Viral Video: ನ್ಯೂಸ್​ ಓದುವ ವೇಳೆ ಆ್ಯಂಕರ್​ ಬಾಯಿಯೊಳಕ್ಕೆ ಹೋದ ನೊಣ! ನಗು ತರಿಸುತ್ತೆ ಈ ವಿಡಿಯೋ

ಪತ್ರಕರ್ತೆ ಫರಾ ನಾಸರ್​ ಈ ಘಟನೆಯನ್ನು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಟ್ವಿಟ್ಟರ್​ ಖಾತೆಯಲ್ಲಿ ಶೇರ್​​ ಮಾಡಿದ್ದಾರೆ. ಈ ವಿಡಿಯೋವನ್ನು ಸುಮಾರು 1 ಲಕ್ಷ ಜನರು ವೀಕ್ಷಿಸಿದ್ದಾರೆ. ಪಾಕಿಸ್ತಾನದಲ್ಲಿ ಮಳೆಯ ಹಾನಿಯ ವಿಚಾರದ ಬಗ್ಗೆ ಪತ್ರಕರ್ತೆ ಫರಾ ನಾಸರ್​ ವರದಿ ಮಾಡುತ್ತಿದ್ದರು. ಈ ವೇಳೆ ನೊಣ ನೇರವಾಗಿ ಆಕೆಯ ಬಾಯಿ ಒಳಕ್ಕೆ ಹೋಗಿದೆ.

ಫರಾ ನಾಸರ್

ಫರಾ ನಾಸರ್

  • Share this:
    ಸುದ್ದಿ ಓದುವ ವೇಳೆ ಆ್ಯಂಕರ್ (Anchor)​ ಬಾಯಿಗೆ ನೊಣ (Midge) ಹೋದರೆ ಹೇಗಿರುತ್ತೆ ಹೇಳಿ. ಅದರಲ್ಲೂ ಲೈವ್​ ನ್ಯೂಸ್​​ (Live News) ಓದುವ ವೇಳೆ ಇಂತಹ ಘಟನೆ ನಡೆದರೆ ಹೇಗಿರಬಹುದು. ತಮಾಷೆ ಎನಿಸಿದರು ಇಂತಹ ನಿಜ ಘಟನೆಯೊಂದು ನಡೆದಿದೆ. ಸ್ವತಃ ಪತ್ರಕರ್ತೆ (Journalist) ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್​​ (Twitter) ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ (Video) ವೈರಲ್​ ಆಗುತ್ತಿದ್ದು, ಅನೇಕರು ಕಾಮೆಂಟ್​ ಬರೆದಿದ್ದಾರೆ.

    ಕೆನಡಾ ಮೂಲದ ಪತ್ರಕರ್ತೆ ಫರಾ ನಾಸರ್​ ಲೈವ್​ ನ್ಯೂಸ್​ ಓದುವ ವೇಳೆ ಈ ಘಟನೆ ಸಂಭವಿಸಿದೆ. ನೊಣ ನೇರವಾಗಿ ಆ್ಯಂಕರ್​ನ ಬಾಯಿಯ ಒಳಕ್ಕೆ ಹೋಗಿದೆ. ಸುದ್ದಿ ಓದುತ್ತಿದ್ದ  ಪತ್ರಕರ್ತೆ ಫರಾ ನಾಸರ್ ಅವರ ಬಾಯಿ ಒಳಕ್ಕೆ​ ನೊಣ ಹೋದರೂ ಅವರು ಅದಕ್ಕೆ ತಲೆ ಕೆಡಿಸಿಕೊಳ್ಳದೆ ಮತ್ತು ಸುದ್ದಿಯನ್ನು ಅಲ್ಲಿಗೆ ನಿಲ್ಲಿಸದೆ ನ್ಯೂಸ್​ ಓದಿದ್ದಾರೆ. ಸದ್ಯ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ನೋಡಿದಾಗ ನಗು ತರಿಸುವಂತಿದೆ.

    ಪತ್ರಕರ್ತೆ ಫರಾ ನಾಸರ್​ ಈ ಘಟನೆಯನ್ನು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ. ಮಾತ್ರವಲ್ಲದೆ ಟ್ವಿಟ್ಟರ್​ ಖಾತೆಯಲ್ಲಿ ಶೇರ್​​ ಮಾಡಿದ್ದಾರೆ. ಈ ವಿಡಿಯೋವನ್ನು ಸುಮಾರು 1 ಲಕ್ಷ ಜನರು ವೀಕ್ಷಿಸಿದ್ದಾರೆ. ಪಾಕಿಸ್ತಾನದಲ್ಲಿ ಮಳೆಯ ಹಾನಿಯ ವಿಚಾರದ ಬಗ್ಗೆ ಪತ್ರಕರ್ತೆ ಫರಾ ನಾಸರ್​ ವರದಿ ಮಾಡುತ್ತಿದ್ದರು. ಈ ವೇಳೆ ನೊಣ ನೇರವಾಗಿ ಆಕೆಯ ಬಾಯಿ ಒಳಕ್ಕೆ ಹೋಗಿದೆ.

