಗಲೇ ತಮ್ಮಲ್ಲಿನ ಬದಲಾವಣೆಯನ್ನು ಗಮನಿಸುತ್ತಿದ್ದಾರೆ  “ಸುಲೈಮಾನ್ ಮತ್ತು ನಾನು ಇಬ್ಬರೂ ಇದಕ್ಕೆ ಕೊಡುಗೆ ನೀಡುವ ಭಾಗ್ಯವನ್ನು ಹೊಂದಿದ್ದೇನೆ. ಇದು ನಮಗೂ ಕಲಿಕೆಯ ಅನುಭವವಾಗಿದೆ ”ಎಂದು ಸಲೀಮ್ ಮರ್ಚೆಂಟ್ ಹೇಳುತ್ತಾರೆ.

  ಗೀತೆಯ ಬಿಡುಗಡೆಯ ಕುರಿತು ಮಾತನಾಡುತ್ತಾ, BYJU'S ವಿ.ಪಿ - ಮಾರ್ಕೆಟಿಂಗ್, ಅತೀತ್ ಮೆಹ್ತಾ ಹೇಳುತ್ತಾರೆ, "ಪ್ರತಿ ಮಗುವೂ ವಿಶಿಷ್ಟವಾಗಿದೆ ಮತ್ತು ಅವರ ಪ್ರತಿಭೆಯನ್ನು ಪ್ರದರ್ಶಿಸುವ ತನ್ನದೇ ವಿಧಾನವನ್ನು ಹೊಂದಿದೆ. ನಮ್ಮ ದೇಶವು ನೀಡುವ ಹೆಚ್ಚಿನ ಗುಪ್ತ ಪ್ರತಿಭೆಗಳನ್ನು ಗುರುತಿಸುವುದನ್ನು ಮುಂದುವರೆಸುತ್ತೇವೆ ಮತ್ತು ತಮ್ಮದೇ ಆದ ಬೆಳವಣಿಗೆಯ ಪ್ರಯಾಣವನ್ನು ನಿರ್ಧರಿಸಿಕೊಳ್ಳಲು ಪ್ರೋತ್ಸಾಹಿಸುತ್ತೇವೆ ಎಂದು ನಾವು ಭಾವಿಸುತ್ತೇವೆ."

  ಅದನ್ನು ಇಲ್ಲಿ ಆಲಿಸಿ.  ಅಂತಿಮ ಕಂತುಗಳಲ್ಲಿ ಸ್ಥಾನ ಪಡೆದ ಪ್ರತಿಯೊಬ್ಬ ಮಕ್ಕಳು ವೈವಿಧ್ಯಮಯ ಹಿನ್ನೆಲೆ ಮತ್ತು ಆಸಕ್ತಿಗಳಿಂದ ಬಂದವರು, ಮತ್ತು ಅವರ ನಡುವಿನ ಸಾಮಾನ್ಯ ವಿಷಯವೆಂದರೆ ಅವರೆಲ್ಲರೂ ಅಸಾಧಾರಣ ಪ್ರತಿಭಾವಂತರು. ಆಯ್ಕೆ ಪ್ರಕ್ರಿಯೆಯು ನಂಬಲಾಗದಷ್ಟು ಕಠಿಣವಾಗಿದ್ದು, Niti Aayog ಸಿಇಒ, ಅಮಿತಾಭ್ ಕಾಂತ್,  ಪದ್ಮಭೂಷಣ್ ಡಾ.ಮಲ್ಲಿಕಾ ಸಾರಾಭಾಯ್, ಮಾಜಿ ಭಾರತೀಯ ಹಾಕಿ ಕ್ಯಾಪ್ಟನ್ ಸರ್ದಾರ್ ಸಿಂಗ್,  ಮತ್ತು CNBC-TV18 ವ್ಯವಸ್ಥಾಪಕ ಸಂಪಾದಕ ಶೆರೀನ್ ಭನ್ ಅವರ ನೇತೃತ್ವದ ಗೌರವಾನ್ವಿತ ಸಮಿತಿಯು ಅಂತಿಮ ಆಯ್ಕೆಯನ್ನು ಮಾಡಿತು. Network18 ಚಾನೆಲ್‌ಗಳಲ್ಲಿ ಮತ್ತು ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗಲಿರುವ 11 ಸಂಚಿಕೆಗಳಲ್ಲಿ 21 ಯುವ ಪ್ರತಿಭೆಗಳು ಕಾಣಿಸಿಕೊಂಡಿರುವುದರಿಂದ ಈ ಪ್ರಯತ್ನವು ಫಲಪ್ರದವಾಗಲಿದೆ.

  ಈ ಯುವ ಪ್ರತಿಭೆಗಳನ್ನು ಹುರಿದುಂಬಿಸಲು ಲಿಯಾಂಡರ್ ಪೇಸ್, ಡುಟಿ ಚಂದ್, ಶಂಕರ್ ಮಹಾದೇವನ್, ರಾಜ್‌ಕುಮಾರ್ ರಾವ್, ಪಿ.ವಿ ಸಿಂಧು, ಸೋನು ಸೂದ್, ಸೋಹಾ ಅಲಿ ಖಾನ್ ಮತ್ತು ವೀರೇಂದ್ರ ಸೆಹ್ವಾಗ್ ಮುಂತಾದ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದಾರೆ. ಅವರು ತಮ್ಮ ಅಪಾರ ಖ್ಯಾತಿಯ ಶಕ್ತಿಯಿಂದ ಈ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ ಮತ್ತು ಈ ಅಸಾಧಾರಣ ಪ್ರತಿಭೆಗಳನ್ನು ಸಂಭ್ರಮಿಸಲು ಭಾರತಕ್ಕೆ ಸಹಾಯ ಮಾಡುತ್ತಾರೆ ' ವೀಕ್ಷಕರು ತಮ್ಮ ನಡುವೆ ಇರುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಅವರ ಕಥೆಗಳನ್ನು ಜಗತ್ತಿನ ಎದುರು ತರಲು ಪ್ರೋತ್ಸಾಹಿಸುವುದೇ ಇದೆಲ್ಲದರ ಮೂಲ ಉದ್ದೇಶವಾಗಿದೆ.

  ಈಗ ಯುವ ಪ್ರತಿಭೆಗಳ ಸಮಯ. ಅವರು ಎಲ್ಲರಿಗೆ ಗೋಚರಿಸಲು ಅವರಿಗೆ ಸಹಾಯ ಮಾಡಿ!

  https://www.news18.com/younggenius/  ಗೆ ಭೇಟಿ ನೀಡುವ ಮೂಲಕ ಭಾರತದಾದ್ಯಂತದ ಕೆಲವು ಅದ್ಭುತ ಕಥೆಗಳಿಗೆ ಟ್ಯೂನ್ ಮಾಡಿ.

  ಇದು ಒಂದು ಸಹಭಾಗಿತ್ವ ಪೋಸ್ಟ್ ಆಗಿದೆ.
  Published by:Harshith AS
  First published: