Cockroach: ನ್ಯೂಜಿಲೆಂಡ್‌ನ ವ್ಯಕ್ತಿಯ ಕಿವಿಯೊಳಗೆ ಸೇರಿ ಕಾಟಕೊಡುತ್ತಿದ್ದ ಜಿರಳೆಯನ್ನು ಹೊರ ತೆಗೆದ ವೈದ್ಯರು! ಹೇಗೆ ಗೊತ್ತೇ?

ನ್ಯೂಜಿಲೆಂಡ್ ನಿವಾಸಿಯೊಬ್ಬರಿಗೆ ತಮ್ಮ ಕಿವಿಯಲ್ಲಿ ಏನೋ ಓಡಾಡಿದಂಥ ಅನುಭವವಾಗುತ್ತಿತ್ತು ಆದರದು ಕಿವಿಯಲ್ಲಿ ನೀರು ತುಂಬಿಕೊಂಡಿರುವುದರಿಂದ ಆಗುತ್ತಿರಬಹುದು ಎಂದು ನಿರ್ಲಕ್ಷಿಸಿದ್ದರು

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತಜ್ಞ ವೈದ್ಯರೊಬ್ಬರು (Specialist) ಕೆಲ ನಿಮಿಷಗಳನ್ನು ತೆಗೆದುಕೊಂಡರಾದರೂ, ಹೀರುವ ಸಾಧನ ಹಾಗೂ ಜೋಡಿ ಇಕ್ಕಳದ ಸಹಾಯದಿಂದ ಭಾರಿ ತೊಂದರೆ ಕೊಡುತ್ತಿದ್ದ ಆ ಕೀಟವನ್ನು (Insect) ಆಕ್ಲೆಂಡ್ ನಿವಾಸಿಯೊಬ್ಬರ ಕಿವಿಯಿಂದ ಹೊರ ತೆಗೆಯುವಲ್ಲಿ ಕೊನೆಗೂ ಯಶಸ್ವಿಯಾದರು. ಅದು ಏನೆಂದು ಗೊತ್ತೇ? ಅಡುಗೆ (Cooking Pot) ಮನೆಯಲ್ಲಿ ಗೃಹಿಣಿಯರಿಗೆ (Housewives) ನಿತ್ಯ ತ್ರಾಸು ನೀಡುವ (Cockroach) ಜಿರಳೆ!!!

ಕೀಟದ ಪಟ
ಮನುಷ್ಯನ ದೇಹವು ಹಲವಾರು ವಿಚಿತ್ರ ಸಂಗತಿಗಳನ್ನು ಹೊತ್ತುಕೊಂಡಿದೆಯಾದರೂ, ಜಿರಳೆ ಆ ಪೈಕಿ ಒಂದಾಗಿಲ್ಲ! ಯಾರದಾದರೂ ಕಿವಿಯಲ್ಲಿ ಜಿರಳೆ ಕಂಡು ಬಂದರೆ, ಅದು ನಿಜಕ್ಕೂ ನಮ್ಮನ್ನು ಈವರೆಗೆ ಅನುಭವಿಸಿರದಷ್ಟು ಗಾಬರಿಗೆ ಒಳಗಾಗಿಸುತ್ತದೆ. ಆದರೆ, ಇಂತಹ ಭಯಾನಕ ಅನುಭವಕ್ಕೆ ನ್ಯೂಜಿಲೆಂಡ್‌ನ ಆಕ್ಲೆಂಡ್ ನಿವಾಸಿಯೊಬ್ಬರು ತುತ್ತಾಗಿದ್ದು, ಅವರು ಈ ಅನುಭವ ಕುರಿತು ಸಾರ್ವಜನಿಕವಾಗಿ ಹೇಳಿಕೊಂಡಿದ್ದು, ಒಂದು ವೇಳೆ ಇಂತಹ ಅನುಭವಗಳು ಕಂಡು ಬಂದಲ್ಲಿ ಕೂಡಲೇ ಕನಿಷ್ಠ ಎರಡು ಬಾರಿಯಾದರೂ ವೈದ್ಯರನ್ನು ಭೇಟಿ ಮಾಡಿ ಎಂದು ಸಲಹೆ ನೀಡಿದ್ದಾನೆ. ಆತ ತನ್ನ ಕಿವಿ ಹೊಕ್ಕಿದ್ದ ಕೀಟದ ಪಟವನ್ನೂ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾನೆ.

