Viral video: ಪೊಲೀಸರಿಗೆ ಕರೆ ಮಾಡಿ ತನ್ನ ಆಟಿಕೆ ನೋಡಲು ಬನ್ನಿ ಎಂದ 4 ವರ್ಷದ ಬಾಲಕ- ವೈರಲ್​ ಆಯ್ತು ವಿಡಿಯೋ

Viral News: ಆಪರೇಟರ್, ಆ ವಿಳಾಸಕ್ಕೆ ಹತ್ತಿರ ಯಾರಾದರೂ ಅಧಿಕಾರಿ ಇದ್ದಾರೆಯೇ ಎಂದು ಕೇಳಿ, “4 ವರ್ಷದ ಬಾಲಕನೊಬ್ಬ ಪೊಲೀಸರಿಗೆ ತನ್ನ ಆಟಿಕೆ ತೋರಿಸಲು ಬಯಸುತ್ತಿದ್ದಾನೆ, ಓವರ್ “ ಎಂಬ ಸಂದೇಶವನ್ನು ಪೊಲೀಸರಿಗೆ ಕಳುಹಿಸಿದರು. ಆಪರೇಟರ್ ರವಾನಿಸಿದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ತಾನು ಆ ಬಾಲಕನ ಆಟಿಕೆಗಳನ್ನು ನೋಡಲು ಹೋಗುವುದಾಗಿ ಭರವಸೆ ನೀಡಿದರು. ದಕ್ಷಿಣ ಜಿಲ್ಲಾ ಪೊಲೀಸ್ ಕಾನ್ಸೇಟೇಬಲ್ ಕರ್ಟ್, ಬಾಲಕನ ಮನೆಗೆ ಹೋದರು. ಬಾಲಕ ತನ್ನ ಎಲ್ಲಾ ಆಟಿಕೆಗಳನ್ನು ತೋರಿಸಿದನು.

ಬಾಲಕನ ಜೊತೆ ಪೊಲೀಸ್ ಅಧಿಕಾರಿಗಳು

ಬಾಲಕನ ಜೊತೆ ಪೊಲೀಸ್ ಅಧಿಕಾರಿಗಳು

  • Share this:
ಯಾವುದೇ ರಾಷ್ಟ್ರವಿರಲಿ, ಪೊಲೀಸ್(Police) ಅಧಿಕಾರಿಗಳ ಜೊತೆ ತಮಾಷೆ ಮಾಡುವ ಧೈರ್ಯ, ಯಾರಿಗೂ ಇರಲಿಕ್ಕಿಲ್ಲ. ಆದರೆ ನ್ಯೂಜಿಲ್ಯಾಂಡ್‍ನ(New Zealand) ಪುಟ್ಟ ಪೋರನೊಬ್ಬ ಅದನ್ನು ಮಾಡಿ ತೋರಿಸಿದ್ದಾನೆ..! ಆ ಪುಟ್ಟ ಬಾಲಕನ(Small Boy) ಬಾಲ ಸಹಜ ಮುಗ್ಧತೆಯ ಆ ಕೃತ್ಯಕ್ಕೆ ಪೊಲೀಸರು ಕೂಡ ಅಷ್ಟೇ ತಮಾಷೆಯಿಂದ ಪ್ರತಿಕ್ರಿಯಿಸಿದ್ದು, ಆ ಕುರಿತ ವಿಡಿಯೋ(Video) ಒಂದು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್(Viral) ಆಗುತ್ತಿದೆ.

ನಾಗರಿಕರು ತುರ್ತು ಪರಿಸ್ಥಿಯ ಸನ್ನಿವೇಶಗಳಲ್ಲಿ, ಸಹಾಯ ವಾಣಿಗಳಿಗೆ ಕರೆ ಮಾಡಿ , ಸಹಾಯ ತೆಗೆದುಕೊಳ್ಳುವ ಸೌಲಭ್ಯ ಎಲ್ಲಾ ದೇಶಗಳಲ್ಲೂ ಲಭ್ಯವಿದೆ. ಎಷ್ಟೋ ಸಂದರ್ಭಗಳಲ್ಲಿ , ಅಂತಹ ಸಹಾಯವಾಣಿಗಳನ್ನು ನಿರ್ವಹಿಸುವ ಅಧಿಕಾರಿಗಳು ವಿಚಿತ್ರ ಹಾಗೂ ಅತಿರೇಕದ ಕರೆಗಳನ್ನು ಕೂಡ ಸ್ವೀಕರಿಸುವ ಪರಿಸ್ಥಿತಿ ಎದುರಾಗುವುದುಂಟು. ಆದರೂ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ತಾವು ಸ್ವೀಕರಿಸುವ ಎಲ್ಲಾ ಕರೆಗಳ ಕಡೆಗೂ ಗಮನ ಹರಿಸುತ್ತಾರೆ. ನ್ಯೂಜಿಲೆಂಡ್‍ನ ಈ ಘಟನೆಯು ಕೂಡ ಅಂತದ್ದೇ ಅಧಿಕಾರಿಗಳಿಗೆ ಸಂಬಂಧಿಸಿದ್ದು.

ಪೊಲೀಸರಿಗೆ ಕರೆ ಮಾಡಿ ನೋಡಲು ಬನ್ನಿ ಎಂದ ಬಾಲಕ 

ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಸಂಬಂಧಿಸಿದಂತೆ ‘ಒನ್ –ಆಫ್’ ತುರ್ತು ಕರೆ ಘಟನೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಮೊಗದಲ್ಲಿ ನಗೆ ಮೂಡಿಸುತ್ತಿದೆ. ಅಷ್ಟಕ್ಕೂ, ಪೊಲೀಸರಿಗೆ ತುರ್ತು ಕರೆ ಮಾಡಿದ್ದು ಯಾರು ಗೊತ್ತೇ? ನಾಲ್ಕು ವರ್ಷದ ಬಾಲಕ !

ಪೊಲೀಸರಿಗೆ ಕರೆ ಮಾಡಿ, ತನ್ನ ಮನೆಯಲ್ಲಿರುವ ಆಟಿಕೆಗಳ ಸಂಗ್ರಹ ನೋಡಲು ಬರುವಂತೆ ವಿನಂತಿಸಿಕೊಂಡನಂತೆ. ಆತ ತನ್ನ ತಂದೆಯ ಪೋನ್‍ನಿಂದ ಪೋಲೀಸರಿಗೆ ಕರೆ ಮಾಡಿದ್ದ.

ಇದನ್ನೂ ಓದಿ: ಬೆದರುಬೊಂಬೆಗೆ ಮೋದಿ-ಅಮಿತ್ ಶಾ ಚಿತ್ರ ಅಂಟಿಸಿದ ವ್ಯಕ್ತಿ, ವಾಟ್ಸಪ್ ಸ್ಟೇಟಸ್​ನಿಂದ ನೇರ ಜೈಲಿಗೆ!

ನ್ಯೂಜಿಲೆಂಡ್ ಪೊಲೀಸರು , ಬಾಲಕ ಮತ್ತು ಪೊಲೀಸರ ನಡುವಿನ ಸಂಭಾಷಣೆಯ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಫೇಸ್‍ಬುಕ್ ಪೋಸ್ಟ್ ಒಂದರಲ್ಲಿ, ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ “ಹಂಚಿಕೊಳ್ಳಲಾಗದಿರುವಷ್ಟು ಕ್ಯೂಟ್‌ ಆಗಿತ್ತು'' ಎಂದು ಬರೆದುಕೊಂಡಿದ್ದಾರೆ.


ಕರ್ತವ್ಯ ನಿರತ ಅಧಿಕಾರಿ, ತುರ್ತು ಕರೆಯ ಉದ್ದೇಶ ಏನೆಂದು ಬಾಲಕನ್ನು ಕೇಳುವುದರ ಮೂಲಕ ಕರೆ ಆರಂಭಗೊಳ್ಳುತ್ತದೆ. ತನ್ನ ಮನೆಯಲ್ಲಿ ಕೆಲವು ಆಟಿಕೆಗಳಿವೆ ಮತ್ತು ಅದನ್ನು ತಾನು ಪೊಲೀಸರಿಗೆ ತೋರಿಸುವ ಇಚ್ಚೆ ಹೊಂದಿರುವುದಾಗಿ ಬಾಲಕ ಕಾಲ್ ಆಪರೇಟರ್‌ಗೆ ಹೇಳುತ್ತಾನೆ.

“ನೀವು ನನಗಾಗಿ ಕೆಲವು ಆಟಿಕೆಗಳನ್ನು ಹೊಂದಿದ್ದೀರಾ?” ಎಂದು ಆಪರೇಟರ್ ಕೇಳುತ್ತಾರೆ. ಆಗ ಬಾಲಕ “ಬನ್ನಿ ಮತ್ತು ಅವುಗಳನ್ನು ನೋಡಿ” ಎಂದು ಉತ್ತರಿಸುತ್ತಾನೆ.

ಆ ಬಳಿಕ, ಒಂದು ಕಿತ್ತಾಟದ ನಂತರ, ಆ ಪುಟ್ಟ ಬಾಲಕನ ತಂದೆ ಫೋನ್ ತೆಗೆದುಕೊಂಡು, ಯಾವುದೇ ತುರ್ತು ಸನ್ನಿವೇಶ ಇಲ್ಲ, ಬಾಲಕ ತಪ್ಪಾಗಿ ಪೋಲೀಸರಿಗೆ ಕರೆ ಮಾಡಿದ್ದಾನೆ ಎಂದು ಆಪರೇಟರ್‌ಗೆ ತಿಳಿಸಿದರು. ಬಳಿಕ ಫೋನ್ ಕರೆ ಕಡಿತಗೊಂಡಿತು.

ಬಾಲಕನ ಕರೆಗೆ ಸ್ಪಂಧಿಸಿದ ಪೊಲೀಸ್ ಅಧಿಕಾರಿಗಳು 

ನಂತರ ಕಾಲ್ ಆಪರೇಟರ್, ಆ ವಿಳಾಸಕ್ಕೆ ಹತ್ತಿರ ಯಾರಾದರೂ ಅಧಿಕಾರಿ ಇದ್ದಾರೆಯೇ ಎಂದು ಕೇಳಿ, “4 ವರ್ಷದ ಬಾಲಕನೊಬ್ಬ ಪೊಲೀಸರಿಗೆ ತನ್ನ ಆಟಿಕೆ ತೋರಿಸಲು ಬಯಸುತ್ತಿದ್ದಾನೆ, ಓವರ್ “ ಎಂಬ ಸಂದೇಶವನ್ನು ಪೊಲೀಸರಿಗೆ ಕಳುಹಿಸಿದರು. ಆಪರೇಟರ್ ರವಾನಿಸಿದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ತಾನು ಆ ಬಾಲಕನ ಆಟಿಕೆಗಳನ್ನು ನೋಡಲು ಹೋಗುವುದಾಗಿ ಭರವಸೆ ನೀಡಿದರು. ದಕ್ಷಿಣ ಜಿಲ್ಲಾ ಪೊಲೀಸ್ ಕಾನ್ಸೇಟೇಬಲ್ ಕರ್ಟ್, ಬಾಲಕನ ಮನೆಗೆ ಹೋದರು. ಬಾಲಕ ತನ್ನ ಎಲ್ಲಾ ಆಟಿಕೆಗಳನ್ನು ತೋರಿಸಿದನು.

ಇದನ್ನೂ ಓದಿ: ಹಾಸಿಗೆಯ ಕೆಳಗಿತ್ತು ವಿಶ್ವದ ಅತ್ಯಂತ ಬೃಹತ್ ವಿಷಕಾರಿ ಜೇಡ; ಮುಂದೇನಾಯ್ತು?

ಆ ಅಧಿಕಾರಿ, ಬಾಲಕ ಮತ್ತು ಆತನ ಪೋಷಕರ ಜೊತೆ , 111 ಅನ್ನು ತುರ್ತು ಪರಿಸ್ಥಿಗಳಿಗೆ ಮಾತ್ರ ಬಳಸಬೇಕು ಎಂಬ ಕುರಿತ ಮಾಹಿತಿ ಪೂರ್ಣ ಮಾತುಕತೆಯಲ್ಲಿ ಕೂಡ ತೊಡಗಿಕೊಂಡರು. ಹಾಗೂ ಪೊಲೀಸ್ ಕಾರಿನಲ್ಲಿ ಬಾಲಕನನ್ನು ಕೂರಿಸಿಕೊಂಡು ಅಕ್ಕಪಕ್ಕದ ಪ್ರದೇಶಗಳಲ್ಲಿ ಸುತ್ತಾಡಿಸಿದರು.
First published: