Video: ಸರ್ಕಾರಿ ಜಾಹೀರಾತಿನಲ್ಲಿ ನೀಲಿ ಚಿತ್ರತಾರೆ; ನೆಟ್ವಿಗರು ಏನಂದ್ರು ಗೊತ್ತಾ?

ನ್ಯೂಜಿಲೆಂಡ್​​ ಸರ್ಕಾರ ಸರಣಿ ಜಾಹೀರಾತುಗಳನ್ನು ಬಿತ್ತರಿಸುತ್ತಿದೆ. ಅದರಲ್ಲೊಂದು ಜಾಹೀರಾತಿನಲ್ಲಿ ನೀಲಿ ಚಿತ್ರತಾರೆಯರನ್ನು ಬಳಸಿಕೊಂಡಿದೆ. ಸಾಮಾನ್ಯವಾಗಿ ಇಂತಹ ಜಾಹೀರಾತುಗಳು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗುತ್ತದೆ. ಆದರೆ ಅಲ್ಲಿನ ಸಾರ್ವಜನಿಕರು ನೀಲಿ ಚಿತ್ರತಾರೆಯರನ್ನು ಬಳಸಿಕೊಂಡು ಜಾಹೀರಾತು ನೀಡಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

news18-kannada
Updated:June 16, 2020, 4:53 PM IST
Video: ಸರ್ಕಾರಿ ಜಾಹೀರಾತಿನಲ್ಲಿ ನೀಲಿ ಚಿತ್ರತಾರೆ; ನೆಟ್ವಿಗರು ಏನಂದ್ರು ಗೊತ್ತಾ?
ಡೆರೆಕ್-ಸ್ಯೂ
  • Share this:
ಸರ್ಕಾರಿ ಜಾಹೀರಾತು ಎಂದ ಮೇಲೆ ಅದರಲ್ಲಿ ಸೂಕ್ತವಾದ ಅಥವಾ ಜನಪ್ರಿಯ ವ್ಯಕ್ತಿಗಳಿರುತ್ತಾರೆ. ಹೆಚ್ಚು ಜನರಿಗೆ ಸಂದೇಶ ರವಾನೆಯಾಗಬೇಕೆಂದು ಖ್ಯಾತ ವ್ಯಕ್ತಿಗಳನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುತ್ತಾರೆ. ಹೆಚ್ಚಿನ ಜಾಹೀರಾತುಗಳಲ್ಲಿ ಸಿನಿ ನಟರನ್ನು ಬಳಸಿಕೊಂಡು ಸಂದೇಶವನ್ನು ಕೊಡುತ್ತಾರೆ. ಆದರೆ ಇಲ್ಲೊಂದು ಸರ್ಕಾರಿ ಜಾಹೀರಾತಿನಲ್ಲಿ ನೀಲಿ ಚಿತ್ರತಾರೆಯನ್ನು ಬಳಸಿಕೊಂಡಿದ್ದಾರೆ.

ನ್ಯೂಜಿಲೆಂಡ್​​ ಸರ್ಕಾರ ಸರಣಿ ಜಾಹೀರಾತುಗಳನ್ನು ಬಿತ್ತರಿಸುತ್ತಿದೆ. ಅದರಲ್ಲೊಂದು ಜಾಹೀರಾತಿನಲ್ಲಿ ನೀಲಿ ಚಿತ್ರತಾರೆಯರನ್ನು ಬಳಸಿಕೊಂಡಿದೆ. ಸಾಮಾನ್ಯವಾಗಿ ಇಂತಹ ಜಾಹೀರಾತುಗಳು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗುತ್ತದೆ. ಆದರೆ ಅಲ್ಲಿನ ಸಾರ್ವಜನಿಕರು ನೀಲಿ ಚಿತ್ರತಾರೆಯರನ್ನು ಬಳಸಿಕೊಂಡು ಜಾಹೀರಾತು ನೀಡಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀಲಿ ಚಿತ್ರತಾರೆಯಾದ ಸ್ಯೂ ಹಾಗೂ ಡೆರೆಕ್​ ನ್ಯೂಜಿಲೆಂಡ್​​ ಸರ್ಕಾರದ ಜಾಹೀರಾತಿನಲ್ಲಿ ನಟಿಸಿದ್ದಾರೆ. ಮಕ್ಕಳಲ್ಲಿ ಅಶ್ಲೀಲ ಚಿತ್ರಗಳ ಗೀಳು ಹೆಚ್ಚಾಗಿದೆ. ಈ ಕಾರಣಕ್ಕಗಿ ಜಾಗೃತಿ ಮೂಡಿಸಲು ಸ್ಯೂ ಮತ್ತು ಡೆರೆಕ್​ ಅವರನ್ನು ಅಲ್ಲಿನ ಸರ್ಕಾರ ಜಾಹೀರಾತಿನಲ್ಲಿ ಬಳಸಿಕೊಂಡಿದೆ.ಜಾಹೀರಾತಿನಲ್ಲಿ ಸ್ಯೂ ಮತ್ತು ಡೆರೆಕ್​ ನಗ್ನರಾಗಿ ಮನೆಯೊಂದರ ಬಾಗಿಲ ಬಳಿ ಬಂದು ಬೆಲ್​ ಮಾಡುತ್ತಾರೆ. ಒಳಗಿನಿಂದ ತಾಯಿ ಪಾತ್ರದಲ್ಲಿ ಹಾಸ್ಯ ಕಲಾವಿದೆ ಜಸ್ಟಿನ್​​ ಸ್ಮಿತ್​​ ಬಂದು ಬಾಗಿಲು ತೆರೆಯುತ್ತಾರೆ. ನಿಮ್ಮ ಮಗನನ್ನು ಭೇಟಿ ಮಾಡಬಹುದಾ ಎಂದು ಸ್ಯೂ ಹೆಂಗಸಿನ ಬಳಿ ಕೇಳುತ್ತಾರೆ. ಆಕೆ ಜೋರಾಗಿ ತನ್ನ ಮಗನನ್ನು ಕೂಗುತ್ತಾಳೆ. ಪುಟ್ಟ ಬಾಲಕ ಲ್ಯಾಪ್​ಟಾಪ್​​ ಹಿಡಿದುಕೊಂಡು ಬರುತ್ತಾನೆ.

ನಿಮ್ಮ ಮಗ ಲ್ಯಾಪ್​ಟಾಪ್​, ಈಪಾಡ್​, ಟಿವಿ, ಸ್ಮಾರ್ಟ್​ಫೋನ್ ಮೂಲಕ ನಮ್ಮನ್ನು ನೋಡುತ್ತಾನೆ. ಆದರೆ ಆಶ್ಲೀಲ ಚಿತ್ರಗಳು ಎಷ್ಟು ವಾಸ್ತವ ಎಂಬುದು ನಿಮ್ಮ ಮಗನಿಗೆ ತಿಳಿಸಬೇಕಿದೆ. ಲೈಗಿಂಕತೆಗೆ ಯಾರ ಒಪ್ಪಿಗೆ ಬೇಕಿಲ್ಲ. ನೇರವಾಗಿ ಸನ್ನಿವೇಷಕ್ಕೆ ಇಳಿದುಬಿಡುತ್ತೇವೆ. ಆದರೆ ಸಂಬಂಧ ಎನ್ನುವುದು ತುಂಬಾ ಮುಖ್ಯವಾಗಿದೆ. ಆತನಿಗೆ ಈ ವಿಚಾರವನ್ನು ತಿಳಿಸಬೇಕಿದೆ ಎಂದು ಸ್ಯೂ ಮತ್ತು ಡೆರೆಕ್​ ಹೇಳುತ್ತಾರೆ.

ಚಿರು ಸರ್ಜಾ ಫ್ಯಾಮಿಲಿ ಭೇಟಿ ಮಾಡಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ್​ಕುಮಾರ್​​ಗೆ ಸಂಕಷ್ಟ!
First published: June 16, 2020, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading