ಹುಡುಗ ಮತ್ತು ಹುಡುಗಿ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ (Falling in love)ಎಂದು ಹೇಳುವುದನ್ನು ನಾವು ಸಾಮಾನ್ಯವಾಗಿ ಅನೇಕ ಬಾರಿ ಕೇಳಿರುತ್ತೇವೆ ಮತ್ತು ನೋಡಿಯೂ ಇರುತ್ತೇವೆ. ಆದರೆ, ಇಲ್ಲಿ ಮದುವೆಯ ದಿನದಂದು ನವ ವಧು-ವರ (Bride and Groom) ಇಬ್ಬರೂ ಬಿದ್ದಿರುವುದು ವೇದಿಕೆಯ ಮೇಲೆ. ಯಾವ ಮದುವೆ ತಾನೇ ಸಂಭ್ರಮ, ಸಡಗರವಿಲ್ಲದೆ ಪರಿಪೂರ್ಣ ಆಗುತ್ತದೆ ನೀವೇ ಹೇಳಿ. ಮದುವೆಯ ದಿನದಂದು ಸಾಮಾನ್ಯವಾಗಿ ನವ ವಧು ಮತ್ತು ವರ ಇಬ್ಬರೂ ತುಂಬಾ ಸಂಭ್ರಮದಿಂದ ಇರುತ್ತಾರೆ ಮತ್ತು ಇಬ್ಬರೂ ಕೈ ಕೈ ಹಿಡಿದುಕೊಂಡು ಜೊತೆಯಾಗಿ ಸುಮಧುರ ಹಾಡಿಗೆ ಒಂದೆರಡು ಹೆಜ್ಜೆ ಹಾಕಿಯೇ ಬಿಡುತ್ತಾರೆ. ಆದರೆ ಇಲ್ಲಿ ನಡೆದ ಒಂದು ನೈಜ ಘಟನೆಯಲ್ಲಿ ವಧು-ವರ ಇಬ್ಬರೂ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ನೀವು ನವ ವಧು-ವರ ಇಬ್ಬರೂ ಡ್ಯಾನ್ಸ್ ಮಾಡಿದ ಅನೇಕ ವಿಡಿಯೋಗಳನ್ನು ನೋಡಿರುತ್ತೀರಿ. ಇನ್ನೂ ಕೆಲವು ಮದುವೆಯ ವೈರಲ್ ವಿಡಿಯೋಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿರುತ್ತೀರಿ. ಆದರೆ, ಇಲ್ಲೊಂದು ಜೋಡಿ ಮೆದುವೆ ದಿನವೇ ಮಾಡಿಕೊಂಡ ಎಡವಟ್ಟಿನ ವಿಡಿಯೋ ಈಗ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿರುವ ವಿಡಿಯೋದಲ್ಲಿ, ಸುಂದರವಾದ ನವ ಜೋಡಿಯೊಂದು ತುಂಬಾನೇ ಗ್ರ್ಯಾಂಡ್ ಆಗಿರುವ ಬಟ್ಟೆಯನ್ನು ಧರಿಸಿಕೊಂಡು ಹಾಡಿಗೆ ವೇದಿಕೆಯ ಮೇಲೆ ನಿಧಾನವಾಗಿ ನೃತ್ಯ ಮಾಡುತ್ತಿರುತ್ತಾರೆ. ಮದುವೆಗೆ ಆಗಮಿಸಿರುವ ಅತಿಥಿಗಳ ಹರ್ಷೋದ್ಗಾರ ವೀಡಿಯೋದಲ್ಲಿ ನಾವು ಕೇಳಬಹುದು. ನೆರೆದಿದ್ದವರು ನವ ಜೋಡಿಯನ್ನು ಚಿಯರ್ ಮಾಡುತ್ತಿರುತ್ತಾರೆ. ಒಬ್ಬರಿಗೊಬ್ಬರು ವಧು ಮತ್ತು ವರ ದಿಟ್ಟಿಸಿ ನೋಡುತ್ತಾ ಇದ್ದಕ್ಕಿದ್ದಂತೆಯೇ ವೇದಿಕೆಯ ಮೇಲೆ ಇಬ್ಬರೂ ಬೀಳುತ್ತಾರೆ.