    ಪಾಕಿಸ್ತಾನ ಈ ರೀತಿಯ ಮಾನ್ಸೂನ್​ ಹಾವಳಿಯನ್ನು ಕಂಡಿಲ್ಲ. 8 ವಾರಗಳಿಂದ ಧಾರಾಕಾರ ಮಳಎ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪತ್ರಕರ್ತೆ ಫರಾ ನಾಸರ್​ ವರದಿ ಮಾಡುವ ವೇಳೆ ಹಾರಿಕೊಂಡು ಬಂದ ನೊಣ ಆಕೆಯ ಬಾಯಿಯ ಒಳಕ್ಕೆ ಸೇರಿದೆ. ಆಕೆ ಲೈವ್​ ಸುದ್ದಿ ಓದುತ್ತಿದ್ದ ಕಾರಣ ನೊಣವನ್ನು ಅನಿವಾರ್ಯವಾಗಿ ನುಂಗಬೇಕಾಗಿದೆ. ಮಾತ್ರವಲ್ಲದೆ ಈ ಸಮಯದಲ್ಲಿ ಟಿವಿ ನೋಡುಗರಿಗೆ ಏನಾಯಿತು ಎಂದು ತಿಳಿಸದೇ ತನ್ನ ಕೆಲಸವನ್ನು ಪತ್ರಕರ್ತೆ ಫರಾ ನಾಸರ್ ಮುಂದುವರಿಸಿದ್ದಾರೆ. ​

    ಪತ್ರಕರ್ತೆ ಫರಾ ನಾಸರ್​ ಅವರು ಗ್ಲೋಬಲ್​ ನ್ಯೂಸ್​​ನ ಅವಾರ್ಡ್​​ ವಿನ್ನರ್​ ಜರ್ನಲಿಸ್ಟ್​​ ಮತ್ತು ನ್ಯೂಸ್​ ಆ್ಯಂಕರ್​ ಆಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ಅವರು ಹೋಸ್ಟ್​​ ಮಾಡಿದ್ದಾರೆ. ಫರಾ 2 ಮಕ್ಕಳ ತಾಯಿ ಎಂಬುದು ಕೂಡ ಹೌದು.

    ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ ಬಹುತೇಕರು ಇಂತಹ ಹಾಸ್ಯದ ಸನ್ನಿವೇಶವನ್ನು ಸಾಮಾಜಿಕ ಜಾಲತಾಭದಲ್ಲಿ ಶೇರ್​ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಪತ್ರಕರ್ತೆ ಫರಾ ನಾಸರ್​ ನೇರವಾಗಿ ತನಗಾದ ಅನುಭವದ ದೃಶ್ಯವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಆ್ಯಂಕರ್​ಗಳು ಇಂತಹ ಘಟನೆಗಳು ಮುಚ್ಚು ಮರೆಯಲ್ಲಿರಲಿ ಎಂದು ಬಯಸುತ್ತಾರೆ. ಆದರೆ ಫರಾ ನಾಸರ್​ ಹಾಗೆ ಮಾಡಿಲ್ಲ. ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ದೃಶ್ಯವನ್ನು ಕಂಡು ಕಾಮೆಂಟ್​ ಬರೆದಿದ್ದಾರೆ. ಜೊತೆಗೆ ನಾಸರ್​ ಇಂತಹ ಸಮಯದಲ್ಲೂ ಲೈವ್​ ಸುದ್ದಿಯನ್ನು ಓದಿರುವುದಕ್ಕೆ ಅನೇಕರು ಪ್ರಶಂಸೆಯ ಕಾಮೆಂಟ್​ ಬರೆದಿದ್ದಾರೆ.

    ಇದನ್ನೂ ಓದಿ: Lullaby: ಮಗುವನ್ನು ನಿದ್ರಿಸಲು ಅಜ್ಜಿ ಹೇಳುವ ಲಾಲಿ ಹಾಡು ಹಾಡಿ! ಗೊತ್ತಿಲ್ಲ ಅಂದ್ರೆ ಈ ವಿಡಿಯೋ ನೋಡಿ





    ಇದನ್ನೂ ಓದಿ: Apprentice Job in HAL: 10ನೇ ತರಗತಿ ಬಳಿಕ ಮುಂದೇನು ಎನ್ನುತ್ತಿದ್ರೆ ಎಚ್​ಎಎಲ್​ನಲ್ಲಿದೆ ಅಪ್ರೆಂಟಿಸ್​ ಹುದ್ದೆ

    ಸಾಮಾಜಿಕ ಜಾಲತಾಣ ಎಂದ ಮೇಲೆ ಸುದ್ದಿಗಳು ಬೇಗನೇ ಹರಿದಾಡುತ್ತವೆ. ವಿಶ್ವದ ಮೂಲೆ ಮೂಲೆಯಲ್ಲಿನ ಸುದ್ದಿಗಳು ವೈರಲ್​ ಆಗುತ್ತಿರುತ್ತವೆ. ದಿನಕ್ಕೊಂದರಂತೆ ಏನಾದರೂ ಒಂದು ವಿಡಿಯೋವಾದರೂ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಳ್ಳುತ್ತದೆ. ಪತ್ರಕರ್ತೆ ಫರಾ ನಾಸರ್​ ಕೂಡ ಸುದ್ದಿ ಓದುತ್ತಿದ್ದ ವೇಳೆ ತನಗಾದ ನಗು ತರಿಸುವ ಅನುಭವವನ್ನು ನೇರವಾಗಿ ಹಂಚಿಕೊಂಡಿದ್ದಾರೆ.
    Published by:Harshith AS
    First published: