ಮಾಧ್ಯಮಗಳು (Media) ಅಂತ ಹೇಳಿದ್ರೆ ಜನರಿಗೋಸ್ಕರ ಸರಿಯಾದ ವಿಷಯಗಳನ್ನು ಬಿತ್ತರಿಸುವ ಮೂಲ ಅಂತಾನೆ ಹೇಳಬಹುದು. ಪ್ರಕರ್ತರಿಗೆ ಮನಸ್ಸಿಗೆ ಎಷ್ಟೇ ಬೇಸರವಿದ್ದರೂ, ಖುಷಿ ಇದ್ದರು ಅದನ್ನು ತಮ್ಮ ವೃತ್ತಿಯಲ್ಲಿ ತೋರಿಸಿಕೊಳ್ಳಲು ಅಸಾಧ್ಯ. ಅದರಲ್ಲೂ ಮುಖ್ಯವಾಗಿ ನಿರೂಪಕರು. ಹೌದು. ದೃಷ್ಟಿ ಮನಸಿಗೆ ನೋವಾದರೂ ಅಥವಾ ನ್ಯೂಸ್ ಓದುವ ಸಮಯದಲ್ಲಿ ಭಾವನಾತ್ಮಕವಾಗಿ ನ್ಯೂಸ್ ಇದ್ದರೂ ಕೂಡ ಮನಸ್ಸಿನಲ್ಲಿ ತಡೆದುಕೊಂಡು ನ್ಯೂಸ್ (News) ಓದುವುದು ಆಂಕರ್ಸ್ ಗಳಿಗೆ (Anchores) ಬೇಕಾಗಿರುವ ಮೊದಲ ಲಕ್ಷಣ ಅಂತ ಹೇಳಬಹುದು. ಇದೀಗ ಓರ್ವ ಆಂಕರ್ ಸಕ್ಕತ್ ವೈರಲ್ (Viral ) ಆಗ್ತಾಯಿದ್ದಾರೆ. ಏನು ವಿಷಯ ತಿಳಿಯೋಣ ಬನ್ನಿ.
ಪ್ರೇಮಿಗಳ ದಿನ ಹತ್ತಿರ ಬಂದೇಬಿಡ್ತು. ದಿನಕ್ಕೆ ಒಂದೊಂದು ವಿಶೇಷವೆಂಬಂತೆ ಫೆಬ್ರವರಿ 14 ಕೊನೆಯ ದಿನ ಅದುವೇ ಪ್ರೇಮಿಗಳ ದಿನ. ಪಾಶ್ಚಾತ್ಯ ಸಂಪ್ರದಾಯ ವಾಗಿದ್ದರೂ ಕೂಡ ನಮ್ಮ ಭಾರತದಲ್ಲಿ ಅನೇಕ ಪ್ರೇಮಿಗಳು ಆಚರಿಸುತ್ತಾರೆ. ಒಂದು ಅದೆಷ್ಟೋ ಪ್ರೇಮಿಗಳು ಒಪ್ಪಬಹುದು, ಒಂದಾಗಬಹುದು ಗಿಫ್ಟ್ ಗಳನ್ನ ಕೊಟ್ಟುಕೊಳ್ಬಹುದು. ಅವರವರ ಇಚ್ಛೆಗೆ ಬಿಟ್ಟಿದ್ದು. ಒಟ್ಟಿನಲ್ಲಿ ಎಲ್ಲಾ ಕಡೆಯೂ ರೆಡ್ ರೆಡ್ ರೆಡ್ ರೆಡ್.
ಕಲರ್ ಫುಲ್ ಜಗತ್ತಿಗೆ ಹೋಗುವ ಅದೆಷ್ಟೋ ಜೋಡಿಗಳು ಎಂದು ಕೊನೆಯಾಗದಂತೆ ಬಾಳನ್ನ ನಡೆಸಬೇಕು. ಆದರೆ 200 ಆಂಕರ್ ಪ್ರೇಮಿಗಳ ದಿನದ ಸಮಯದಲ್ಲಿ ಡಿವೋರ್ಸ್ ಕೊಡಲು ಮುಂದಾಗಿದ್ದಾರೆ.
