ಮದುವೆಯಾಗಿ ನಾಲ್ಕೇ ದಿನಕ್ಕೆ ಗಂಡನ ಮನೆಯಿಂದ ಹಣ, ಒಡವೆ ಕದ್ದು ಹುಡುಗಿ ಪರಾರಿ

ಈಕೆ ಊಟಕ್ಕೆ ಮತ್ತುಬರಿಸುವ ಔಷಧ ಬೆರೆಸಿ ತನ್ನ ಗಂಡನ ಇಡೀ ಕುಟುಂಬದವರಿಗೆ ತಿನಿಸಿದ್ಧಾಳೆ. ಬಳಿಕ ಮನೆಯಲ್ಲಿದ್ದ 70 ಸಾವಿರ ರೂ ನಗದು ಹಣ ಹಾಗೂ 3 ಲಕ್ಷ ರೂ ಮೌಲ್ಯದ ಒಡವೆಗಳನ್ನು ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ಧಾಳೆ ಎಂಬುದು ತಿಳಿದುಬಂದಿದೆ.

news18
Updated:December 15, 2019, 7:46 AM IST
ಮದುವೆಯಾಗಿ ನಾಲ್ಕೇ ದಿನಕ್ಕೆ ಗಂಡನ ಮನೆಯಿಂದ ಹಣ, ಒಡವೆ ಕದ್ದು ಹುಡುಗಿ ಪರಾರಿ
ಚಿನ್ನಾಭರಣ
  • News18
  • Last Updated: December 15, 2019, 7:46 AM IST
  • Share this:
ಬದಾಯೂ, ಉ.ಪ್ರ.: ಹಸೆಮಣೆಯಲ್ಲಿ ಮದುವೆ ರದ್ದು ಮಾಡಿ ಪ್ರೇಮಿಯೊಂದಿಗೆ ಓಡಿಹೋಗುವ ಹುಡುಗಿಯರನ್ನು ನೋಡಿದ್ದೇವೆ. ಮದುವೆಯಾಗಿ ಗಂಡನ ಮನೆಗೆ ಬಂದ ನಂತರ ಪ್ರೇಮಿಯೊಂದಿಗೆ ಓಡಿ ಹೋದ ಉದಾಹರಣೆಗಳಿವೆ. ಉತ್ತರ ಪ್ರದೇಶದ ಮಹಿಳೆಯೊಬ್ಬಳು ಸಿನಿಮೀಯ ರೀತಿಯಲ್ಲಿ ಓಡಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ನಾಲ್ಕೇ ದಿನಕ್ಕೆ ಈಕೆ ಗಂಡನ ಮನೆ ಬಿಟ್ಟು ಹೋಗಿದ್ದಾಳೆ. ಜೊತೆಗೆ 3 ಲಕ್ಷ ಮೌಲ್ಯದ ಹಣ ಮತ್ತು ಒಡವೆಯನ್ನೂ ಹೊತ್ತೊಯ್ದಿದ್ದಾಳೆ ಎಂದು ಪೊಲೀಸರು ಹೇಳಿದ್ಧಾರೆ.

ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯ ದಾತಾಗಂಜ್ ಕೋಟವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಾ ಪಾರಾ ಎಂಬಲ್ಲಿ ಶುಕ್ರವಾರ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಗಂಡನ ಮನೆಯವರು ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ದೂರು ನೀಡಿದ್ಧಾರೆ.

ಇದನ್ನೂ ಓದಿ: ರಾಹುಲ್ ಸಾವರ್ಕರ್ ಸಾಧ್ಯವಿಲ್ಲ, ನೀವು ರಾಹುಲ್ ಜಿನ್ನಾ: ಬಿಜೆಪಿ ಕುಟುಕು; ಶಿವಸೇನಾದಿಂದಲೂ ಆಕ್ರೋಶ

ಗಂಡನ ಮನೆಯಿಂದ ಕಂಬಿಕಿತ್ತ ಹುಡುಗಿಯ ಹೆಸರು ರಿಯಾ. ಅಜಂಗಡ್​ನವಳಾದ ಈಕೆ ಪ್ರವೀಣ್ ಎಂಬುವವರನ್ನು ಡಿ. 9ರಂದು ವಿವಾಹವಾಗಿದ್ದಳು. ಆದರೆ, ಡಿ. 13ರ ರಾತ್ರಿ ಈಕೆ ಊಟಕ್ಕೆ ಮತ್ತುಬರಿಸುವ ಔಷಧ ಬೆರೆಸಿ ತನ್ನ ಗಂಡನ ಇಡೀ ಕುಟುಂಬದವರಿಗೆ ತಿನಿಸುತ್ತಾಳೆ. ಬಳಿಕ ಮನೆಯಲ್ಲಿದ್ದ 70 ಸಾವಿರ ರೂ ನಗದು ಹಣ ಹಾಗೂ 3 ಲಕ್ಷ ರೂ ಮೌಲ್ಯದ ಒಡವೆಗಳನ್ನು ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ಧಾಳೆ ಎಂದು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಿಂದ ತಿಳಿದುಬಂದಿದೆ.

ಹುಡುಗಿ ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ಧಾಳೆ ಎಂಬುದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ಪಿಟಿಐ ವರದಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:December 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