ಫೇಸ್‌ಬುಕ್ ಪುಟದಲ್ಲಿ ಜಿರಳೆಯ ಪಟವನ್ನು ಹಂಚಿಕೊಂಡಿರುವ ವೆಡ್ಡಿಂಗ್ ಎಂಬಾತ, "ಇಂದು ಎರಡನೇ ಬಾರಿ ಸಲಹೆ ಪಡೆಯಲು ಮತ್ತೊಬ್ಬ ವೈದ್ಯರನ್ನು ಭೇಟಿಯಾಗಿದ್ದೆ ಹಾಗೂ ನನ್ನ ಕಿವಿಯಿಂದ ಜಿರಳೆಯನ್ನು ಹೊರತೆಗೆಯಲಾಗಿದೆ. ಮೂರು ದಿನಗಳ ಕಾಲ ನನ್ನ ಕಿವಿಯಲ್ಲಿ ಯಾತನೆ ಅನುಭವಿಸಿದೆ" ಎಂದು ಅಡಿಬರಹ ಬರೆದಿದ್ದಾನೆ.

ಇದನ್ನೂ ಓದಿ: Cockroach Beer: ಜಿರಳೆಯಿಂದ ತಯಾರಿಸಿದ ಬಿಯರ್ ಕುಡಿದಿದ್ದೀರಾ? ಇಲ್ಲಿ ಭಾರೀ ಫೇಮಸ್ ಅಂತೆ ಮಾರ್ರೆ

ನಿರ್ಲಕ್ಷ ಮಾಡಿದ ವ್ಯಕ್ತಿ
ನ್ಯೂಜಿಲೆಂಡ್ ನಿವಾಸಿಯೊಬ್ಬರಿಗೆ ತಮ್ಮ ಕಿವಿಯಲ್ಲಿ ಏನೋ ಓಡಾಡಿದಂಥ ಅನುಭವವಾಗುತ್ತಿತ್ತು. ಆದರದು ಕಿವಿಯಲ್ಲಿ ನೀರು ತುಂಬಿಕೊಂಡಿರುವುದರಿಂದ ಆಗುತ್ತಿರಬಹುದು ಎಂದು ನಿರ್ಲಕ್ಷಿಸಿದ್ದರು. ಆದರೆ, ಕೆಲ ದಿನಗಳ ನಂತರ ಕಿವಿ ತಜ್ಞರ ಬಳಿಕ ಭೇಟಿ ನೀಡಿದಾಗ ಆತನ ಕಿವಿಯೊಳಕ್ಕೆ ಜಿರಳೆ ದಾರಿ ಮಾಡಿಕೊಂಡಿರುವುದು ಬಹಿರಂಗಗೊಂಡಿತು. ಈ ಕುರಿತು ಸಂದರ್ಶನವೊಂದನ್ನು ನೀಡಿರುವ ಜೇನ್ ವೆಡ್ಡಿಂಗ್, ಈ ಕುರಿತ ಸಂಪೂರ್ಣ ಅನುಭವಗಳನ್ನು ಹಂಚಿಕೊಂಡಿದ್ದು, ತಾನೇಗೆ ಆ ಕೀಟದ ತೊಂದರೆಯಿಂದ ಪಾರಾದೆ ಎಂದು ವಿವರಿಸಿದ್ದಾನೆ.

ವೆಡ್ಡಿಂಗ್ ಆಕ್ಲೆಂಡ್‌ ನಿವಾಸಿಯಾಗಿದ್ದು, ಜನವರಿ 7ರಂದು ಬೆಳಗ್ಗೆ ಈಜಲೆಂದು ಸ್ಥಳೀಯ ಈಜುಕೊಳಕ್ಕೆ ತೆರಳಿದ್ದರು. ಮನೆಗೆ ಮರಳಿದ ನಂತರ ಆತ ತನ್ನ ಹಾಸಿಗೆಯ ಮೇಲೆ ನಿದ್ರೆಗೆ ಜಾರಿದ್ದ. ಕೆಲ ಗಂಟೆಗಳ ನಂತರ ನಿದ್ರೆಯಿಂದ ಎಚ್ಚೆತ್ತ ನಂತರ ತಾನು ಏನನ್ನು ಕೇಳಿಸಿಕೊಳ್ಳಲು ಸಾಧ್ಯವಾಗದಿರುವುದರಿಂದ ಅಚ್ಚರಿಗೊಳಗಾದ. ಆತ ತನ್ನ ಪೋಷಕರಿಗೆ ತನ್ನ ಕಿವಿ ಮುಚ್ಚಿಕೊಂಡಿದ್ದು, ಕಿವಿಯೊಳಗೆ ಏನೋ ಸುತ್ತುತ್ತಿರುವಂತೆ ಭಾಸವಾಗುತ್ತಿದೆ ಎಂದು ತಿಳಿಸಿದ.