ಇದನ್ನೂ ಓದಿ: ತೂಕದ ಲೆಹೆಂಗ ಧರಿಸಿದ್ದ ವಧು ಮದುವೆ ಮನೆಯಲ್ಲಿ ಮಾಡಿದ ಕೆಲಸ ನೋಡಿದ್ರೆ ದಂಗಾಗ್ತೀರಾ..!
ಅವರಿಬ್ಬರೂ ವೇದಿಕೆಯ ಮೇಲೆ ಬೀಳುತ್ತಿದ್ದಂತೆ ಅಲ್ಲಿರುವ ಅತಿಥಿಗಳು ಆ ದೃಶ್ಯವನ್ನು ನೋಡಿ ಕಿರುಚಿಕೊಂಡು ಒಂದು ಕ್ಷಣ ಭಯ ಭೀತರಾಗಿದ್ದಂತೂ ನಿಜ. ಈ ವಿಡಿಯೋವನ್ನು ವಧು ಖುದ್ದು ತನ್ನ ಸಾಮಾಜಿಕ ಮಾಧ್ಯಮಗಳಲ್ಲಿನ ಇನ್ಸ್ಟಾಗ್ರಾಂ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಅದಕ್ಕೆ "ಪ್ರೀತಿಯಲ್ಲಿ ಬೀಳುವುದು ಇದಲ್ಲ. ಬಹುಶಃ ಅವನು ಡ್ಯಾನ್ಸ್ ಅನ್ನು ಅರ್ಥ ಮಾಡಿಕೊಂಡಿಲ್ಲ. ನನ್ನ ಬಗ್ಗೆ ಕಾಳಜಿ ವಹಿಸುತ್ತಾನೆ ಎಂದು ಖಚಿತವಾಗಿಲ್ಲ. ಇದಕ್ಕೆ ನಾನು ಹಾಕಿರುವ ಬಟ್ಟೆಯ ತೂಕವನ್ನು ದೂಷಿಸಬೇಕು, ಅವನನ್ನು ನಿಜವಾಗಿಯೂ ದೂಷಿಸಲು ಸಾಧ್ಯವಿಲ್ಲ. ಇದನ್ನು ನೋಡಿ ನಾನಂತೂ ತುಂಬಾ ನಕ್ಕಿದ್ದೇನೆ. ಆದರೆ, ಡೇವಿಡ್ ಇನ್ನೂ ಮುಜುಗರಗೊಂಡಿದ್ದಾನೆ ಎಂದು ನನಗೆ ತಿಳಿದಿದೆ" ಎಂದು ವಧು ಶೀರ್ಷಿಕೆಯಲ್ಲಿ ಬರೆದು ಕೊಂಡಿದ್ದಾರೆ.
ಇದನ್ನೂ ಓದಿ: Viral Video: ಮದುವೆ ಉಡುಗೆಯಲ್ಲಿ ಕಿತ್ತಾಡಿದ ವಧು; ವೈರಲ್ ಆಯ್ತು ವಿಡಿಯೋ
ಈ ವಿಡಿಯೋ ಈಗ ಇನ್ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಲ್ಲಿಯವರೆಗೆ ಇದನ್ನು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದು, 13 ಸಾವಿರ ಜನರು ಇಷ್ಟ ಪಟ್ಟಿದ್ದಾರೆ. 600 ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ನೆಟ್ಟಿಗರಂತೂ ಈ ವಿಡಿಯೋ ನೋಡಿ ನಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾರೆ ಮತ್ತು ಅನೇಕರು ಮುದ್ದಾದ ದಂಪತಿಗಳ ಮೋಜಿನ ಉತ್ಸಾಹಕ್ಕಾಗಿ ಶ್ಲಾಘಿಸಿದರು. "ಇದು ನಂತರದ ವರ್ಷಗಳಲ್ಲಿ ಒಂದು ನೆನಪಿನಲ್ಲಿ ಇರುವ ಘಟನೆಯಾಗಲಿದೆ" ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು ಹೇಳಿದ್ದಾರೆ. “ಇದು ನನ್ನ ನೆಚ್ಚಿನ ವಿಡಿಯೋ ಆಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