ಹೌದು ಈ ವಿಷಯ ಸಕ್ಕತ್ ಎಲ್ಲ ಕಡೆ ವೈರಲ್ ಆಗ್ತಾ ಇದೆ. ಯಾಕಂದ್ರೆ ಇವರು ತನ್ನ ವೈಯಕ್ತಿಕ ವಿಷಯವನ್ನು ಲೈವ್ ನಲ್ಲೆ ಹೇಳಿಕೊಂಡಿದ್ದಾರೆ.
ಅ ಅಚ್ಚರಿಯ ಪ್ರಕರಣ ಅಮೆರಿಕದಲ್ಲಿ ನಡೆದಿದೆ. ಜೂಲಿ ಬಂಡೇರಸ್ ಎಂಬ ಮಹಿಳಾ ಆಂಕರ್ ಫೆಬ್ರವರಿ 10 ರಂದು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಕಾರ್ಯಕ್ರಮದ ಕೊನೆಯಲ್ಲಿ ಸಣ್ಣ ಘೋಷಣೆಯನ್ನು ಮಾಡಲಿದ್ದೇನೆ ಎಂದು ಹೇಳಿದ್ದಾರೆ. ‘ಇಂದು ರಾತ್ರಿ 11 ಗಂಟೆಗೆ ಕಾರ್ಯಕ್ರಮದ ಕೊನೆಯಲ್ಲಿ ಒಂದು ಸಣ್ಣ ಘೋಷಣೆ ಮಾಡಲಿದ್ದೇನೆ’ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿತ್ತು.
ಇದನ್ನು ಓದಿ: ಇಲ್ಲಿ ಕಾರು, ಶೂ, ವಿಮಾನದಂತ ಶವಪೆಟ್ಟಿಗೆಯಲ್ಲಿ ನಡೆಯುತ್ತೆ ಅಂತ್ಯಸಂಸ್ಕಾರ! ಸತ್ತವರ ಲಾಸ್ಟ್ ಜರ್ನಿಯೂ ಸಖತ್ತಾಗೇ ಇರಬೇಕಂತೆ!
49 ವರ್ಷದ ಜೂಲಿ ನ್ಯೂಯಾರ್ಕ್ ಮೂಲದ ಪ್ರಸಿದ್ಧ ಫಾಕ್ಸ್ ನ್ಯೂಸ್ ಚಾನೆಲ್‌ನಲ್ಲಿ ಆಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರೇಮಿಗಳ ದಿನದಂದು ತನ್ನ ಪತಿಯಿಂದ ಏನು ಪಡೆಯುತ್ತಿದ್ದಾಳೆ ಎಂದು ಲೈವ್ ಶೋನಲ್ಲಿ ಸಹ ಆಂಕರ್ ಕೇಳಿದಾಗ ಜೂಲಿ ಲೈವ್ ಟಿವಿಯಲ್ಲಿ 'ನಾನು ವಿಚ್ಛೇದನ ಪಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ. ಇದು ನನ್ನ ಇಂದಿನ ಬ್ರೇಕಿಂಗ್ ನ್ಯೂಸ್ ಎಂದು ಜೂಲಿ ಹೇಳಿ ಕಾರ್ಯಕ್ರಮವನ್ನು ಮುಗಿಸಿದ್ದಾರೆ.
Tune into @Gutfeldfox tonight at 11pm ET. I have a little announcement at the end of the show. (During the Valentines Day segment ironically) pic.twitter.com/XVqLzfClUr
— Julie Banderas (@JulieBanderas) February 10, 2023
ಒಟ್ಟಿನಲ್ಲಿ ಏನೇ ಕೆಲಸವನ್ನು ಮಾಡಲಾದರೂ ಧೈರ್ಯ ಬೇಕು. ವೃತ್ತಿ ಜೀವನದಲ್ಲಿ ಇದನ್ನ ಮಾಡಿದ್ದಾರೆ ಅಂದ್ರೆ ಈಕೆಯದ್ದು ಬಂಡು ಧೈರ್ಯ ಅಂತ ಹೇಳಿದ್ರು ತಪ್ಪಾಗಲ್ಲ. ಒಟ್ಟಿನಲ್ಲಿ ಈ ವಿಷಯ ಸಖತ್ ವೈರಲ್ ಆಗ್ತಾ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