ಕಿವಿ ಕಿವುಡಾಯಿತು
ಮರುದಿನ ಜನವರಿ 8ರಂದು ವೆಡ್ಡಿಂಗ್ ವೈದ್ಯರನ್ನು ಭೇಟಿಯಾಗಿ ಕಿವಿಗೆ ಚುಚ್ಚುಮದ್ದು ಪಡೆದ. ಅತನಿಗೆ ವೈದ್ಯರು ಆ್ಯಂಟಿಬಯಾಟಿಕ್‌ಗಳನ್ನು ನೀಡಿದರು. ತಲೆಯ ಬದಿಗಳನ್ನು ಚೆನ್ನಾಗಿ ಒಣಗಿಸಿ ಎಂದು ಸಲಹೆ ನೀಡಿದ ವೈದ್ಯರು, ಒಂದು ವೇಳೆ ಸಮಸ್ಯೆ ಮುಂದುವರಿದರೆ ಮತ್ತೊಮ್ಮೆ ಆಸ್ಪತ್ರೆಗೆ ಭೇಟಿ ನೀಡುವಂತೆ ಸೂಚಿಸಿ ಕಳಿಸಿದರು. ಸಮಸ್ಯೆ ಸುಧಾರಿಸುವ ಬದಲು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ವೆಡ್ಡಿಂಗ್‌ನ ಒಂದು ಕಿವಿ ಕಿವುಡಾಯಿತು. ಆತನಿಗೆ ನಿದ್ರೆ ಮಾಡಲು ಅಸಾಧ್ಯವಾಯಿತು, ಇತರ ಕೆಲಸಗಳ ಕಡೆ ಗಮನ ಹರಿಸಲು ಸಾಧ್ಯವಾಗದಾಯಿತು. ತಲೆಯನ್ನು ಚೆನ್ನಾಗಿ ಒಣಗಿಸುವಂತೆ ವೈದ್ಯರು ನೀಡಿದ್ದ ಸಲಹೆಯೂ ಪ್ರಯೋಜನಕ್ಕೆ ಬಾರದಂತಾಯಿತು. ಜನವರಿ 10ರಂದು ಕಿವಿ ತಜ್ಞರ ಭೇಟಿಗೆ ಸಮಯ ನಿಗದಿಗೊಳಿಸಿಕೊಳ್ಳುವ ಒಂದು ದಿನ ಮುನ್ನ ಕಿವಿ ನೋವನ್ನು ಸಹಿಸಿಕೊಳ್ಳಬೇಕಾಯಿತು.

ಇದನ್ನೂ ಓದಿ: ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ: ಬೆಂಗಳೂರಿನ ವ್ಯಕ್ತಿಗೆ 55 ಸಾವಿರ ಪರಿಹಾರ ನೀಡಲು ಹೋಟೆಲ್‌ಗೆ ಆದೇಶಿಸಿದ ಕೋರ್ಟ್‌

ವೈದ್ಯರು ಯಶಸ್ವಿ
ವೆಡ್ಡಿಂಗ್ ಅವರ ಕಿವಿಗೆ ಸೂಕ್ಷ್ಮದರ್ಶಕ ಹಾಕಿ ನೋಡಿರುವ ವೈದ್ಯರು, "ಓ ದೇವರೇ.. ನಿಮ್ಮ ಕಿವಿಯೊಳಗೆ ಕೀಟ ಇರುವಂತಿದೆ.." ಎಂದು ಉದ್ಗರಿಸಿದ್ದಾರೆ. ಆ ತಜ್ಞ ವೈದ್ಯೆ ಕೆಲ ನಿಮಿಷಗಳನ್ನು ತೆಗೆದುಕೊಂಡರಾದರೂ ಹೀರುವ ಸಾಧನ ಹಾಗೂ ಜೋಡಿ ಇಕ್ಕಳಗಳ ಸಹಾಯದಿಂದ ತೀವ್ರ ಉಪಟಳ ಕೊಡುತ್ತಿದ್ದ ಕೀಟವನ್ನು ವೆಡ್ಡಿಂಗ್ ಕಿವಿಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ, ಆ ತಜ್ಞ ವೈದ್ಯೆ ತನ್ನ ವೃತ್ತಿ ಜೀವನದ ಇಷ್ಟು ಅವಧಿಯಲ್ಲಿ ಒಂದು ಬಾರಿಯೂ ಕಿವಿಯಿಂದ ಯಾವುದೇ ಕೀಟವನ್ನು ಹೊರ ತೆಗೆದಿರಲಿಲ್ಲ. ಹೀಗಾಗಿ ವೆಡ್ಡಿಂಗ್ ಆ ಕೀಟವನ್ನು ವೈದ್ಯರಿಗೇ ನೆನಪಿನ ಕಾಣಿಕೆಯಾಗಿ ಅರ್ಪಿಸಿದ್ದಾನೆ!!!
Published by:vanithasanjevani vanithasanjevani
First published: